Jaimini Bharata (Kannada) 1.16: ಹತ್ತೊಂಭತ್ತನೆಯ ಸಂಧಿ
Jaimini Bhārata (Kannada) 1.16
- Language
- Kannada
ಹತ್ತೊಂಭತ್ತನೆಯ ಸಂಧಿ
1.16.p1
ಹತ್ತೊಂಭತ್ತನೆಯ ಸಂಧಿ
1.16.p2
ಪದ್ಯ :-:ಸೂಚನೆ:
1.16.p3
ಸೂಚನೆ :
ರಮಣಂ ತೊರೆದನೆಂಬುದುಂ ಕೇಳ್ದು ಶೋಕದಿಂ |
ಭ್ರಮಿಸುತಡವಿಯೊಳಿರಲ್ ಕಂಡು ವಾಲ್ಮೀಕಿಯಾ |
ಶ್ರಮಕೊಯ್ದೊಡಲ್ಲಿ ಮಿಥಿಳೇಂದ್ರಸುತೆ ತನಯರಂ ಪಡೆದು ಪದುಳದೊಳಿರ್ದಳು ||
1.16.p4
ಪದ್ಯ :-:೧:
1.16.1
ಅರಸ ಕೇಳ್ ಸೌಮಿತ್ರಿ ವೈದೇಹಿಯಂ ಕೊಂಡು |
ತೆರಳುವ ರಥಾಗ್ರದೊಳ್ ಚಲಿಸುವ ಪತಾಕೆ ರಘು |
ವರನಂಗನೆಯನುಳಿದನಹಹಯೆಂದಡಿಗಡಿಗೆ ತಲೆಗೊಡುಹುವಂತಿರಲ್ಕೆ ||
ಪರಮದಾರುಣಮಾಯ್ತಿದೆಂದಯೋಧ್ಯಾಪುರದ |
ನೆರವಿಯ ಜನಂ ಗುಜುಗುಜಿಸಿ ಮನದೆ ಕರಗಿ ಕಾ |
ತರಿಸುತಿರೆ ಪರಿಸಿದಂ ಕಾಲ್ಬಟ್ಟೆಗೊಂಡನಿಲವೇಗದಿಂದಾ ರಥವನು ||1||
1.16.1_5
ಪದ್ಯ :-:೨:
1.16.2
ಧುರದೊಳಾಂತರನಿರಿದು ಮೆರೆಯಲೇರುವ ರಥಂ |
ತರಳೆಯಂ ಕಾನನಕೆ ಕಳುಹಲಡರ್ವಂತಾಯ್ತು |
ಧರೆಯೊಳಾರ್ತರನೈದೆ ರಕ್ಷಿಸುವ ಬುದ್ಧಿ ಕೋಮಲೆಯ ಕೊಲೆಗೆಲಸಕಾಯ್ತು ||
ಕರುಣಮಿಲ್ಲದೆ ಹೊರೆವ ಹರಣಮಂ ಸುಡಲಿ ನಿ |
ಷ್ಠುರದೊಳೆಂತೀಕೃತ್ಯಮೆಸಗುವನೊ ರಾಘವೇ |
ಶ್ವರನೆಂತಿದಕ್ಕೆ ಬೆಸಸಿದನೊ ತನಗೆನುತೆ ಸೌಮಿತ್ರಿ ಮರುಗುತ ನಡೆದನು ||2||
1.16.2_6
ಪದ್ಯ :-:೩:
1.16.3
ಬಳ್ಳೊರಲ್ದುದು ಮುಂದೆ ಮಾರ್ಗವಂ ದಾಂಟಿದುದು |
ಕುಳ್ಳಿರ್ದ ಮೃಗಮೆದ್ದು ಬಲದ ಕಣ್ಣದಿರೆ ಕಂ
ಡಳ್ಳೆದೆಯಲವನಿಸುತೆ ನೋಡು ಲಕ್ಷ್ಮಣ ದುರ್ನಿಮಿತ್ತಂಗಳಂ ಪಥದೊಳು ||
ಡಿಳ್ಳಮಾದಪುದೀಗಳೆನ್ನ ಮನಮಿದಕೆ ಮುಂ|
ದೊಳ್ಳಿತಾಗಲಿ ರಾಮನಾಯುಷ್ಯಕೈಶ್ವರ್ಯ |
ಕುಳ್ಳ ಭುಜಬಲಕಸುರರಂಗೆಲ್ದ ರಾಘವಂ ನಮ್ಮಂ ಸಲಹಲೆಂದಳು ||3||
1.16.3_7
ಪದ್ಯ :-:೪:
1.16.4
ಅನ್ನೆಗಂ ಜಾನಕಿಯ ಕಣ್ಗೆ ತೋರಿತು ಮುಂದೆ |
ಸನ್ನುತ ರಘೂಧ್ವಹನ ಕೀರ್ತಿಯೆನೆ ಮೂವಟ್ಟೆ |
ಯನ್ನಡೆದು ಮುಕ್ಕಣ್ಣನಂ ಸಾರ್ದು ಮೂಜಗದ ಷಾಪಮಂ ಮುರಿದು ಮುಕ್ಕಿ ||
ಮುನ್ನೀರು ಮುಂತಾಗಿ ಮೂದೇವರೊಳಗಾದ |
ಮುನ್ನುಳ್ಳ ಮೂವತ್ತು ಮೂರ್ಕೋಟಿ ವಿಬುಧರಂ |
ತನ್ನೊಳ್ ಮುಳುಗಿದರಣಕಿಪ ಪೆಂಪೊದವಿ ರಪಿವ ಬೆಳ್ವೊನಲ್ ದಿವಿಜ ನದಿಯ||4||
1.16.4_8
ಪದ್ಯ :-:೫:
1.16.5
ತೆರದ ಕಲ್ಲೋಲ ಮಾಲೆಗಳ ಲೀಲೆಗಳ |
ಬೆರೆಬೆರೆವ ರಾಜಹಂಸಾಳಗಳ ಕೇಳಿಗಳ |
ಪರಿಪರಿಯ ನೀರ್ವನಿಗಳಾಕರದ ಶೀಕರದ ನೊರೆಯ ಬೊಬ್ಬುಳೀಯ ಸುಳಿಯ ||
ಮೊರೆಮೊರೆದ ಘರ್ಮಿಸುವ ಪರಿವುಗಳ ಮುರಿವುಗಲು |
ತಿರುತಿರುಗಿ ಸುಳಿವ ಜಲಜಂತುಗಳ ಗೊಂತುಗಳ |
ನೆರೆನೆರೆದು ಮುನಿಜನಂ ಸೇವಿಸುವ ಭಾವಿಸುವ ಗಂಗೆಗವನಿಜೆ ಬಂದಳು ||5||
1.16.5_9
ಪದ್ಯ :-:೬:
1.16.6
ತೆಂಗೆಳಗವುಂಗು ಪನಸರಿ ದ್ರಾಕ್ಷ ಜಂಬು ನಾ |
ರಂಗ ಜಂಬೀರ ಖರ್ಜೂರ ಕಿತ್ತಳೆ ಮಾತು |
ಳಂಗ ತಿಂತ್ರಿಣಿ ಚೂತ ನೆಲ್ಲಿ ಬಿಲ್ವ ಪಿತ್ಥಮೆಂಬ ನಾನಾ ತರುಗಳು ||
ತೊಂಗುವ ಫಲಾವಳಿಯ ಭಾರಂಗಳಾವಗಂ |
ಪಿಂಗವಿವನಿಳೆಗಿಳುಪಬೇಕೆಂದು ಬಾಗಿದೊಂ |
ದಂಗಮನೆ ಕಣ್ಗೆಸೆದುವಿಕ್ಕೆಲದೊಳಾ ಜಾಹ್ನವಿಯ ತಡಿಯ ಬನದೆಡೆಯೊಳು ||6||
1.16.6_10
ಪದ್ಯ :-:೭:
1.16.7
ಇಳಿದು ರಥದಿಂದೆ ಮಂದಾಕಿನಿಗೆ ಪಡಮುಟ್ಟು |
ಬಳಿಕ ನಾವಿಕರೊಡನೆ ನಾವದೊಳ್ ಗಂಗೆಯಂ |
ಕಳೆದು ನಿರ್ಮಲ ತೀರ್ಥದೊಳ್ ಮಿಂದು ಸೌಮಿತ್ರಿ ಮತ್ತೆ ಭೂಜಾತೆ ಸಹಿತ ||
ಒಳಗೊಳಗೆ ಮರುಗಿ ಬಿಸುಸುಯ್ದು ಚಿಂತಿಸುತೆ ಮುಂ |
ದಳೆದುಗ್ರ ಮೃಗಪಕ್ಷಿ ಗಣದಿಂದೆ ಘೂರ್ಮಿಸುವ |
ಹಳುವನಂ ಪೊಕ್ಕನಡಿಯಿಡುವೊಡಸದಳಮೆಂಬ ಕೆರ್ಕಶದ ಮಾರ್ಗದಿಂದೆ ||7||
1.16.7_11
ಪದ್ಯ :-:೮:
1.16.8
ಶಕುನಿ ಚೀತ್ಕಾರ ಘೋಷಣಮಯಂ ತೃಣಮಯಂ |
ವಿಕಿರದುಪಲಾಳಿ ಕರ್ಕಶಮಯಂ ಶಶಮಯಂ |
ಪ್ರಕಟ ಕಂಟಕ ಕೀರ್ಣ ತರುಮಯಂ ರುರುಮಯಂ ವಿವಿಧೋಗ್ರಜಂತು ಮಯವು ||
ನಕುಲ ಮೂಷಕ ಸರೀಸೃಪ ಮಯಂ ದ್ವಿಪಮಯಂ |
ಸಕಲ ಭೂವಿಷಮ ಸಂಕುಲಮಯಂ ಬಿಲಮಯಂ |
ವೃಕ ಸೂಕರ ವ್ಯಾಘ್ರ ಚಯಮಯಂ ಭಯಮಯಂ ತಾನೆನಿಸಿ ಕಾಡಿರ್ದುದು ||8||
1.16.8_12
(ಪದ್ಯ-೮)
1.16.8_13
ಪದ್ಯ :-:೯:
1.16.9
ಇರುಳಂತೆ ಪಗಲಂತೆ ಮಖದಂತೆ ದಿವದಂತೆ |
ವರ ಪಯೋನಿಧಿಯಂತೆ ಕೈಲಾಸಗಿರಿಯಂತೆ |
ನಿರುತಮಂ ಸೋಮಾರ್ಕ ಶಿಖಿ ಸಹಸ್ರಾಕ್ಷ ಹರಿನುತಶಿವಾವಾಸಮಾಗಿ ||
ಧುರದಂತೆ ಕೊಳದಂತೆ ಕಡಲಂತೆ ನಭದಂತೆ |
ಶರ ಪುಂಡರೀಕ ವಿದ್ರುಮ ಋಕ್ಷಮಯದೊಳಿಡಿ |
ದಿರುತಿರ್ದುದಾ ಮಹಾಟವಿ ಜಾನಕಿಯ ಕಣ್ಗೆ ಘೋರತರಮಾಗಿ ಮುಂದೆ ||9||
1.16.9_14
ಪದ್ಯ :-:೧೦:
1.16.10
ಅಟವಿಯ ಮಹಾಘೋರ ಗಹ್ವರಂ ಮುಂದೆ ದು |
ರ್ಘಟಮಾಗೆ ನಡುನಡುಗಿ ಭೀತಿಯಿಂ ಸೀತೆ ಸಂ |
ಕಟದಿಂದೆ ರಾಮನಾಮಂಗಳಂ ಜಪಸುತೆಲೆ ಸೌಮಿತ್ರಿ ಕಾನನಮಿದು ||
ಅಟನಕಸದಳಮಪ್ಪುದಿಲ್ಲಿ ಪುಣ್ಯಾಶ್ರಮದ |
ಜಟಿಗಳಂ ವಲ್ಕಲವನುಟ್ಟ ಮುನಿವಧುಗಳಂ |
ವಟುಗಳಂ ಶ್ರುತಿಘೋಷ ಹೋಮಧೂಮಂಗಳಂ ಕಾಣೆನೆಂದಳವಳಿದಳು ||10||
1.16.10_15
ಪದ್ಯ :-:೧೧:
1.16.11
ಎಲ್ಲಿ ಮುನಿಪೋತ್ತಮರ ಪಾವನದ ವನದೆಡೆಗ |
ಳೆಲ್ಲಿ ಸಿದ್ಧಾಶ್ರಮಂಗಳ ಮಂಗಳಸ್ಥಳಗ |
ಳೆಲ್ಲಿ ಸುಹವಿಗಳ ಕಂಪೂಗೆದ ಪೊಗೆದಳೆದಗ್ನಿಹೋತ್ರದ ಕುಟೀರಂಗಳು ||
ಎಲ್ಲಿ ಪರಿಚಿತವಾದ ವಾದ ವೇದ ಧ್ವನಿಗ |
ಳಲ್ಲಿಗೊಯ್ಯದೆ ದಾರುದಾರುಣದ ಕಟ್ಟಡವಿ |
ಗಿಲ್ಲಿಗೇಕೈತಂದೆ ತಂದೆ ಸೌಮಿತ್ರಿ ಹೇಳೆಂದು ಜಾನಕಿ ಸುಯ್ದಳು ||11||
1.16.11_16
ಪದ್ಯ :-:೧೨:
1.16.12
ಪಾವನಕೆ ಪಾವನಂ ಮಂಗಳಕೆ ಮಂಗಳಮ |
ದಾವನಚರಿತ್ರ ನಾಮಂಗಳಾ ರಾಘವನೆ |
ಜೀವೇಶನಾಗಿರಲ್ಕಾ ತನಂಘ್ರಿಯ ನಗಲ್ದೀಗ ನಾಂ ಬಂದಬಳಿಕ ||
ಈ ವನದೊಳಿನ್ನು ಪುಣ್ಯಾಶ್ರಮಂ ಗೋಚರಿಪು |
ದೇ ವನಜದರಳನುಳಿದಾರಡಿಗೆ ಬೊಬ್ಬುಳಿಯ |
ಪೂವಿನೊಳ್ ಮಧುವುಂಟೆ ಸೌಮಿತ್ರಿ ಹೇಳೆಂದು ಸೀತೆ ಪೊದಕುಳಿಗೊಂಡಳು ||12||
1.16.12_17
ಪದ್ಯ :-:೧೩:
1.16.13
ನರನಾಥ ಕೇಳವನಿಸುತೆ ನುಡಿದಮಾತಿಗು |
ತ್ತರವನಾಡದೆ ಮನದೊಳುರೆ ನೊಂದು ರಾಘವೇ |
ಶ್ವರನೆಂದ ಕಷ್ಟಮಂ ಪೇಳ್ದಪೆನೊ ಮೇಣುಸಿರದಿರ್ದಪೆನೊ ನಿಷ್ಠುರದೊಳು ||
ತರಣಿಕುಲಸಾರ್ವಭೌಮನ ರಾಣಿಯಂ ಬನದೊ |
ಳಿರಸಿ ಪೋದಪೆನೆಂತೊ ಪೋಗದಿರ್ದೊಡೆ ಸಹೋ |
ದರನದೇನೆಂದಪನೊ ಹಾಯೆಂದು ಲಕ್ಷ್ಮಣಂ ಬೆಂದು ಬೇಗುದಿಗೊಂಡನು ||13||
1.16.13_18
ಪದ್ಯ :-:೧೪:
1.16.14
ಉಕ್ಕಿದುವು ಕಂಬನಿಗಳಧರೋಷ್ಠಮದಿರಿತಲ |
ಗಿಕ್ಕಿ ತಿರುಪಿದವೊಲಾಯ್ತೊಡಲೊಳೆಡೆವರಿಯದುಸಿ |
ರೊಕ್ಕದುರೆ ಕಂಪಿಸಿದುದವಯವಂ ಕರಗಿತೆರ್ದೆ ಸೈರಣೆ ಸಮತೆಗೆಟ್ಟುದು ||
ಸಿಕ್ಕಿದುವು ಕಂಠದೊಳ್ ಮಾತುಗಳ್ ಸೆರೆಬಿಗಿದು |
ಮಿಕಕು ಮೀರುವ ಶೋಕದಿಂದೆ ಬೆಂಡಾಗಿ ಕಡು |
ಗಕ್ಕಸದ ಕೆಲಸಮನುಸಿರಲರಿಯ ದವನೊಯ್ಯ ನವನಿಸುತೆಗಿಂತೆಂದನು ||14||
1.16.14_19
ಪದ್ಯ :-:೧೫:
1.16.15
ದೇವಿ ನಿನಗಿನ್ನೆಗಂ ಪೇಳ್ದುದಿಲ್ಲಪವಾದ |
ಮಾವರಿಸಿ ನಿನ್ನನೊಲ್ಲದೆ ರಘುಕುಲೋದ್ವಹಂ |
ಸೀವರಿಸಿ ಬಿಟ್ಟು ಕಾಂತಾರಕ್ಕೆ ಕಳುಹಿ ಬಾಯೆಂದೆನಗೆ ನೇಮಿಸಿದೊಡೆ ||
ಆ ವಿಭುವಿನಾಜ್ಞೆಯಂ ಮೀರಲರಿಯದೆ ನಿಮ್ಮ |
ನೀ ವಿಪಿನಕೊಡಗೊಂಡು ಬಂದೆನಿನ್ನೊಯ್ಯೊಯ್ಯ |
ನಾವಲ್ಲಿಗಾದೊಡಂ ಪೋಗೆಂದು ಲಕ್ಷ್ಮಣಂ ಬಾಷ್ಪಲೋಚನನಾದನು ||15||
1.16.15_20
ಪದ್ಯ :-:೧೬:
1.16.16
ಬಿರುಗಾಳಿ ಪೊಡೆಯಲ್ಕೆ ಕಂಪಿಸಿ ಫಲಿತ ಕದಳಿ |
ಮುರಿದಿಳೆಗೊರಗುವಂತೆ ಲಕ್ಷ್ಮಣನ ಮಾತು ಕಿವಿ |
ದೆರೆಗೆ ಬೀಳದ ಮುನ್ನ ಹಮ್ಮೈಸಿ ಬಿದ್ದಳುಗನೆ ಧರೆಗೆ ನಡುನಡುಗುತೆ ||
ಮರೆದಳಂಗೋಪಾಂಗಮಂ ಬಳಿಕ ಸೌಮಿತ್ರಿ |
ಮರುಗಿ (ಕ)ತಣ್ಣೀರ್ದಳೆದು ಪತ್ರದೊಳ್ ಕೊಡೆವಿಡಿದು |
ಸೆರಗಿಂದೆ ಬೀಸಿ ರಾಯನ ಸೇವೆ ಸಂದುದೇ ತನಗೆಂದು ರೋದಿಸಿದನು ||16||
1.16.16_21
ಪದ್ಯ :-:೧೭:
1.16.17
ಒಯ್ಯನರಗಳಿಗೆಯೊಳ್ ಕಣ್ಥೆರದು ದೈನ್ಯದಿಂ |
ಸುಯ್ಯಲರನುರೆ ಸೂಸಿ ಸೌಮಿತ್ರಿಯಂ ನೋಡಿ |
ಕೊಯ್ಯಲೊಲ್ಲದ ಕೊರಳನಿಂತು ತನ್ನಂ ಬಿಡಲ್ ಮಾಡಿದಪರಾಧಮುಂಟೆ ||
ಕಯ್ಯಾರೆ ಖಡ್ಗಮಂ ಕೊಟ್ಟು ತನ್ನರಸಿಯಂ |
ಹೊಯ್ಯೆಂದು ಪೇಳದಡವಿಗೆ ಕಳುಹಿ ಬಾಯೆಂದ |
ನಯ್ಯಯ್ಯೊ ರಾಘವಂ ಕಾರುಣ್ಯನಿಧಿ ಯೆಂದಳಲ್ದಳಂಭೋಜನೇತ್ರೆ||17|| |
1.16.17_22
ಪದ್ಯ :-:೧೮:
1.16.18
ಬಿಟ್ಟನೆ ರಘುಶ್ರೇಷ್ಠನೆನ್ನ ನಕಟಕಟ ತಾ |
ಮುಟ್ಟನೆ ನೆಗಳ್ದ ಬಾಳ್ಕೆಗೆ ಸಂಚಕಾರಮಂ |
ಕೊಟ್ಟನೆ ಸುಮಿತ್ರಾತನುಜ ಕಟ್ಟರಣ್ಯದೊಳ್ ಕಳುಹಿ ಬಾಯೆಂದು ನಿನಗೆ ||
ಕೊಟ್ಟನೆ ನಿರೂಪಮಂ ತಾನೆನ್ನ ಕಣ್ಬಟ್ಟೆ |
ಗೆಟ್ಟನೇ ಮನೋವಲ್ಲಭನನಗಲ್ದಡವಿಯೊಳ್ |
ನೆಟ್ಟನೆ ಪಿಶಾಚದವೊಲೆಂತಿಹೆನೊ ಕೆಟ್ಟೆನಲ್ಲಾ ಯೆಂದೊರಲ್ದಳಬಲೆ ||18||
1.16.18_23
(ಪದ್ಯ-೧೮)
1.16.18_24
ಪದ್ಯ :-:೧೯:
1.16.19
ಎಂದು ಕೌಶಿಕಮುನಿಪನೊಡನೆ ಮಿಥಿಲಾಪುರಕ್ಕೆ |
ಬಂದು ಹರಧನುವ ಮುರಿದೆನ್ನಂ ಮದುವೆಯಾದ |
ನಂದುಮೊದಲಾಗಿ ರಮಿಸಿದನೆನ್ನೊಳಾನಗಲ್ದೊಡೆ ತಾಂ ನವೆದನಲ್ಲದೆ ||
ಒಂದಿದನೆ ಸೌಖ್ಯಮಂ ರಾಮನೆನಗಾಗಿ ಕಪಿ |
ವೃಂದಮಂ ನೆರಪಿ ಕಡಲಂ ಕಟ್ಟಿ ದೈತ್ಯರಂ |
ಕೊಂದಗ್ನಿ ಮುಖದೊಳ್ ಪರೀಕ್ಷಿಸಿದ ನೆನ್ನೊಳಪರಾಧಮಂ ಕಾಣಿಸಿದನೇ ||19||
1.16.19_25
ಪದ್ಯ :-:೨೦:
1.16.20
ಕಲ್ಮುಳ್ಳಿಡಿದಕಾಡೊಳಂದೆನ್ನನುಪಚಿರಿಸಿ |
ಪಲ್ಮೊರೆದು ಗರ್ಜಿಪ ವಿರಾಧನಂ ಮರ್ದಿಸಿದೆ |
ಬಲ್ಮೆಯಿಂ ನಾಂ ಕಳುಹಿದೊಡೆ ಜನಸ್ಥಾನದಿಂ ಹೋದೆ ರಾಘವನ ಬಳಿಗೆ ||
ನಲ್ಮೆಯಂ ಮರೆದಪೆನೆ ಸೌಮಿತ್ರಿ ನೀನೆಲ್ಲ |
ರೊಲ್ಮೈದುನನೆ ತನಗೆ ಕಾನನದೊಳೆನ್ನನಿಲಿ |
ಸಲ್ಮನಂ ಬಂದಪುದೆ ತಂದೆ ನಿನಗೆಂದು ಕಂಬನಿಮಿಡಿದಳಂಬುಜಾಕ್ಷಿ ||20||
1.16.20_26
ಪದ್ಯ :-:೨೧:
1.16.21
ತೊಳೆವ ನಾಸಿಕದ ನುಣ್ಗದಪುಗಳ ಪೊಳೆವ ಕಂ |
ಗಳ ತುರುಗಿದೆವೆಯ ನಿಡುಪುರ್ಬುಗಳ ಪೆರೆನೊಸಲ |
ಥಳಥಳಿಪ ಮಕುಟದ ಕಿವಿಯ ಮಕರಕುಂಡಲದ ಕೋಮಲಿತ ಚುಬುಕಾಗ್ರದ ||
ಲಲಿತಾರುಣಾಧರದ ಮಿರುಗುವ ರಧನಪಂಙ್ಕ್ತ |
ಗಳ ಸೂಸುವೆಳೆನಗೆಯ ಮೋಹನದ ಚೆಲ್ವಿನೊ |
ಬ್ಬುಳಿಯೆನಿಪ ರಾಘವನ ಸಿರಿಮೊಗವನೆಂತು ನೋಡದೆಮಾಣ್ಬೆನಕಟೆಂದಳು ||21||
1.16.21_27
ಪದ್ಯ :-:೨೨:
1.16.22
ರಾಮನಂ ಭುವನಾಭಿರಾಮನಂ ಗುಣರತ್ನ |
ಧಾಮನಂ ರಘುಕುಲೋದ್ಧಾಮನಂ ರೂಪಜಿತ |
ಕಾಮನಂ ಸತ್ಕೀರ್ತಿಕಾಮನಂ ಶರಣಜನವಾರ್ಧಿಯಂ ಮಿಗೆ ಪೆರ್ಚಿಪ ||
ಸೋಮನಂ ಸೌಭಾಗ್ಯಸೋಮನಂ ಕುವಲಯ |
ಶ್ಯಾಮನಂ ನಿಜತನುಶ್ಯಾಮನಂ ಘನಪುಣ್ಯ |
ನಾಮನಂ ಸಂತತಂ ನಾ ಮನಂದಣಿಯೆ ರಮಿಸದೆ ಬಾಳ್ವೆನೆಂತೆಂದಳು ||22||
1.16.22_28
ಪದ್ಯ :-:೨೩:
1.16.23
ರಾಯಕೇಳಿಂತಿಂತು ರಾಘವೇಶ್ವರನ ರಮ |
ಣೀಯ ಗುಣಮಾಲೆಯಂ ನೆನೆನೆನೆದು ಹಂಬಲಿಸು |
ತಾಯತಾಂಬಕಿ ಮತ್ತೆ ಮೈಮರೆಯುತೆಚ್ಚರುತೆ ಪಾವಗಿದ ಪಸುಳೆವೊಲಿರೆ ||
ತಾಯೆ ನಿನ್ನಂಬಿಟ್ಟು ಪೋಗಲಾರೆಂ ಪೋಗ |
ದೀಯವಸ್ಥೆಯೊಳಿರ್ದೊಡಣ್ಣ ನೇಗೈದಪನೊ|
ಹಾಯೆಂದು ಲಕ್ಷ್ಮಣಂ ಶೋಕಗದ್ಗದನಾಗೆ ಸೀತೆ ಮಗುಳಿಂತೆಂದಳು ||23||
1.16.23_29
ಪದ್ಯ :-:೨೪:
1.16.24
ತಂದೆ ಲಕ್ಷ್ಮಣ ನಿನ್ನೊಳೆಂದೊಡಿನ್ನೇನಹುದು |
ಹಿಂದಣ ಜನಸ್ಥಾನದಂದದೊಳ್ ಪೋಗು ನೀಂ |
ಕೊಂದುಕೊಂಬೊಡೆ ತನ್ನ ಬೆಂದೊಡಲೊಳಿದೆ ಬಸಿರ ದಂದುಗಂ ಕಾನನದೊಳು ||
ಬಂದುದಂ ಕಾಣ್ಬೆನಾನಿಂದು ಕೌಸಲೆಯಡಿಗೆ |
ವಂದಿಸಿದೆನಪರಾಧಮೊಂದುಮಿಲ್ಲದೆ ತನ್ನ |
ಕಂದನೆನ್ನಂ ತೊರೆದುದಂ ದೇವಿಗೊರೆವುದೆನುತಂದಳಲ್ದಳ್ ಮೃಗಾಕ್ಷಿ ||24||
1.16.24_30
ಪದ್ಯ :-:೨೫:
1.16.25
ಏಕೆ ನಿಂದಿಹೆ ಪೋಗು ಸೌಮಿತ್ರಿ ಕೋಪಿಸನೆ |
ಕಾಕುತ್ಥ್ಸನಿಲ್ಲಿ ತಳುವಿದೊಡೆ ನೆರವುಂಟು ತನ |
ಗೀಕಾಡೊಳುಗ್ರಜಂತುಗಳಲ್ಲಿ ರಘುನಾಥನೇಕಾಕಿಯಾಗಿರ್ಪನು ||
ಲೋಕದರಸೇಗೈದೊಡಂ ತನ್ನ ಕಿಂಕರರ್ |
ಬೇಕುಬೇಡೆಂದು ಪೇಳರೆ ಭರತ ಶತ್ರುಘ್ನ |
ರೀಕೆಲಸಕೊಪ್ಪಿದರೆ ಹನುಮಂತನಿರ್ದಪನೆ ಪೇಳೆಂದಳಲ್ಡಳಬಲೆ ||25||
1.16.25_31
ಪದ್ಯ :-:೨೬:
1.16.26
ಆರಿರ್ದೊಡೇಗೈವರಿದು ತನ್ನ ಮರುಳಾಟ |
ಮಾ ರಾವಣನತಮ್ಮನೈಸಲೆ ವಿಭೀಷಣಂ |
ಭೀರುಗಳನರಿದಪನೆ ಸೋದರಂಗುರೆ ಮುಳಿದ ಸುಗ್ರೀವನೆಂಬವಂಗೆ ||
ಕಾರುಣ್ಯಮಿರ್ದಪುದೆ ಮತ್ತುಳಿದ ಮಂತ್ರಿಗಳ |
ದಾರುಂಟು ಪೇಳುವರ್ ದೇವರಿಗೆ ನೀನೊಪ್ಪಿ |
ಘೋರಾಟವಿಗೆ ಕೊಂಡುಬಂದೆ ಕಳಪುವೊಡಿನ್ನೊರಲ್ಡೊಡೇನಹುದೆಂದಳು ||26||
1.16.26_32
ಪದ್ಯ :-:೨೭:
1.16.27
ಕಡೆಗೆ ಕರುಣಾಳು ರಾಘವನಲ್ಲಿ ತಪ್ಪಿಲ್ಲ |
ಕಡುಪಾತಕಂಗೈದು ಪೆಣ್ಣಾಗಿ ಸಂಭವಿಸಿ |
ದೊಡಲಂ ಪೊರೆವುದೆನ್ನೊಳಪರಾಧಮುಂಟು ಸಾಕಿಲ್ಲಿರಲ್ಬೇಡ ನೀನು ||
ನಡೆ ಪೋಗು ನಿಲ್ಲದಿರ್ ನಿನಗೆ ಮಾರ್ಗದೊಳಾಗ |
ಲಡಿಗಡಿಗೆ ಸುಖಮೆಂದು ಸೀತೆ ಕಂಬನಿಗಳಂ |
ಮಿಡಿದಾರ್ತೆಯಾಗಿರಲ್ ಸೌಮಿತ್ರಿ ನುಡಿದನಾ ವಿಪಿನದಭಿಮಾನಿಗಳ್ಗೆ ||27||
1.16.27_33
ಪದ್ಯ :-:೨೮:
1.16.28
ಎಲೆ ವನಸ್ಥಳಗಳೀರ ವೃಕ್ಷಂಗಳಿರ ಮೃಗಂ |
ಗಳಿರ ಕ್ರಿಮಿಕೀಟಂಗಳಿರ ಪಕ್ಷಿಗಳಿರ ಲತೆ |
ಗಳಿರ ತೃಣಗುಲ್ಮಂಗಳಿರ ಪಂಚಭೂತಂಗಳಿರ ದೆಸೆಗಳಿರ ಕಾವುದು ||
ಎಲೆ ಧರ್ಮದೇವತೆ ಜಗಜ್ಜನನಿ ಜಾಹ್ನವಿಯೆ |
ಸಲಹಿಕೊಳ್ವುದು ತನ್ನ ಮಾತೆಯಂ ಜಾನಕಿಯ |
ನೆಲೆತಾಯೆ ಭೂದೇವಿ ನಿನ್ನ ಮಗಳಿಹಳೆಂದು ಸೌಮಿತ್ರಿ ಕೈಮುಗಿದನು ||28||
1.16.28_34
ಪದ್ಯ :-:೨೯:
1.16.29
ಮಾಳ್ಕೆಯಿನ್ನಾವುದಿಬ್ಬಗಿಯಾಗಿ ತನ್ನೊಡಲ |
ಸೀಳ್ಕೆಡಹಬೇಡವೆ ಧರಿತ್ರಿಯೊಳ್ ನಿಷ್ಠುರದ |
ಬಾಳ್ಕೆಯಂ ಸುಡಲೆನುತೆ ದೇವಿಯಂ ಬಲವಂದು ಲಕ್ಷ್ಮಣಂ ನಮಿಸಿ ಬಳಿಕ ||
ಬೀಳ್ಕೊಂಡು ನಡೆಯಲ್ಕೆ ಹಿಂದುಹಿಂದಕೆ ಮನಂ |
ನೀಳ್ಕೊ(ಳ್ಕು)ಳಿಗೊಳಲ್ಕೆಂದುಮಗಲದಣ್ಣನ ಕಡೆಗೆ |
ದೂಳ್ಕಾಯದೊಳ್ ಪತ್ತಿ ಪೊರಳ್ವ ಸೀತೆಯ ಕಡೆಗೆ ತೂಗುಯ್ಯಲೆವೊಲಾದನು ||29||
1.16.29_35
ಪದ್ಯ :-೩೦:
1.16.30
ನಡೆಗೊಳಲ್ ಕಂಡು ಬಾಯಾರ್ವಳಂ ಚೀವಳಂ |
ಕಡಲಿಡುವ ಕಂಬನಿಯೊಳಾಳ್ವಳಂ ಬೀಳ್ವಳಂ |
ಪುಡಿಯೊಳ್ ಪೊರಳ್ದು ಬಸವಳಿವಳಂ ಸುಳಿವಳಂ ಭರತಾವರಜನಗಲ್ದು ||
ಅಡಿಗಡಿಗೆ ತಿರುತಿರುಗಿ ನೋಡುವಂ ಬಾಡುವಂ |
ಬಿಡದೆ ಬಿಸುಸುಯ್ದು ಬೆಂಡಾದಪಂ ಪೋದಪಂ |
ಪೊಡೆಮರಳ್ವಂ ನಿಲ್ವನಳಲುವಂ ಬಳಲುವಂ ಬಟ್ಟೆಯೊಳ್ ದಿಟ್ಟಿಗೆಟ್ಟು ||30||
1.16.30_36
ಪದ್ಯ :-೩೧:
1.16.31
ತಾಯನೆಳೆಗರು ಬಿಚ್ಚುವಂತೊಯ್ಯನೊಯ್ಯನ |
ತ್ಯಾಯಾಸದಿಂದಗಲ್ದಮರನದಿಯಂ ದಾಂಟಿ |
ರಾಯಕೇಳ್ ದುಃಖಾರ್ತನಾಗಿ ಸೌಮಿತ್ರಿ ಸಾಗಿದನತ್ತಲಿವಳಿತ್ತಲು ||
ಬಾಯಾರಿ ಕಂಗೆಟ್ಟು ಲಕ್ಷ್ಮಣನ ತಲೆ ಮಸುಳ |
ಲಾಯೆಂದೊರಲ್ದು ಭಯಶೋಕದಿಂದಸವಳಿದು |
ಕಾಯಮಂ ಮರೆದವನಿಗೊರಗಿದಳ್ *ಬೇರ್ಗೊಯ್ದುಬಿಸುಟೆಳೆಯ ಬಳ್ಳಿಯಂತೆ ||31||
1.16.31_37
(*ಮೂಲಮಂಕೊಯ್ದೆಳೆಯ ಬಳ್ಳಿಯಂತೆ)
1.16.31_38
ಪದ್ಯ :-೩೨:
1.16.32
ಅರಸ ಕೇಳಲ್ಲಿರ್ದ ಪಕ್ಷಿ ಮೃಗ ಜಂತುಗಳ್ |
ಧರಣಿಸುತೆಯಂ ಬಳಸಿ ನಿಂದು ಮೈಯುಡಗಿ ಜೋ |
ಲ್ದಿರದೆ ಕಂಬನಿಗರೆದು ನಿಜವೈರಮಂ ಮರೆದು ಪುಲ್ಮೇವುಗಳನೆ ತೊರೆದು ||
ಕೊರಗುತಿರ್ದುವು ಕೂಡೆ ವೃಕ್ಷಲತೆಗಳ್ ಬಾಡಿ |
ಸೊರಗುತಿರ್ದುವು ಶೋಕಭಾರದಿಂ ಕಲ್ಗಳುಂ |
ಕರಗುತಿರ್ದುವು ಜಗದೊಳುತ್ತಮರ ಹಾನಿಯಂ ಕಂಡು ಸೈರಿಸುವರುಂಟೆ ||32||
1.16.32_39
(ಪದ್ಯ-೩೨)
1.16.32_40
ಪದ್ಯ :-೩೩:
1.16.33
ಮೊರೆಯಲೊಲ್ಲವು ತುಂಬಿ ಕುಣಿಯಲೊಲ್ಲವು ನವಿಲ್ |
ಬೆರೆಯಲೊಲ್ಲವು ಕೋಕಿ ನಡೆಯಲೊಲ್ಲವು ಹಂಸೆ |
ಕರೆಯಲೊಲ್ಲವು ಪಿಕಂ ನುಡಿಯಲೊಲ್ಲವು ಶುಕಂ ನಲಿಯಲೊಲ್ಲವು ಚಕೋರಿ ||
ನೆರೆಯಲೊಲ್ಲವು ಹರಿಣಿಯೊರೆಯಲೊಲ್ಲವು ಕರಿಣಿ |
ಪೊರೆಯಲೊಲ್ಲವು ಚಮರಿ ಮೆರೆಯಲೊಲ್ಲವು ಸಿಂಗ |
ಮರರೆ ಜಾನಕಿಯ ಶೋಕಂ ತಮ್ಮದೆಂದಾಕೆಯಂಗಮಂ ನೋಡಿನೋಡಿ ||33||
1.16.33_41
ಪದ್ಯ :-೩೪:
1.16.34
ಬೀಸಿದುವು ಬಾಲದೊಳ್ ಚಮರಿಗಳ್ ಚವರಮಂ |
ಪಾಸಿದುವು ಕರಿಗಳೆಳೆದಳಿರ ಮೃದುತಲ್ಪಮಂ |
ಸೂಸಿದುವು ಸಾರಸಂಗಳ್ ತಮ್ಮ ಗರಿಗಳಂ ತೋದು ತಂದಂಬುಗಳನು ||
ಆ ಸಿರಿಮೊಗಕ್ಕೆ ಬಿಸಿಲಾಗದಂತಾಗಸದೊ |
ಳೋಸರಿಸದಂಚೆಗಳರಂಕೆಯನಗಲ್ಚಿನೆಳ |
ಲಾಸೆಗೈದುವು ರಾಘವನ ರಾಣಿ ದುಃಖಸಂತಪ್ತೆಯಾಗಿರುತಿರಲ್ಕೆ ||34||
1.16.34_42
(ಪದ್ಯ-೩೪)
1.16.34_43
ಪದ್ಯ :-೩೫:
1.16.35
ಸುರನದಿಯ ತೆರೆತೆರೆಯ ನಡುನಡುವೆ ಬಿದ್ದೆದ್ದು |
ಬರಲಾರದಿರ್ದೊಡಂ ಮತ್ತೆ ಗಂಗೆಯೊಳಲ |
ರ್ದರವಿಂದಗಂಧದತಿ ಭಾರವಂ ಪೋರಲಾರದಿರ್ದೊಡಂ ಧರಣಿಸುತೆಯ ||
ಪರಿತಾಪಮಂ ತವಿಸದಿರಬಾರದೆಂದು ತರ |
ಹರದೊಳೊಯ್ಯೊಯ್ಯನೈತಂದು ಬೀಸಿತು ಸುಖ |
ಸ್ಪರುಶವಾತಂ ಜಗದೊಳುಪಕಾರಿಯಾದವಂ ತನ್ನ ನೋವಂ ನೋಳ್ಪನೆ ||35||
1.16.35_44
ಪದ್ಯ :-೩೬:
1.16.36
ವೃಥಿವಿಯಾತ್ಮಜೆ ಬಳಿಕ ಚೇತರಿಸಿ ತನಗಿನ್ನು |
ಪಥಮಾವುದೆಂದು ದೆಸೆದೆಸೆಗಳಂ ನೋಡಿ ಸಲೆ |
ಶಿಥಿಲಮಾದವಯವದ ಧೂಳಿಡಿದ ಬಿಡುಮುಡಿಯ ವಿಕೃತಿಯ ನೆಣೆಸದೆ ||
ಮಿಥಿಲೇಂದ್ರವಂಶದೊಳ್ ಜನಿಸಿ ರಘುಕುಲದ ದಶ |
ರಥನೃಪನ ಸೊಸೆಯಾಗಿ ತನಗೆ ಕಟ್ಟಡವಿಯೊಳ್ |
ವ್ಯಥಿಸುವಂತಾಯ್ತಕಟ ವಿಧಿಯೆಂದು ಹಲುಬಿದಳ್ ಕಲ್ಮರಂ ಕರಗುವಂತೆ ||36||
1.16.36_45
ಪದ್ಯ :-೩೭:
1.16.37
ಕೇಣಮಂ ಬಿಟ್ಟಾತ್ಮಘಾತಕದೊಳೀ ಕ್ಷಣಂ |
ಪ್ರಾಣಮಂ ತೊರೆದಪೆನೆ ಬಂದಪುದು ಗರ್ಭದಿಂ |
ಭ್ರೂಣಹತ್ಯಾದೋಷಮೇಗೈವೆನಾರ್ಗೊರೆವೆನೆಂದೊಯ್ಯನೆದ್ದು ಬಳಿಕ ||
ಏಣಾಕ್ಷಿ ನಡೆದಳಡವಿಯೊಳುಪಲ ಕಂಟಕ
ಶ್ರೇಣಿಗಳ್ ಸೊಂಕಿಮೆಲ್ಲಡಿಗಳಿಂ ಬಸಿವ ನವ
ಶೋಣಿತಂ ನೆಲದೊಳ್ ಪೊನಲ್ವರಿಯಲರಸ ಕೇಳ್ ಪೆಣ್ವೊಡಲ್ವಿಡಿಯಬಹುದೆ ||37|
1.16.37_46
ಪದ್ಯ :-೩೮:
1.16.38
ಅನ್ನೆಗಂ ಮಖಕೆ ಯೂಪವನರಸುತಾ ಬನಕೆ |
ಸನ್ನುತ ತಪೋಧನಂ ವಾಲ್ಮೀಕಿ ಮುನಿವರಂ |
ತನ್ನ ಶೀಷ್ಯರ್ವೆರಸಿ ನರೆತಂದು ಕಾಡೊಳೊರ್ವಳೆ ಪುಗಲ್ದೆಸೆಗಾಣದೆ ||
ಬನ್ನದಿಂ ಬಗೆಗೆಟ್ಟು ಪಾಡಳಿದು ಗ್ರೀಷ್ಮಋತುವಿಂ |
ನವೆದ ಕಾಂತಾರದಧಿದೇವಿ ತಾನೆನಲ್ |
ಸನ್ನಗದ್ಗದಕಂಠಿಯಾಗಿ ರೋದಿಸುತಿರ್ದ ವೈದೇಹಿಯಂ ಕಂಡನು ||38||
1.16.38_47
(ಪದ್ಯ-೩೮)
1.16.38_48
ಪದ್ಯ :-೩೯:
1.16.39
ಆರಿವಳಿದೇತಕಿರ್ದಪಳೀ ವನಾಂತರದೊ |
ಳಾರೈವೆನಿದನೆಂದು ನಡೆತಂದು ಕರುಣದಿಂ |
ದಾ ಋಷಿ ನುಡಿಸಿದನೆಲೆ ತಾಯೆ ನೀನಾವಳೌ ಕಂಡ ಕುರುಪಾಗಿರ್ಪುದು ||
ಘೋರತರ ಗಹನಕೊರ್ವಳೆ ಬಂದೆಯೆಂತಕಟ |
ಭೀರು ಹೇಳೌ ಹೆದರಬೇಡ ವಾಲ್ಮೀಕಿ ನಾಂ |
ಭೂರಿಶೋಕಾರ್ತರಾಗಿರ್ದರಂ ಕಂಡು ಸುಮ್ಮನೆ ಪೋಪನಲ್ಲೆಂದನು ||39||
1.16.39_49
ಪದ್ಯ :೪೦:
1.16.40
ಹರುಷಮೊತ್ತರಿಸಿದುದು ಶೋಕವಿಮ್ಮಡಿಸಿದುದು |
ಬೆರಸಿದುದು ಲಜ್ಜೆ ಭೂಮಿಜೆಗಂದು ಗದ್ಗದ |
ಸ್ವರದಿಂದೆ ಸೀತೆ ತಾಂ ಲೋಕಾಪವಾದಕಪರಾಧಿಯಲ್ಲದ ತನ್ನನು ||
ತರಣಿಕುಲಸಂಭವಂ ಬಿಟ್ಟನೆಂದೀವನದೊ |
ಳಿರಿಸಿ ಪೋದಂ ಸುಮಿತ್ರಾತ್ಮಜಂ ಜೀವಮಂ |
ಪೊರೆಯವೇಳ್ವುದೆ ಗರ್ಭಮೊಡಲೊಳಿಹುದೇಗೈವೆನೆಂದೆರಗಿದಳ್ ಮುನಿಪದದೊಳು ||40||
1.16.40_50
ಪದ್ಯ :೪೧:
1.16.41
ದೇವಿ ಬಿಡು ಶೋಕಮಂ ಪುತ್ರಯುಗಮಂ ಪಡೆವೆ |
ಭಾವಿಸದಿರನ್ನು ಸಂದೇಹಮಂ ಜನಕಂಗೆ |
ನಾವನ್ಯರಲ್ಲ ನಮ್ಮಾಶ್ರಮಕೆ ಬಂದು ನೀಂ ಸುಖದೊಳಿರ್ದೊಡೆ ನಿನ್ನನು ||
ಆವಾವ ಬಯಕೆಯುಂಟೆಲ್ಲಮಂ ಸಲಿಸಿ ತಾ |
ನೋವಿಕೊಂಡಿರ್ಪೆನಂಜದಿರೆಂದು ಸಂತೈಸಿ |
ರಾವಣಾರಿಯ ರಾಣಿಯಂ ನಿಜತಪೋವನಕೆ ವಾಲ್ಮೀಕಿ ಕರೆತಂದನು ||41||
1.16.41_51
ಪದ್ಯ :೪೨:
1.16.42
ಚಿತ್ರಮಯಮಾಗಿ ಕಟ್ಟಿತು ಪರ್ಣಶಾಲೆ ಶತ |
ಪತ್ರಲೋಚನೆಗೆ ಬಳಿಕಲ್ಲಿ ಋಷಿಪತ್ನಿಯರ |
ಮಿತ್ರತ್ವಮಂ ತಳೆದು ವಾಲ್ಮೀಕಿಮುನಿಪನಾರೈಕೆಯಿಂ ಸೀತೆ ತನ್ನ ||
ಪುತ್ರೋದಯದ ಕಾಲಮಂ ನೋಡುತಿರ್ದಳ್ ಧ |
ರಿತ್ರಿಯೊಳ್ ದೃಢಪತಿವ್ರತೆಯರ್ಗೆ ನಿರ್ಮಲ ಚ |
ರಿತ್ರಮೆಂತಾದೊಡಂ ವಿಪರೀತಮಾದಪುದೆ ಭೂಪಾಲ ಕೇಳೆಂದನು ||42||
1.16.42_52
ಪದ್ಯ :೪೩:
1.16.43
ಜಾತಿವೈರಂಗಳಿಲ್ಲದ ಪಕ್ಷಿಮೃಗದ ಸಂ |
ಘಾತದಿಂ ಋತುಭೇದಮಿಲ್ಲದ ಲತಾದ್ರುಮ |
ವ್ರಾತದಿಂ ಪಗಲಿರುಳು ಶಂಕೆಯಿಲ್ಲದ ಪೂಗೊಳಂಗಳ ವಿಕಾಸದಿಂದೆ ||
ಶೀತೋಷ್ಣದಾಸರಿಲ್ಲದ ಸುಸ್ಥಳಂಗಳಿಂ |
ಪ್ರೀತಿವಿರಹಿತ ದುಃಖಸುಖದ ಜಂಜಡಮಿಲ್ಲ |
ದಾ ತಪೋವನದೊಳಗೆ ಋಷಿವಧುಗಳೊಡನೆ ವೈದೇಹಿ ಪದುಳದೊಳಿರ್ದಳು ||43||
1.16.43_53
ಪದ್ಯ :೪೪:
1.16.44
ಮುನಿವಟುಗಳೆಡೆಯಾಡಿ ಪರಿಚರ್ಯೆಯಂ ಮಾಳ್ಪ |
ರಿನಿದಾದವಸ್ತುವಂ ಋಷಿವಧುಗಳಿತ್ತಪರ್| ತನತನಗೆ ಸತ್ಕರಿಸುವರ್ ತಾಪಸೋತ್ತಮರ್ ವಾಲ್ಮೀಕಿ ಸಾದರದೊಳು ||
ದಿನದಿನಕೆ ಬೇಕಾದ ಬಯಕೆಯಂ ಸಲಿಸುವಂ |
ಬನದೊಳಿಂತಿರುತಿರ್ದಳವನಿಸುತೆ ರಾಘವೇಂ |
ದ್ರನ ಚರಣಕಮಲಮಂ ಧ್ಯಾನಿಸುತೆ ಮರೆದಖಿಲ ರಾಜವಿಭವ ಶ್ರೀಯನು ||44||
1.16.44_54
ಪದ್ಯ :೪೫:
1.16.45
ಅವನಿಜೆಯ ಗರ್ಭಕ್ಕೆ ತುಂಬಿದುದು ನವಮಾಸ |
ದವಧಿ ಬಳಿಕೊಂದಿರುಳ ಶುಭಲಗ್ನದೊಳ್ ಪಡೆದ |
ಳವಳಿಮಕ್ಕಳನುಪಚರಿಸೆ ವಿದಗ್ಧಾಂಗನೆಯರಾ ಸೂತಿಕಾಗೃಹದೊಳು ||
ತವಕದಿಂದೈತಂದು ಮುನಿವಟುಗಳುಸಿರಲು |
ತ್ಸವದಿಂದೆ ವಾಲ್ಮೀಕಿಮುನಿ ಬಂದು ನೋಡಿ ಕುಶ |
ಲವದಿಂದೆ ಸೇಚನಂಗೈದು ಕುಶಲವರೆಂದು ಪೆಸರಿಟ್ಟನರ್ಭಕರ್ಗೆ ||45||
1.16.45_55
ಪದ್ಯ :೪6:
1.16.46
ದೆಸೆಗಳ್ ಪ್ರಸನ್ನತೆಯೊಳೆಸೆದ ವಾಗಸದೊಳುಡು |
ವಿಸರಂಗಳೊಪ್ಪಿದುವು ಪೊಸಗಂಪಿಡಿದು ಗಾಳಿ |
ಪಸರಿಸಿತು ತವೆ ಸುಪ್ರದಕ್ಷಿಣದೊಳುರಿದುದಗ್ನಿ ಜ್ವಾಲೆ ಕಡಲುಕ್ಕಿತು ||
ವಸುಧೆ ನಲಿದುದು ತಿಳಿದು ಪರಿದುವು ನದಿಗಳಂದು |
ಶಶಿರವಿಗಳುದಯಿಸಿದರೇಕಕಾಲದೊಳೆನಲ್ |
ಶಿಶುಗಳಾಶ್ರಮದ ಮುನಿಗಳ ಕಣ್ಗೆ ಕಾಣಿಸಿದರೊಸಗೆ ಮೂಜಗಕಾದುದು ||46||**
1.16.46_56
ಪದ್ಯ :೪೭:
1.16.47
ಬಾಲದೊಡಿಗೆಗಳೆಲ್ಲಮಂ ತುಡಿಸಿ ನೋಡುವಂ |
ಬಾಲಲೀಲೆಗಳನಾಡಿಸಿ ಮುದ್ದು ಮಾಡುವಂ |
ಬಾಲಕರ್ಗಿನಿದಾದ ವಸ್ತುವಂ ಕೊಡುವಂ ತನ್ನ ತೊಡೆಮಡಿಲೊಳಿಟ್ಟು ||
ಲಾಲಿಸುವನಾವಗಂ ಜಪ ಸಮಾಧಿ ತಪಗಳ |
ಕಾಳಮಂ ಬಗೆಯದೆ ಮುನೀರ್ಶವರಂ ಕುಶಲವರ |
ಮೇಣಕ್ಕರೊಳಿರ್ದನಾಶ್ರಮದೊಳುತ್ಸವಂ ಪೆರ್ಚಿದದು ದಿನದಿನದೊಳು ||47||
1.16.47_57
ಪದ್ಯ :೪೭:
1.16.48
ದಶರಥ ನೃಪಾಲ ಸುತನರಮನೆಯ ಬೆಳವಿಗೆಯ |
ಶಿಶುಗಳ್ಗೆ ಕಾಂತಾರವಾಸದೊಳ್ ನವೆವ ಕ |
ರ್ಕಶಮಿದೆತ್ತಣದೆಂದು ಮಿಥಿಲೇಂದ್ರ ಸಂಭೂತೆ ಚಿತ್ತದೊಳ್ ಮರುಗದಂತೆ ||
ವಿಶದಮಾನಸನಾಗಿ ವಾಲ್ಮೀಕಿಮುನಿವರಂ |
ಕುಶಲವರನೋವಿದಂ ವಿವಿಧವೈಭವದಿಂದೆ |
ಶಶಧರನ ಕಳೆಯ ತೆರದೊಳಾರಾಘವಾತ್ಮಜರ್ ದಿನದಿನಕೆ ವರ್ಧಿಸಿದರು ||48||
1.16.48_58
ಪದ್ಯ :೪೮:
1.16.49
ಚೆಲ್ವೆರಡುರೂಪಾಯ್ತೊ ವಿಮಲತೆ ಕವಲ್ತುದೋ |
ಗೆಲ್ವದೆಸೆ ಗೆಳೆಗೊಂಡಡರ್ದಪುದೊ ಕೀರ್ತಿಯ ಮ |
ದಲ್ವಸುಧೆಯೊಳ್ ದ್ವಿಧಾಕೃತಿಯಾಯ್ತೊ ಸಂತಸದ ಬೆಳಸಿನ ಬೆಳೆದ ಪಸುಗೆಯೊ ||
ಸಲ್ವಕುಲದೇಳ್ಗೆಯ ಸಸಿಯ ಕೋಡೊ ಮೋಹನದ |
ಬಲ್ವೊನಲ ಸವಡಿಯೋ ಸೊಗಸಿನವಳಿಯ ಫಲವೊ |
ಸೊಲ್ವೊಡಿದು ಪೊಸತೆನಲ್ ಕುಶಲವರ್ ಕುಶಲದಿಂ ಕಣ್ಗೆಸೆದರಾಶ್ರಮದೊಳು ||49||
1.16.49_59
ಪದ್ಯ :೪೯:
1.16.50
ತೊಟ್ಟಿಲೊಳ್ ನಲಿವ ನೆವಮಿಲ್ಲದೆ ನಗುವ ಬಾಯ್ಗೆ |
ಬೆಟ್ಟಕ್ಕಿ ಪೀರ್ವ ಪಸಿದೊಡೆ ಚೀರ್ವ ಮೊಲೆಯುಂಬ |
ಪಟ್ಟಿರಿಸೆ ಪೊರಳ್ವಂಬೆಗಾಲಿಡುವ ಮೊಳೆವಲ್ಲ ಜೊಲ್ಲುಗೆ ತೊದಳಿಸಿ ನುಡಿವ ||
ದಟ್ಟಡಿಯಿಡುವ ನಿಲ್ವ ತೊಡರ್ವ ಬೇಡುವ ಪರಿವ |
ಬಟ್ಟೆಯೊಳೊರಗುವ ಕಾಡುವ ಕುಣಿವ ಲೀಲೆಯಂ |
ನೆಟ್ಟನೆ ಕುಮಾರಕರ್ ತೋರಿದರ್ ಜಾನಕಿಗೆ ವಾಲ್ಮೀಕಿಮುನಿವರಂಗೆ ||50||
1.16.50_60
ಪದ್ಯ :೫೧:
1.16.51
ಬಿಡದೆ ಪಾಲ್ಪೀರ್ವುದಂ ಕಳಿಯಲೋರಗೆ ಮಕ್ಕ |
ಳೊಡನೆ ಧೂಳಾಟ ಮೊದಲಾದ ಲೀಲೆಗಳ ಪರಿ |
ವಿಡಿಯೆಂದೆಸೆವ ಕುಮಾರರ್ಗೆ ಮುನಿಪತಿ ಚೌಲಕರ್ಮಂಗಳಂ ಮಾಡಿಸಿ ||
ತೊಡಗಿಸಿದನಕ್ಷರಭ್ಯಾಸಮಂ ಬಳಿಕ ನಡೆ |
ನುಡಿಯ ಜಾಣ್ಮೆಯ ಕಲೆಯ ರಾಜಲಕ್ಷಣದ ಚೆ |
ಲ್ವಿಡಿದ ಲಲಿತಾಂಗದಿಂ ಕುಶಲವರ್ ಕುಶಲ ವರ್ಧನರಾಗಿ ರಂಜಿಸಿದರು ||51||
1.16.51_61
ಪದ್ಯ :೫೨:
1.16.52
ಶ್ರೀಮಾಧವನ ಮನೋಹರದ ಸೌಂದರ್ಯಮಂ |
ಕಾಮನ ಜನಕನ ಕಮನೀಯ ಲಾವಣ್ಯಮಂ |
ರಾಮಚಂದ್ರನ ರಾಮಣೀಯಕದ ರೂಪಮಂ ತಾಳ್ದೊಗೆದ ಸುಕುಮಾರರ ||
ಕೋಮಲಾಂಗದ ಸೊಬಗನಭಿವರ್ಣಿಸುವರುಂಟೆ |
ಭೂಮಿಯೊಳ್ ಚೆಲ್ವಿಗೆ ವಸಂತನಂ ಮದನನಂ |
ಸೋಮನಂ ಪಡಿಯಿಡಲ್ ಪುನರುಕ್ತಮುಪ್ಪುದೆನೆ ಕುಶಲವರ್ ಕಣ್ಗೆಸೆದರು ||52||
1.16.52_62
ಪದ್ಯ :೫೩:
1.16.53
ದ್ವಾದಶಾಬ್ದದ ಮೇಲೆ ಮುನಿಪಂ ಕುಮಾರರ್ಗೆ |
ವೇದೋಕ್ತದಿಂದಮುಪನಯನಂಗಳಂ ಮಾಡಿ |
ಭೂದೇವನಿಕರಕೆ ವಸಿಷ್ಠ ನೊಳ್ ವರಕಾಮಧೇನುವಂ ಬೇಡಿ ತಂದು ||
ಆದರಿಸೆ ಭೋಜನ ಸುಗಂಧಾಕ್ಷತೆಗಳಿಂದ |
ಮಾದುದತಿವಿಭವದಿಂದುತ್ಸವಂ ಬಳಿಕ ತರು |
ಣಾದಿತ್ಯಸನ್ನಿಭರ್ ತೊಳಗಿದರ್ ಜಾನಕಿಯ ಚಿತ್ತಕಾನಂದಮಾಗೆ ||53||
1.16.53_63
ಪದ್ಯ :೫೪:
1.16.54
ಸರ್ವಕರ್ಮದ ವಿಧಿಯನಖಿಳ ನಿಗಮದ ಕಡೆಯ |
ನುರ್ವ ಶಾಸ್ತ್ರದ ಬಗೆಯನುದಿತ ಧರ್ಮದ ನೆಲೆಯ |
ನುರ್ವೀಶ ನೀತಿಗಳ ನಿಶ್ಚಯವನೈದೆ ಸಾಂಗೋಪಾಂಗವಾಗಿ ಬರಿಸಿ ||
ತರ್ವಾಯೊಳಾ ಕುಮಾರರ್ಗೆ ಮುನಿನಾಥಂ ಧ |
ನುರ್ವೇದಮಂ ಶಿಕ್ಷೆಗೈದು ರಾಮಾಯಣವ |
ನಿರ್ವರುಂ ಪಾಡುವಂತೋದಿಸಿದನತಿಮಧರಭಾವದಿಂ ತುದಿ ಮೊದಲ್ಗೆ ||54||
1.16.54_64
ಪದ್ಯ :೫೫:
1.16.55
ಸೀತೆ ನಲಿವಂತೆ ವಾಲ್ಮೀಕಿ ಮೆಚ್ಚುವ ತೆರದೊ |
ಳಾತಪೋವನದ ಮುನಿಗಣಮೈದೆ ಕೊಂಡಾಡ |
ಲಾ ತರುಣರೀರ್ವರುಂ ಮಧುರವೀಣೆಗಳ ಮೇಳಾಪದಾಲಾಪಂಗಳ ||
ಗೀತದೊಳ್ ಸಂಕೀರ್ಣ ಶುದ್ಧ ಸಾಳಗದಿಂ ರ |
ಸಾತಿಶಯಮನೆ ಪಾಡುವರ್ ದೇವನಗರೀ ನಿ |
ಕೇತನ ಶ್ರೀಪತಿಯ ಚಾರಿತ್ರಮಪ್ಪ ರಾಮಾಯಣವನನುದಿನದೊಳು ||55||
1.16.55_65
ಹೋಗಿ
1.16.55_66
<ಜೈಮಿನಿ ಭಾರತ/ಹದಿನೆಂಟನೆಯ ಸಂಧಿ
ಜೈಮಿನಿ ಭಾರತ/ಇಪ್ಪತ್ತನೆಯ ಸಂಧಿ>
1.16.55_67
ನೋಡಿ
1.16.55_68
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34
1.16.55_69
ಪರಿವಿಡಿ
1.16.55_70
ಉಲ್ಲೇಖ