Jaimini Bharata (Kannada) 1.6: ಆರನೆಯ ಸಂಧಿ
Jaimini Bhārata (Kannada) 1.6
- Language
- Kannada
ಆರನೆಯ ಸಂಧಿ
1.6.p1
ಜೈಮಿನಿ ಭಾರತ ಆರನೆಯ ಸಂಧಿ
1.6.p2
ಪದ್ಯ:-: ಸೂಚನೆ
1.6.p3
ಸಿಂಧುರನಗರದಿಂದ ನಡೆತಂದು ಪವನಜಂ | ಸಿಂಧುರಂಗದೊಳೆಸೆವ ದ್ವಾರಕೆಯೊಳೈದೆ ಮುಳಿ | ಸಿಂ ಧುರದೊಳಸುರರಂ ಗೆಲ್ದವನನಾರೋಗಣೆಯ ಸಮಯದೊಳ್ ಕಂಡನು ||
1.6.p4
ಪದ್ಯ :-:೧
1.6.1
ಎಲೆ ಮಹೀಶ್ವವರ ನಾಗನಗರಮಂ ಪೊರಮಟ್ಟ | ನಿಲಸುತಂ ಪಯಣಗತಿಯೊಳ್ ಬರುತೆ ಕಂಡನಘ | ಕುಲದ ಪವಿಘಾತ ಭಯ ಶಮನೌಷಧಿಯನತುಲಕಲ್ಲೋಲನಿರವಧಿಯನು ||
ಜಲಜಂತು ಚಾರಣವಿಧಿಯನಿಳಾಮಂಡಲದ | ಬಳಸಿನ ಪರಿಧಿಯ ನಪಹೃತಗಣಿತಸುಧೆಯ ನವಿ | ರಳಘೋಷದುದಧಿಯನನೇಕರತ್ನಪ್ರತತಿಗಳ ನಿಧಿಯನಂಬುಧಿಯನು ||1||
1.6.1_5
(ಪದ್ಯ -೧)
1.6.1_6
ಪದ್ಯ :-:೨
1.6.2
ಮುನಿ ಮುನಿದು ಪೀರ್ದುದಂ ರಾಜವಂಶಕುಠಾರ | ಕನ ಕನಲ್ಕೆಗೆ ನೆಲಂಬಿಟ್ಟುದಂ ರಘುಜರಾ | ಮನ ಮನದ ಕೋಪದುರುಬೆಗೆ ಬಟ್ಟೆಗೊಟ್ಟುದಂ ಬಡಬಾನಲಂ ತನ್ನೊಳು ||
ದಿನದಿನದೊಳವಗಡಿಸುತಿರ್ಪುದಂ ಬಹಳ ಜಡ | ತನ ತನಗೆ ಬಂದುದಂ ಭಂಗಮೆಡೆಗೊಂಡುದಂ | ನೆನೆನೆನೆದು ನಿಟ್ಟುಸಿರ್ವಿಟ್ಟು ಸುಯ್ವಂತುದಧಿ ತೆರೆವೆರ್ಚುಗೆಯೊಳಿರ್ದುದು ||2||
1.6.2_7
ಪದ್ಯ :-:೩
1.6.3
ಘಳಿಘಳಿಸುತೇಳ್ವ ಬೊಬ್ಬುಳಿಗಳಿಂ ಸುಳಿಗಳಿಂ | ಸೆಳೆ ಸೆಳೆದು ನಡೆವ ಪೆರ್ದೆರೆಗಳಿಂ ನೊರೆಗಳಿಂ | ಪೊಳೆವ ತುಂತುರಿನ ಸೀರ್ಪನಿಗಳಿಂ ಧ್ವನಿಗಳಿಂ ವಿವಿಧರತ್ನಂಗಳಿಂದೆ ||
ಒಳಕೊಳ್ವ ನಾನಾಪ್ರವಾಹದಿಂ ಗ್ರಾಹದಿಂ | ದಳತೆಗಳವಡದೆಂಬ ಪೆಂಪಿನಿಂ ಗುಂಪಿನಿಂ | ದಳದ ಪವಳದ ನಿಮಿರ್ದ ಕುಡಿಗಳಿಂ ತಡಿಗಳಿಂದಾ ಕಡಲ್ ಕಣ್ಗೆಸೆದುದು ||3||
1.6.3_8
ಪದ್ಯ :-:೪
1.6.4
ಪಾಕಶಾಸನನ ಸಕಲೈಶ್ವರ್ಯ ಸಂಪದಕೆ | ಬೇಕಾದ ವಸ್ತುವಂ ಪಡೆದಿತ್ತೆನೆನ್ನವ | ರ್ಗಾಕುಲಿಶಧರನುಪಹತಿಯನೆಸಗನದರಿಂದಮಿನ್ನಿಳೆಗೆ ಮುನ್ನಿನಂತೆ ||
ಜೋಕೆ ಮಿಗೆ ತೆರಳಿ ನೀವೆಂದು ಸಂತೈಸಿ ರ | ತ್ನಾಕರಂ ಕಳುಹಿದ ಕುಲಾದ್ರಿಗಳ ಪರ್ಬುಗೆಗ | ಳೇಕರಮಿವಹುವೆನಲ್ ಪೆರ್ದೆರೆಗಳೆದ್ದು ಬರುತಿರ್ದವು ಮಹಾರ್ಣವದೊಳು ||4||
1.6.4_9
(ಪದ್ಯ -೪)
1.6.4_10
ಪದ್ಯ :-:೫
1.6.5
ಶಿವನಂತೆ ಗಂಗಾಹಿಮಕರಾವಹಂ ರಮಾ | ಧವನಂತೆ ಗೋತ್ರೈಕಪಾಲಕಂ ಪಂಕರುಹ | ಭವನಂತೆ ಸಕಲಭುವನಾಶ್ರಯಂ ಶಕ್ರನಂತನಿಮಿಷನಿಕರಕಾಂತನು ||
ದಿವಸಾಧಿಪತಿಯಂತನಂತರತ್ನಂ ರಾಜ | ನಿವಹದಂತಪರಿಮಿತವಾಹಿನೀಸಂಗತನು | ಪವನಾಳಿಯಂತೆ ವಿದ್ರುಮಲತಾಶೋಭಿತಂ ತಾನೆಂದುದಧಿ ಮೆರೆದುದು ||5||
1.6.5_11
(ಪದ್ಯ -೫)
1.6.5_12
ಪದ್ಯ :-:೬
1.6.6
ಚಿಪ್ಪೊಡೆದು ಸಿಡಿವ ಮುತ್ತುಗಳಲ್ಲದಿವು ಮಗು | ಳ್ದುಪ್ಪರಿಸುವೆಳಮೀನ್ ಬಿದಿರ್ವ ಶೀಖರಮಲ್ಲ | ಮೊಪ್ಪುವ ಸುಲಲಿತಶಂಖದ ಸರಿಗಳಲ್ಲದಿವು ಬೆಳ್ನೊರೆಗಳೋಟ್ಟಿಲಲ್ಲ ||
ತಪ್ಪದೊಳಗಣ ರನ್ನವೆಳಗಲ್ಲದಿವು ತೊಡ | ರ್ದಿಪ್ಪ ಕೆಂಬವಳಮಲ್ಲಿವು ಪಯೋನಿಧಿಯ ಕೆನೆ | ಯೊಪಪಮಲ್ಲದೆ ನೀರ್ ಮೊಗೆಯಲಿಳಿವ ಮೇಘಂಗಳಲ್ಲೆನಿಸಿದುವು ಕಡಲೊಳು ||6|||
1.6.6_13
ಪದ್ಯ :-:೭
1.6.7
ಕ್ರೂರ ಕರ್ಕಟಕ-ಕಟಕಂ ಕಮಠಮಠಮಿಡಿದ | ನೀರಾನೆಗಳ್ ನೆಗಳ್ದೆಡೆ ಮುದಮುದಯಿಪ ಶಾ | ಲೂರಕುಲರಾಜಿ ರಾಜಿಪ ಗೃಹಂ ನಿಬಿಡ ಗಂಡೂಪದ ಪದಂ ಪೆರ್ಚಿದ ||
ಘೋರ ಸಮುದ್ರಗ್ರದ ಗ್ರಾಹಭವ ಭವನಮುಂ | ಭೂರಿಭೀಕರ ಮಕರಮಹಿ ತಿಮಿತಿಮಿಂಗಿಲ ಕ | ಠೋರತರ ರಾಜೀವ ಜೀವಪ್ರತತಿ ವಾಸವಾ ಸಮುದ್ರದೊಳೆಸೆದುದು ||7||
1.6.7_14
ಪದ್ಯ :-:೮
1.6.8
ಸುಳಿದೊಂದು ಮೀನ್ನುಂಗಿತಾ ಮೀನನಾ | ಗಳೆ ನುಂಗಿತೊಂದು ಮೀನಾ ಮೀನ ನುಂಗಿದುದು | ಬಳಕೊಂದು ಮೀನದಂ ಮತ್ತೊಂದು ಮೀನ್ನುಂಗಿತಾ ಮೀನ ನುಂಗಿತೊಂದು ||
ತೊಳಲುತೊಂದೊಂದನೊಂದಿಂತು ನುಂಗಲ್ ತಿಮಿಂ | ಗಿಳನೆಲ್ಲಮಂ ನುಂಗುತಿರ್ಪುದೆನೆ ಬೆದರಿ ಮೀ | ನ್ಗಳೆ ತಿರುಗುತಿರ್ದುವೆರಕೆಗಳೊಡನೆ ಮುಂಪೊಕ್ಕ ಗಿರಿಗಳೆಡೆಯಾಡುವಂತೆ ||8||
1.6.8_15
ಪದ್ಯ :-:೯
1.6.9
ಆ ಮಹಾಂಭೋಧೀಯಂ ನೋಡಿ ಹರ್ಷಿತನಾಗಿ | ಭೀಮಸೇನಂ ಬಳಿಕ ನಲವಿನಿಂ ದ್ವಾರಕೆಯ | ಸೀಮೆಗೈತಂದು ನಗರದ್ವಾರಮಂ ಪೆÇಕ್ಕು ಬರೆ ರಾಜಮಾರ್ಗದೊಳಗೆ ||
ಸಾಮಜಗಿರಿಯ ಹಯತರಂಗದ ನೆರವಿದೊರೆಯ | ಚಾಮರ ಶಫರಿಯ ಬೆಳ್ಗೊಡೆನೊರೆಯ ಭೂಷಣ | ಸ್ತೋಮಮಣಿಗಣದ ಕಳಕಳರವದ ಜನದ ಸಂದಣಿಯ ಕಡಲಂ ಕಂಡನು ||9||
1.6.9_16
ಪದ್ಯ :-:೧೦
1.6.10
ಪೆಚ್ಚಿದಿಂಗಡಲೂರ್ಮಿಮಾಲೆ ಮಾಲೆಗಳೆಡೆಯೊ | ಳುಚ್ಚಳಿಸಿ ಹೊಳೆಹೊಳೆವ ಮರಿಮೀನ್ಗಳೆನೆ ತೊಳಗು | ವಚ್ಚಬೆಳ್ಮುಗಿಲೊಡ್ಡುಗಳ ತರತರಂಗಳೊಳ್ ತಲೆದೋರ್ಪ ಮಿಂಚುಗಳೆನೆ ||
ಅಚ್ಚರಿಯೆನಿಪ ರಾಜಮಾರ್ಗದಿಕ್ಕೆಲದೊಳಿಹ | ನಿಚ್ಚಳದ ಕರುಮಾಡದೋರಣದ ನೆಲೆನೆಲೆಯೊ | ಳೊಚ್ಚೇರೆಗಂಗಳೆಳವೆಂಗಳ ಕಟಾಕ್ಷದ ಮರೀಚಿಗಳ್ ಸೊಗಯಿಸಿದುವು ||10||
1.6.10_17
ಪದ್ಯ :-:೧೧
1.6.11
ವಿರಚಿಸಿದ ಕರುವಾಡದಿಕ್ಕೆಲದ ನವರತ್ನ | ಪರಿಖಚಿತ ಕನಕತೋರಣಮೊಪ್ಪಿದುದು ರಜತ | ಗಿರಿಶೀಖರಮಂ ಸಾರ್ದ ಶೂಭ್ರಾಭ್ರದೊಳ್ ಮೂಡಿದಮರೇಂದ್ರಚಾಪದಂತೆ ||
ಪರಿಪರಿಯ ಗುಡಿ ಕಳಸ ಕನ್ನಡಿ ಪತಾಕೆ ಸೀ | ಗುರಿಚವರಿಗಳ ಸಾಲ್ಗಳೆಸೆದುವು ಗಗನಮೆಂಬ | ಕರಿಯ ಸಿಂಗರಿಸಿದರೊ ಪರಿಮಳೋತ್ಸವಕೆ ಪೊರಮಡುವನಿಲರಾಜಂಗೆನೆ ||11||
1.6.11_18
(ಪದ್ಯ -೧೧)XXIII
1.6.11_19
ಪದ್ಯ :-:೧೨
1.6.12
ಹಮ್ರ್ಯಾಗ್ರದೊಳ್ ವಿರಾಜಿಪ ಚಂದ್ರಶಾಲೆಗಳ | ನಿರ್ಮಲಸ್ಥಳದೊಳೇಕಾಂತದಿಂ ತನುಲತೆಯ | ಘರ್ಮಶ್ರಮಂಗಳೆವ ಸೊಕ್ಕು ಜೌವನದ ನೀರಜಗಂಧಿಯರ ಕೊಬ್ಬಿದ ||
ಪೆರ್ಮೊಲೆಗಳೆಡೆಯ ಚಂದನದಣ್ಪ ಮಲ್ಲಿಗೆಯ | ಲರ್ಮುಡಿಯ ತನಿಗಂಪ ನೆರವಿ ನೆರವಿಗೆ ತಂಬೆ | ಲರ್ಮೆಲ್ಲಮೆಲ್ಲನೆ ಪರಪುತಿರ್ದುದಾ ರಾಜಮಾರ್ಗದೊಳ್ ಪಿಸುಣರಂತೆ ||12|||
1.6.12_20
ಪದ್ಯ :-:೧೩
1.6.13
ದುರ್ಗಮ ಜಡಾಶ್ರಯಮನುಗ್ರಜಂತುಗಳ ಸಂ | ಸರ್ಗಮಂ ಬಿಟ್ಟು ಮುಕ್ತಾಳಿ ವಿದ್ರುಮ ರತ್ನ | ವರ್ಗಂಗಳಿಲ್ಲಿ ಸೇರಿದುವೆಂಬೊಲೊಪ್ಪಿದವನಘ್ರ್ಯಮಣಿವಸರಂಗಳು ||
ಭರ್ಗಸಖನೊಲಿದು ನವನಿಧಿಗಳಂ ಧಾತ್ರಿಯ ಜ | ನರ್ಗೆ ವಿಸ್ತರಿಸಿ ತೋರಿಸಿದನೆನೆ ಚಿನ್ನವರ | ದರ್ಗುಡಿಸಿಗೊಂಡಿರ್ಪ ರಾಸಿಪೊನ್ಗಳ್ ಪಿಂಗದಂಗಡಿಗಳೆಸೆದಿರ್ದುವು ||13||
1.6.13_21
ಪದ್ಯ :-:೧೪
1.6.14
ದಾನವಧ್ವಂಸಿಗೀ ದ್ವಾರಕಾಪುರಿ ರಾಜ | ಧಾನಿ ಗಡ ಸಕಲವೈಭವದೊಳಾತನ ರಾಣಿ | ತಾನಿರದಿಹಳೆ ಲಕ್ಷ್ಮಿ ಮೇಣಿವಳುಮರಸಿಯಲ್ಲವೆ ಧರಣಿ ತನ್ನೊಳಿರ್ದ ||
ನಾನಾ ಸುವಸ್ತುಗಳನೊದವಿಸದಿಹಳೆ ಚೋದ್ಯ | ಮೇನೆನೆ ವಣಿಗ್ವಾಟಪಂಕ್ತಿಗಳ್ ಶೋಭಾಯ | ಮಾನವಾದುವು ರಾಜಮಾರ್ಗದೊಳ್ ಬಹಳ ಧಸಂಪತ್ಸಮಾಜದಿಂದೆ ||14||
1.6.14_22
ಪದ್ಯ :-:೧೫
1.6.15
ಸವಿಯೆ ಪ್ರಿಯರು ಆಗಮದ ರಾಗ ಮದರಾಗ ಮದ\ ನವಿಲಾಸವೆಂದು ತಾಂಬೂಲಮಂ ತೋರ್ಪರ್ ಮು | ಡಿವೊಡೆ ಬೇಕಾದಲರ್ಕಾದಲರ್ಕಾದಲಕ್ಕಂಗಜಾಹವದೊಳೆಂದು ||
ನವಸುಗಂಧಾಮೋದಕುಸುಮಂಗಳಂ ತೋರಿ | ಸುವರೊಂದುವೇಕಾಂತಕಾಂತಕಾಂತರನೊಲಿಸ | ಲಿವು ಬಲ್ಲುವೆಂದು ಪರಿಮಳದ ಕರಡಿಗೆಗಳಂ ತೋರ್ಪರ್ ಪಲರ್ ವಿಟರ್ಗೆ ||15||
1.6.15_23
ಪದ್ಯ :-:೧೬
1.6.16
ನಸುನಗೆಯೊಳರೆವಿರಿದ ಮಲ್ಲಿಗೆಯನುರೆಪೊಳೆವ | ದಶನದೊಳ್ ಕುಂದಮಂ ಮೊಗದೊಳರವಿಂದಮಂ | ಮಿಸುಪ ನಳಿತೋಳೊಳ್ ಶಿರೀಷಮಾಲೆಯನೆಸೆವನಾಸದೊಳ್ ಸಂಪಗೆಯನು ||
ಎಸಳ್ಗಣ್ಣೋತುತ್ಪಲನುರ್ಗುಳೊಳ್ ಕೇತಕಿಯ | ನೊಸೆದಿರಿಸಿ ಕೊಂಡುಳಿದಲರ್ಗಳಂ ಮಾರ್ವವೊಲ್ | ಕುಸುಮದ ಪಸರದೊಳೊಪ್ಪಿದರಲ್ಲಿ ಪೂವಡಿಗವೆಣ್ಗಳದನೇವೇಳ್ವೆನು ||16||
1.6.16_24
ಪದ್ಯ :-:೧೭
1.6.17
ಕಬ್ಬವಿಲ್ ತುಂಬಿವೆದೆ ಪೂಸರಲ್ ಪೂಣ್ದಿಸಲ್ | ನಿಬ್ಬರಮಿದೆಂದು ಮದನಂ ಮಾಲೆಗಾರ್ತಿಯರ | ಹುಬ್ಬೆಂಬ ಚಾಪಮಂ ಕುರುಳೆಂಬ ನಾರಿಯಂ ಕಣ್ಣೆಂಬ ಕೂರ್ಗಣೆಯನು ||
ಉಬ್ಬರದ ಸಾಹಸದೊಳಳವಡಿಸಿಕೊಂಡು ಬಿಡ | ದಬ್ಬರಿಸಿ ಸೋವಿ ತಂದವರ ಬಲ್ಮೊಲೆಯೆಂಬ | ಹೆಬ್ಬೆಟ್ಟದೆಡೆಯಿರುಬಿನೊಳ್ ಕೆಡಪುತಿಹನಲ್ಲಿ ವಿಟ ಪಕ್ಷಿಮೃಗಕುಲವನು ||17||
1.6.17_25
ಪದ್ಯ :-:೧೮
1.6.18
ಮಲ್ಲಿಗೆಯಲರ್ವಿಡಿದು ಕೆಂಜಾಜಿಯೆಂದೀವ | ರುಲ್ಲಾಸದಿಂದೆ ನೀಲೋತ್ಪಲವನೆಳನಗೆಯ | ಸೊಲ್ಲಿಂದೆ ಕುಮುದಮೆಂದುಸಿರುವರ್ ಸುರಹೊನ್ನೆಯಲರ ಮಾಲೆಯ ನೊಪ್ಪುವ ||
ಸಲ್ಲಿಲಿತ ಕಾಯದ ಸರಿಸಕೆತ್ತಿ ಸರುಗಿಯೆಂ | ದೆಲ್ಲರ್ಗೆ ತೋರಿಸುವರರುಣ ತಾಮರಸಮಂ | ಚೆಲ್ಲಗಣ್ಗೊನೆಯೊಳೀಕ್ಷಿಸಿ ಪುಂಡರೀಕಮೆಂದೆಚ್ಚರಿಪರೆಳೆವೆಣ್ಗಳು ||18||
1.6.18_26
ಪದ್ಯ :-:೧೯
1.6.19
ಪಸರದೊಳ್ ಮಾರ್ವಲರ್ಗಳ ಸರಂಗಳ್ಗೆ ಸೊಗ | ಯಿಸುವ ಸುಯ್ಯೆಲರ ಕಂಪಿಂದೆ ಕಂಪೇರಿಸುವ | ರೊಸೆದು ಕೋಮಲದ ತನುವಲ್ಲರಿಯ ಸೊಂಪಿಂದೆ ಸೊಂಪುದೋರಿಸುತಿರ್ಪರು ||
ಲಸದವಯವಂಗಳಾಕೃತಿಯ ಚೆಲ್ವಿಕೆಯಿಂದೆ| ಪೊಸತೆನಿಪ ಚೆಲ್ವಿಕೆಯನೆಯ್ದೆ ನಲವಿಂದೆ ಕಾ | ಣಿಸುವರಲ್ಲಿ ಮಾಲೆಗಾರ್ತಿಯರ್ ಮದನಶರಮೂತಿಯರ್ ವಿರಹಿಗಳ್ಗೆ ||19||
1.6.19_27
(ಪದ್ಯ -೧೯) XXV
1.6.19_28
ಪದ್ಯ :-:೨೦
1.6.20
ನಾನಾಸುವಸ್ತುಗಳ ವಿಸ್ತರವನೊಲಿದು ಪವ | ಮಾನಾತ್ಮಜಂ ನೋಡುತೈತರಲ್ ಮುಂದೆ ಗಣಿ | ಕಾ ನಾರಿಯರ ಸದನಪಙ್ತಗಳ ಲೋವೆಗಳ ಸಾಲ್ಮೆರೆದುವಿಕ್ಕೆಲದೊಳು ||
ಏನಾದೊಡಂ ಮುನಿಮೃಗಾವಳಿಯ ಬೇಂಟೆಯಂ | ತಾನಾಡಲೆಂದು ಸಿಂಗರದ ಪೆಣ್ಗಾಡಿನೊಳ್ | ಮೀನಾಂಕನೃಪತಿ ಕಟ್ಟಿಸಿದ ಬೆಳ್ಳಾರಂಗಳಾಗಬೇಕೆಂಬಂತಿರೆ ||20||
1.6.20_29
(ಪದ್ಯ -೨೦)
1.6.20_30
ಪದ್ಯ :-:೨೧
1.6.21
ಘನಕುಚದ್ವಯಕೆ ಲೋಚನಯುಗಕೆ ಸೊಗಯಿಸುವ | ತನುಮಧ್ಯಕಿಂಪಾದನುಣ್ದೊಡೆಗೆ ಪಡಿಗಟ್ಟು | ವನಿತು ಸೊಬಗುಳ್ಳ ವಸ್ತುಗಳನಂಬುಜಭವಂ ಭುವನದೊಳ್ ಕಾಣೆನೆಂದು ||
ಜನಮರಿಯೆ ಪೆರ್ಗವತೆ ಸೇರೆ ಪಿಡಿ ಕರಭಂಗ | ಳೆನಿಪಿವರೊಳಭಿನಯಿಸಿ ತೋರಿಸಲ್ ಮೃದುಪಾಣಿ | ವನಜಮಂ ಸೃಷ್ಟಿಸಿದನೆಂಬ ಚೆಲ್ವಿನ ಕೋಮಲೆಯರಲ್ಲಿ ಕಣ್ಗೆಸೆದರು ||21||
1.6.21_31
ಪದ್ಯ :-:೨೨
1.6.22
ಗುರುಕುಚದ ಭರಣಿ ಸುಂದರಗಜಾರೋಹಿಣಿ ಮ | ಧುರಕಾಮಕೇಳೀರಸಾದ್ರ್ರೆ ಸನ್ಮೋಹನೋ | ತ್ತರೆ ಸುರತ ತಂತ್ರವಿರಚಿತ ಹಸ್ತಚಿತ್ತೆ ಹ್ರಸ್ವಾತಿವರ್ತುಳಸುಕಂಠೆ ||
ವರಬಾಹುಮೂಲೆ ಮಣಿಭೂಷಣಶ್ರವಣೆ ವಿ | ಸ್ತರಗುಣಾಪೂರ್ವೆಯೆನಿಸುವ ಬಾಲಿಕೆಯಲ್ಲಿ | ಪರಿಶೋಭಿಸಿದರೆಸೆವ ನಕ್ಷತ್ರಗಣದಂತೆ ಮೊಗಸಸಿಯ ಸೇರುವೆಯೊಳು ||22||
1.6.22_32
(ಪದ್ಯ -೨೨)
1.6.22_33
ಪದ್ಯ :-:೨೩
1.6.23
ಅಡಿಯುಮಮಲಾಸ್ಯಮಂ ಕಮಲಮಂ ಕಮಲಮಂ | ನಡೆಯುಮೆಳವಾಸೆಯುಂ ನಾಗಮಂ ನಾಗಮಂ | ಕಡುಚೆಲ್ವಪಾಣಿಯುಮಧರಮಂ ಪ್ರವಾಳಮುಂ ಲಲಿತಪ್ರವಾಳಮಣಿಯಂ ||
ತೊಡೆಯುಮೆಸೆವಕ್ಷಿಯುಂ ಬಾಳೆಯಂ ಬಾಳೆಯಂ | ನಡುವುಂ ಸುವಾಣಿಯುಂ ಹರಿಯುಮಂ ಹರಿಯುಮಂ | ಬಿಡದೆಪೋಲ್ತಿರೆ ಮೆರೆವ ಕಾಂತೆಯರ್ ನೀಲಾಳಕಾಂತೆಯರ್ ಸೊಗಯಿಸಿದರು ||23||
1.6.23_34
ಪದ್ಯ :-:೨೪
1.6.24
ನಾಗರಿಪುಮಧ್ಯಮುರ್ವಸಿಯ ನಡುಮಿಗೆ ಸರಿ | ಯಾಗಬಲ್ಲುದೆ ಪೊಸವಸಂತೋತ್ಸವದೊಳುಲಿವ | ಕೋಗಿಲೆಯಸರ ಮೇನಕೀನಿತಂಬಿನಿಯ ನುಣ್ದನಿಗೆ ಪಾಸಟಿಯಪ್ಪುದೇ ||
ಪೂಗಣಿ ವಿಲಾಸದಾರಂಭೆಯ ವಿರಾಜಿಸುವ | ಸೋಗೆಗಣ್ಗೆಣೆಹುದೆ ನೋಡೆಂದು ಪೊಗಳ್ದನನು | ರಾಗದಿಂದೊರ್ವಳಂ ವಿಟನಪ್ಸರಸ್ತ್ರೀಯರಂ ಪೆಸರಿಸುವ ನೆವದೊಳು ||24||
1.6.24_35
(ಪದ್ಯ -೨೪)
1.6.24_36
ಪದ್ಯ :-:೨೫
1.6.25
ಸುನಿಮೇಷ ಮೀನಚಾಪಲನೇತ್ರೆ ಚಕ್ರೋನ್ಮಿ | ಥುನಕುಂಭಕುಚೆ ಮಕರಕೇತು ವರಮಾತುಲಾ | ನನೆ ಸಿಂಹಮಧ್ಯೆ ವೃಷಭಾಂಕವೈರಿಯ ಪಟ್ಟದಾನೆ ಕನ್ಯಾಕುಲಮಣಿ ||
ಮನಸಿಜ ಶಶಾಂಕ ಕರ್ಕಟಕಚೇಳಂಗುಡುವ | ತನಿಸೊಬಗುವಡೆದ ಸನ್ಮೋಹನದ ಕಣಿಯೆ ಬಾ || ಯೆನುತೊರ್ವನೀರೆ ಸಖಿಯಂ ಕರೆದಳೀರಾರುರಾಶಿಯಂ ಪೆಸರಿಪವೊಲು ||25||
1.6.25_37
ಪದ್ಯ :-:೨೬
1.6.26
ಬೇಡ ಪೂರ್ವಸ್ನೇಹಮಿನ್ನು ದಾಕ್ಷಿಣ್ಯಮಂ | ಮಾಡದಿರ್ ನಿನಗಪರವಯಸಾದೊಡೊರ್ವರುಂ | ನೋಡರಿದಿರುತ್ತರಂಗುಡು ಬಿಡಿಸುವಾಸವಂ ನುಡಿದ ಕಾಲಂ ನಡೆದುದು ||
ಕೂಡಿರ್ದ ಪಾಶದನುಬಂಧಮಂ ಪರಿ ಧನದ | ಕೋಡರೆತನಂ ನೂಕು ಸಾಕೆಂದು ಬುದ್ಧಿಯಂ | ಜೋಡಿಸಿದಳೊರ್ವಳಣುಗಿಗೆ ನಾಲ್ಕು ದೆಸೆಯಾಣ್ಮರಂ ಪೆಸರಿಸುವ ನೆವದೊಳು ||26||
1.6.26_38
ಪದ್ಯ :-:೨೭
1.6.27
ಮೊಳೆ ಮೊಲೆಯೊಳೆಸೆವಸಸಿ ವದನದೊಳ್ ಕುಡಿ ನೋಟ| ದೊಳೆ ಸರ್ಬು ತೋಳ್ಗಳೊಳ್ ಬೆಳೆದುಬ್ಬು ಜಘನದೊಳ್ | ಸೆಳೆ ನಡುವಿನೊಳ್ ಸುಳಿ ಕುರುಳ್ಗಳೊಳ್ ಸೊಗಯಿಸುವ ಮಡಲಿಡಿದ ಸೌಂದರದೊಳು || ತಳಿರಡಿಗಳೊಳ್ ಮುಗುಳ್ ನಗೆಯೊಳಲರಕ್ಷಿಯೊಳ್ | ತಳೆದು ಸಲೆರಾಜಸುವ ತನುಲತೆಯೊಳೊಪ್ಪಿರ್ದ | ರೆಳವೆಣ್ಗಳಚ್ಚಪೊಸ ಜೌವನದೊಳಾವಗಂ ವಿಟಪೀವರಾಶ್ರಯದೊಳು ||27||
1.6.27_39
(ಪದ್ಯ -೨೭)
1.6.27_40
ಪದ್ಯ :-:೨೮
1.6.28
ದಾನಸಾಮಜ ಭೇದನೋದ್ದಂಡದುಗ್ರ ಪಂ | ಚಾನನಂ ಗೆಲ್ವ ಚತುರೋಪಾಯಮಂ ಬಿಟ್ಟು | ತಾನಳ್ಕಿ ಬಳ್ಕಿ ಕಡುವೈನ್ಯದಿಂದೀಗ ಮುಗ್ಧಾಂಗಮಂ ತಳೆದಿರ್ಪುದು ||
ಏನಿದಚ್ಚರಿಯೆಂದು ವಿಟನೊರ್ವಳಂ ಕೇಳ್ದೊ | ಡಾ ನೀರೆ ನಗುತುಮಬಲಾಶ್ರಯದೊಳಿರೆ ಮೇರು | ಮಾನವನ ಕೈವಿಡಿತೆಗೊಳಗಪ್ಪುದೆಲೆ ಮರುಳೆ ನೀನರಿದುದಿಲ್ಲೆಂದಳು ||28||
1.6.28_41
(ಪದ್ಯ -೨೮)
1.6.28_42
ಪದ್ಯ :-:೨೯
1.6.29
ಕಲಹಂಸಗಮನೆ ಪೂರ್ಣೇಂದುಮುಖಿ ಚಾರುಮಂ | ಗಳಗಾತ್ರಿ ಘನಸೌಮ್ಯಸುಂದರವಿಲಾಸಿನಿ ವಿ | ಮಲಗುರುಪಯೋಧರೆ ಸರಸಕವಿನುತಪ್ರಮದೆ ಮಲ್ಲಿಕಾಮಂದಸ್ಮಿತೆ ||
ವಿಲಸದ್ಭುಜಂಗಸಂಗತೆ ಮದನಕೇತು ಚಂ | ಚಲನೇತ್ರೆ ಕೇಳ್ ನಿನ್ನ ದೆಸೆಗಿದೆ ನವಗ ಹಂ | ಗಳ ಪೆಸರ ಬಲಮಿನ್ನು ಸೋಲ್ದಪುದು ನಿನಗೆ ಜನಮೆಂದಳೊರ್ವಳ್ ಸಖಿಯೊಳು ||29||
1.6.29_43
ಕಲಹಂಸಗಮನೆ =ಕಲಹಂಸದಂತೆ ನೆಡಯುವವಳೇ; ಪೂರ್ಣೇಂದುಮುಖಿ= ಹುಣ್ಣಿಮೆಯ ಚಂದ್ರನಮತೆ ಮುಖದವಳೇ; ಚಾರುಮಂಗಳಗಾತ್ರಿ= ಸುಂದರ ಮಂಗಳದೇಸವುಳ್ಳವಳೇ; ಘನಸೌಮ್ಯಸುಂದರವಿಲಾಸಿನಿ= ಉತ್ತಮ ಶಾಂತ ಗುಣದ ಚಲುವಿನ ಹೆಣ್ಣೇ; ವಿಮಲಗುರುಪಯೋಧರೆ=ನಿರ್ಮಲವಾದ ಗರುತರ/ದೊಡ್ಡ ಸ್ಥನವುಳ್ಳವಳೇ; ಸರಸಕವಿನುತಪ್ರಮದೆ= ಸರಸಗುಣಹೊಂದಿ ಕವಿಯ ಹೊಗಳಿಕೆ ಪಡೆದವಳೇ; ಮಲ್ಲಿಕಾಮಂದಸ್ಮಿತೆ=ಮಲ್ಲಿಗೆಹೂವಿನಂತೆ ತಿಳಿನಗೆ ಮಂದಸ್ಮಿತೆ; ವಿಲಸದ್ ಭುಜಂಗ(ವಿಟ,ಸರ್ಪ,ರಾಹು) ಸಂಗತೆ=ಶೋಭಿಸುವ ವಿಟರ ಸಂಗಾತಿಯೇ; ಮದನಕೇತು ಚಂಚಲನೇತ್ರೆ=ಮನ್ಮಥನಿಗೆ ಕೇತು ಎಂದರೆ ಧ್ವಜವಾದವಾದ ಮೀನಿನಂತೆ ಚಂಚಲನೇತ್ರ ವುಳ್ಳವಳೇ; ಕೇಳ್ ನಿನ್ನ ದೆಸೆಗಿದೆ ನವಗ್ರಹಂಗಳ ಪೆಸರ ಬಲಂ ಇನ್ನು ಸೋಲ್ದಪುದು ನಿನಗೆ ಜನಮ್ ಎಂದಳ್ ಓರ್ವಳ್ ಸಖಿಯೊಳು=ಕೇಳು ನಿನ್ನ ದೆಸೆಗೆ ನವಗ್ರಹಗಳ ಹೆಸರ ಬಲವಿದೆ; ಒಬ್ಬ ಗಣಿಕೆ ತನ್ನ ಸಖಿಯೊಡನೆ, ನಿನಗೆ ಇನ್ನು ಜನರು ಸೋಲುವರು ಎಂದಳು.
(ಪದ್ಯ -೨೯) XXVI
1.6.29_44
ಪದ್ಯ :-:೩೦
1.6.30
ಇನ್ನು ಹಿಡಿಯದಿರು ಸಾಕಾಳ ಪನ್ನಗವೇಣಿ | ಮುನ್ನಾನೆ ಸಿಕ್ಕಿದುದ ನೋಡಿದಾ ಶಶಿವದನೆ | ಯೆನ್ನಮನೆಯೊಳ್ ಪೋದುದಕಟಕಟ ನಿನ್ನ ಕೈಗುದುರೆ ಪೊಂಗೊಡಮೊಲೆಯಳೆ ||
ನಿನ್ನ ತೇರ್ಮಾರ್ಪಜ್ಜೆಗೆಟ್ಟುದು ಸರೋಜಾಕ್ಷಿ | ನಿನ್ನಾಟ ಕಟ್ಟಿತರಸಂಚೆನಡೆಯಳೆ ಪೋಗು | ನಿನ್ನ ಚದುರಂಗಮಂ ಗೆಲ್ದೆನೆಂದೊರ್ವನಾಡುತೆ ಮುನಿದನಿನಿಯಳೊಡನೆ ||30||
1.6.30_45
(ಪದ್ಯ -೩೦)
1.6.30_46
ಪದ್ಯ :-:೩೧
1.6.31
ಅಚ್ಚಪಳದಿಯ ಕಾಯ ಜೋಡ ಮೇಲೊತ್ತದೊಡೆ | ನಚ್ಚಿರ್ದ ಕೈಯ್ಯ ಕರಿದಿನ ಹಿಂಡ ಹಿಡಿಯದೊಡೆ | ಮೆಚ್ಚಿನಾಟಕೆ ಮೀರಿ ಬಂದ ಕೆಂಪಿನ ಹಣ್ಣನಂಡಲೆದು ಬಿಡದಿರ್ದೊಡೆ ||
ಬಚ್ಚನಾಲಗೆಯೆ ಬೀಳೆಂದು ಹಾಸಂಗಿಯಂ | ಪಚ್ಚೆಯ ವಿದೂಷಕನುರುಳ್ಚಿದಂ ಬಾಲೆಯರ | ಮೆಚ್ಚಿಸುವ ಕಟಕಿವಾತುಗಳ ಜಾಣ್ಮೆಗಳಿಂದೆ ಪಗಡೆಯಾಡುವ ನೆವದೊಳು ||31||
1.6.31_47
(ಪಗಡೆಯಾಟವನ್ನು ಮನೆಗಳಿರುವ ಬಟ್ಟೆ ಹಾಸಿನಮೇಲೆ ಪಗಡೆಕಾಯಿಗಳನ್ನು ನಡೆಸಿ ಆಡುವರು; ಹಾಸಿನ ಮಧ್ಯದಲ್ಲಿ ಗೆದ್ದ/ಹಣ್ಣಾದಕಾಯಿಗಳನ್ನು ಇಡುವರು;ಪಗಡೆಕಾಯಿಗಳು ಕೆಂಪು ಹಸಿರು,ಹಳದಿ, ಕಪ್ಪು ಬಣ್ನಗಲಲ್ಲಿರುವುದು, ಜೋಡಿಯಾಗಿ ನೆಡೆಸುವರು.)(ವಿದೂಷಕನುರುಳ್ಚಿದಂ ಬಾಲೆಯರ ಮೆಚ್ಚಿಸುವ ಕಟಕಿವಾತುಗಳ ಜಾಣ್ಮೆಗಳಿಂದೆ ಪಗಡೆಯಾಡುವ ನೆವದೊಳು) ವಿದೂಷಕನು ಅರ್ಥಾಂತರದಿಂದ ಯಾ ದ್ವಂದ್ವಾರ್ಥದಲ್ಲಿ ಕಟಕಿಯ ಮಾತಿನಿಂದ ಪಗಡೆಯಾಟದ ನೆವದಲ್ಲಿ.
ಅಚ್ಚಪಳದಿಯ ಕಾಯ= ಚಿನ್ನದಬಣ್ಣದ ಹಳದಿ ಕಾಯನ್ನು, ಜೋಡ ಮೇಲೆ ಒತ್ತದೊಡೆ=ಜೋಡಿಯಾಗಿ ಹಾಸಿನ ಮೇಲೆ ಒತ್ತಿ ನಡೆಸದಿದ್ದರೆ, ನಚ್ಚಿರ್ದ ಕೈಯ್ಯ=ಒಂದು ಕೈ ಆಟಕ್ಕೆ ಹಣ್ಣಾಗುವ, ಕರಿದಿನ ಹಿಂಡ ಹಿಡಿಯದೊಡೆ= ಕಪ್ಪು ಕಾಯಿಗಳಹಿಂಡನ್ನು ಹಿಡಿದು ಹೊಡೆಯದಿದ್ದರೆ, ಮೆಚ್ಚಿನಾಟಕೆ ಮೀರಿ ಬಂದ ಕೆಂಪಿನ ಹಣ್ಣನು ಅಂಡಲೆದು ಬಿಡದಿರ್ದೊಡೆ= ಒಳ್ಳೆಯ ಆಟದಲ್ಲಿ ಮುಂದೆ ಹಣ್ಣಿಗೆ ಬಂದ ಕೆಂಪುಕಾಯಿಗಳನ್ನು ಬೆನ್ನಟ್ಟಿ, ಬಚ್ಚನಾಲಗೆಯೆ ಬೀಳೆಂದು= ಕವಡೆಯಲ್ಲಿ/ ದಾಳದಲ್ಲಿ ನಾಲ್ಕೇ ಬೀಳು ಎಂದು; ಹಾಸಂಗಿಯಂ=ಹಾಸಿನ ಮೇಲೆ, ಪಚ್ಚೆಯ(ದಾಳ?) ವಿದೂಷಕನುರುಳ್ಚಿದಂ= ವಿದೂಷಕನು, ದಾಳಗಳನ್ನು ಉರುಳಿಸಿದನು. ಬಾಲೆಯರ ಮೆಚ್ಚಿಸುವ ಕಟಕಿವಾತುಗಳ ಜಾಣ್ಮೆಗಳಿಂದೆ ಪಗಡೆಯಾಡುವ ನೆವದೊಳು= ಹೀಗೆ ಪಗಡೆಯಾಟದ ನೆವದಲ್ಲಿ ಕಟಕಿಯ ಮಾತನಲ್ಲಿ ಬಾಲೆಯರನ್ನು ಮೆಚ್ಚಿಸಿದನು.
(ಪದ್ಯ -೩೧)
1.6.31_48
ಪದ್ಯ :-:೩೨
1.6.32
ಕೈಗೆ ಮೊಲೆಗಳ ಬಿಣ್ಪು ಕಣ್ಗೆ ಚೆಲ್ವಿನ ಸೊಂಪು | ಬಾಯ್ಗೆ ಚೆಂದುಟಿಯಿಂಪು ಕಿವಿಗೆ ನುಡಿಗಳ ನುಣ್ಪು | ಸುಯ್ಗೆ ತನುವಿನ ಕಂಪು ಸೋಂಕಿಗಣ್ಪಿನ ತಂಪು ಚಿತ್ತಕೆ ಸೊಗಸಿನಲಂಪು ||
ಮೈಗೂಟದೊಳ್ ಸಮನಿಪೆಳವೆಣ್ಗಳೆಸೆದಿರ್ದ | ರೈಗಣಿಗಳಿಸುಗೆಗಳುಕದ ಯೋಗಿನಿಕರಮಂ | ಸೈಗೆಡಪಲೆಂದಂಗಜಂ ಪೂಜೆಗೈವ ಸಮ್ಮೋಹನಾಸ್ತ್ರಂಗಳೆನಲು ||32||
1.6.32_49
(ಪದ್ಯ -೨೬)
1.6.32_50
ಪದ್ಯ :-:೩೩
1.6.33
ಇವಳ ಮನಮೇಕಿವಳ ತುಂಗಕುಚದಂತಾದು | ದಿವಳ ಸನ್ಮಾನಮೇಕಿವಳ ನಡೆಯಂತಾದು | ದಿವಳೊಲವಿದೇಕಿವಳ ಮಧ್ಯದಂತಾದುದಿರ್ದವೊಲೀಗಳೆನ್ನೆಡೆಯೊಳು ||
ಇವಳ ನುಡಿಯೇಕಿವಳ ಕುರುಳಂದಮಾದುದಿಂ | ದಿವಳರಿಯಳಿವಳ ತಾಯ್ಬೋಧಿಸಿದಳಾಗಬೇ | ಕಿವಳನೆಂದವಳ ಕಣ್ಣಂ ತಾಗಿ ನಿಜಸಖನೊಳೊರ್ವನಾಲೋಚಿಸಿದನು ||33||
1.6.33_51
ಪದ್ಯ :-:೩೪
1.6.34
ಸವಿನೋಟದೊಳ್ ಸಂಚು ನಗೆಯೊಳ್ ಪ್ರಪಂಚು ಸೊಗ | ಸುವ ಬೇಟದೊಳ್ ಕೃತಕಮೊಲವಿನೊಳ್ ಗತಕಮುಸಿ | ರುವ ಲಲ್ಲೆಯೊಳ್ ಕೊಂಕು ಬಗೆಯೊಳ್ ಕಳಂಕು ಸವಿಗಲೆಗಳೊಳ್ ಸಲೆ ವಂಚನೆ||
ತವಕದೊಳ್ ಪುಸಿಯಳವು ತಕ್ಕೆಯೊಳ್ ಕಳವು ಮೀ | ರುವ ನೇಹದೊಳ್ ನುಸುಳು ಕೂಟದೊಳ್ ಮಸುಳು ಸೇ | ರುವೆಯಾಗಿ ನೆಲಗೊಂಡ ಗಣಿಕೆಯರ ತಂಡಮೀ ತೆರದ ಚೆಲ್ವಂ ಪಡೆದುದು ||34||
1.6.34_52
ಪದ್ಯ :-:೩೫
1.6.35
ಅಕ್ಕಜವ ಮಾಡದಿರಿವಂ ನಿನ್ನಮೈವಳಿಗೆ | ತಕ್ಕನಲ್ಲಂ ನೀನೊಲಿವಗೊಡವೆಯೇಕಿನ್ನು | ಕಕ್ಕುಲಿತೆ ಬೇಡಿವನ ಕೂಟಮಂ ಪರಿದ ಬಳಿಕಿವನ ಲೇಸಾವುದುಂಟು ||
ಠಕ್ಕಿಪೊಡೆ ಪೊನ್ನಿಲ್ಲದಾತನಿವನಾಗನಿದಿ | ರಿಕ್ಕದಿರ್ ಸಾಕೆಂದು ಮುಳಿಸಿನೊಳ್ ವಿಟನ ಚಿ | ತ್ತಕ್ಕೆಸೊಗಸೆನೆ ಸೂಳೆಗವಳ ದೂತಿಕೆ ನುಡಿದಳವನ ಜರೆದಾ ಪೊಗಳ್ವೊಲು ||35||
1.6.35_53
ಪದ್ಯ :-:೩೬
1.6.36
ತಾಂ ತವೆ ಕೃತಾಂತರಿಪುನೇತ್ರದಿಂದುರಿದ ವೃ | ತ್ತಾಂತಮಂ ನೆನೆಯದೆ ಲತಾಂತಶರನಗಲ್ದ ವನಿ | ತಾಂತರ್ ನಿತಾಂತವನಮಂ ಸುಡುವೆನೆಂದು ಪೊರಮಟ್ಟು ನಡೆತಪ್ಪನಂತೆ ||
ಕಾಂತೆ ನೀನೇಕಾಂತದಿಂ ಪವಡಿಸುವ ಚಂದ್ರ | ಕಾಂತಭವನದೊಳತೇಕಾಂತದೊಳಿಹಂ ನಿನ್ನ | ಕಾಂತನೇಕಾಂತರಂಗದೊಳೆಣಿಕೆಯೆಂದೊರ್ವ ಚಪಳೆ ತರಳೆಗೆ ನುಡಿದಳು ||36||
1.6.36_54
ಪದ್ಯ :-:೩೭
1.6.37
ತೋಟಿಗೆಳಸದರನೊಯ್ಯೊಯ್ಯನೆ ಮನೋಭವನ | ಧಾಟಿಗೊಳಗಾಗಿ ನಿಲಿಸುವ ಮದನಕಲೆಗಳಂ | ಪಾಟಿಸುವ ಬಗೆಯ ನೆಳೆಯರ್ಗೆ ಕಲಿಸುವ ನಾಯಕಿಗೆ ಧನಯುತರನೊಲಿಸುವ ||
ತಾಟಿ ಗಂಟಿಕ್ಕಿ ಸಂಧಿಗಳನೆಸಗುವ ಮುಳಿಯೆ | ಮೇಟಿಗೋರ್ವನನರಸಿ ಸೊಗಸು ಬಲಿಸುವ ಚಾರು | ಚೇಟಿಯರ್ ಚಲಿಸುವರನಂಗಶಬರನ ಬೇಂಟೆದೋಹಿನ ಮೃಗಂಗಳಂತೆ ||37||
1.6.37_55
ಪದ್ಯ :-:೩೮
1.6.38
ಇಂತೆಸೆವ ಗಣಿಕಾ ಸಮೂಹಮಂ ನೋಡುತ | ಲ್ಲಿಂ ತಳರ್ದನಿಲಜಂ ಬರೆ ಮುಂದೆ ನಾನಾದಿ | ಗಂತದಿಂ ಮುರಹರನ ಕೀರ್ತಿಯಂ ಕೇಳ್ದೊದವಿದಿಷ್ಟಾರ್ಥಮಂ ಪಡೆಯಲು ||
ತಂತಮ್ಮ ವಿದ್ಯಾವಿನೋದಮಂ ತೋರಿಸುವ | ಸಂತಸದೊಳೈತಂದು ನೆರೆದಿರ್ದ ಕೋವಿದರ | ತಿಂತಿಣಿಯ ರಾಜಿ ರಾಜಿಪ ರಾಜಗೇಹದ ಸಮೀಪದೆಡೆಯಂ ಕಂಡನು ||38||
1.6.38_56
ಪದ್ಯ :-:೩೯
1.6.39
ತಗರ್ವೆಣಗಿಸುವ ಸಿಪಿಲೆಗಚ್ಚಿಸುವ ಕೋಳಿಗಾ | ಳೆಗವ ಕಾದಿಸುವ ಕರಿತುರಗದೇರಾಟಮಂ | ಮಿಗೆ ತೋರಿಸುವ ನೆತ್ತಪಗಡೆಯೊಳ್ ಬಿನದಿಸುವ ಜೂಜುಗಳನೊಡ್ಡಿ ನಲಿವ ||
ಬಗೆಬಗೆಯ ರಾಜಪುತ್ರರ ತನುವಿಲೇಪನಾ | ದಿಗಳೋರಸೊರಸಿನಿಂದುರ್ದಿ ಪರಿಮಳದ ಧೂ | ಳಿಗಳನಲ್ಲಿರ್ದ ಸೊಕ್ಕಾನೆಗಳ್ ಮೊಗೆಮೊಗೆದು ಮಿಗೆ ಚೆಲ್ಲಿಕೊಳುತಿರ್ದುವು ||39||
1.6.39_57
ಪದ್ಯ :-:೪೦
1.6.40
ತನ್ನೊಳಿರ್ದಚ್ಚ್ಯುತಂ ದ್ವಾರಕೆಗೆ ಬಂದಿರಲ್ | ಮುನ್ನ ತಾನೈತಂದು ನಿಂದುದೋ ರಾಜಿಸುವ | ರನ್ನಂಗಳೊಡನೆ ಪಾಲ್ಗಡಲೆನಲ್ ಮಣಿಸೌಧಕಾಂತಿಗಳ್ ಕಣ್ಗೊಳಿಸುವ ||
ಪನ್ನಗಾರಿಧ್ವಜನ ರಾಜಗೃಹಮಂ ಕಂಡು | ಸನ್ನುತವರೂಥದಿಂದಿಳಿದು ಮೆಯ್ಯಿಕ್ಕಿ ಸಂ | ಪನ್ನಮತಿ ಪವನಜಂ ತಳರ್ದನಲ್ಲಿಗೆ ವಿಪುಲಪುಲಕೋತ್ಸವಂ ಪೊಣ್ಮಲು ||40||
1.6.40_58
ಪದ್ಯ :-:೪೧
1.6.41
ಮಾರನಂ ಪಡೆದ ಚೆಲ್ವಿಂದಿರೆಯನಾಳ್ದ ಸಿರಿ | ವಾರಿಜಾಸನ ಮುಖ್ಯ ದೇವರ್ಕಳಂ ಪೊರೆವು | ದಾರಂ ತನಗೆ ಸಾಲದೆಂದು ಭೂಪಾಲಕರ ಭಾಗ್ಯಮಂತಳದನೆಂಬ ||
ನೀರದಶ್ಯಾಮನರಮನೆಯೆಂದೊಡದರವಿ | ಸ್ತಾರಮಂ ಬಣ್ಣಿಸುವೊಡೆನ್ನಳವೆ ಪೇಳೆನಲ್ | ಮಾರುತಿಯ ಕಣ್ಗೆ ರಮಣೀಯಮಾದುದು ಬಹುಳ ಮಣಿತೋರಣಪ್ರಭೆಗಳು ||41||
1.6.41_59
ಪದ್ಯ :-:೪೨
1.6.42
ಪಾರಿಜಾತಪ್ರಸವ ಪರಿಮಳಕೆ ಗಗನದೊಳ್ | ಸೇರಿದಳಿಮಾಲೆಗಳನುಜ್ಜ್ವಲಿಪ ನೀಲಮಣಿ | ತೋರಣಪ್ರಭೆಗಳಂ ಬೇರ್ಪಡಿಸಲರಿದೆನಲ್ ಮೆರೆವ ಹರಿಯರಮನೆಯನು ||
ಸಾರಿದಂ ಪವನಜಂ ಬಾಗಿಲೊಳ್ ತನ್ನ ಪರಿ | ವಾರಮಂ ನಿಲಿಸುತೊಳವೊಕ್ಕನೇಂ ಸಲುಗೆಯೊ ಮು | ರಾರಿಯೆಡೆಯೊಳ್ ದ್ವಾರಪಾಲಕರ್ ತಡೆಯರೊರ್ವರುಮಂತರಾಂತರದೊಳು ||42||
1.6.42_60
ಪದ್ಯ :-:೪೩
1.6.43
ಜನಪ ಕೇಳಾ ಸಮಯಕಸುರಾರಿ ಕನಕಭಾ | ಜನ ರತ್ನದೀಪ್ತಿಗಳ ಸಾಲ್ಗಳಿಂದೆಸೆವ ಭೋ | ಜನಶಾಲೆಗೈತಂದು ಬಾಂಧವರ್ವೆರಸಿ ಕುಳ್ಳೀರ್ದು ದಿವ್ಯಾಸನದೊಳು ||
ಜನನಿಯರುಣಿಸನಿಕ್ಕಿ ಸವಿಗೊಳಿಸೆ ಚಮರವ್ಯ | ಜನಮಂ ಪಿಡಿದು ರಾಣಿಯರ್ ಕೆಲದೊಳಿರೆ ಸುರಂ | ಜನ ಕಥಾಲಾಪ ರಸದಿಂ ಷಡ್ರಸಾನ್ನದಾರೋಗಣೆಯೊಳಿರುತಿರ್ದನು ||43||
1.6.43_61
(ಪದ್ಯ -೪೩)
1.6.43_62
ಪದ್ಯ :-:೪೪
1.6.44
ಎಸೆವ ಪೊಂಬರಿವಾಣ ಮಿಸುನಿವಟ್ಟಲ್ಗಳೊಳ್ | ಮಿಸುಪ ಶಾಲ್ಯೋದನಂ ಸೂಪ ಘೃತ ಭಕ್ಷ್ಯ ಪಾ | ಯಸ ಪರಡಿ ಮಧು ಶರ್ಕರಾಮಿಷ ಪಳಿದ್ಯ ಸೀಕರಣೆ ಶಾಕ ತನಿವಣ್ಗಳ ||
ರಸ ರಸಾಯನ ಸಾರ್ಗಳುಪ್ಪುಗಾಯ್ ಬಳುಕಂ | ಕೃಸರಿ ಕಚ್ಚಡಿ ಪಾಲ್ಮೊಸರ್ಗಳಿವು ಬಗೆಗೊಳಿಸಿ | ಪೊಸತೆನಿಸಿರಲ್ ಸವಿದನಚ್ಚ್ಯುತಂ ದೇವಕಿಯಶೋದೆಯರ್ ತಂದಿಕ್ಕಲು ||44|||
1.6.44_63
ಪದ್ಯ :-:೪೫
1.6.45
ಗುಪ್ತದಿಂದಮರರ್ಗಮೃತವನುಣಿಸಿದ ನಿತ್ಯ | ತೃಪ್ತಂ ಸಕಲಮಖಂಗಳ ಹವಿರ್ಭಾಗಮಂ | ಸಪ್ತಾರ್ಚಿಮುಖದಿಂದೆ ಕೈಕೊಂಡದರ ಫಲವನೂಡಿಸುವ ಪರಮಾತ್ಮನು ||
ಕ್ಲುಪ್ತಮೆನಿಸುವ ರಾಜಭೋಗ್ಯದೊಳಗಾವುದಂ | ಲುಪ್ತಮಾಗದವೊಲಾರೋಗಣಿಯನೈದೆ ಲೋ | ಲುಪ್ತಿಯಿಂ ಮಾಡುತಿರ್ದಂ ತನ್ನ ಮಾನುಷ್ಯಲೀಲೆಗಿದು ಸಾರ್ಥಮೆನಲು ||45||
1.6.45_64
ಪದ್ಯ :-:೪೬
1.6.46
ಹಾರ ನೂಪುರ ಕಂಕಣಾದಿ ಭೂಷಣ ಝಣ | ತ್ಕಾರಧ್ವನಿಗಳ ಮೇಲುದಿನೊಳ್ ಪೊದಳ್ವ ಕುಚ | ಭಾರದಿಂ ನಸುವಾಗಿದಂಗಲತೆ ಲಹರಿಗಳ ಸಿರಿಮೊಗಕೊಲಿವ ಕಂಗಳ ||
ಸ್ಮೇರೋಲ್ಲಸದ್ರುಚಿರದಂತಪಙ್ತಗಳ ಶೃಂ | ಗಾರಸರಸೋಕ್ತಿಗಳ ವಿನುತಾಷ್ಟಮಹಿಷಿಯರ್ | ಚಾರು ಚಾಮರ ತಾಲವೃಂತಮಂ ಪಿಡಿದಿರ್ದರಚ್ಚ್ಯತನ ಕೆಲಬಲದೊಳು||46||
1.6.46_65
ಪದ್ಯ :-:೪೭
1.6.47
ಕದ್ದು ಮನೆಮನೆವೊಕ್ಕು ಬೆಣ್ಣೆಪಾಲ್ಗೆನೆಗಳಂ | ಮೆದ್ದು ಗೋವಳರ ಮೇಳದ ಕಲ್ಲಿಗೂಳ ಕೈ | ಮುದ್ದೆಯಂ ತೆಗೆದುಂಡು ತುರುಗಾವ ಪಳ್ಳಿಯಂ ಬಿಟ್ಟು ಬಳಿಕೆರವಿಲ್ಲದೆ ||
ಹೊದ್ದಿ ಪಾಂಡವರನೋಲೈಸಲಾದುದು ಭಾಗ್ಯ | ಮಿದ್ದಪುವು ರಾಜಭೋಜ್ಯಂಗಳಿವು ಪಡೆದವರ್ | ಮುದ್ದುಗೈದಪರೂಟದೆಡೆಗಳೊಳ್ ಚೋದ್ಯಮೆಂದಳ್ ಸತ್ಯಭಾಮೆ ನಗುತೆ ||47||
1.6.47_66
(ಪದ್ಯ -೪೭)
1.6.47_67
ಪದ್ಯ :-:೪೮
1.6.48
ಬರಿದೆ ಗಳಹದಿರತ್ತೆಮಾವದಿರಿರಲ್ಕೆ ನೀ | ನರಿಯಲಾ ತನ್ನ ಬಂಧನಮೀತನುದಯಿಸಲ್ | ಪರಿದುದೀತನೆ ಜಗದ್ಗುರು ಕಣಾ ಪಾಲಿಸುವನಿಂದ್ರಾದಿ ನಿರ್ಜರರನು ||
ಕುರುಪಿಡಲ್ಬಹುದೆ ಮಾನವನೆಂದು ಕೃಷ್ಣನು | ಜರಿಯೆ ನೀನೇಸರವಳೊಡನಾಡಿತನದಿಂದೆ | ಬೆರೆಯಬೇಡತ್ತಹೋಗೆಂದು ದೇವಕಿ ಸತ್ಯಭಾಮೆಯಂ ಗರ್ಜಿಸಿದಳು ||48||
1.6.48_68
ಪದ್ಯ :-:೪೯
1.6.49
ನಿಮ್ಮ ಬಂಧನವ ಬಿಡಿಸಿದವರಿಗೆ ತವೆ ಬಂಧ | ನಮ್ಮಗುಳದೇಕಾಯ್ತು ದಿವಿಜರಂ ಪೊರೆವವಂ | ಚಮ್ಮಟಿಗೆವಿಡಿಯಲೇತಕೆ ನರನ ಕುರುಹುಗಾಣಿಸದವಂ ಪೆಳವಿಗೊಲ್ದು ||
ಸುಮ್ಮನೇತಕೆ ಸಿಕ್ಕಿದಂ ಜಗದ್ಗುರುವೆನಲ್ | ನಮ್ಮ ಜಗದೊಳಗಿಹಿರಿ ನೀವು ನಿಗೆಯು ಗುರುವೆ | ನಮ್ಮ ನಂಜಿಸದೆ ನೀಂ ತಿಳಿಪುದೆಂದಳ್ ದೇವಕಿಗೆ ಮತ್ತೆ ಸತ್ಯಭಾಮೆ||49||
1.6.49_69
ಪದ್ಯ :-:೫೦
1.6.50
ಸತ್ಯಭಾಮಾದೇವಿ ನುಡಿದ ಕಟಕಿಯ ಮಾತಿ | ಗತ್ಯಂತಹರ್ಷಮಂ ತಾಳ್ದದಕೆ ನಸುನಗುತೆ | ಪ್ರತ್ಯುತ್ತರಂಗುಡುವೆನೆಂಬನಿತರೊಳ್ ಭೀಮಸೇನನೈತರುತಿಹುದನು ||
ಭೃತ್ಯರೆಚ್ಚರಿಸಿದೊಡೆ ಭಾವಮೈದುತನದ | ಕೃತ್ಯದಿಂದಚ್ಚ್ಯತಂ ಸೂಚಿಸಲ್ ತಡೆದಳೌ | ಚಿತ್ಯಮ್ಲಲೊಳವುಗುವೊಡಾರೋಗಣೆಯ ಸಮಯಮೆಂದು ಸೈರಂಧ್ರಿ ಬಂದು ||50||
1.6.50_70
ಪದ್ಯ :-:೫೧
1.6.51
ಆರೋಗಣೆಯ ಸಮಯಮಾರ್ಗೆ ಭೂತಂ ಪೊಯ್ದು | ದಾರನೀ ಮನೆಯೊಳಿಂತೀಗಳೇತಕೆ ಮೌನ | ಮಾರುಮಿಲ್ಲವೆ ಪೊರೆಯೊಳಿಹಳೇ ದೇವಕಿ ಸತ್ಯಭಾಮೆಗಾವುದುಮಿಲ್ಲಲಾ ||
ಆರೆನ್ನನಿಂತು ತಡೆಸಿದರಾಯ್ತೆ ದುರ್ಭಿಕ್ಷ || ಮೂರೊಳ್ ಬೆಳೆಯದೆ ಧಾನ್ಯಂ ಕರೆಯದೇ ವೃಷ್ಟಿ | ನಾರಿಯರನಿನಿಬರಂ ಕಟ್ಟಿಕೊಳಲೇಕೆ ಬಿಡಲೆಂದು ಮಾರುತಿ ನುಡಿದನು ||51||
1.6.51_71
ಪದ್ಯ :-:೫೨
1.6.52
ಭೀಮನಾಡಿದ ನುಡಿಯ ಕೇಳಿ ರುಕ್ಮಿಣೀ ಸತ್ಯ | ಭಾಮೆಯರ ಮೊಗನೋಡಿ ನಸುನಗುತೆ ಮುರಹರಂ | ತಾ ಮತ್ತೆ ರಭಸದಿಂ ಭೋಜನಂಗೆಯ್ಯು ತೊಡನೊಡನೆ ಭರ್ರನೆ ತೇಗಲು ||
ತಾಮಸಮಿದೇಕೆ ನಾಂ ಬಂದನೊರ್ವನೆ ಮುಳಿದೊ | ಡೀಮೂಜಗಂ ನಿನ್ನ ಬಾಯ್ಗೊಂದು ತುತ್ತಾಗ | ದೀ ಮನುಜಗಿನುಜರಂ ಬಲ್ಲರಾರೆನ್ನನುಳುಹೆಂದನಿಲಜಂ ಚೀರ್ದನು ||52||
1.6.52_72
ಪದ್ಯ :-:೫೩
1.6.53
ಬಿಡದೆ ಕಳವಿಂದೆ ಲೋಗರ ಮನೆಗಳಂ ಪೊಕ್ಕು | ತುಡುತಿಂದವನ ಭೋಜನಕ್ಕೆ ಮೃಷ್ಟಾನ್ನಮಾ | ದೊಡೆ ಕೆಲಬಲಂಗಳಂ ನೋಡುವನೆ ಗೋವಳಂಗರಸುತನಮಾದ ಬಳಿಕ ||
ಪೊಡೆವಿಯಂ ಕಂಡು ನಡೆವನೆ ಮುಳಿದು ಮಾವನಂ | ಬಡಿದವಂ ನೆಂಟರನರಿವನೆ ಮೊಲೆಗೊಟ್ಟಳಸು | ಗುಡಿದವಂ ಪುರುಷಾರ್ಥಿಯಾದಪನೆ ನಾವಜ್ಞರೆಂದು ಮಾರುತಿ ಜರೆದನು ||53||
1.6.53_73
ಪದ್ಯ :-:೫೪
1.6.54
ದೇವತನಮಂ ಬಿಟ್ಟು ನರನಾದವಂಗೆ ಬಳಿ | ಕಾವ ಗೌರವಮಿಹುದಿವಂ ನಾಚುವನೆ ಸಾಕು | ನಾವೀತನಂ ಕಾಣ್ಬುದುಚಿತಮಲ್ಲೆಂದು ಭೀಮಂ ವಿಭಾಡಿಸಲಿತ್ತಲು ||
ಶ್ರೀವರಂ ನಸುನಗೆಯೊಳಾಗಳರಿದಂದದಿಂ | ದಾವಾಗ ಬಂದನನಿಲಜನಿತ್ತ ಕರೆ, ತಡೆದ | ಳಾವಳೇತಕೆ ಕೋಪಮನೆ ಮತ್ತೆ ಪವನಸುತನೊಳವುಗುತ್ತಿಂತೆಂದನು ||54||
1.6.54_74
ಪದ್ಯ :-:೫೫
1.6.55
ದೇವ ನಿಮ್ಮರ್ಜುನನ ಸಲುಗೆ ನಮಗುಂಟೆ ಸಂ | ಭಾವಿಸುವರಿಲ್ಲೆಮ್ಮನಿಲ್ಲಿ ನಿಲಿಸಿದರೆನಲ್ | ನಾವು ತಡೆಸಿದೆವಿತ್ತ ಬಾಯೆನುತೆ ಸೆರಗುವಿಡಿದೊಡನೆ ಕುಳ್ಳಿರಿಸಿಕೊಂಡು ||
ಆ ವಿವಿಧ ಭೋಜ್ಯದಿಂದಾರೋಗಿಸಿದ ಬಳಿಕ | ತೀವಿದ ಸುಗಂಧ ಕರ್ಪೂರ ತಾಂಬೂಲ ಪು | ಷ್ಟಾವಳಿಗಳಿಂದೆ ಸತ್ಕರಿಸಿದಂ ಭೀಮನಂ ಸುರಪುರದ ಲಕ್ಷ್ಮೀಶನು ||55||
1.6.55_75
♥♥♥ ॐ ♥♥♥
ಸಂಧಿ ಆರಕ್ಕೆ ಒಟ್ಟು ಪದ್ಯ:೩೨೧;
1.6.55_76
ನೋಡಿ
1.6.55_77
<ಜೈಮಿನಿ ಭಾರತ/ಐದನೆಯ ಸಂಧಿ
ಜೈಮಿನಿ ಭಾರತ/ಏಳನೆಯ ಸಂಧಿ>
1.6.55_78
-ಸಂಧಿಗಳು
1.6.55_79
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34
1.6.55_80
ಪರಿವಿಡಿ
1.6.55_81
ಉಲ್ಲೇಖ