Pramāṇa · Search · About · API

Jaimini Bharata (Kannada) 1.9: ಒಂಭತ್ತನೆಯ ಸಂಧಿ

Jaimini Bhārata (Kannada) 1.9

Language
Kannada

ಒಂಭತ್ತನೆಯ ಸಂಧಿ

1.9.p1

ಒಂಬತ್ತನೆಯ ಸಂಧಿ

1.9.p2

ಪದ್ಯ -ಸೂಚನೆ

1.9.p3

ಸೂಚನೆ ಜ್ವಾಲೆ ನಿಜ ಕಾಂತನಂ ಚಲದಿಂದೆ ಬಿಟ್ಟು ತ |
ನ್ನಾಲಯದೊಳಿರದೆ ಪೊರಮಟ್ಟು ಬಂದರ್ಜುನನ |
ಮೇಲೆ ತಂತ್ರವನಿಕ್ಕಿ ಶಾಪಮಂ ಕುಡಿಸಿದಳ್ ದೇವ ನದಿಯಂ ಕೆರಳ್ಚಿ ||

1.9.p4

ಪದ್ಯ -೧

1.9.1

ಇಂದುಕುಲತಿಲಕ ಜನಮೇಜಯ ನರೇಂದ್ರ ಕೇ |
ಳಂದು ನೀಲಧ್ವಜಂ ತಿರುಗಿ ತನ್ನರಮನೆಗೆ |
ಬಂದು ವೈಶ್ವಾನರನನುಜ್ಞೆಯಿಂ ಪಾರ್ಥನ ತುರಂಗಮಂ ಬಿಡುವೆನೆಂದು ||
ನಿಂದು ಮಂತ್ರಿಗಳ ಕರಸಲ್ಕದಂ ಕೇಳ್ದು ನಡೆ |
ತಂದು ನುಡಿದಳ್ ಜ್ವಾಲೆಯೆಂಬರಸಿ ಪತಿಗೆ ನೀ |
ನಿಂದು ಸಿತವಾಹನಂಗೀಯದಿರ್ ಕುದುರೆಯಂ ಬೆದರದಿರೆನುತೆ ತಡೆದಳು ||1||

1.9.1_5

ಪದ್ಯ -೨

1.9.2

ಅನ್ನೆಗಂ ಕೇಳ್ದು ಜನಮೇಝಯ ನರೇಶ್ವರಂ |
ತನ್ನ ಮನದೊಳ್ ಸಂದೆಗಂಬಟ್ಟು ಬೆಸಗೊಂಡ |
ನಿನ್ನೊಮ್ಮೆ ತಿಳಿಪೆಲೆ ಮುನೀಂದ್ರ ಪಾವಕನೇತಕಾ ಪಟ್ಟಣದೊಳಿರ್ದನು ||
ಮನ್ನಣೆಯ ಮನೆಯಳಿಯನೆಂತಾದನಾ ನೃಪನ |
ಕನ್ನಿಕೆಯದೇನ ಮಾಡಿದಳಿದರ ವೃತ್ತಾಂತ |
ಮನ್ನಿರೂಪಿಸವೇಳ್ವುದೆನೆ ಮತ್ತೆ ಜೈಮಿನಿ ಧರಾಧಿಪಂಗಿಂತೆಂದನು ||2||

1.9.2_6

ಪದ್ಯ -೩

1.9.3

ಆಲಿಸಿನ್ನಾದೊಡೆಲೆ ಭೂಪ ನೀಲಧ್ವಜಂ |
ಜ್ವಾಲೆಯೆಂಬರಸಿಯೊಳ್ ಪಡೆದನತಿರೂಪ ಗುಣ |
ಶೀಲಂಗಳಿಂದೆಸೆವ ತನುಜೆಯಂ ಸ್ವಾಹಾಭಿಧಾನದಿಂ ಬಳೆಯುತಿರುವ ||
ಆ ಲೋಲ ಲೋಚನೆಗೆ ಜೌವನಂ ಬರೆ ಪಿತಂ |
ಮೂಲೋಕದೊಳಗುಳ್ಳ ಪುರುಷರ್ಕಳಂ ಪಟದ |
ಮೇಲೆ ರೂಪಿಸಿ ತೋರಿಸಿದನಿದರೊಳಾರ್ ನಿನಗೆ ವಲ್ಲಭಂ ಪೇಳ್ವುದೆಂದು ||3||

1.9.3_7

ಪದ್ಯ -೪

1.9.4

ವಿಪುಲ ಗಂಧರ್ವ ಯಕ್ಷೋರಗ ಸುರಾಸುರರ |
ನಪಹಾಸ್ಯಮಂ ಮಾಡಿ ಸಕಲ ಭೂಮಂಡಲದ |
ನೃಪ ವರ್ಗಮಂ ಪಳಿದು ಹರಿ ಹರ ವಿರಿಂಚಿ ಶಕ್ರಾಧಿಗಳನಿಳಿಕೆಗೆಯ್ದು ||
ತಪನೇಂದು ಮನ್ಮಥ ವಸಂತರ್ಕಳಂ ಜರೆದ |
ನುಪಮ ದಿಕ್ಪಾಲಕರ ನಡುವೆ ಕುಳ್ಳಿರ್ದು ರಾ |
ಜಿಪ ವೀತಿಹೋತ್ರನಂ ಕಂಡಳ್ ತೋರಿಸಿದಳೆನಗಿವಂ ಕಾಂತನೆಂದು ||4||

1.9.4_8

ಪದ್ಯ -೫

1.9.5

ನೀಲಕೇತು ನೃಪನವಳ ನುಡಿಗೇರ್ಳದಣುಗೆ |
ನೀನಘಟಿತದ ವರನನುನ್ನಿಸಿದೆ ಪೇಳ್ದೊಡಿ |
ನ್ನೇನಪ್ಪುದೆಂದು ಚಿಂತಿಸುತಿರ್ಪ ತಾತನಂ ಜರೆದು ಬೀಳ್ಕೊಂಡು ಬಳಿಕ ||
ಮಾನಿಸಿ ಪುರೋದ್ಯಾನದೊಳ್ ಪ್ರವಹಿಸುವ ನರ್ಮ |
ದಾ ನದಿಗೆ ಬಂದಲ್ಲಿ ಮಿಂದು ಸುವ್ರತೆಯಾಗಿ |
ನಾನಾ ವಿಧಾನದಿಂದರ್ಚಿಸಿದಳಗ್ನಿಯಂ ಭಕ್ತಿಯಿಂದನುದಿನದೊಳು ||5||

1.9.5_9

ಪದ್ಯ -೬

1.9.6

ಪಾವಕಂ ಬಳಿಕ ಮೆಚ್ಚಿದನವಳ ನೋಂಪಿಗೆ ಮ |
ಹೀ ವಿಬುಧ ವೇಷಮಂ ತಾಳ್ದು ನೀಲಧ್ವಜನ |
ಚಾವಡಿಗೆ ಬರಲಾತನಿದಿರೆದ್ದು ಸತ್ಕರಿಸಿ ಕೈಮುಗಿದು ವಿನಯದಿಂದೆ ||
ನೀವು ಬಿಜಯಂಗೈದ ಕಾರ್ಯಮಂ ಬೆಸಸಿಮೆನ |
ಲಾವು ಕನ್ಯಾರ್ಥಿಗಳ್ ಕುಡು ನಿನ್ನ ಸುತೆಯನಿದ |
ಕಾವೆಣಿಕೆ ಬೇಡ ಭೂಭುಜರೀಯಬಹುದು ವಿಪ್ರರ್ಗೆಂಡೊಡಿಂತೆಂದನು ||6||

1.9.6_10

ಪದ್ಯ -೭

1.9.7

ಕನ್ಯಾರ್ಥಿಯಾಗಿ ನೀಂ ಬಂದು ಬೇಡುವುದಿಳೆಯೊ |
ಳನ್ಯಾಯಮಲ್ಲ ವಿಪ್ರರ್ಗೆ ಕೊಡಬಹುದು ರಾ |
ಜನ್ಯರದಕೇನೊಂದು ಛಲದಿಂದೆ ತನ್ನ ಕುವರಿಗೆ ಮರುತ್ಸಖನಲ್ಲದೆ ||
ಅನ್ಯರಂ ಪತಿಯಾಗಿ ವರಿಸಬೇಕೆಂಬ ಚೈ |
ತನ್ಯಮಿಲ್ಲೇನು ಮಾಡುವೆನಿನ್ನು ನಿನಗೀವ |
ಧನ್ಯತೆಗೆ ಬಾಹಿರಂ ತಾನಾದೆನೆನಲಾ ಕಪಟ ವಿಪ್ರನಿಂತೆಂದನು ||7||

1.9.7_11

ಪದ್ಯ -೮

1.9.8

ಪ್ರಾಪ್ತಮಾದುದು ನಿನ್ನ ಮಗಳಿಣಿಕೆ ಸುವ್ರತ ಸ |
ಮಾಪ್ತಿಯಂ ಮಾಡಿಸಿನ್ನಾನಗ್ನಿ ಸಂಶಯ ||
ವ್ಯಾಪ್ತಿಯಂ ಬಿಡು ಕುಡು ನಿಜಾತ್ಮಜೆಯನೆನೆ ನಂಬದಾನೃಪಂ ಬಳಿಕ ತನ್ನ ||
ಆಪ್ತ ಮಂತ್ರಿಯೊಳೀಗ ಳಿವನಂ ಪರೀಕ್ಷಿಸೆನೆ |
ಗೊಪ್ತಾರನಾಜ್ಞೆಯಿಂ ಬಂದವಂ ನೋಡೆ ಶೀಖಿ |
ದೀಪ್ತಿಯಂ ತೋರಲೆವೆ ಗಡ್ಡ ಮೀಸೆಗಳುರಿಯಲನಲನೆಂದರಿದನಂದು ||8||

1.9.8_12

ಪದ್ಯ -೯

1.9.9

ಸಪ್ತರಸನಂ ತಪ್ಪದೆಂದಾ ನೃಪಂ ತಿಳಿದು |
ಗುಪ್ತದಿಂದ ತನ್ನ ಸತಿಯನುಜೆಯಂ ಕರಸಿ ಲೋ |
ಲುಪ್ತಿಯಿಂ ಬಂದನಿವಗೀಯಬೇಕಣುಗಿಯಂ ಶಿಖಿಯಹುದೆ ನೋಡೆನಲ್ಕೆ ||
ದೃಪ್ತ ಭಾವದೊಳಾಕೆ ನಡೆತಂದು ನಿಟ್ಟಿಸಲ್ |
ತಪ್ತಮಾದುದು ಮೇಲುದಿನ ವಸನಮಾಗಳಾ|
ಕ್ಷಿಪ್ತಮಂಮಾಡಿ ನಗುತಿರ್ದನಾ ಭೂವಂ ಸಭೆಯೊಳ್ ವಿನೋದದಿಂದೆ ||9||

1.9.9_13

(ಪದ್ಯ - ೮ )

1.9.9_14

ಪದ್ಯ -10

1.9.10

ಭೂಕಾಂತ ಕೇಳ್ ಬಳಿಕ ನೀಲಧ್ವಜಾವನಿಪ |
ನಾ ಕಪಟ ವಿಪ್ರನಂ ಕರೆದಗ್ನಿ ನೀನಾದೊ |
ಡೀ ಕುವರಿಯಂ ಕುಡುವೆನಿಂದು ಮೊದಲಾಗಿ ಮಾಹಿಷ್ಮತಿಯ ಪಟ್ಟಣಕ್ಕೆ||
ಪ್ರಾಕಾರವಾಗಿ ಯೆನ್ನರಮನೆಯೊಳೆಂದುಮಿರ |
ಬೇಕೆಂದು ಬೇಡಿಕೊಳಲೊಪ್ಪಿ ಪವಮಾನ ಸಖ |
ನಾ ಕಮಲವದನೆಯಂ ಮದುವೆಯಾದಂ ವಿಧಿ ವಿಧಾನ ವಿಭವಂಗಳಂದೆ ||10||

1.9.10_15

ಪದ್ಯ -೧೧

1.9.11

ಶ್ರೀ ಹೈಮವತಿಯರಂ ದುಗ್ದಾಭ್ಧಿ ಹಿಮಗಿರಿಗ |
ಳಾ ಹರಿಹರರ್ಗೆ ಕೊಟ್ಟಿಂಬಿಟ್ಟು ಕೊಂಡಿಹವೊ |
ಲೀ ಹುತವಹಂಗಾತ್ಮಜೆಬುನಿತ್ತು ನಿಲಿಸಿಕೊಂಡು ನೀಲಕೇತು ಬಳಿಕ ||
ಸ್ವಾಹಾ ವನಿತೆಯ ಸಮ್ಮೇಳೆದತಿಸೌಖ್ಯದಿಂ |
ಮಾಹಿಷ್ಮತೀ ಪಟ್ಟಣದೊಳಿರ್ಪನನಲಂ ಮ |
ನೋಹರದ ವಿವಿಧ ಭೋಗದೊಳಂದು ಮೊದಲಾಗಿ ಸಂದು ಸಂತೋಷದಿಂದ ||11||

1.9.11_16

ಪದ್ಯ -೧೨

1.9.12

ಅಲ್ಲಿ ಪಾವಕನಿರ್ಪ ಕಾರಣಮಿದೀಗ ಮುಂ |
ದಿಲ್ಲಿಯ ಕಥಾಂತರವನರಸ ಕೇಳಾ ರಾತ್ರಿ |
ಯಲ್ಲಿ ನೀಲಧ್ವಜಂ ಮನೆಯೊಳಾ ಜ್ವಾಲೆಯ ನಿರೂಪಮಂ ಶಿರದೊಳಾಂತು ||
ಸಲ್ಲಲಿತ ವಾಜಿಯಂ ಬಿಡೆನೆನ್ನೊಡನೆ ಕಾದಿ |
ದಲ್ಲದೆಂದಾ ಕಿರೀಟಿಗೆ ಪೇಳಿಸಿದನಿತ್ತ |
ಪಲ್ಲವಿಸಿತಮಲ ಪೂರ್ವಾಶಾಲತಿಕೆಯೆನಲ್ ಕೆಂಪಡರ್ದುದು ಮೂಡಲು ||12||

1.9.12_17

ಪದ್ಯ -೧೩

1.9.13

ತನ್ನ ಪಗೆಯಾದ ಕತ್ತಲೆಯ ಸಾರೂಪೈದಿಂ |
ದಿನ್ನಿರ್ದೊಡೆಮಗಿನಂ ಮುಳಿಯದಿರನೆಂದಂಜಿ |
ಕನ್ನೆಯ್ದಿಲಿಯ ಮೊಗಂ ಬಾಡಿದುದು ಕೂಡೆ ನಗುತಿರ್ದುವರವಿಂದಂಗಳು ||
ಗನ್ನದೊಳ್ ನೆರೆವ ಜಾರೆಯರ ಕುಂಟಣಿಯಂತೆ |
ಸನ್ನೆ ಗೈದುವು ತಾಮ್ರ ಚೂಡಂಗಳೊಂದಿದುವು |
ಮುನ್ನಿನಂತಿರೆ ಜಕ್ಕಮಕ್ಕಿಗಳ್ ಪಾಡಿದುವು ತುಂಬಿಗಳ್ ಬಂಡನರಸಿ ||13||

1.9.13_18

ಪದ್ಯ -೧೪

1.9.14

ರಾಹು ಮುನ್ನೊಮ್ಮೆ ತನ್ನಂ ತುಡುಕಿ ಬಿಟ್ಟನೆಂ |
ಬಾಹಗೆಯ ಮಗುಚಲೊಳವೊಕ್ಕು ಪಾತಾಳದ ಮ |
ಹಾಹಿ ಸಂಕುಲಮನಾಕ್ರಮಿಸಿ ಪೆಡೆವಣಿಗಳಂ ತೆಗೆದುಕೊಡಾಗಳವನು ||
ಸಾಹಸಂ ಮಿಗೆ ದೆಸೆದೆಸೆಗೆ ಚೆಲ್ಲುತೈತರ್ಪ |
ನೋ ಹರಿದ್ವಾಜಿ ಪೇಳೆನೆ ಪಸುಳೆವಿಸಿಲ ಪ್ರ |
ವಾಹಂಗಳೆತ್ತಲುಂ ಪರಿವಿನಂ ದಿನಪನುದಯಂಗೈದು ಬರುತಿರ್ದನು ||14||

1.9.14_19

ಪದ್ಯ -೧೫

1.9.15

ಇತ್ತಲವನೀಶ ಕೇಳುದಯವಾಗದ ಮುನ್ನ |
ಮತ್ತೆ ಮಾಹಿಸ್ಮತಿಯ ಪಟ್ಟಣದ ಕೋಟಿಯಂ |
ಮುತ್ತಿಕೊಂಡುದು ನರನ ಚತುರಂಗಮೋಜೆಯೊಳ್ ನೀಲಕೇತುವಿನ ಸೇನೆ ||
ಒತ್ತಿ ಕವಿದುದು ವೀರರೊದಗಿದರ್ ಪೊಯ್ದಾಡಿ |
ತಿತ್ತಂಡಮೊಡವೆರಸಿ ಚೂಣೆಗಾಳಗದ ಭಟ |
ರೆತ್ತಿದರ್ ಪಂತಪಾಡುಗಳನಸಿತಧ್ವಜಂ ನಡೆದನರ್ಜನನಮೇಲೆ ||15||

1.9.15_20

ಪದ್ಯ -೧೬

1.9.16

ತರಣಿ ತಗಿದ ಬಳಿಕ ಮಿಂಚುಂಬುಳುವಿಗೆ ತಮಂ |
ತೆರಳಬಲ್ಲುದೆ ಕೃಶಾನುಜ್ವಾಲೆಗಳುಕದಾ |
ನರನುಳಿದ ವೀರರಂ ಬಗೆವನೇ ಪಡೆವೆರಸಿ ನೂಗೆದಂ ಕಡೆಗೆರಯುತೆ ||
ಮುರಿದುದುರವಣಿಗವನ ಸೇನೆ ಬಳಿಕಳಲಿಗರ್ |
ತರಹರಿಸಿ ಸುತ ಸಹೋದರ ಮಂತ್ರಿ ಬಾಂಧವರ್ |
ದುರದೊಳಾಂತಳಿದರರ್ಜುನನೊಳಾತಂ ಕಾದಿ ನೊಂದುಮೂರ್ಛಿತನಾದನು ||16||

1.9.16_21

ಪದ್ಯ -೧೭

1.9.17

ಬಳಿಕ ಸಾರಧಿ ಮನೆಗೆ ತಂದನಾ ಭೂಪನಂ |
ಪೊಳಲ ಪೆರ್ಬಾಗಿಲ್ಗಳಿಕ್ಕಿದುವುಕೋಟೆ ಕೊ |
ತ್ತಳದ ಕಾವಲ್ಗಳಂ ಬಲಿದರಲ್ಲಲ್ಲಿ ಗಜಬಜವಾಯ್ತು ನಗರದೊಳಗೆ ||
ತಿಳಿದುದಾತನ ಮೂರ್ಛೆ ಕಣ್ದೆರೆದು ನೋಡಿ ಕೋಳು |
ಗುಳದ ಪರಿಭವಕೆ ಬೆಂಡಾಗಿ ನಿಜ ತನಯರಳಿ |
ದಳಲಿನಿಂ ಬೈದನಸಿತಧ್ವಜಂ ಜ್ವಾಲೆಯಂ ಪ್ರತಿಕೂಲೆಯಂ ಖತಿಯೊಳು ||17||

1.9.17_22

|16

1.9.17_23

ಪದ್ಯ -೧೮

1.9.18

ನಿನ್ನೆ ಪಾರ್ಥನ ಹಯವನಾತಂಗೆ ಬಿಢಲೀಯ |
ದೆನ್ನ ಕೆಡಿಸಿದೆಯಲಾ ಪಾತಕಿಯೆ ಸುತರಳಿದ |
ರಿನ್ನೇನು ಘಾತಕಿಯೇ ಮತ್ಕುಲಕರಿಷ್ಟೆ ನೀನತಿಕಷ್ಟೆ ಪೋಗು ದುಷ್ಟೆ ||
ಎನ್ನರಮನೆಯೊಳಿರದಿರೆಂದಾಗಲಾ ಜ್ವಾಲೆ |
ಯನ್ನೀಲಕೇತು ಧಟ್ಟಿಸಿ ಬೈದು ಬಳಿಕಶ್ವ |
ಮನ್ನರನೆಡೆಗೆ ಕಳುಪಿ ತಾನಾ ಕಿರೀಟಿಯಂ ಕಾಣಲೈ ಪೊರಮಟ್ಟನು ||18||

1.9.18_24

ಪದ್ಯ -೧೯

1.9.19

ಕೊಂಡು ಬರಿಸಿದನಖಿಳ ವಸ್ತುಗಳ ನಮಲ ಮಣಿ |
ಮಂಡನಾಳಿಗಳಂ ವಿವಿಧ ದುಕೂಲಂಗಳಂ |
ಹಿಂಡಾಕಳಂ ಮಹಿಷಿಗಳನುತ್ತಮಸ್ತ್ರೀಯರಂ ಗಜ ಹಯಾವಳಿಯನು ||
ಭಂಡಾರದರ್ಥಮಂ ಗುಡ ತೈಲ ಧಾನ್ಯಮಂ |
ಬಂಡಿಗಳ ಮೇಲೆ ತುಂಬಿಸಿ ಪಾರ್ಥನಂ ಬಂದು |
ಕಂಡನಸಿತ ಧ್ವಜಂ ಬಳಿಕವನನರ್ಜುನಂ ಪ್ರೀತಿ ಮಿಗೆ ವನ್ನಿಸಿದನು ||19||

1.9.19_25

ಪದ್ಯ -೨೦

1.9.20

ವಾಜಿ ನಡೆದುದು ಬಳಿಕ ತೆಂಕಮೊಗಮಾಗಿ ಸೇ |
ನಾ ಜಾಲಸಹಿತ ನೀಲದ್ವಜಂ ಪೊರಮೊಟ್ಟ |
ನಾ ಜನಪನಂ ಕೂಡಿಕೊಂಡು ಮುಂದಕೆ ಸವ್ಯಸಾಚಿ ತೆರಳಿದನಿತ್ತಲು ||
ತೇಜಮಿಲ್ಲದೆ ಮನೆಯೊಳೀಂ ಪೆಣ್ಣೊಡಲ್ಯೆಳಸು |
ವೀ ಜೀವಮೇತಕೆನಗೆನುತೆ ನಿಜ ಪಲ್ಲಭನ |
ರಾಜ ಗೃಹಮಂ ಬಿಟ್ಟು ಪೋದಳಾ ಜ್ವಾಲೆಯುನ್ಮುಖನೆಂಬ ತಮ್ಮನೆಡೆಗೆ ||20||

1.9.20_26

ಪದ್ಯ -೨೧

1.9.21

ಉನ್ಮುಖಂ ಕಂಡಿದಿರ್ಗೊಂಡಗ್ರಜಾತೆಯಂ |
ಸನ್ಮಾನಿಸಿದನೇಕೆ ಬಂದೆಯೆನೆ ಫಲುಗುಣಂ |
ಮನ್ಮನೋರಥಮೆಲ್ಲಮಂ ಕಿಡಿಸಿ ಮಕ್ಕಳಂ ಕೊಂದು ಪತಿಯಂ ಗೆಲ್ದನು ||
ತನ್ಮರಣಕೊಂದು ದಾಯವನೆಸಗದಿರಲೆನ್ನ |
ಜನ್ಮವೇತಕೆ ನಿನ್ನದೆಸೆಯಿಂದೆ ನರನ ವಿಲ |
ಸನ್ಮೌಳಿ ಮಸ್ತಕವನರಿಸದಿರೆನೆಂದೊಡಾ ಜ್ವಾಲೆಗವನಿಂತೆಂದನು ||21||

1.9.21_27

ಪದ್ಯ -೨೨

1.9.22

ವಾಯಕರ್ಜುನನ ತಲೆ ಬೀಳ್ದಪುದೆ ಕೃಷ್ಣನ ಸ| ಹಾಯಮಿರಲೆಲೆ ಮರುಳೆ ಹರಿಯ ಹಗೆಗೊಂಡು ಕೆಡು |
ವಾಯಸಂ ತನಗೇಕೆ ರಾಘವಂ ಮಾಡಿದುಪಹತಿಯಂ ದಶಾನನಂಗೆ ||
ದಾಯಮಂ ಪೇಳ್ದವನ ವಂಶಮಂ ಸವರಿಸಿದ |
ಮಾಯಕಾತಿಯವೊಲೆನ್ನಾಲಯಕೆ ಬಂದೆನಗ |
ಪಾಯಮಂ ತಾರದಿಲ್ಲಿಂದ ಪೋಗೆಂದವಳನುನ್ಮುಖಂ ಕೋಪಿಸಿದನು ||22||

1.9.22_28

ಪದ್ಯ -೨೩

1.9.23

ಜ್ವಾಲೆ ಬಳಿಕನುಜನಂ ಬೈದು ಕೋಪದೊಳಾತ |
ನಾಲಯದೊಳಿರದೆ ಪೊರಮುಟ್ಟು ನಡೆತರೆ ಮುಂದೆ |
ಲೀಲೆ ಮಿಗೆ ನಲಿನಲಿದು ಸುಳಿದಿಳಿದು ಬೆಳೆವಳಿದು ತೆಳೆದೆಳೆದು ಪೊಳೆದು ಸೆಳೆದು||
ಮೇಲೆಮೇಲೊದಗುವ ಘನಪ್ರವಾಹದ ಸುಕ |
ಲ್ಲೋಲ ಮಾಲಾಕುಲದ ಬುದ್ದುದದ ಜಲ ಜಂತು |
ಜಾಲದ ಲಳಿಯ ಲುಳಿಯ ಲಹರಿಗಳ ವಿಸ್ತರದವರ ಗಂಗೆಯಂ ಕಂಡಳು ||23||

1.9.23_29

ಪದ್ಯ -೨೪

1.9.24

ತೆಳುವುಡಿಯ ಮಳಲಿಡಿಯಲಿತ್ತಡಿಯ ತಳಗಡಿಯ |
ಪÉÇಳೆ ನೆರೆಯಲುರೆ ಪೊರೆಯಲೊಳ್ದೊರೆಯ ಬೆಳ್ನೊರೆಯ |
ತೊಳಪೆಳೆಯ ಮೀನ್ವೊಳೆಯಲಿರದೆಳೆಯಲೆಡೆ ಸೆಳೆಯ ತುಂತುರಿನ ತನಿಗೆದರಿನ ||
ಸುಳಿಸುಳಿಯಸವ್ಯಳಿಯ ಬೊಬ್ಬುಳಿಯ ಕಡಲುಳಿಯ |
ಜಳಚರದ ತರತರದ ಶೀಖರದ ಭೀಕರದ |
ತುಳ ಗಂಗೆ ಸುತರಂಗೆ ನೋಳ್ಪಂಗೆ ಶಲೆ ಕಂಗೆಸೆದಳಂದು ದಿವಿಜಸಿಂಧು ||24||

1.9.24_30

ಪದ್ಯ -೨೫

1.9.25

ಕೂರ್ಮೆಗಡಿಯಾಗಿರ್ಪ ಗುಣ್ಪಿಂದ ತನ್ನೆಡೆಯೊ |
ಳಾರ್ಮುಳುಗಲವರಿಂದ್ರರಹರೆಂಬ ಪೆಂಪಿಂದೆ |
ಘೂರ್ಮಿಸುವ ಗಂಗಾಪ್ರವಾಹಮಂ ಕಂಡಳಾ ಜ್ವಾಲೆ ಬಳಿಕಲ್ಲಿ ನಿಂದು ||
ಧಾರ್ಮಿಕರಿವರೊಳುಂಟೆ ತನ್ನ ನೆಂತಾದೊಡಂ |
ನೀರ್ಮುಟ್ಟದಂತೊಯ್ಯನಾ ತಡಿಗೆ ದಾಂಟಿಸುವ |
ಕೂರ್ಮೆಯುಳ್ಳವರೆಂದೊಡಲ್ಲಿರ್ದ ನಾವಿಕರ್ ಕೇಳ್ದವಳ್ಗಿಂತೆಂದರು ||25||

1.9.25_31

ಪದ್ಯ -೨೬

1.9.25_32

ಬಿಂದುಮಾತ್ರಂ ಮೇಲೆ ಬೀಳಲ್ಕೆ ವಿಪ್ರನಂ ಕೊಂದ ಪಾಪಂ ಪೋಪುದಿಲ್ಲಿ ಮಿಂದವನ ಗತಿ |
ಯಂದಮಂ ಬಣ್ಣಿಸುವೊಡಜನ ಪವಣಲ್ಲ ನೀನಿಲ್ಲಿಗೇನಂ ಪ್ರಾರ್ಥಿಸಿ ||

1.9.26

ಬಂದೆ ಗಂಗಾಂಬುವಂ ಮುಟ್ಟದಿರಬಹುದೆ ಪೇ |
ಳೆಂದೊಡಾ ಜ್ವಾಲೆ ನುಡಿದಳ್ ಜಾಹ್ನವಿಗೆ ದೋಷ |
ಮೊಂದಿಹುದು ನಿಮಗೊರೆವುದಿಲ್ಲಮವಳೆನಗೆ ಮೈದೋರಲುಸಿರುವೆನೆಂದಳು ||26||

1.9.26_33

ಪದ್ಯ -೨೭

1.9.27

ನ್ಯೆಜದಿಂದಜನ ಕರಪಾತ್ರದಗ್ರೋದಕಂ |
ವೈಜಯಂತೀಧರನ ಪಾದಾಂಬು ಶಿವನ ತಲೆ |
ಯೈಡೆಟೆವೆಳೆಸಿಗೆರೆದ ಜೀವನಂ ತಾನಂತುಮಲ್ಲದತಿ ಪಾಪಂಗಳ ||
ಮೈಜೋಡನುಗಿದು ಬಿಸುಡುವ ಗಂಗೆ ಬೆದರಿದೆಳ್ |ತ್ರೈಜಗದೊಳಪವಾದಕಂಜದವರುಂಟೆ ಕೇ|ಳೈಜನಪ ಪೊರಮುಟ್ಟಳವಳೆಂದ ನುಡಿಗೆ ನಡುಗಿ ||27||(ತ್ರೈಜನಪ ಜಲದೆ ಜಾಹ್ನವಿ ಕೇಳ್ದು)

1.9.27_34

ಪದ್ಯ -೨೮

1.9.28

ಅಂಬುರುಹ ರೋಲಂಬ ಮತ್ಸ್ಯ ಕಚ್ಛಪ ವಾರಿ |
ಕಂಬು ಶೀಕರ ಚಕ್ರವಾಕ ಶೈವಾಲ ಕಾ |
ದಂಬ ಗಂಭೀರ ಸೈಕತ ಮೃಣಾಳಂಗಳಿವು ತನಗವಯಂಗಳಾಗೆ ||
ಇಂಬಾದ ಸೌಂದರ್ಯಮಾ ನದಿಯ ನಡುವೆ ಪ್ರತಿ |
ಬಿಂಬಿಸಿದೊಲಿರೆ ದಿವ್ಯ ರೂಪನಳವಡಿಸಿ ಜಗ |
ದಂಬೆ ಜಾಹ್ನವಿ ಸಲಿಲ ಮದ್ಯದಿಂದೆದ್ದು ಬಂದಾ ಜ್ವಾಲೆಯಂ ಕೇಳ್ದುಳು ||28||

1.9.28_35

ಅಂಬುರುಹ=ಕಮಲ, ರೋಲಂಬ=ಜೇನು, ಮತ್ಸ್ಯ= ಮೀನು, ಕಚ್ಛಪ= ಆಮೆ, ವಾರಿಕಂಬು= ನೀರಿನಲ್ಲಹುಟ್ಟಿದ- ಶೀಕರ= ನೀರತುಂತುರು ಹನಿ, ಚಕ್ರವಾಕ= ಪಕ್ಷಿ, ಶೈವಾಲ= ಪಾಚಿ, ಕಾದಂಬ= ಹಂಸ, ಕದಂಬ ಪುಷ್ಪದ ಸೊಗಸು, ಗಂಭೀರ ಸೈಕತ= ಮರಳು ಮರಳು ದಿನ್ನೆ, ಮೃಣಾಳಂಗಳು= ತಾವರೆದಂಟು, ಇವು ತನಗೆ ಅವಯಂಗಳು ಆಗೆ= ಗಂಗೆಗೆ ದೇಹದ ಅಂಗಾಂಗಳು ಆಗಿರಲು, ಇಂಬಾದ= ಮನೋಹರ ಸೌಂದರ್ಯಮು= ಅಂದವು, ಆ ನದಿಯ ನಡುವೆ ಪ್ರತಿ ಬಿಂಬಿಸಿದೊವೊಲ್ ಇರೆ= ಆ ನದಿಯ ನಡುವೆ ಇದೆಲ್ಲಾ ಮೈಗೂಡಿದಂತೆ; ದಿವ್ಯ ರೂಪನು ಅಳವಡಿಸಿ ಜಗದಂಬೆ ಜಾಹ್ನವಿ= ದಿವ್ಯ ರೂಪವನ್ನು ಪಡೆದುಕೊಂಡು, ಜಗದಂಬೆಯಾದ ಜಾಹ್ನವಿಯಾಧ ಗಂಗೆಯು; ಸಲಿಲ ಮದ್ಯದಿಂದೆದ್ದು ಬಂದಾ ಜ್ವಾಲೆಯಂ ಕೇಳ್ದುಳು= ನದಿಯ ಮಧ್ಯದಿಂದ ದೆದ್ದು ಬಂದು ಆ ಜ್ವಾಲೆಯನ್ನು ಕೇಳಿದಳು.
(ಪದ್ಯ - ೨೮)

1.9.28_36

ಪದ್ಯ -೨೯

1.9.29

ದೋಷ ಹರೆ ತಾನೆಂದು ವೇದ ಶಾಸ್ತ್ರಂಗಳುರೆ |
ಘೋಷಿಫುವು ಮುಟ್ಟಲಾಗದು ತನ್ನನೆಂದು ನೀಂ |
ದೂಷಿಸುವ ಕಾರಣಮದಾವುದೌ ಜ್ವಾಲೆ ಪೇಳೆಂದು ಜಾಹ್ನವಿ ನುಡಿಯಲು ||
ದೂಷಣದ ಮಾತನಾಡುವಳಲ್ಲ ಲೋಕದ ಸು |
ಭಾಷಿತವನುಸಿರಬೇಹುದು ಪುತ್ರರಿಲ್ಲದಿಹ |
ಯೋಷೆಯಂಗಸ್ಪರ್ಶನಂ ಪಾಪಮೆಂಬರದಕಾಗಿ ಬೆದರಿದೆನೆಂದಳು ||29||

1.9.29_37

ಪದ್ಯ -೩೦

1.9.30

ಎಂದೊಡೆ ಕೆರಳ್ದು ಭಾಗೀರಥಿ ಸಮಸ್ತ ನೃಪ|
ಬೃಂದದೊಳ್ತನ್ನ ಮಗನುದ್ದಾಮನಾಗಿರ್ಪ|
ನೆಂದುಮಳಿವವನಲ್ಲವಂ ಯದೃಚ್ಛಾಮರಣಿ ಭಾಗವತ ಮಸ್ತಕ ಮಣಿ||
ಬೃಂದಾರಕೋಪಮಂ ಸತ್ಯಸಂಧಂ ಭೀಷ್ಮ|
ನೆಂದು ಮೂಲೋಕದೋಳ್ಪ್ರಖ್ಯಾತ ನಾಗಿಹಂ|
ಮಂದಮತಿ ನೀನೆನಗೆ ಸುತರಿಲ್ಲೆನಲ್ಬಹುದೆ ಪೋಗೆಂದೊಡಿಂತೆಂದಳು||೩೦||

1.9.30_38

ಪದ್ಯ -೩೧

1.9.31

ಉಂಟು ನೀನಾಡಿದಿನಿತೆಲ್ಲಮುಂ ತಥ್ಯವಹು |
ದೆಂಟಕೊಂದುಳಿದುದಂ ಬಲ್ಲೆ ನಾನದೆರಿಂದೆ |
ವೆಂಟಣಿಸಿತಿನ್ನೆಗಂ ನಿನ್ನೇಳ್ಗೆ ಮೂಜಗದೊಳೀಗ ದಾಯಾದ್ಯರೊಳಗೆ
ಗಂಟೆಕ್ಕಿದಾಹವದೊಳರ್ಜುನಂ ತವ ಸೂನು |
ವಂ ಟಕ್ಕಿನಿಂ ಕೊಂದನಲ್ಲದಿರ್ದೊಡೆ ಮತ್ತೆ |
ಕಂಟಕಮದೆತ್ತಣದು ಕೇಳ್ ತವಾಭ್ಯುದಯಕೆಂದಾಜ್ವಾಲೆ ಕಾಳ್ಗಡದಳು ||31||*

1.9.31_39

ಪದ್ಯ -೩೨

1.9.32

ಪಚ್ಚೆಲೆಯ ತರುವನೊಣಗಿದ ಪೊರೆಯ ಮರದ ಕಾ |
ಳ್ಕಿಚ್ಚು ಕೊಂಡುರಿವವೊಲ್ ಜ್ಯಾಲೆಯ ಮುಳಿಸಿನೊಡನೆ |
ಪೆಚ್ಚಿತವರಾಪಗೆಯ ಕೋಪಮೆತ್ತಿದ ಹಸ್ತದಿಂ ಭೀಷ್ಮನಂ ದುರದೊಳು ||
ಎಚ್ಚು ಕೊಂದರ್ಜುನನ ತಲೆಯನಾತನ ಸುತಂ |
ಕೊಚ್ಚಿ ಕೆಡಹಲಿ ತಿಂಗಳಾರಕಾಹವದೊಳೆಂ |
ದುಚ್ಚರಿಸಿ ಶಾಪಮಂ ಕೊಟ್ಟಡಗಿದಳ್ ಜಲದಮದ್ಯದೊಳ್ ದಿವಿಜತಟಿನಿ ||32||

1.9.32_40

ಪದ್ಯ -೩೩

1.9.33

ನಾರಿಯರ ಚಲಮೆಂತುಟೋ ಕೇಳ್ ಮಹೀಶ ಭಾ |
ಗೀರಥಿಗೆ ಕೋಪಮಂ ಬರಿಸಿ ಕೊಡಿಸಿದಳತಿ ಕ |
ಠೋರತರ ಶಾಪಮಂ ಜ್ವಾಲೆ ಬಳಿಕದು ಸಾಲದಾ ನರನ ತಲೆಯನರಿವ ||
ಕೂರಲಗಿನಸ್ತ್ರವಾದಪೆನೆಂದು ಸುರನದಿಯ |
ತೀರದೊಳ್ ವಹಿ ಪ್ರವೇಶಮಂ ಮಾಡಿ ಜಂ |
ಭಾರಿ ತನಯನ ಸೂನು ಬಭ್ರವಾನನ ಮೂಡಿಗೆಯೊಳಂಬಾಗಿರ್ದುಳು ||33||

1.9.33_41

(ಪದ್ಯ - ೩೩)

1.9.33_42

ಪದ್ಯ -೩೪

1.9.34

ಬಂದುದು ನರಂಗೆ ವಾಯದೊಳೀಗಶಾಪಮೀ |
ಮಂದಾಕಿನಿಯ ಮಾತು ತಾಗಿದಲ್ಲದೆ ಮಾಣ |
ದಿಂದು ಕುಲಮಳಿವುದೀತನ ಕೂಡೆ ದರ್ಮಜಾದಿಗಳಸುವಿಡಿಯಲರಿಯರು ||
ಮುಂದೆ ಸುರಪುರದ ಲಕ್ಷ್ಮೀಕಾಂತನಾವ ತೆರ |
ದಿಂದೆ ಪರಿಹರಿಸುವೆನೂ ತನ್ನ ಶರಣಾಗತರ|
ನೊಂದುಪಾಯದೊಳುಳಿಪದಿರನೆಂದು ಧೈರ್ಯಮಂ ತಾಳ್ದರಿಂದ್ರಾದಿ ಸುರರು ||34||

1.9.34_43

ಸಂಧಿ ೯ ಕ್ಕೆ ಪದ್ಯ೪೭೧.

1.9.34_44

ಹೋಗಿ

1.9.34_45

<ಜೈಮಿನಿ ಭಾರತ/ಎಂಟನೆಯ ಸಂಧಿ
ಜೈಮಿನಿ ಭಾರತ/ಹತ್ತನೆಯ ಸಂಧಿ>

1.9.34_46

ನೋಡಿ

1.9.34_47

ಜೈಮಿನಿ ಭಾರತ-ಸಂಧಿಗಳು*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

1.9.34_48

ಪರಿವಿಡಿ

1.9.34_49

ಉಲ್ಲೇಖ

1.9.34_50

ವರ್ಗಕನ್ನಡ ಸಾಹಿತ್ಯ
ವರ್ಗಹಳಗನ್ನಡ ಸಾಹಿತ್ಯ