Jaimini Bharata (Kannada) 1.18: ಇಪ್ಪತ್ತೊಂದನೆಯ ಸಂಧಿ
Jaimini Bhārata (Kannada) 1.18
- Language
- Kannada
Contents (152)
- p1–45 — 100 passages
- 45_56–67_85 — 52 passages
ಇಪ್ಪತ್ತೊಂದನೆಯ ಸಂಧಿ
1.18.p1
ಇಪ್ಪತ್ತೊಂದನೆಯ ಸಂಧಿ
1.18.p2
ಪದ್ಯ ಸೂಚನೆ
1.18.p3
ಸೂಚನೆ- ತನಯರೊಳ್ ಕಾದಿ ಮೂರ್ಛಿತನಾದ ರಾಮನಂ |
ಮುನಿಮೌಳಿ ವಾಲ್ಮೀಕಿ ಬಂದು ಸಂತೈಸಲ್ಕೆ |
ವಿನುತಾಶ್ವಮೇಧಮಂ ಪೂರೈಸಿ ಸೀತೆಸಹಿತವನಿಯಂ ಪಾಲಿಸಿದನು ||
1.18.p4
ಪದ್ಯ ೧
1.18.1
ಅರಸ ಕೇಳ್ ಜಾಹ್ನವಿಯ ತೀರದೊಳ್ ದೀಕ್ಷೆಗೊಂ |
ಡಿರುತಿರ್ದ ರಾಘವಂ ಚಿತ್ತದನುತಾಪದಿಂ |
ಭರತನಂಕರೆದು ಶತ್ರುಘ್ನನೇಗೈದನೆಂಬುದನುಸಿರ್ವರಾರುಮೆನಗೆ ||
ತರಳರಂ ಪಿಡಿದಪನೊ ಕೊಂದಪನೊ ಲಕ್ಷ್ಮಣಂ |
ಧುರದೊಳ್ ಬಳಲ್ದಪನೊ ಗೆಲ್ದಪನೊ ಸೋಲ್ದಪನೊ |
ತುರಗಮಂ ಬಿಡಿಸಿ ತಂದಪನೊ ನಾನರಿಯೆನೆಂದಸುರಾರಿ ಚಿಂತಿಸಿದನು ||1||
1.18.1_5
ಪದ್ಯ ೨
1.18.2
ಕನಸಿನೊಳ್ ಸೋಲ್ದುದಿಲ್ಲಾರ್ಗೆಯುಂ ಲಕ್ಷ್ಮಣಂ |
ವನಚಾರಿ ಬಾಲಕರ ಪಾಡಾವುದೀಗ ಮುಳಿ |
ದನುವರದೊಳಿರ್ವರಂ ಘಾತಿಸದೆ ಸಮ್ಮೋಹನಾಸ್ತ್ರದೊಳ್ ಮರವೆಗೊಳಿಸಿ ||
ತನಗೆ ತಂದೊಪ್ಪಿಸುವ ತೆರದೊಳತಿಬಲ ಚರರ |
ನನುಜನೆಡೆಗಟ್ಟೆಂದು ರಾಘವಂ ಭರತನೊಡ |
ನೆನಲವಂ ದೂತರಂ ಕಳುಹಲವರರಿದು ಬಂದವನಿಪತಿಗಿಂತೆಂದರು ||2||
1.18.2_6
ಪದ್ಯ ೩
1.18.3
ದೇವ ಬಿಡು ದೀಕ್ಷೆಯಂ ಕಾದು ನಡೆ ಕುಶನೊಳ್ ಮ |
ಹಾವಿರನಾತನಾ ಲವನಿಂದೆ ಬಲ್ಲಿದಂ |
ಜೀವಸಂದೇಹಮಾಗಿರ್ಪುದೈ ಶತ್ರುಘ್ನ ಲಕ್ಷ್ಮಣರ್ಗಳಸೇನೆ ||
ಭಾವಿಸೆ ತವಾಕೃತಿಯ ಬಾಲಕರ ದೆಸೆಯಿಂದೆ |
ಗೋವರ್ಧನಂಗೆ ಮೊಲೆಗೊಟ್ಟ ಪೂತನಿವೊಲಾ |
ಯ್ತೇವೇಳ್ವೆವೆಂದು ದೂತರ್ ನುಡಿಯೆ ರಾಘವಂ ಕೇಳಿ ಮೂರ್ಛಿತನಾದನು ||3||
1.18.3_7
ಪದ್ಯ ೪
1.18.4
ಬಳಿಕ ಶೈತ್ಯೋಪಚಾರಂಗಳಿಂ ಭರತನಿನ |
ಕುಲಸಾರ್ವಭೌಮನಂ ಸಂತೈಸುತಿರೆ ಮೂರ್ಛೆ |
ತಿಳಿದೆದ್ದು ಲಕ್ಷ್ಮಣನದಾವಡೆಯೊಳೆನ್ನ ಸೊಲ್ಸಲಿಸುವನದಾವೆಡೆಯೊಳು ||
ಹಳುವಿನೊಳ್ ತನಗಾಗಿ ನವೆದನುಜನಾವೆಡೆಯೊ |
ಳಳಿದನೇ ಸೌಮಿತ್ರಿ ಹಾ ತಮ್ಮ ಹಾ ಯೆನುತೆ |
ಹಳವಳಿಸಿ ಬಿಸುಸುಯ್ದಳಲ್ದು ಮರುಗಿದನಂದು ರಾಘವಂ ಶೋಕದಿಂದೆ ||4||
1.18.4_8
ಪದ್ಯ ೫
1.18.5
ಜಾನಕಿಯನಂದು ಪೊರಮಡಿಸಿದನ್ಯಾಯದಿಂ |
ಭಾನುಕುಲ ಸಂಭವಂಗಾದುವಿಂತೀತೆರದ |
ಹಾನಿಗಳ್ ಸೌಮಿತ್ರಿ ಶತ್ರುಘ್ನರಂ ಜಯಿಸುವಗ್ಗಳೆಯರಾರ್ ಜಗದೊಳು ||
ಕಾನನದ ಮುನಿಸುತರ್ಗದಟೆತ್ತಣದು ರಾಮ |
ಸೂನುಗಳ್ ತಪ್ಪದಾಕೃತಿಗಳಂ ನೋಡಲನು |
ಮಾನಮೇಕೆಂದು ಮೊರೆಯಿಟ್ಟುದೆಲ್ಲಾ ಜನಂ ರಾಘವಂ ಕೇಳುವಂತೆ ||5||
1.18.5_9
ಪದ್ಯ ೬
1.18.6
ಸೀತಾವದನಚಿಹ್ನೆಮೆನ್ನಂಗದಾಕಾರ |
ಮಾ ತಾಪಸಾರ್ಭಕರೊಳಿರ್ದಪುದು ಗಡ ಪಡೆದ |
ಮಾತೆಯೆಲ್ಲಿರ್ದಪಳೊ ಕದುರೆಯಂ ಕಟ್ಟುವದಟೆತ್ತಣದಿವರ್ಗೆಂಬುದ ||
ದೂತರಂ ಕರೆ ಕೇಳ್ವೆವಿನ್ನೊಮ್ಮೆ ಶಿಶುಗಳಂ |
ಘಾತಿಸದೆ ದಯೆಗೈದು ತಾನೇರ್ವಡೆದನೊ ಮೇ |
ಣಾತರಳರತಿಬಲರೊ ಸೌಮಿತ್ರಿ ಬಿದ್ದನೇಕೆಂದು ರಘುಪತಿ ಸುಯ್ದನು ||6||
1.18.6_10
ಪದ್ಯ ೭
1.18.7
ಇಂತಿಂತಳಲ್ದಾಗ ಬಿಸುಸುಯ್ದೊಡನೆ ರಾಘ |
ವಂ ತನ್ನ ಸಹಜರ ಗುಣಂಗಳಂ ನೆನೆನೆನೆದು |
ಚಿಂತಿಸುತಿರೆ ಮತ್ತೆ ಕುಶನ ಶರಘಾತಿಯಿಂದುರೆ ನೊಂದು ಭೀತಿಗೊಂಡು ||
ಸಂತಪ್ತರಾಗಿ ಪರಿತಂದು ಲಕ್ಷಣನೊಡಲೊ |
ಳಂತರಿಸಲರಿಯದಸು ಮಡಿದುದುಸಕಲಸೈನ್ಯ |
ಮೆಂತಿಹನೊ ಶತ್ರುಘ್ನನೇಕೆ ದೀಕ್ಷೆಯಿದೆಂದು ಚರರೈದೆ ಮೊರೆಯಿಟ್ಟರು ||7||
1.18.7_11
ಪದ್ಯ ೮
1.18.8
ಮೊರೆವೇಳ್ದ ದೂತರಂ ಗರ್ಜಿಸುತೆ ರಾಘವಂ |
ಗೆರಗಿ ಕೈಮುಗಿದು ಭಯವಿಹ್ವಲರ್ ಚಾರರಿವ |
ರರಿದಪೆರೆ ಸೌಮಿತ್ರಿ ಶತ್ರುಘ್ನರಾಹವಶ್ರಮದಿಂದೆ ತನು ಮನವನು ||
ಮರೆದರಲ್ಲದೆ ಮರಣವೆತ್ತಣದು ಸಾಕಿನ್ನು |
ಬರಿದೆ ಚಿಂತಿಸಬೇಡ ನಾಂ ಪೋಗಿ ಬಾಲಕರ |
ಮುರುಕಮಂ ಬಿಡಿಸಿ ತಹೆನಶ್ವಮಂ ಕಳುಹೆನ್ನನೆಂದು ಭರತಂ ನುಡಿದನು ||8||
1.18.8_12
ಪದ್ಯ ೯
1.18.9
ಬಳಿಕ ಜಾಂಬವ ಸುಷೇಣಾಂಗದ ಹನೂಮಂತ |
ನಳ ನೀಲ ಕುಮುದ ಶತಬಲಿ ಗವಯರೆಂಬ ಕಪಿ |
ಗಳ ಪಡೆಯನೆಲ್ಲಮಂ ಬಲದೊಳುಳಿದಖಿಳ ಚತುರಂಗಮಂ ಕೂಡಿಕೊಟ್ಟು ||
ಕಳುಹಲಿನಕುಲ ಸಾರ್ವಭೌಮನಂ ಬೀಳ್ಕೊಂಡು |
ತಳೆದು ಸುರನದಿಯ ತೀರದೊಳಾಂಜನೇಯನಂ |
ಕೊಳಗುಳದ ವೃತ್ತಾಂತಮಂ ಕಂಡು ಬಂದೊರೆವುದೆಂದು ಭರತಂ ಪೇಳ್ದನು ||9||
1.18.9_13
ಪದ್ಯ ೧೦
1.18.10
ಧೀಂಕಿಟ್ಟನಲ್ಲಿಂದೆ ಕಲಿಹನುಮ ನಾರಣದೊ |
ಳಂಕಿತದ ಕುಶನ ಬಾಣಂಗಳಿಂ ಮಡಿದ ಬಲ |
ಸಂಕುಲವನಿಕ್ಷ್ವಾಕುನಂದನಂ ನಿನ್ನ ಸುತೆ ಸೀತೆಯಂ ಬಿಟ್ಟನೆಂದು ||
ಕೊಂಕದಿರು ಸೈರಿಸುವುದೆಂದೈದೆ ಭೂದೇವಿ |
ಯಂ ಕೋಪಮಂ ಮಾಣಿಸಲ್ ಬೇಡಿಕೊಳ್ವ ತರ |
ದಿಂ ಕೆಡೆದು ಮೈ ಮರೆದು ಮಲಗಿರ್ದ ಸೌಮಿತ್ರಿ ಶತ್ರುಘ್ನರಂ ಕಂಡನು ||10||
1.18.10_14
ಪದ್ಯ ೧೧
1.18.11
ಕಂಡು ಕಪಿವೀರನವರೀರ್ವರಂ ತೆಗೆದೆತ್ತಿ |
ಕೊಂಡು ಭರತನ ಪೊರೆಗೆ ತರಲವಂಬಳಿಕ ಮಣಿ |
ಮಂಡಿತ ವರೂಥದೊಳವರ್ಗಳಂ ಪಟ್ಟಿರಿಸಿ ಹಯಮಂ ಕದಳಿಗೆ ಕಟ್ಟಿ ||
ಚಂಡ ಶರ ಚಾಪ ಪಾಣಿಗಳಾಗಿ ತೊಳಗುವು |
ದ್ದಂಡ ಕುಶ ಲವರಿರ್ವರಿರ್ಪುದಂ ಕೇಳ್ದು ಕೋ |
ದಂಡಮಂ ಜೇಗೈದು ಪಡೆವೆರಸಿ ನೂಕಿದಂ ಮುಳಿದು ಬಾಲಕರ ಮೇಲೆ ||11||
1.18.11_15
ಪದ್ಯ ೧೨
1.18.12
ಅಣ್ಣತಮ್ಮಂದಿರೀರ್ವರು ಮರಿಚತುರ್ಬಲಂ |
ಪಣ್ಣಿ ಬರೆ ಕಂಡು ಬಿಲ್ಗೊಂಡೆದ್ದು ಕೋಪದಿಂ |
ದಣ್ಣೆಕಲ್ಲಾಡಿದರ್ ಪಟುಭಟರ ತಲೆಗಳಂ ಬಾಣಪ್ರಯೋಗದಿಂದೆ ||
ಬಣ್ಣಿಸಲ್ಪವಣೆ ಯೋಜನದಗಲಮೆಲ್ಲಿಯುಂ |
ಕಣ್ಣೆವೆಯಲುಗುವನಿತರೊಳ್ ಸರಲ್ಮಯಮಾಗೆ |
ಚಿಣ್ಣರಂಗದ ಮೇಲೆ ಮೆಚ್ಚಿ ಪೂಮಳೆಗಳಂ ಕರೆದಮರರ್ ಪೊಗಳ್ದು ||12||
1.18.12_16
(ಪದ್ಯ-೧೨.)
1.18.12_17
ಪದ್ಯ ೧೩
1.18.13
ಚಾಪ ಟಂಕಾರಂ ಜಗತ್ತ್ರಯದೊಳೆಲ್ಲಿಯುಂ |
ವ್ಯಾಪಿಸಲ್ ಕಿವುಡಾದುವಷ್ಟದಿಗ್ಧಂತಿಗ |
ಳ್ ಭೂಪಯೋಧಿಗಳೊಡೆವೆರಸಿದುವು ಕುಲಾದ್ರಿಗಳ್ ಜರಿದುವಹಿ ಕಂಪಿಸಿದನು ||
ತಾಪದಿಂ ಪೊಡೆಮರಳ್ದಂ ಕೂರ್ಮನಾ ರವಿಯ |
ರೂಪಡಗಿತೆಸುವ ಬಾಣಾಂಧಕಾರದೊಳಂದು |
ದೀಪಮಿಲ್ಲದ ಮನೆವೊಲಾದುದು ರಣಾಂಗಣಂ ಕಾದುವರದೆಂತೋ ಭಟರು ||13|| |
1.18.13_18
ಪದ್ಯ ೧೪
1.18.14
ಕೋಲ್ಗರೆಯಲಾನೆಗಳ ಸುಂಡಿಲ್ಗಳುಂ ಹಯದ |
ಕಾಲ್ಗಳುಂ ರಾವುತರ ಜೋದರ ಶಿರಂಗಳುಂ |
ಮೇಲ್ಗೈದು ರಥಿಕರ ಧನುರ್ದಂಡಮಂ ಕೈದುವಿಡಿದ ಪಾಣಿಗಳುಮಿಳೆಗೆ ||
ಸಾಲ್ಗೊಂಡುರುಳ್ದುವೊದಗಿದ ಕಪಿಗಳಂಗದೊಳ್ |
ಕೀಲ್ಗಳಂ ಬಲಿದಂತೆ ನಾಂಟಿದುವು ಪರಬಲಂ |
ಸೋಲ್ಗುಮಲ್ಲದೆ ಕುಶ ಲವರ ಮುಂದೆ ಗೆಲ್ವ ಭಟರಂ ಕಾಣೆನಾಹವದೊಳು ||14||
1.18.14_19
ಪದ್ಯ ೧೫
1.18.15
ಸೇನೆಯಂ ನಿಮಿಷದೊಳ್ ತಡೆಗಡಿಯೆ ಕಂಡು ಪವ |
ಮಾನಜಂ ನಡೆತಂದು ಬಾಲಕರ ವಿಗ್ರಹಂ |
ಭಾನುಕುಲತಿಲಕನಾಕೃತಿವೊಲಿದೆ ನೋಡೆಂದು ಭರತಂಗೆ ತೋರಿಸಲ್ಕೆ||
ಸಾನುರಾಗದೊಳತುಲ ಚಾಪಮಂ ಪಿಡಿದು ರಾ |
ಮಾನುಜಂ ಕುಶನ ಸನ್ಮುಖಕೈದಿ ನುಡಿಸಿದಂ |
ಸೂನುಗಳ ಮೊಗಂ ನಿರೀಕ್ಷಿಸಿ ಘನಸ್ನೇಹದಿಂದೆ ಪುಳಕಂ ಪೊಣ್ಮಲು ||15||
1.18.15_20
ಪದ್ಯ ೧೬
1.18.16
ವತ್ಸ ನೀನಾರವಂ ನಿನಗೀತನೇನಹಂ |
ಮತ್ಸಹೋದರರನುರೆ ಘಾತಿಸಿದಿರೆಮ್ಮೆಯ ಮ |
ಹತ್ಸೈನ್ಯಮಂ ಕೊಂದಿರಿನ್ನಾದೊಡಂ ಕುದುರೆಯಂ ಬಿಟ್ಟು ಪೋಗಿ ಬರಿದೆ ||
ಮತ್ಸರಿಸಬೇಡ ನಿಮ್ಮಂ ಪಡೆದ ತಾಯ ಬಳಿ |
ಗುತ್ಸವದೊಳೈದಿ ಸುಖಮಿಹುದೆಂದು ಭರತನೆನ |
ಲುತ್ಸಕದೊಳಾ ಕುಶಂ ನಸುನಗುತೆ ನುಡಿದನಿಂತಾ ರಾಘವಾನುಜಂಗೆ ||16||
1.18.16_21
ಪದ್ಯ ೧೭
1.18.17
ಕಟ್ಟಿದ ತುರಂಗಮಂ ಬಿಡುವನಲ್ಲೀತನೊಡ |
ಹುಟ್ಟಿದಂ ತನಗೆ ವಾಲ್ಮೀಕಿಮುನಿವರನವರ್ |
ನೆಟ್ಟನೆ ರಣಾಗ್ರದೊಳ್ ನಿನ್ನನುಂ ನಿನ್ನನುಜರಂತೆ ಘಾತಿಸಿದ ಬಳಿಕ ||
ಮುಟ್ಟಿದುತ್ಸವದಿಂದ ತಾಯ ಬಳಿಗೈದಿ ಪÉÇಡ |
ಮಟ್ಟಲ್ಲಿ ಸುಖದೊಳಿರ್ದಪೆವೆಂದು ಕಣೆಗಳಂ |
ತೊಟ್ಟು ತಾನೀಗ ಕುಶನರಿ ಇುಕೊಳ್ಳೆನುತೆಚ್ಚನಾ ಭರತನಂ ದಧುರದೊಳು ||17||
1.18.17_22
ಪದ್ಯ ೧೮
1.18.18
ಭರತನಂ ಗಣಿಸದಿಸುತಿರೆ ಕಂಡು ಮತ್ತೆ ಕರಿ |
ತುರಗ ರಥ ಪಾಯದಳ ಮೊತ್ತಿದುದು ಕೂಡೆ ವಾ |
ನರ ಸಿಂಗಳೀಕ ಮುಸು ಕರಡಿಯ ಬಲಂ ಮುತ್ತಿದುದು ಬಳಿಕ ನಸುನಗುತೆ ಕುಶನು ||
ಕರೆದು ಕುದುರೆಯ ಬಳಿಗೆ ತಮ್ಮನಂ ಕಳುಹಿ ಬಿ |
ಲ್ದಿರುವಿಂದುಗುಳ್ಚಿದಂ* ಕಣೆಗಳಂ ವೈರಿ ಮೋ |
ಹರದ ತಲೆವಣೆಗಳಂ ಪಗೆಗಳೆರ್ದೆವಣಿಗಳಂ ರವಿಗೆಣೆಗಳಂ ಕ್ಷಣದೊಳು ||18||
1.18.18_23
(ಉರುಳ್ಚಿದಂ ?-ಉರುಳಿಸಿದನು)
1.18.18_24
(ಪದ್ಯ-೧೮.)
1.18.18_25
ಪದ್ಯ ೧೯
1.18.19
ಹತ್ತು ಭರತನ ಮೇಲೆ ನಳನ ಮೇಲೆಂಟು ಮೂ |
ವತ್ತು ಹನುಮನಮೇಲೆ ಜಾಂಬವನಮೇಲೆ ನಾ |
ಲ್ವತ್ತಂಗದನಮೇಲೆ ತೊಂಬತ್ತು ನೀಲ ಕುಮುದರ ಮೇಲೆ ನೂರುನೂರು ||
ಉತ್ತುಂಗ ಗವಯ ಶತಬಲಿ ಸುಷೇಣರಮೇಲೆ |
ಹತ್ತು ಹತ್ತಂಬೊಡಲ್ವುಗಲೆಚ್ಚನನಿಬರಂ |
ಮತ್ತೆ ಘಾತಿಸಿ ಕೂಡೆ ರಾಮಾನುಜನ ಮೇಲೆ ಕೂರ್ಗಣೆಗಳಂಕರೆದನು ||19||
1.18.19_26
ಪದ್ಯ ೨೦
1.18.20
ಎಲ್ಲಿ ಕುಶನಂಬು ಸೋಂಕಿದುವಲ್ಲಿ ಮೂರ್ಛೆ ಮೃತಿ |
ಯಲ್ಲದುಳಿವಿಲ್ಲ ಪಡೆಯೆಲ್ಲಮಂ ತಲ್ಲಣಿಸಿ |
ಚೆಲ್ಲಿದುದು ದೆಸೆದೆಸೆಗೆ ಬಲ್ಲಿದ ಕಪೀಶ್ವರರ್ ಕೈಗೆಟ್ಟು ಮೈಮರೆದರು ||
ನಿಲ್ಲದೋಡಿತು ದೊದ್ದೆಘಲ್ಲಣಿಯನಾಂತು ನಿಂ |
ದಲ್ಲಿ ಸಾರಥಿ ಕುದುರೆಗಳ್ ಮಡಿದು ತೇರ್ಮುರಿದು |
ಬಿಲ್ಲುಡಿದು ಭರತನಂಗೋಪಾಂಗದಲ್ಲಿ ನಾಂಟಿದುವು ಪೊಸ ಮಸೆಗಣೆಗಳು ||20||
1.18.20_27
ಪದ್ಯ ೨೧
1.18.21
ಜಗದೊಳ್ ಕುಶಾಸ್ತ್ರ ನಿಕರಕ್ಕೆ(ಪ್ರಕರಕೆ)* ಮೈಗೊಟ್ಟವಂ |
ಮಿಗೆ ಪತಿತನಾಗದಿರ್ದಪನೆ ಪೇಳೆಂಬಿನಂ |
ವಿಗತ ಚೇತನನಾಗಿ ಭರತಂ ಮಹೀತಳಕ್ಕೆ ಬಿದ್ದು ಮೂರ್ಛೆಯೊಳಿರಲ್ಕೆ ||
ವಿಗಡ ಹನುಮಂ ಕಂಡು ಕಿತ್ತು ಪೆರ್ಬೆಟ್ಟಮಂ |
ನೆಗಪಿ ತಂದರ್ಭಕನ ಮೇಲಿಡಲ್ಕಣುವೆಂದು |
ಬಗೆಯದೆ ವಿಭಾಡಿಸಿದನಾತನಂ ಕಣೆಯೆಚ್ಚು ನಗುತೆ ಜಾನಕಿಯ ಸೂನು ||21||
1.18.21_28
(ಪ್ರಕರಕೆ-ಸಮುಹಕ್ಕೆ)
1.18.21_29
ಪದ್ಯ ೨೨
1.18.22
ಕಡೆಯ ಮಾತೇನಖಿಳ ಸೇನೆಯಂ ಭರತನಂ |
ಕೆಡಹಿ ಕುಶನಲ್ಲಿಂದೆ ತುರಗಮಿರ್ದೆಡೆಗೆ ಬಂ |
ದೊಡಹುಟ್ಟಿದಂ ವೆರಸಿ ನಿಲ್ವಿನಂ ದೂತರೀತೆರನಂ ರಘೂದ್ವಹಂಗೆ ||
ಕಡುವೇಗದಿಂದೆ ಪೋಗಿ ಬಿನ್ನೈಸೆ ಕೇಳ್ದಳ |
ಲ್ವಿಡಿದು ಪರಿತಾಪದಿಂದುರೆನೊಂದು ವಿಸ್ಮಯಂ |
ಬಡುತೆದ್ದು ಸುಗ್ರೀವ ವರವಿಭೀಷಣರೆಡಬಲದೊಳೈದೆ ಪೊರಮಟ್ಟನು ||22||
1.18.22_30
(ಪ್ರಕರಕೆ-ಸಮುಹಕ್ಕೆ)
1.18.22_31
ಪದ್ಯ ೨೩
1.18.23
ಬಂದಂ ರಥಾರೂಢನಾಗಿ ರಣರಂಗದೊಳ್ |
ನಿಂದು ಮೈಮರೆದೊರಗಿದನುಜರಂ ಮಡಿದ ಬಲ |
ವೃಂದಮಂ ಕುದುರೆಯಂ ಕಟ್ಟಿಕೊಂಡಿದಿರಾಗಿ ಬಿಲ್ವಿಡಿದು ಕಾಳೆಗಕ್ಕೆ ||
ನಿಂದಿರ್ದ ಯಮಳರಂ ಕಂಡು ಬೆರಗಾಗಿ ರಘು |
ನಂದನಂ ವಿನಯದಿಂ ತಾನೆ ಬೆಸಗೊಂಡನಿಂ |
ತೆಂದು ಘನ ಗಂಭೀರವಾಕ್ಯದಿಂದತಿಮನೋಹರಮಾದ ಸುಸ್ವರದೊಳು ||23||
1.18.23_32
(ಪ್ರಕರಕೆ-ಸಮೂಹಕ್ಕೆ)
1.18.23_33
ಪದ್ಯ ೨೪
1.18.24
ಎಲೆ ಪಸುಳೆಗಳಿರ ನಿಮಗೀ ಧನುರ್ವೇದಮಂ |
ಕಲಿಸಿದವನಾವನಾವುದು ನಿವಾಸಸ್ಥಳಂ |
ಸಲಹಿದವನಾವನಾವಂ ತಂದೆ ತಾಯಾವಳಶ್ವಮಂ ಕಟ್ಟುವಿನಿತು ||
ಛಲಮಿದೇತಕೆ ನಮ್ಮ ಸೇನೆಯಂ ಜಯಿಸುವೀ |
ಬಲಮೇತರಿಂದಾದುದೆಂದು ನಯದಿಂದೆ ರಘು |
ಕುಲ ಲಲಾಮಂ ಕೇಳ್ದೊಡಾಕುಶಂ ನಸುನಗುತೆ ಮಾರುತ್ತರಂಗೊಟ್ಟನು ||24||
1.18.24_34
ಪದ್ಯ ೨೫
1.18.25
ರಾಜೇಂದ್ರ ನೀನೆಮ್ಮೊಳಾಹವಕೆ ಬಿಲ್ಗೊಂಡು |
ವಾಜಿಯಂ ಬಿಡಿಸಿಕೊಳ್ಳಲ್ಲದೊಡೆ ಮರುಳಪ್ರ |
ಯೋಜಕದ ಮಾತಿದೇತಕೆ ನಿರುಪಮ ಕ್ಷಾತ್ರಪೌರುಷವನುಳಿದು ಬರಿದೆ |
ಸೋಜಿಗದೊಳೆಮ್ಮ ಜನನಸ್ಥಿತಿಗಳಂ ಕೇಳ್ದೊ |
ಡೀಜಗಂ ಮೆಚ್ಚದೆಚ್ಚಾಡಿ ನೋಡೆನುತೆ ಕುಶ |
ನಾಜಲಜ ಮಿತ್ರಕುಲ ತಿಲಕನಂ ಬಗೆಯದೆ ನುಡಿದೊಡಾತನಿಂತೆಂದನು ||25||
1.18.25_35
ಪದ್ಯ ೨೬
1.18.26
ಶಿಶುಗಳಾಗಿಹ ನಿಮ್ಮೊಳೆನಗೆ ಕಾಳಗವೆ ಪರ |
ವಶರಾಗಿ ಬಿದ್ದನುಜರಂ ಕಂಡು ಖತಿಯೊಳಾಂ |
ವಿಶಿಖಮಂ ತೊಡುವೆನೆಂದೊಡೆ ಮನವೊಡಂಬಡದು ನಿಮ್ಮ ಜನನಸ್ಥಿಗಳ ||
ವಿಶದ ವಿಸ್ತರವ ನೊರೆದೊಡೆ ನೋಡಿಕೊಳ್ವೆನೆನೆ |
ಕುಶನೆಂದನಿಂತು ಲೋಕಾನಂದಕರಮಾದ |
ನಿಶಿತವಾಕ್ಯಂಗಳಂ ಜನಮೇಜಯ ಕ್ಷಿತಿಪ ಕೇಳಾ ರಘೂದ್ವಹಂಗೆ ||26||
1.18.26_36
ಪದ್ಯ ೨೭
1.18.27
ಈ ತಪೋವನದೊಳೆಮ್ಮಿರ್ವರನವಳಿಯಾಗಿ |
ಸೀತೆಯೊರ್ವಳೆ ಪಡೆದಳನುದಿನದೊಳಾರೈದು |
ಜಾತೋಪನಯನಾದಿ ಕರ್ಮಂಗಳಂ ಮಾಡಿ ನಿಗಮಾಗಮ ಸ್ಮೃತಿಗಳ ||
ವ್ರಾತಮಂ ಬರಿಸಿ ಕಾರ್ಮುಕವೇದಮಂ ಕಲಿಸಿ |
ನೀತಿಗಳನರುಹಿ ರಾಮಾಯಣವನೋದಿಸಿ ಮ |
ಹಾತಿಬಲರೆನಿಸಿದಂ ವಾಲ್ಮೀಕಿ ಮುನಿಪನೆಂದೊರೆದು ಮಗುಳಿಂತೆಂದನು ||27||
1.18.27_37
ಪದ್ಯ ೨೮
1.18.28
ರಾಮಚಾರಿತ್ರ ಪಠನಾಭ್ಯಾಸ ಯೋಗದಿಂ |
ಕ್ಷೇಮಂ ಸುಪುಷ್ಟಿ ನಿಶ್ಚಲಮತಿ ನಿರಾಲಸ್ಯ |
ಮೀಮಹಾಸೈನ್ಯವಂ ಗೆಲ್ವದಟು ತಮಗಾದುದೆಂದು ಕುಶನುಸಿರೆ ಕೇಳ್ದು ||
ಪ್ರೇಮದಿಂ ತನ್ನ ಸುತರೆಂದರಿದು ಸೀತೆಯಂ |
ಬೀಮಾತು ಕಿವಿದಾಗಿದೊಡೆ ಬಿದ್ದು ಮೂರ್ಛೆವೆ |
ತ್ತಾ ಮಹೀಶಂ ಕೂಡೆ ಚೇತನಂ ಬಡೆದು ಸುಗ್ರೀವನೊಡನಿಂತೆಂದನು ||28||
1.18.28_38
ಪದ್ಯ ೨೯
1.18.29
ಕಪಿರಾಜ ಕೇಳೈ ಕುಮಾರಕರ ನುಡಿಗಳಂ |
ನಿಪುಣರಿವರಾವ ಪುರುಷಂಗೆ ಸಂಭವಿಸಿದರ್ |
ವಿಪಿನಚಾರಿಗಳ ನಿನ್ನೊಮ್ಮೆ ನೀಂ ಬೆಸಗೊಳೆನೆ ನಸುನಗುತೆ ಸುಗ್ರೀವನು ||
ತಪನಕುಲ ಜಾತರ್ ಪುರಾಣ ಪುರುಷೋತ್ತಮನ |
ವಿಪುಲ ಸಂತತಿಗಳಿವರೀಕ್ಷಿಪೊಡೆ ದೇವ ನಿ |
ನ್ನುಪ ರೂಪಮಾಗಿರ್ಪುದಲ್ಲದೊಡವರ್ಗಿನಿತು ಸತ್ವಮೆತ್ತಣದೆಂದನು ||29||
1.18.29_39
ಪದ್ಯ ೩೦
1.18.30
ಸುಗ್ರೀವ ರಾಘವರ್ ಮಾತಾಡುವನಿತರೊಳ್ |
ನಿಗ್ರಹಿಸಿಕೊಂಡಿರ್ದ ಕುದುರೆಯಂ ಬಿಡುವೊಡ |
ಭ್ಯಗ್ರಮುಳ್ಳವನಾಗಿ ನೀಲನೈತರೆ ಕುಶಂ ಕೋಪದಿಂದಾ ಕಪಿಗಳ ||
ಅಗ್ರಣಿಯನೆಚ್ಚು ಕೆಡಪಿದೊಡವನ ರುಧೀರದಿಂ |
ದುಗ್ರರೂಪದೊಳೆದ್ದುವಾ ನೀಲಕೋಟಿಗಳ್ |
ವಿಗ್ರಹಕ್ಕೆ ಕಡುಮುಳಿದು ಮರಗೊಂಬೆಬೆಟ್ಟ ಕಲ್ಲುಂಡುಗೊಂಡೆಲ್ಲೆಡೆಯೊಳು*||30||
1.18.30_40
(ಕಲ್ಗುಂಡುಗೊಂಡು ಕಳನೆಲ್ಲಡೆಯೊಳು)
1.18.30_41
ಪದ್ಯ ೩೧
1.18.31
ನೀಲ ವಾನರಸೈನ್ಯದೊತ್ತಾಯಮಂ ಕಂಡು |
ಮೇಲೆಸೆವ ರವಿಯನಾರಾಧಿಸಿ ಕುಶಂ ಮಹಾ |
ಸ್ಥೂಲಕಾಯದ ಕಪಿಗಳಂ ಗೆಲಲ್ಕೊಂದುವರೆ ಯೋಜನದಳತೆಯಗಲದ ||
ಕೋಲಗಾಯದ ನೆತ್ತರೊಸರಲೀಯದವೋಲು |
ಬಾಲಕಂ ತುಡುವೊಡಳವಡುವ ತೆರನಾದ ರಿಪು |
ಜಾಲಕಸದಳಮಾದ ಪೂಡಲಕ್ಷಯವಾದ ಬಾಣಂಗಳಂ ಪಡೆದನು ||31||
1.18.31_42
ಪದ್ಯ ೩೨
1.18.32
ಆ ಮಹಾಬಾಣಂಗಳಂ ಪೂಡಿ ತೆಗೆದೆಚ್ಚು |
ಭೀಮ ವಿಕ್ರಮ ಕುಶಂ ಕೆಡಹಿದನಸಿತ ಕಪಿ |
ಸ್ತೋಮಮಂ ಬಳಿಕುರುಳ್ಚಿದನಾದಿ ನೀಲನಂ ಸುಗ್ರೀವ ಮುಖ್ಯರಾದ ||
ಕಾಮರೂಪದ ಸಕಲ ವಾನರ ಚಮೂಪರಂ |
ಭೂಮಿಯೊಳ್ ಮೂರ್ಛೆಗೆಯ್ದೊರಗಿಸಿ ವಿಭೀಷಣನ |
ಸಾಮಥ್ರ್ಯಮಂ ನಿಲಿಸಿ ಮತ್ತವನ ಬಲಮಂ ಪೊರಳ್ಚಿದಂ ಸಂಗರದೊಳು ||32||
1.18.32_43
ಪದ್ಯ ೩೩
1.18.33
ನರ ವಾಜಿ ದಂತಿ ಮುಸು ಕರಡಿ ಸಿಂಗಳಿಕ ವಾ |
ನರ ದಾನವರೊಳಿಡಿದ ಸೇನೆಯೊಳ್ ನೋಡಲೊ |
ರ್ವರುಮಿಲ್ಲದೆಲ್ಲರುಂ ಬಿದ್ದು ತಾನೇಕಾಕಿಯಪ್ಪುದುಂ ಖಾತಿಗೊಂಡು ||
ಸರಳನರ್ಭಕರ ಮೇಲೆಚ್ಚಂ ರಘೂದ್ವಹಂ |
ಧರೆಯೊಳೀ ಕ್ಷತ್ರಿಯರ ಮನವಾಸಿಗಳದೆಂತೊ |
ತರಹರಿಸಬಾರದಿಹ ರಾಮಬಾಣಂಗಳೈದಿದುವು ಕಾಲಾಗ್ನಿಯಂತೆ ||33||
1.18.33_44
ಪದ್ಯ ೩೪
1.18.34
ಬಚ್ಚೆವೋಗದ ರಾಮಬಾಣಂಗಳಂ ನಡುವೆ |
ನುಚ್ಚುನೂರಾಗೆ ಕತ್ತರಿಸಿ ರಘುನಾಥನಂ |
ಮುಚ್ಚಿದರ್ ಕಣೆಗಳಿಂ ಮತ್ತೆ ಕಾಕುತ್ಥ್ಸಂ ಕೆರಳ್ದು ಕುಶ ಲವರ ಮೇಲೆ ||
ಎಚ್ಚೊಡಾ ಕೋಲ್ಗಳಂ ಬಾಲಕರ್ ಮಧ್ಯದೊಳ್ |
ಕೊಚ್ಚಿ ರಾವಣ ರಿಪುವಿನಂಗಮಂ ನೋಯಿಸಿದ |
ರಚ್ಚರಿಯ ಕಾಳೆಗಂ ತಂದೆಮಕ್ಕಳ್ಗೆ ನಡೆದುದು ಸುರರ್ ಬೆರಗಾಗಲು ||34||
1.18.34_45
ಪದ್ಯ ೩೫
1.18.35
ಕಕ್ಕಸದೊಳಂದು ರಾವಣ ಕುಂಭಕರ್ಣಾದಿ |
ರಕ್ಕಸರ ತಲೆಗಳನರಿದು ತಿರುಗಿಬಹ ಕಣೆಗ |
ಳಿಕ್ಕಡಿಗಳಾಗಿ ಬಿದ್ದುವು ಧರೆಗೆ ಕೂಡೆ ಬಾಲಕರಿಸುಗೆ ತನ್ನಿಸುಗೆಗೆ ||
ಮಿಕ್ಕುಬರೆ ಬೆರಗಾಗಿ ರಾಘವಂ ಸುಮ್ಮನಿರೆ |
ಪೊಕ್ಕುವಂಬುಗಳೊಡಲೊಳಾತ್ಮಜರ ಮೇಲೆ ತನ |
ಗಕ್ಕರುಂಟಿಲ್ಲೆಂಬುದಂ ನೋಳ್ವೆವೆಂಬವೊಲ್ ಭೂಪ ಕೇಳ್ ಕೌತುಕವನು ||35||
1.18.35_46
ಪದ್ಯ ೩೬
1.18.36
ಪಲ್ಲವಿತ ನವ ಚೂತತರು ಬೇಸಗೆಯ ಝಳಕೆ |
ನಿಲ್ಲದಸವಳಿದು ಜೋಲ್ವಂತೆ ಕೋಮಲಕಾಯ |
ದೆಲ್ಲೆಡೆಯೊಳಂ ನಾಂಟಿದಂಬುಗಳ ರುಧಿರ ಪ್ರವಾಹದಿಂದುರೆ ಬಳಲ್ದು ||
ಮೆಲ್ಲನೆ ವರೂಥದೊಳ್ ಸಾರಥಿವೆರಸಿ ಧರಾ |
ವಲ್ಲಭಂ ಮೈಮರೆದು ಪವಡಿಸಿದನನಿಮಿಷರ್ |
ಚೆಲ್ಲಿದರ್ ಪೂಮಳೆಗಳಂ ಮೊಳಗಿದುವು ದೇವ ದುಂದುಭಿಗಳಂಬರದೊಳು ||36||
1.18.36_47
ಪದ್ಯ ೩೭
1.18.37
ಆ ಕುಮಾರರ್ ಬಳಿಕ ಶರಹತಿಗೆ ಮೈಮರೆದ |
ಕಾಕುತ್ಥ್ಸನಲ್ಲಿಗೈತಂದು ರಾಜೇಂದ್ರನ ಶು |
ಭಾಕಾರಮಂ ನೋಡಿ ಸಿರಿಮೊಗದ ಮಣಿ ಕುಡಲಂಗಳಂ ಕಂಬುಗಳದ ||
ಏಕಾವಳಿಯ ಹಾರಮಂ ತೆಗೆದುಕೊಂಡೂರ್ಮಿ |
ಳಾಕಾಂತ ಭರತ ಶತ್ರುಘ್ನರ ವಿಭೂಷಣಾ |
ನೀಕಮಂ ಕಳೆದೊಂದು ವಸನದೊಳ್ ಕಟ್ಟಿ ಕುಶನೊಡನೆ ಲವನಿಂತೆಂದನು ||37||
1.18.37_48
ಪದ್ಯ ೩೮
1.18.38
ಅಗ್ರಭವ ಕೇಳಿವರೊಳೊಂದು ರಥಮಂ ಪತ್ತಿ |
ವಿಗ್ರಹದೊಳೆಚ್ಚರಾಗಿರ್ದ ವೀರರ್ಕಳ ಕ |
ಚ ಗ್ರಹಣಮಂ ಮಾಡಿಕೊಂಡು ಬಹೆನೆನುತೆ ಲಕ್ಷ್ಮಣನ ಪೊಂದೇರ್ಗಡರ್ದು ||
ವ್ಯಗ್ರದಿಂ ಲವನೈತರಲ್ ಕುಶನ ಶರಹತಿಯ |
ನಿಗ್ರಹಕ್ಕೊಳಗಾಗಿ ಮೂರ್ಛೆಯಿಲ್ಲದೆ ಕಪಿಗ |
ಳಗ್ರಣಿಗಳುಳಿದಿರ್ದರಿರ್ವರದರೊಳ್ಜಾಂಬವನೊಳೆಂದನಾ ಹನುಮನು ||38||
1.18.38_49
ಪದ್ಯ ೩೯
1.18.39
ಕಂಡಿರೇ ಜಾಂಬವರೆ ರಾಮಾದಿ ವೀರರಂ |
ದಿಂಡುಗೆಡಹಿದಬಳಿಕ ರಣದೊಳುಸಿರಿರ್ದರಂ |
ಮಂಡೆವಿಡಿದೆಳೆದುಯ್ವೆನೆಂದು ಸೀತಾಸುತಂ ಬಂದಪಂ ನಾವಿವನೊಳು ||
ದಂಡಿಗಾರೆವು ನಮ್ಮನೀ ಬಾಲಕಂಪಿಡಿದು |
ಕೊಂಡು ಪೋಗಲಿ ಜಾನಕಿಯ ಪೊರೆಗೆ ದೇವಿ ಕೃಪೆ |
ಯಿಂ ಡಿಂಗರಿಗರೆಂದು ಪಾಲಿಸಲಿ ಮೇಣುಳಿಯಲೆಂದನಾ ಹನುಮಂತನು ||39||
1.18.39_50
ಪದ್ಯ ೪೧
1.18.40
ಕೆಡದಿರ್ದರೆಲ್ಲರಂ ನೋಡಿ ರಣರಂಗದೊಳ್ |
ಮಿಡುಕಿ ಮಾತಾಡುವಿವರಂ ಕಂಡು ಲೀಲೆಯಿಂ |
ಪಿಡಿದು ಲವನೆಳೆತಂದುಕೌತುಕದ ಕಪಿಗಳೆಂದಣ್ಣಂಗೆ ತೋರಿಸಲ್ಕೆ ||
ಕಡು ಮೆಚ್ಚಿ ತಮ್ಮನಂ ಕುಶನಪ್ಪಿದಂ ಬಳಿಕ |
ಪಡೆದ ತಾಯಂ ಕಾಣಲಾ ಪ್ಲವಗ ಪತಿಗಳಂ |
ಬಿಡದನಿಬರಾ ಭರಣಮನಿತುಮಂ ಕೊಂಡಿರ್ವರುಂ ಬಂದರಾಶ್ರಮಕ್ಕೆ ||40||
1.18.40_51
ಪದ್ಯ ೪೧
1.18.41
ಏನಾದರೋ ತನಯರೆಂದು ಚಿಂತಿಸುತಿರ್ಪ |
ಜಾನಕಿಗೆ ರಾಮಾದಿಗಳ ಭೂಷಣಂಗಳ |
ಕಾನನದ ಬೇಂಟೆಯೊಳ್ ಸಿಕ್ಕಿ ಸೀಕರಿಗೊಂಬ ಮೃಗಪೋತಕಂಗಳಂತೆ ||
ಮೌನದಿಂ ಮೈಯುಡುಗಿ ನೊಂದೆಳೆತಟಕೆ ಬಿದ್ದ |
ವಾನರಶ್ರೇಷ್ಠರಂ ತಂದಿತ್ತು ಚರಣದೊಳ್ |
ಸೂನುಗಳ್ ಪೊಡಮಡಲ್ಕಾಸೀತೆ ನಡುನಡುಗಿ ನಂದನರ್ಗಿಂತೆಂದಳು ||41||
1.18.41_52
ಪದ್ಯ ೪೧
1.18.42
ಆರುಮರಿಯದವೊಲೀ ಕಾನನದೊಳಿರ್ದೆನಾಂ |
ಧಾರಿಣೀಶರ ಭೂಷಣಂಗಳೇತಕೆ ನಮಗೆ |
ವೀರ ಕಪಿವರರಿವರ್ ಜಗದೊಳಭಿಮಾನಿಗಳ್ ಭಂಗಮೇಕಿಂತಿವರ್ಗೆ ||
ಘೋರಕರ್ಮಂಗಳಂ ಮಾಡಿದಿರಿ ಮಕ್ಕಳಿರ |
ದಾರಿತಪ್ಪಿದಿರಿನ್ನು ವಾಲ್ಮೀಕಿಮುನಿವರಂ |
ಬಾರದಿರನೀಗಳೆ ರಣದೊಳಿವರನಿರಿಸಿ ಬಹುದೆಂದಳವನಿಜೆ ಲವಂಗೆ ||42||
1.18.42_53
ಪದ್ಯ ೪೩
1.18.43
ವೈದೇಹಿ ನುಡಿದುದುಂ ಕೈಕೊಂಡು ಲವನವರ |
ನುಯ್ದು ರಣರಂಗದೊಳ್ ಮಗುಳಿರಿಸಿ ಬಂದ ನಿರ |
ದೈದೆ ನಾರದನಿಂದ ಕೇಳ್ದು ವಾಲ್ಮೀಕಿ ಮುನಿ ಪಾತಾಳಲೋಕದಿಂದೆ ||
ಮೈದೋರಲಾಶ್ರಮದ್ವಾರದೊಳ್ ಕಂಡು ಮೇ |
ಲ್ವಾಯ್ದುಕ್ಕುವಾನಂದರಸದಿಂದೆ ವಂದನಂ |
ಗೈದಳವನಿಜೆ ಮಣಿದರೆಲ್ಲರುಂ ಜಾನಕಿಯ ಸುತರೆರಗಿದರ್ ಪದದೊಳು ||43||
1.18.43_54
ಪದ್ಯ ೪೪
1.18.44
ಶರ ವೇದಮೂರ್ತಿಗಳ ತೆರದಿಂದ ರಾಜಿಸುವ |
ತರಳರಂ ಮಣಿದೆತ್ತಿ ಮಕ್ಕಳಿರ ನಿಮಗೆ ರಘು |
ವರನ ಸೇನೆಯೊಳಾಯ್ತುಗಡ ಕಲಹಮೇಕೆ ತೊಡಗಿತು ತೋಟಿ ನಿಮ್ಮಕೂಡೆ ||
ಧುರಕೆ ಬಂದೆಚ್ಚಾಡಿ ಬಿದ್ದರಾರ್ ಮೆಯ್ಯೊ |
ಳರಿಗಳಂಬಿನ ಗಾಯಮಿಲ್ಲದೆತ್ತಣ ಬಲೋ |
ತ್ಕರದೇಳ್ಗೆ ಪೇಳ್ವುದೆನೆ ವಾಲ್ಮೀಕಿಮುನಿಪುಂಗವಂಗೆ ಕುಶನಿಂತೆದನು ||44||
1.18.44_55
ಪದ್ಯ ೪೫
1.18.45
ತಂದೆ ನೀವಿರಲೆಮಗೆ ಸುಕ್ಷೇಮಕರಮಪ್ಪು |
ದೆಂದೆಂದುಮಿದು ನಿಜಂ ನಿಮ್ಮಡಿಗಳುಪದೇಶ |
ದಿಂದರಿಗಳಂ ಗೆಲ್ದೆವೀನಿಮ್ಮ ಪುಣ್ಯಾಶ್ರಮದೊಳಾಯ್ತು ಭೂತ ಹಿಂಸೆ ||
ಬಂದುದೊಂದಶ್ವಮದನೀ ಲವಂ ಕಟ್ಟಿದಂ |
ಮಂದಿ ಕವಿದುದು ಮೇಲೆ ಶತ್ರುಘ್ನನುರುಬಿದಂ |
ಸಂಧಿಸಿದೆ ನಾಂ ಬಳಿಕ ಸೌಮಿತ್ರಿ ಭರತ ರಾಮಾದಿಗಳ್ ನಡೆತಂದರು ||45||
1.18.45_56
ಪದ್ಯ ೪೬
1.18.46
ಕಡೆಯ ಮಾತೇನಿನ್ನು ದೊರೆದೊರೆಗಳೆಲ್ಲರಂ |
ಪಡೆಯೊಳ್ ನಿಶಾಟ ಕಪಿ ನರ ಚಾತುರಂಗಮಂ |
ಕೆಡಹಿದೆವೆನಲ್ ಕುಶನ ನುಡಿಗೆ ಸೈವೆರೆಗಾಗಿ ವಾಲ್ಮೀಕಿಮುನಿ ಮನದೊಳು ||
ಕಡುನೊಂದನಕಟಕಟ ತಪ್ಪಾದುದೆನುತೆ ನಡು |
ನಡುಗುತಿಹ ಸೀತೆಯಂ ಸಂತೈಸಿ ವಹಿಲದಿಂ |
ನಡೆತಂದನೊಡನಿರ್ದ ತಾಪಸ ವಿತತಿ ಸಹಿತ ಸಂಗ್ರಾಮ ಭೂಮಿಗಾಗಿ ||46||
1.18.46_57
ಪದ್ಯ ೪೭
1.18.47
ಶರಧಿಯಂ ಕಟ್ಟುವಂದಾರಾಘವೇಶ್ವರಂ |
ಧರೆಯೊಳಿಟ್ಟಣಿಸಿರ್ದ ಬೆಟ್ಟಂಗಳೆಲ್ಲಮಂ |
ತರಿಸಿದಂ ಭೂಮಿಗಾಧಾರಮಿಲ್ಲದೆ ಪೋಪುದೆಂದವನ ತನುಜಾತರು ||
ಗಿರಿಗಳಂ ಪ್ರತಿಯಾಗಿ ತಂದಿಳೆಯಮೇಲಿನ್ನು |
ಪರಪಿದರೊ ಪೇಳೆನಲ್ ಪೊಡೆಗೆಡೆದು ಬಿದ್ದಿರ್ದ |
ಕರಿಘಟೆಗಳಟ್ಟೆಗಳ್ ಕಾಣಿಸಿದುವಾ ರಣದೊಳಾ ತಪೋನಿಧಿಯ ಕಣ್ಗೆ ||47||
1.18.47_58
ಪದ್ಯ ೪೮
1.18.48
ತಟ್ಟುಗೆಡದಿಹ ವಾಜಿ ವಾರಣ ವರೂಥದಿಂ |
ದಿಟ್ಟಣಿಸಿ ಬಿದ್ದ ರಾಕ್ಷಸ ಮನುಜ ಕಪಿಗಳಿಂ |
ದಟ್ಟಿನಗಲಕೆ ಚೆಲ್ಲಿದ ಛತ್ರ ಚಾಮರ ಪತಾಕೆಗಳ ಮೆದೆಗಳಿಂದೆ ||
ಒಟ್ಟೊಟ್ಟಿಲಾಗಿ ಸೂಸಿದ ಪಲವು ಕೈದುಗಳ |
ಬೆಟ್ಟಂಗಳಿಂ ಮಿದುಳ್‍ನೆಣ ವಸೆ ಕರುಳ್ಗಳಿಂ |
ಕಟ್ಟುಗ್ರಮಾದ ರಣರಂಗದೊಳ್ ವಾಲ್ಮೀಕಿಮುನಿ ರಾಮನಂ ಕಂಡನು ||48||
1.18.48_59
(ಪದ್ಯ-೪೮.)
1.18.48_60
ಪದ್ಯ ೪೯
1.18.49
ಅಂದು ಪುರಹೂತವೈರಿಯ ಸರ್ಪಶರದಿಂದೆ |
ಪೊಂದಿದ ಸಮಸ್ತ ಬಲ ಸಹಿತ ಬಿದ್ದೆಚ್ಚರಳಿ |
ದಂದದಿಂ ನಸು ಮಸುಳ್ದಾನನದ ನಿಶೆಯ ತಾವರೆವೊಲಾಗಿಹ ಕಣ್ಗಳ ||
ಕಂದಿದವಯವದ ಕಾಂತಿಗಳ ಕರ ಪಂಕರುಹ |
ದಿಂದೆ ಕೆಲಕೋಸರಿಸೆ ಬಿದ್ದ ಬಿಲ್ಲಂಬುಗಳ |
ನೊಂದ ಗಾಯದ ನೆತ್ತರೊರತೆಗಳ ರಾಮನಂ ಕಂಡು ಮುನಿ ಬೆರಗಾದನು ||49||
1.18.49_61
ಪದ್ಯ ೫೦
1.18.50
ಈಕ್ಷಿಸಿ ಕಮಂಡಲೋದಕದಿಂದೆ ಮುನಿವರಂ |
ಪ್ರೋಕ್ಷಿಸಿದೊಡುರಗ ತಲ್ಪದೊಳುಪ್ಪಡಿಸುವ |
ಬ್ಜಾ ಕ್ಷನೀತಂ ತಪ್ಪದೆಂಬಂತೆ ಕಣ್ದೆರದು ವಾಲ್ಮೀಕಿಗಭಿನಮಿಸಲು ||
ಸಾಕ್ಷಾಜ್ಜಗನ್ನಾಥ ಸರ್ವಕಾರಣ ಸಕಲ |
ರಾಕ್ಷಸಾಂತಕ ಭಕ್ತವತ್ಸಲ ಕೃಪಾಳು ನಿರ |
ಪೇಕ್ಷ ರಾಘವ ರಾಮ ಚಿತ್ತಾವಧಾನಮೆಂದಾ ಮುನಿ ಪೊಗಳುತಿರ್ದನು ||50||
1.18.50_62
ಪದ್ಯ ೫೧
1.18.51
ಬಳಿಕ ರಾಘವನ ಸಿರಿಮುಡಿಗೆ ನಭದಿಂದೆ ಪೂ |
ಮಳೆ ಕರೆದುದುತ್ಸವದೊಳಮರ ದುಂದುಭಿಗಳುರೆ |
ಮೊಳಗಿದವು ಋಷಿಮಂತ್ರಪೂತ ಜಲದಿಂದ ಭರತಾದಿಗಳ್ ಜೀವಿಸಿದರು ||
ತಳೆದರನಿಮಿಷರಮೃತಮಂ ಬಿದ್ದ ಪಡೆಯ ಮೇ |
ಲುಳಿಯದೆ ಸಮಸ್ತಸೈನಿಕಮೆದ್ದುದಾಗ ಪೆರೆ |
ಗಳೆದ ಫಣಿ ಕುಲದಂತೆ ನಲಿದು ಚತುರ್ಬಲಂ ಪೇಳಲೇನಚ್ಚರಿಯನು ||51|||
1.18.51_63
ಪದ್ಯ ೫೨
1.18.52
ಬರಿಸಿದಂ ನೆನೆದು ಸುರಧೇನುವಂ ವಾಲ್ಮೀಕಿ |
ಪರಮ ಸಂಪ್ರೀತಿಯಿಂ ಬೇಡಿದ ಪದಾರ್ಥಮಂ |
ತರಿಸಿದಂ ದುಗ್ಧಾಭಿಷೇಕಮಂ ಮಾಡಿಸಿದನಾ ರಾಘವೇಶ್ವರಂಗೆ ||
ಭರತಾದಿಗಳ್ವೆರಸಿ ಕುಳ್ಳಿರ್ದ ಬಳಿಕ ಪತಿ |
ಕರಿಸಿ ಕಾಕುತ್ಸ್ಥನಂ ಕೊಂಡಾಡಿ ನೇಮದಿಂ |
ಕರಿಸಿ ಕುಶಲವರಂ ಪದಾಬ್ಜದೊಳ್ ಕೆಡಹಿ ಮುನಿವರನೊಯ್ಯನಿಂತೆಂದನು ||52||
1.18.52_64
ಪದ್ಯ ೫೩
1.18.53
ರಾಜೇಂದ್ರ ಕೋಪಮಂ ಮಾಡದಿರ್ ನಿನ್ನಂ ಕೃ |
ಪಾಜಲಧಿಯೆಂದು ಮರೆವೊಕ್ಕರಂ ಕಾವನೆಂ |
ದೀಜಗಂ ಬಣ್ಣಿಪುದು ನಿನ್ನ ತನುಸಂಭವರ್ ಜಾನಕಿಯ ಮಕ್ಕಳಿವರು ||
ಓಜೆತಪ್ಪಿದರಾಶ್ರಮದೊಳಿದ್ದುದಿಲ್ಲ ಮಖ |
ಯಾಜನಕೆ ವರುಣಂ ಕರೆಸಲಾಗಿ ಪೋದೆನೀ |
ವ್ಯಾಜಮಂ ತಾನರಿಯೆನಪರಾಧಮೆನಿತುಳ್ಳೊಡಂ ಸೈರಿಸುವುದೆಂದನು ||53||
1.18.53_65
ಪದ್ಯ ೫೪
1.18.54
ಜಾತಂ ವಿನೀತನಾಗಲಿ ಧೂರ್ತನಾಗಿರಲಿ |
ತಾತಂಗೆ ವಿರಹಿತವೆ ನೋಡದಿರ್ ಬಾಲಕರ |
ತೀತಮಂ ಕ್ಷಮಿಸೆಂದು ವಾಲ್ಮೀಕಿ ನುಡಿಯೆ ರಾಘವ ನೂರ್ಮಿಳಾಪತಿಯನು ||
ಸೀತೆ ಸುತರಂ ಪಡೆದಳೆಂತೆನೆ ತವಾಜ್ಞೆಯಿಂ |
ಶ್ವೇತನದಿಯಂ ದಾಂಟಿ ಪೂರ್ಣಗರ್ಭಿಣಿಯಾದ |
ಭೂ ತನುಜೆಯಂ ಕಾನನದೊಳಿರಿಸಿ ಬಂದೆನಲ್ಲದೆ ಮುಂದರಿಯೆನೆಂದನು ||54||
1.18.54_66
ಪದ್ಯ ೫೫
1.18.55
ಇಂತೆಂದು ಲಕ್ಷ್ಮಣಂ ನುಡಿಯೆ ವಾಲ್ಮೀಕಿ ಸಮ |
ನಂತರದೊಳೇಕಾಕಿಯಾಗಿ ಜಾನಕಿ ವಿರಹ |
ಸಂತಾಪದಿಂದಡವಿಯೊಳ್ ತೊಳಲುತಿರ್ದುದಂ ಕಂಡು ತನ್ನಾಶ್ರಮಕ್ಕೆ ||
ಸಂತೈಸಿ ಕೂಡೆ ಕೊಂಡೊಯ್ದುದಂ ಬಳಿಕಲ್ಲಿ |
ಸಂತತಿಗಳಾದುದಂ ತಾನವರ್ಗಿಲ್ಲಿ ಪ |
ರ್ಯಂತರಂ ಮಾಡಿಸಿದ ಕೃತ್ಯಂಗಳೆಲ್ಲಮಂ ಪೇಳ್ದಂ ರಘೂದ್ವಹಂಗೆ ||55||
1.18.55_67
ಪದ್ಯ ೫೬
1.18.56
ಬಳಿಕ ವಾಲ್ಮೀಕಿ ನಿಜಶಿಷ್ಯರಂ ಸದನಕ್ಕೆ |
ಕಳುಹಿ ತರಿಸಿದನಮಲ ವಲ್ಲಕಿಗಳಂ ತನ್ನ |
ಬಳಿಯೊಳಭ್ಯಾಸಮಂ ಮಾಡಿಸಿದ ರಾಮಚಾರಿತ್ರಮಂ ತುದಿಮೊದಲ್ಗೆ ||
ಲಲಿತ ಸಾಳಂಗ ಸಾವೇರಿ ಗುಜ್ಜರಿ ಗೌಳ |
ಪಳಮಂಜರಿಗಳೆಂಬ ವಿವಿಧ ರಾಗಂಗಳಂ |
ಬಳಸಿ ಪಾಡಿಸಿದ ನೆರಡನೆಯ ತುಂಬುರು ನಾರದರ ತೆರದಿ ಕುಶ ಲವರನು ||56||
1.18.56_68
ಪದ್ಯ ೫೭
1.18.57
ವೀಣೆಯಂ ಕೈಗಿತ್ತು ಬಾಲಕರ ವದನದೊಳ್ |
ವಾಣಿ ತಾಂ ನೆಲಸಿದಳೊ ಗಾನದೇವತೆಯ ಮೈ |
ಗಾಣಿಕೆಯೊ ಮೋಹನದ ತನಿರಸವೊ ಸೊಗಯಿಸುವ ಕರ್ಣಾಮೃತವೋ ಪೇಳೆನೆ ||
ಜಾಣುಣ್ಮೆ ಜೋಕೆಯಿಂ ಜತಿ ರೀತಿ ತಾಳ ಪ್ರ |
ಮಾಣ ಕಂಪಿತ ಮೂರ್ಛೆ ರಸ ಪಾಡು ಬೆಡಗು ಬಿ |
ನ್ನಾಣಲಯ ಮಾಹತ ಪ್ರತ್ಯಾಹತ ವ್ಯಾಪ್ತಿಯರಿದು ಕೇಳಿಸಿದರವರು ||57||
1.18.57_69
ಪದ್ಯ ೫೮
1.18.58
ಸ್ಥಾಯಿ ಸಂಚಾರಿಗಳ ಸರಿಗಮ ಪಧನಿಯ ಸರ |
ದಾಯತದ ಶುದ್ಧ ಸಂಕೀರ್ಣ ಸಾಳಗದ ಪೂ |
ರಾಯತ ಸುತಾನಂಗಳಂ ತಾರ ಮಧ್ಯ ಮಂದ್ರಗಳಿಂದೆ ಸೊಗಸುಗೊಳಿಸಿ ||
ಗೇಯ ರಸಮೊಸರೆ ಪಾಡಿದರವರ್ ವಿನುತ ರಾ |
ಮಾಯಣದ ಸುಶ್ಲೋಕಮಾಲೆಯಂ ಕೇಳ್ದು ರಘು |
ರಾಯನುರೆ ಮೆಚ್ಚಿಕೊಂಡಾಡಿ ನಸುನಗೆಯಿಂದೆ ಸೌಮಿತ್ರಿಗಿಂತೆಂದನು ||58||
1.18.58_70
ಪದ್ಯ ೫೯
1.18.59
ಭಾವಿಸೆಲೆ ಸೌಮಿತ್ರಿ ಬಾಲಕರ್ ಸುಲಲಿತ ವ |
ಜೋ ವಿಲಾಸಂಗಳಿಂ ಸ್ವರದಿಂದೆ ರೂಪಿಂದೆ |
ಲಾವಣ್ಯದಿಂದೆ ಗತಿಯಿಂದೆ ಚೇಷ್ಟೆಗಳಿಂದೆ ಸೀತೆಯಂ ನೆನೆಯಿಸುವರು ||
ದೇವಿಯನಗಲ್ದ ವಿರಹಾಗ್ನಿ ಸುತ ದರ್ಶನದ |
ಜೀವನದೊಳುರೆ ನಂದಿತಾದುದಿನಕುಲದೇಳ್ಗೆ |
ಭೂವಲಯದೊಳ್ ತನ್ನ ಬಾಣಮಂ ಬಂಜೆಗೈದಪರೆ ಪೊರಬಿಗರೆಂದನು ||59||
1.18.59_71
ಪದ್ಯ ೬೦
1.18.60
ರಾಯನಾಡಿದ ನುಡಿಗೆ ನಸುನಗುತೆ ಲಕ್ಷ್ಮಣಂ |
ಜೀಯ ನಿನ್ನಂಬುಗಳ್ ಮೋಘಮಾದಪುವೆ ಪರ |
ಸಾಯಕದೊಳೀತಗಳ್ ನಿನ್ನಸುತರದರಿಂದೆ ನೆಲೆಗೊಂಡುದಾತ್ಮ ಶಕ್ತಿ ||
ಈ ಯಮಳರಂ ಪರಿಗ್ರಹಿಸೆಂದೊಡಾ ಕೌಸ |
ಲೇಯನತಿ ಧನ್ಯರಾವೆಂದು ವಾಲ್ಮೀಕಿಯಂ |
ಪ್ರೀಯೋಕ್ತಿಯಿಂದೆ ಕೊಂಡಾಡಿ ಸುಕುಮಾರರಂ ಕರೆದಾಗಳಿಂತೆಂದನು||60||
1.18.60_72
ಪದ್ಯ ೬೧
1.18.61
ಆರ ತನುಜಾತರೆಲೆ ಮಕ್ಕಳಿರ ನಿಮಗಿನಿತು |
ವೀರತ್ವಮೆತ್ತಣದು ಪೇಳ್ವುದೆಂದಾತ್ಮಜರ |
ನಾರಾಘವಂ ಕೇಳ್ದೊಡವರಾವು ಜಾನಕಿಯ ಗರ್ಭಸಂಭವರೆಮ್ಮನು ||
ಆರೈದು ವಾಲ್ಮೀಕಿಮುನಿ ಸಲಹಿ ಸಕಲವಿ |
ದ್ಯಾರಾಜಿಯಂ ಕಲಿಸಿದಂ ದೇವ ನಿನ್ನ ಪದ |
ವಾರಿಜಕೆ ದ್ರೋಹಮಂ ಮಾಡಿದೆವು ಸೈರಿಸುವುದೆಂದೆರಗಿದರ್ ಪದದೊಳು ||61||
1.18.61_73
ಪದ್ಯ ೬೨
1.18.62
ತನಯರಂ ತೆಗೆದೊಡನೆ ಮುಂಡಾಡಿ ಬಿಗಿಯಪ್ಪಿ |
ಘನತರಸ್ನೇಹದಿಂ ಶಿರವನಾಘ್ರಾಣಿಸಿ ವ |
ದನವ ನೊಡನೊಡನೆ ಚುಂಬಿಸಿ ಮತ್ತೆ ಮತ್ತೆ ವಾಲ್ಮೀಕಿಯಂ ಮಿಗೆ ಪೊಗಳುತೆ ||
ಅನುಜರಿಂದೊಡಗೂಡಿ ರಘುವರಂ ಸಂತೋಷ |
ವನಧಿಯೊಳ್ ಮುಳುಗಿದಂ ಸುಕುಮಾರರಂ ಕೊಂಡು |
ಕೊನರಿತು ಸಮಸ್ತ ಪರಿವಾರಮುತ್ಸವದಿಂದೆ ಮೊಳಗಿದುವು ವಾದ್ಯಂಗಳಂ ||62||
1.18.62_74
ಪದ್ಯ ೬೩
1.18.63
ಬಳಿಕ ವಾಲ್ಮೀಕಿಯಂ ಸತ್ಕಸಿರಿ ಸೀತೆ ಭೂ |
ತಳವರಿಯೆ ಪರಿಶುದ್ಧೆ ಲೋಕಾಪವಾದಕ್ಕೆ |
ಕಳೆದೆನೆಂತಾದೊಡಂ ಪುತ್ರರಂ ಪಡೆದಳಿನ್ನರವರಿಸದೆನ್ನ ಬಳಿಗೆ ||
ಕಳುಹೆಂದು ಬೀಳ್ಕೊಂಡು ಸುತ ಸಹೋದರರೊಡನೆ |
ದಳಸಹಿತ ಹಯವರಂ ವೆರಸಿನಿಜಪುರಕೆ ಬಂ |
ದುಳಿದಿರ್ದ ಯಜ್ಞಮಂ ನಡೆಸಿದಂ ಮೂಜಗಂ ಪೊಗಳಲ್ಕೆ ರಘುನಾಥನು ||63||
1.18.63_75
ಪದ್ಯ ೬೪
1.18.64
ಇತ್ತ ನಿಜತನುಜರಂ ಕಳುಹಿ ವಾಲ್ಮೀಕಿಮುನಿ |
ಪೋತ್ತಮಂ ಬರಲಾಶ್ರಮ ದ್ವಾರದೊಳ್ ಕಂಡು |
ಚಿತ್ತದೊಳ್ ಮರುಗುತೇನಾದರೆಲೆ ತಾತ ಕುಶ ಲವರೊಡಲ್ವಿಡಿವೆನೆಂತೊ ||
ಪೆತ್ತಂದು ಮೊದಲಾಗಿ ಪತಿವಿರಹಮಂ ಮರೆದು |
ಪೊತ್ತಿರ್ದೆನೀದೇಹಮಂ ತನ್ನ ಸುತರನಾ |
ರ್ಗಿತ್ತು ನೀನೈತಂದೆ ಹೇಳೆಂದು ಜಾನಕಿ ಬಿದ್ದಳಂಘ್ರಿಗಳ್ಗೆ ||64||
1.18.64_76
ಪದ್ಯ ೬೫
1.18.65
ಮಣಿದೆತ್ತಿ ಸೀತೆಯಂ ಸಂತೈಸಿ ಮಗಳೆ ನಿ |
ನ್ನಣುಗರಂ ತಮ್ಮ ತಾತಂ ಕೂಡಿ ಕೊಂಡೊಯ್ದ |
ನೆಣಿಕೆ ಬೇಡಿದಕಿನ್ನು ನಿನ್ನುಮಂ ಕಾಂತನಲ್ಲಿಗೆ ಕಳುಹಿ ಬರ್ಪೆನೆಂದು ||
ಗುಣದಿಂದೊಡಂಬಡಿಸಿ ವಾಲ್ಮೀಕಿ ಮುನಿವರಂ |
ಮಣಿರಥವನೇರಿಸಿ ಸಮಸ್ತ ವೈಭವದಿಂ ಧ |
ರಣಿಜೆಯಂ ತಂದಯೋಧ್ಯಾಪುರದೊಳಿರಿಸಿ ರಘುನಾಥನಂ ಕಾಣಿಸಿದನು ||65||
1.18.65_77
ಪದ್ಯ ೬೬
1.18.66
ಮೇಲೆ ಜಾನಕಿ ಸಹಿತ ರಾಘವಂ ಸಾಮ್ರಾಜ್ಯ |
ಲೋಲನಾಗಿರ್ದನೆಲೆ ಜನಮೇಜಯಾವನೀ |
ಪಾಲ ಕೇಳ್ದೈ ಕುಶಲವರೊಡನಾ ರಾಮಂಗೆ ಬಂದ ಕದನದ ಕಥೆಯನು ||
ಮೂಲೋಕಕಿದು ಪುಣ್ಯವತಿರಮ್ಯಮಾಗಿರ್ಪು |
ದಾಲಿಪರ್ಗಾಯುರಾರೋಗ್ಯಮೈಶ್ವರ್ಯಂ ವಿ |
ಶಾಲ ಮತಿ ಸತ್ಕೀರ್ತಿ ವಿಮಲಸಂತತಿ ಸುಗತಿ ದೊರೆಕೊಂಬುದಿಹಪರದೊಳು ||66||
1.18.66_78
ಪದ್ಯ ೬೭
1.18.67
ಅರಸ ನೀಂ ಬೆಸಗೊಳಲ್ ಪೇಳ್ದೆನಾಂ ಕುಶ ರಾಘ |
ವರ ಯುದ್ಧಮಂ ಸುರಪ ಫಲುಗುಣನ ಕಾಳಗವ |
ನೊರೆಯಲೇಕಿನ್ನು ಕೇಳ್ದರಿವಲೈ ಬಭ್ರುವಾಹನ ಪಾರ್ಥರಾಹವವನು ||
ವಿರಚಿಸುವೆನೊಲಿದಾಲಿಸೆಂದು ಜೈಮಿನಿ ಮುನೀ |
ಶ್ವರನಿಂದು ಕುಲತಿಲಕ ಜನಮೇಜಯಂಗೆ ವಿ |
ಸ್ತರಿಸಿದಂ ದೇವಪುರ ನಿಲಯ ಲಕ್ಷ್ಮೀಶನಂ ಚಿತ್ತದೊಳ್ ಧ್ಯಾನಿಸುತ್ತೆ ||67||
1.18.67_79
ಹೋಗಿ
1.18.67_80
<ಜೈಮಿನಿ ಭಾರತ/ಇಪ್ಪತ್ತನೆಯ ಸಂಧಿ
ಜೈಮಿನಿ ಭಾರತ/ಇಪ್ಪತ್ತೆರಡನೆಯ ಸಂಧಿ>
1.18.67_81
ನೋಡಿ
1.18.67_82
ಜೈಮಿನಿ ಭಾರತ-ಸಂಧಿಗಳು*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34
1.18.67_83
ಪರಿವಿಡಿ
1.18.67_84
ಉಲ್ಲೇಖ
1.18.67_85
ವರ್ಗಕನ್ನಡ ಸಾಹಿತ್ಯ
ವರ್ಗಹಳಗನ್ನಡ ಸಾಹಿತ್ಯ