Jaimini Bharata (Kannada) 1.1: ಮೊದಲನೆಯ ಸಂಧಿ
Jaimini Bhārata (Kannada) 1.1
- Language
- Kannada
ಮೊದಲನೆಯ ಸಂಧಿ
1.1.p1
ಮೊದಲನೆಯ ಸಂಧಿ
1.1.p2
ಪೀಠಿಕೆ
1.1.p3
ಪದ್ಯ ೧ ಮಹಾವಿಷ್ಣು ಸ್ತುತಿ
1.1.1
ಶ್ರೀವಧುವಿನಂಬಕ ಚಕೋರಕಂ ಪೂರೆಯೆ ಭ ।
ಕ್ತಾವಳಿಯ ಹೃತ್ಕುಮುದ ಕೋರಕಂ ಬಿರಿಯೆ ಜಗ ।
ತೀ ವಲಯದಮಲ ಸೌಭಾಗ್ಯ ರತ್ನಾಕರಂ ಪೆರ್ಚಿನಿಂ ಮೇರೆವರಿಯೆ ॥
ಆವಗಂ ಸರಸ ಕರುಣಾಮೃತದ ಕಲೆಗಳಿಂ ।
ತೀವಿದೆಳನಗೆಯ ಬೆಳಂದಿಂಗಳಂ ಪಸರಿಸುವ ।
ದೇವಪುರ ಲಕ್ಷ್ಮೀರಮಣನಾಸ್ಯ ಚಂದ್ರನಾನಂದಮಂ ನಮಗೀಯಲಿ ॥೧॥
1.1.1_4
(ಪದ್ಯ೨)
1.1.1_5
ಪದ್ಯ ೨, ಉಮೆ ಮತ್ತು ಶಿವ ಸ್ತುತಿ
1.1.2
ಪಾವನತುಲಾಭರಣಮಂ ಮಾಡಿಕೊಂಡೆಸೆವ ।
ಪಾವನತರಸ್ವರೂಪಂ ನಾರದಾದಿ ಮುನಿ ।
ಪಾವನತ ಪಾದ ಪಂಕೇರುಹದ್ವಂದ್ವನಿಂದು ಕಲಾವತಂಸಮುಮೆಯ ॥
ಭಾವನೆಯನೊಡಗೂಡಿಸುವ ಸಕಲ ಸುರರ ಸಂ ।
ಭಾವನೆಯ ಕೈಗೊಂಬ ಲೋಕವಿಸ್ತರಣ ಪ್ರ ।
ಭಾವ ನಯನತ್ರಯಂ ದೇವ ಗಂಗಾಧರಂ ಬಿಡದೆ ಪೊರೆಗೆ ನಿಚ್ಚಂ ನಮ್ಮನು ॥೨॥(ಸಲಹುಗೆ / ಪೊರೆಗೆ ನಿಚ್ಚಂ)
1.1.2_6
(ಪದ್ಯ೨)
1.1.2_7
ಪದ್ಯ ೩, ವಿನಾಯಕ ಸ್ತುತಿ
1.1.3
ಪ್ರಸ್ತುತದೊಳೊಗೆದ ಮುಂಬೆಳಗಮಲದಂತದ ಗ ।
ಭಸ್ತಿ ನವ ಪೂರ್ವ ಸಂಧ್ಯಾರುಣಂ ಭಾಳವಿ ।
ನ್ಯಸ್ತ ಸಿಂಧೂರಮಂಕುರಿಪ ಪೊಂಬಿಸಿಲೊಡನೆ ಮೂಡುವೆಳನೇಸರೆಸೆವ ।
ಮಸ್ತಕದ ಮಣಿಮಕುಟಮಾಗಲುದಯಾಚಲದ ।
ವಿಸ್ತಾರದಂತೆ ಭದ್ರಾಕೃತಿಯೊಳೊಪ್ಪುವ ಸ।
ಮಸ್ತಸಿದ್ಧಿಪ್ರದಾಯಕ ವಿನಾಯಕ ಮಾಳ್ಪುದೆಮಗೆ ನಿರ್ವಿಘ್ನತೆಯನು ॥೩॥
1.1.3_8
(ಪದ್ಯ ೩)
1.1.3_9
ಪದ್ಯ೪, ಶಾರದಾ ಸ್ತುತಿ
1.1.4
ಭೂವ್ಯೋಮ ಪಾತಾಳ ಲೋಕಂಗಳಲ್ಲಿ ಸಂ ।
ಭಾವ್ಯರೆಂದೆನಿಸಿಕೊಳ್ವಖಿಳದೇವರ್ಕಳಿಂ । (ಕೊಂಬಖಿಳ ದೇವರ್ಕಳಿಂ)
ಸೇವ್ಯನಾದಜನ ಪಟ್ಟದ ರಾಣಿ ವರದೆ ಕಲ್ಯಾಣಿ ಫಣಿವೇಣಿ ವಾಣಿ ॥
ಕಾವ್ಯಮಿದು ಭುವನದೊಳ್ ಸಕಲ ಜನರಿಂದೆ ಸು ।
ಶ್ರಾವ್ಯಮಪ್ಪಂತೆನ್ನ ವದನಾಬ್ಜದಲ್ಲಿ ನೀ ।
ನೇ ವ್ಯಾಪಿಸಿರ್ದಮಲಸುಮತಿಯಂ ತಾಯೆನಗೆ ತಾಯೆ ನಗೆಗೂಡಿ ನೋಡಿ ॥೪॥
1.1.4_10
ಭೂಮಿ ಆಕಾಶ ಪಾತಾಳ ಈ ಮೂರೂ ಲೋಕಗಳಲ್ಲಿಯೂ ಪೂಜ್ಯರೆಂದು ಭಾವಿಸುವ ದೇವತೆಗಳಿಂದ ಸೇವೆಮಾಡಿಸಿಕೊಳ್ಳಲು ಯೋಗ್ಯನಾದ ಬ್ರಹ್ಮನ ಪತ್ನಿಯಾದ, ವರವನ್ನು ಕೊಡುವ, ಕಲ್ಯಾಣ/ಉತ್ತಮ ಗುಣಗಳಿಂದ ಕೂಡಿದ ಉದ್ದ ಜಡೆಯುಳ್ಳ ಸರಸ್ವತಿಯೇ, ತಾಯಿಯೇ ಈ (ನನ್ನ) ಕಾವ್ಯವು ಸಕಲ ಜನರಿಂದ ಕೇಳಲು ಯೋಗ್ಯವಾಗಿರುವಂತೆ ನನ್ನ ನಾಲಿಗೆಯಲ್ಲಿ (ಮುಖ ಕಮಲ =ಬಾಯಿ - ನಾಲಿಗೆ) ನೆಲಸಿದ್ದು, ನಿರ್ಮಲ ಜ್ಞಾನವನ್ನು ನನಗೆ ಸಂತೋಷದಿಂದ ನೀಡು.
(ಪದ್ಯ ೩)
1.1.4_11
ಪದ್ಯ ೫ ಕಾವ್ಯ ಲಕ್ಷಣ
1.1.5
ಪಾರದೆ ಪರಾರ್ಥಮಂ ವರಯತಿಗೆ ಭಂಗಮಂ ।
ತಾರದೆ ನಿಜಾನ್ವಯಕ್ರಿಯೆಗಳ್ಗೆ ದೂಷಣಂ ।
ಬಾರದೆ ವಿಶೇಷಗುಣ ಗಣ ಕಲಾ ಗೌರವಂ ತೀರದೆ ದುರುಕ್ತಿಗಳ್ಗೆ ॥
ಸೇರದೆ ಸುಮಾರ್ಗದೊಳ್ ನಡೆವ ಸತ್ಪುರುಷನ ಗ ।
ಭೀರದಶೆಯಂ ಪೋಲ್ವ ಕಾವ್ಯಪ್ರಬಂಧಮಂ ।
ಶಾರದೆಯ ಕರುಣದಿಂ ಪೇಳ್ವೆ ನಾಂ ದೋಷಮಂ ತೊರೆದೆಲ್ಲರುಂ ಕೇಳ್ವುದು ॥೫॥
1.1.5_12
ಪಾರದೆ ಪರರ ಅರ್ಥಮಂ (ಎಂದರೆ ಹಣವನ್ನು ಅಪಹರಿಸದ), ವರ ಯತಿಗೆ) (ವರ - ಪೂಜ್ಯ; ಯತಿ - ಮನಿಗಳಿಗೆ) ಭಂಗಮಂ ತಾರದೆ(ಅಗೌರವ ತೋರದ), ನಿಜ ಅನ್ವಯ ಕ್ರಿಯೆಗಳ್ಗೆ ದೂಷಣಂ ಬಾರದೆ(ನಿತ್ಯದ ಕರ್ತವ್ಯಗಳನ್ನು ಬಿಡದ), ವಿಶೇಷ ಗುಣ ಗಣ ಗೌರವಂ ತೀರದೆ (ಉತ್ತಮ ಗುಣಗಳ ನಡತೆಗೆ ತಪ್ಪದ), ದುರುಕ್ತಿಗಳ್ಗೆ -ದುರ್ ಉಕ್ತಿ-ಮಾತು ಸೇರದೆ (ಕೆಟ್ಟ ಮಾತನ್ನಾಡದ), ಸುಮಾರ್ಗದೊಳ್ ನಡೆವ ಸತ್ಪುರುಷನ ಗಭೀರದಶೆಯಂ ಪೋಲ್ವ (ಸನ್ಮಾರ್ಗಲ್ಲಿ ನೆಡವ ಸತ್ಪುರುಷ ಗಂಭೀರ ಲಕ್ಷಣವನ್ನು ಹೋಲುವ ಸತ್ಪುರುಷನಂತೆ), -(ಪುನಃ ಅದೇ ಪದಗಳಿಗೆ ಬೇರೆ ಅರ್ಥ) ಪಾರದೆ ಪರರ ಅರ್ಥಮಂ (ಕೃತಿಚೌರ್ಯ ಮಾಡದೆ - ಪಾರದೆ -ಅಪಹರಿಸದೆ, ಪರರ ಅರ್ಥವನ್ನು), ವರ ಯತಿಗೆ ಭಂಗಮಂ ತಾರದೆ (ಕಾವ್ಯದ ಯತಿಗೆ ಭಂಗಬರದಂತೆ (ಯತಿ:ಓದಿನಲ್ಲಿ ಛಂದಸ್ಸಿಗೆ ತಕ್ಕ ನಿಲುಗಡೆ), ನಿಜ ಅನ್ವಯ ಕ್ರಿಯೆಗಳ್ಗೆ ದೂಷಣಂ ಬಾರದೆ (ವ್ಯಾಕರಣ ದೋಷವಿಲ್ಲದೆ), ವಿಶೇಷ ಕಾವ್ಯಲಕ್ಷಣದಿಂದ, ಅಪಶಬ್ಧ-ಕೀಳು/ತಪ್ಪು ಭಾಷೆ ಇರದಂತೆ (ದುರುಕ್ತಿ),ಸತ್ಪುರುಷನ ಗಭೀರ ದಶೆಯಂ (ಲಕ್ಷಣವನ್ನು) ಪೋಲ್ವ (ಹೋಲುವ)ಗಂಭೀರ ಲಕ್ಷಣದ ಸತ್ಪುರುಷನಂತಿರುವ), ಕಾವ್ಯಪ್ರಬಂಧಮಂ (ದೀರ್ಘವಾದ ಕಾವ್ಯವನ್ನು) ಶಾರದೆಯ ಕರುಣದಿಂ ಪೇಳ್ವೆ ನಾಂ ದೋಷಮಂ ತೊರೆದು ಎಲ್ಲರುಂ ಕೇಳ್ವುದು (ಶಾರದಾದೇವಿಯ ಕೃಪೆಯಿಂದ ಹೇಳುವೆನು- ದೋಷವಿದ್ದರೆ ಅದನ್ನು ಬಿಟ್ಟು (ತೊರೆದು), ಪೂರ್ಣವಾಗಿ ಆಲಿಸಿರಿ.
1.1.5_13
(ಪದ್ಯ ೫)
1.1.5_14
ಪದ್ಯ ೬: ಕವಿಯ ಆಶಯ
1.1.6
ಛಂದಸ್ಸುಲಕ್ಷಣಮಲಂಕಾರ ಭಾವರಸ ।
ಮೊಂದಿ ಕಲೆವೆತ್ತ ಸತ್ಕೃತಿ ಚಮತ್ಕೃತಿ ಯುಕ್ತಿ ।
ಯೊಂದುಮಿಲ್ಲದ ಕಾವ್ಯಮಶ್ರಾವ್ಯಮಕ್ಕೆಂದು ಜರೆದು ಕವಿತೆಯನು ಬರಿದೆ ॥
(ಕಾವ್ಯಮಶ್ರಾವ್ಯಹುದೆದರಿಯವೆ?)
ದಂದುಗಕ್ಕೊಳಗಾಗಿ ಪೇಳ್ದನೆಂದೆನ್ನ ನಗು ।
ವಂದಮಂ ಮಾಡದೆನಗೊಲಿದಿತ್ತನಮಲಮತಿ ।
ಯಂ ದೇವಪುರದ ಲಕ್ಷ್ಮೀರಮಣನೆಂದರಿದು ಕೇಳ್ವುದೆಲ್ಲಾ ಸುಜನರು ॥೬॥
1.1.6_15
ಪದ್ಯದ ಲಕ್ಷಣವಾದ ಛಂದಸ್ಸು, ಸುಲಕ್ಷಣ, ಅಲಂಕಾರ, ಇತ್ಯಾದಿ ಕಾವ್ಯ ಲಕ್ಷಣ ಮತ್ತು ಭಾವದಿಂದ, ಕಾವ್ಯದಲ್ಲಿರಬೇಕಾದ ಶೃಂಗಾರ,ವೀರ, ಕರುಣ, ಇತ್ಯಾದಿ ರಸಗಳನ್ನು ಹೊಂದಿ ಕಾವ್ಯಲಕ್ಷಣ ದಿಂದ ತುಂಬಿರದ, ಸತ್ಕೃತಿ ಚಮತ್ಕೃತಿ ಯುಕ್ತಿ ಒಂದೂ ಇಲ್ಲದ ಈ ಕಾವ್ಯವು ಕೇಳಲು ಅಯೋಗ್ಯವೆಂದು ಜರೆದು ಅಥವಾ ತೆಗಳಿ, ಕವಿಯು ಬರಿದೆ ಹಾಸ್ಯಕ್ಕೆ ಒಳಗಾಗುವಂತೆ ಹೇಳಿದ್ದಾನೆ ಎಂದು ತಿರಸ್ಕಾರದಿಂದ ಉಪೇಕ್ಷೆಮಾಡದೆ, ಕವಿಗೆ (ಎನಗೆ)ದೇವಪುರದ ಲಕ್ಷ್ಮೀರಮಣನು ಪ್ರೀತಿಯಿಂದ ಈ ಕಾವ್ಯ ರಚನೆಯ ಶ್ರೇಷ್ಠವಾದ ಬುದ್ಧಿಶಕ್ತಿಯನ್ನು-ಜ್ಞಾನವನ್ನು ಕೊಟ್ಟಿರುವನೆಂದು ತಿಳಿದು ಸಜ್ಜನರು ಕೇಳಬೇಕು. (ಎಂದು ಕವಿಯು ಆಶಿಸುತ್ತಾನೆ)
(ಪದ್ಯ ೬)
1.1.6_16
ಪದ್ಯ ೭:ಕವಿಯ ಆಶಯ
1.1.7
ಕೆನೆವಾಲ ಕಡೆದು ನವನೀತಮಂ ತೆಗೆದು ಬಾ ।
ಯ್ಗಿನಿದಾಗಿ ಸವಿಯದದರೊಳಗೆ ಪುಳಿವಿಳಿದು ರಸ ।
ವನೆ ಕೆಡಿಸಿದೊಡೆ ಕರೆದ ಸುರಭಿಗುಪ್ಪುದೆ ಕೊರತೆ ಕಾವ್ಯಮಂ ಕೇಳ್ದು ಮಥಿಸಿ॥
ಜನಿಸಿದ ಪದಾರ್ಥವಂ ತಿಳಿದು ನೋಡದೆ ವಿನೂ ।
ತನ ಕವಿತೆಯೆಂದು ಕುಂದಿಟ್ಟು ಜರೆದೊಡೆ ಪೇಳ್ದ ।
ವನೊಳಾವುದೂಣೆಯಂ ಜಾಣರಿದನರಿದು ಮತ್ಸರವ ಮರೆದಾಲಿಸುವುದು ॥೭॥
1.1.7_17
(ಪದ್ಯ ೭)
1.1.7_18
ಪದ್ಯ ೮: ಕವಿಯ ಕೋರಿಕೆ
1.1.8
ಜಾಣರಂ ತಲೆದೂಗಿಸದೆ ನುಡಿದೊಡಾಪದ ।
ಕ್ಕೂಣೆಯಂ ಬಹುದೆಂದು ಸರಸೋಕ್ತಿಯಿಂದೆ ಗೀ ।
ರ್ವಾಣ ಪುರನಿಲಯ ಲಕ್ಷ್ಮೀವರಂ ತಾನೆ ಸಂಗೀತ ಸುಕಲಾ ನಿಪುಣನು ॥
ವೀಣೆಯಿಂ ಗಾನಮಂ ನುಡಿಸುವಂದದೊಳೆನ್ನ ।
ವಾಣಿಯಿಂ ಕವಿತೆಯಂ ಪೇಳಿಸಿದನೆಂದರಿದು ।
ಕೇಣಮಂ ತೊರೆದು ಪುರುಡಿಸುವರಂ ಜರೆದು ಕಿವಿದೆರೆದು ಕೇಳ್ವುದು ಸುಜನರು ॥೮॥
1.1.8_19
(ಪದ್ಯ ೮)
1.1.8_20
ಪದ್ಯ ೯ ಕಾವ್ಯ ಸಮರ್ಥನೆ
1.1.9
ದುಷ್ಟಾಹಿ ಘೋರತರ ವಿಷವದನದಿಂದೆ ಸಂ ।
ದಷ್ಟಮಾಗಿರುತಿರ್ದೊಡಂ ದೋಷಮಿರ್ದೊಡಂ ।
ನಷ್ಟ ಕಲೆಯಾದೊಡಂ ಚಂದ್ರನಂತೆನ್ನ ಕಾವ್ಯವ ರಸಂ ಸುಮನಸರ್ಗೆ ॥
ಇಷ್ಟಮಾಗದೆ ಮಾಣದಿನ್ನಾವನಾದೊಡಂ ।
ಕಷ್ಟಮಂ ಬಗೆವವಂ ಚೋರಂಗೆ ವಿರಹಿಗಂ ।
ದೃಷ್ಟಾಂತಮಾಗಿ ಸಲ್ವಂ ಧರಾವಲಯದೊಳ್ ಸಂದೇಹಮೇನಿದರೊಳು ॥೯॥
1.1.9_21
(ಪದ್ಯ ೯)
1.1.9_22
ಪದ್ಯ ೧೦: ಹಿಂದಿನ ಕವಿಗಳಿಗೆ ಕವಿಯ ನಮನ
1.1.10
ಮೊಗಮಾವ ಲೀಲೆಯಿಂದೆಸೆವುದಾ ಭಾವಮಂ ।
ಮಗುಳೆ ತೋರುವುದಲ್ಲದನ್ಯ ಪ್ರಕಾರದಿಂ ।
ಸೊಗಯಿಪುದೆ ರನ್ನಗನ್ನಡಿ ಧರೆಯೊಳಾರಾಜಿಸುವ ಕನ್ನಡದ ನುಡಿಗಳ ॥
ಬಗೆಯರಿದ ಕಾವ್ಯ ಲಕ್ಷಣದಿಂದೆ ಮುನ್ನ ಕ ।
ಬ್ಬಗಳನುಸುರಿದರದೇ ಲಕ್ಷ್ಯಮಲ್ಲದೆ ಪೆರತೆ ।
ನಗೆ ಸಲ್ಲದದರಿಂದೆ ಪೂರ್ವ ಸತ್ಕವಿಗಳ್ಗೆ ನಮಿಸಿ ನಾಂ ಕೃತಿವೇಳ್ವೆನು ॥೧೦॥
1.1.10_23
(ಪದ್ಯ ೧೦)
1.1.10_24
ಪದ್ಯ ೧೧: ಕವಿಯ ಪರಿಚಯ
1.1.11
ವಿದ್ವತ್ಸಭಾವಲಯಮರಿಯೆ ವಿರಚಿಸಿದಂ ಭ ।
ರದ್ವಾಜ ಗೋತ್ರಭವನಣ್ಣಮಾಂಕನ ಸುತಂ ।
ಸದ್ವಿನುತ ಕರ್ಣಾಟಕವಿ ಚೂತವನಚೈತ್ರ ಲಕ್ಷ್ಮೀಶನೆಂಬೊರ್ವನು ॥
ಹೃದ್ವನಜದೊಳ್ ದೇವಪುರದ ಲಕ್ಷ್ಮೀಶನ ಪ ।
ದದ್ವಯವನಾವಗಂ ಧ್ಯಾನಿಸುವರಡಿಗಳಂ ।
ಸದ್ವಿನಯದಿಂ ಭಜಿಪ ಬಲ್ಪಿಂದೆ ವಿಮಲ ಜೈಮಿನಿ ಭಾರತದ ಕಥೆಯನು ॥೧೧॥
1.1.11_25
ಪದ್ಯ ೧೨:ಕವಿಯ ಆತ್ಮ ವಿಶ್ವಾಸ
1.1.12
ವರ ವರ್ಣದಿಂದೆ ಶೋಭಿತಮಾಗಿ ರೂಪ ವಿ ।
ಸ್ತರದಿಂದೆ ಚೆಲ್ವಾಗಿ ಮಧುರತರ ನವರಸೋ ।
ದರಭರಿತದಿಂದೆ ವಿಲಸಿತಮಾಗಿ ಸುಮನೋನುರಾಗದಿಂ ಪ್ರಚುರಮಾಗಿ ॥
ನಿರುತ ಮಂಜುಳ ಶಬ್ದದಿಂದೆ ಕಿವಿಗಿಂಪಾಗಿ ।
ಚರಿಸುವ ಸುಲಲಿತ ಷಟ್ಪದಿಗಳೆಡೆಬಿಡದೆ ಝೇಂ ॥
ಕರಿಸದಿರ್ಪುವೆ ಬಂದು ನೆರೆದ ವಿದ್ವತ್ಸಭಾನೀರೇರುಹಾಕರದೊಳು ॥೧೨॥
1.1.12_26
(ಷಟ್ಪದಿ=ಛಂದಸ್ಸು/ ಜೇನುಹುಳು): ವರ ವರ್ಣದಿಂದೆ ಶೋಭಿತಮಾಗಿ:=ವಾರ್ಧಕ ಷಟ್ಪದಿ ಛಂದಸ್ಸಿನ ಕಾವ್ಯ-> ಉತ್ತಮ ಅಕ್ಷರಗಳಿಂದ/ ಪದಗಳಿಂದ ಶೋಭಿಸುತ್ತಿರುವ; (ಜೇನುಹುಳದ ರೂಪಕಕ್ಕೆ->ಉತ್ತಮ ಬಣ್ಣದಿಂದ /ಮನೋಹರವಾದ ನೀಲಿಬಣ್ಣದಿಂದ ಶೋಭಿಸುತ್ತಿರುವ);ರೂಪ ವಿಸ್ತರದಿಂದೆ ಚೆಲ್ವಾಗಿ = (ವಾರ್ಧಕ ಷಟ್ಪದಿ ಛಂದಸ್ಸು)ರೂಪದ ವಿವರದಲ್ಲಿ ಅಂದವಾಗಿ;ಜೇನುಹುಳದ ರೂಪಕಕ್ಕೆ-> ರೂಪದಲ್ಲಿ ಚೆಲುವಾಗಿರುವ; ಮಧುರತರ ನವರಸೋದರಭರಿತದಿಂದೆ ವಿಲಸಿತಮಾಗಿ -ಮಧುರತರ ನವ ರಸ ಉದರಭರಿತದಿಂದ= ಕಿವಿಗೆ ಇಂಪಾದ ಶೃಂಗಾರಾದಿ ನವರಸಗಳಿಂದ ಕೂಡಿ;ಜೇನುಹುಳದ ರೂಪಕಕ್ಕೆ-> ಸಿಹಿಯಾದ ಹೊಸ ಮಧುರಸದಿಂದ ಭರಿತವಾಗಿರುವ; ಮಧರವಾದ ಸುಮನೋನುರಾಗದಿಂ ಪ್ರಚುರಮಾಗಿ ನಿರುತ ಮಂಜುಳ ಶಬ್ದದಿಂದೆ ಕಿವಿಗಿಂಪಾಗಿ= (ಕಾವ್ಯವು)ಮಧುರವಾದ ಉತ್ತಮ ರಾಗಗಳಿಂದ ಕೂಡಿದ್ದು ಮನೋಜ್ಞವಾಗಿದ್ದು :ಜೇನುಹುಳದ ರೂಪಕಕ್ಕೆ->ಜೇನಿನ ಸುಮಧುರವಾದ ಝೇಂಕಾರ ಸುಶ್ರಾವ್ಯ ಶಬ್ದದಿಂದ ಕೂಡಿ ಕೇಳುವಂತಿದ್ದು; ಚರಿಸುವ ಸುಲಲಿತ ಷಟ್ಪದಿಗಳೆಡೆಬಿಡದೆ = (ಚರಿಸುವ)ಛಂದಸ್ಸಿನ ಲಯದಲ್ಲಿ ಹಾಡಲ್ಪಡುವ ಸರಳವಾದ ಷಟ್ಪದಿಯಲ್ಲಿರುವ ಪದ್ಯಗಳು; ಜೇನುಹುಳದ ರೂಪಕಕ್ಕೆ->ಇಂಪಾದ ಲಯದಲ್ಲಿ ಹಾರುತ್ತಿರುವ ಜೇನುಹುಳುಗಳು ಝೇಂಕಾರಮಾಡದಿರುವುವೇ ; ಝೇಂಕರಿಸದಿರ್ಪುವೆ ಬಂದು ನೆರೆದ ವಿದ್ವತ್ಸಭಾನೀರೇರುಹಾಕರದೊಳು - ಝೇಂಕರಿಸದೆ ಇರುವುವೇ, ವಿದ್ವತ್ ಸಭಾ ನೀರೇರುಹ ಆಕರದೊಳು = ವಿದ್ವಾಂಸರೆಂಬ ಕಮಲಗಳಿಂದ ತುಂಬಿದ ಸರೋವರದಲ್ಲಿ (ಝೇಂಕರಿಸದೆ ಇರುವುವೇ)
(ಪದ್ಯ ೧೨)
1.1.12_27
ಹೋಗಿ
1.1.12_28
ಜೈಮಿನಿ ಭಾರತ/ಎರಡನೆಯ ಸಂಧಿ
1.1.12_29
ನೋಡಿ
1.1.12_30
ಸಂಧಿಗಳು* 1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34
1.1.12_31
ಪರಿವಿಡಿ
1.1.12_32
ಉಲ್ಲೇಖ