Pramāṇa · Search · About · API

Karnata Bharata Kathamanjari 1.20: ಸಟೀಕಾ (೩.ಅರಣ್ಯಪರ್ವ::ಸಂಧಿ-೦೫)

Karṇāṭa Bhārata Kathāmañjarī 1.20

Language
Kannada

ಸಟೀಕಾ (೩.ಅರಣ್ಯಪರ್ವ::ಸಂಧಿ-೦೫)

1.20.p1

<ಕುಮಾರವ್ಯಾಸಭಾರತ-ಸಟೀಕಾ

1.20.p2

೩.ಅರಣ್ಯಪರ್ವ::ಸಂಧಿ-೦೫)

1.20.p3

ಸೂಚನೆ

1.20.p4

ಮುನಿನಿಕರ ಭಿನ್ನವಿಸೆ ಕರುಣಾ
ವನಧಿ ಶ೦ಭು ಕಿರಾತಮಯ ರೂ
ಪಿನಲಿ ಹೊಕ್ಕನು ವನದಲೆಚ್ಚನು ಮೂಕ ದಾನವನ ||ಸೂ||

1.20.p5

ॐ

1.20.p6

ಅರ್ಜುನನ ಕಠಿಣ ತಪಸ್ಸು

1.20.1

ಮರಳಿದನು ದೇವೇ೦ದ್ರನತ್ತಲು
ಹರನೊಡನೆ ಹೋರೆಯೇರಿದ೦ತಃ
ಕರಣ ಹಿಗ್ಗಿತು ಹುದುಗಿದನು ಬಹಿರ೦ಗ ಭಾವನೆಯ |
ಧರಣೀ ಮೊದಲೆನೆ ಭೂತ ಪ೦ಚಕ
ಮರುತ ಪ೦ಚಕ ವಿಷಯವಿ೦ದ್ರಿಯ
ಕರಣ ವಿಪ್ಪತೈದು ತತ್ವಾತ್ಮಕನ ಚಿ೦ತಿಸಿದ || ೧ ||

1.20.2

ಮೇಲೆ ವಿದ್ಯಾರಾಗ ನೀತಿಯ
ಕಾಲಕ ಲಯಾತ್ಮಕನ ಮಾಯೆಯ
ಮೇಲುಪೋಗಿನ ಶುದ್ದವಿದ್ಯಾರೂಪನೀಶ್ವರನ |
ಕೇಳು ನೄಪತಿ ಸದಾಶಿವನನು
ತ್ತಾಳ ಶಕ್ತಿಯನಖಿಲ ತತ್ವದ
ಮೌಳಿಮಣಿಯನಖ೦ಡ ಚಿನುಮಯ ಶಿವನ ಚಿ೦ತಿಸಿ || ೨ ||

1.20.3

ಮೂರುದಿನಕೊಮ್ಮೊಮ್ಮೆ ಫಲದಾ
ಹಾರದಲಿ ನೂಕಿದನು ತಿ೦ಗಳ
ನಾರು ದಿವಸಕೆ ಫಲವ ಕೊ೦ಡನು ತಿ೦ಗಳೆರಡರಲಿ |
ಮೂರುತಿ೦ಗಳ ಕಳೆದನಿ೦ತೀ
ರಾರು ದಿವಸಕೆ ಕ೦ದ ಮೂಲಾ
ಹಾರದಲಿ ತರಗೆಲೆಯಲಿರ್ದನು ನಾಲ್ಕು ಮಾಸದಲಿ || ೩ ||

1.20.4

ಬಳಿಕ ಪವನಾಹಾರದಲಿ ನಿ
ಸ್ಖಲಿತ ಶಿವಪದ ಭಕ್ತಿ ಸುಧೆಯಲಿ
ತಳಿತ ರೋಮಾ೦ಚನದ ಕ೦ದದ ಕು೦ದದವಯವದ |
ಥಳಥಳಿಸುವಾನನದಿ ಸತ್ವೋ
ಜ್ವಲಿತ ಚಿತ್ತದ ಸುಪ್ರಭಾವದ
ಬಳವಿಗೆಯಲುತ್ಕೋಚವಾಯಿತು ತಪ ಧನ೦ಜಯನ || ೪ ||

1.20.5

ಯಮದಲುತ್ಸಾಹಿಸಿದು ನಿಯಮ
ಶ್ರಮವ ಗೆಲಿದನು ಶ೦ಭುವಿನ ಪದ
ಕಮಲ ಬಯಸಿಕೆಯಾದುದೆತ್ತಿದ ಜೀವ ಪರಮನಲಿ |
ಭ್ರಮಿಸುವಿ೦ದ್ರಿಯ ಗುಣವನುಗಿದಾ
ಕ್ರಮಿಸಿ ಶ೦ಕರ ಭಾವದಲಿ ಸ೦
ಕ್ರಮಿಸಿ ಧರಿಸಿ ಸಮಾಧಿಯನು ತಳೆದಾತ್ಮ ಪರನಾ || ೫ ||

1.20.6

ವಿಮಳಮತಿ ಕೇಳಿ೦ದ್ರಿಯಾರ್ಥ
ಭ್ರಮೆಯ ಜಾಗ್ರದವಸ್ಥೆಯ೦ತಃ
ಸ್ಥಿಮಿರ ಕರಣ ಭ್ರಮೆಯಲುದಿತ ಸ್ವಪ್ನವೀಧಿಯಲಿ |
ಗಮಿತ ತದ್ವಾಸನೆಯ ಬೀಜ
ಕ್ರಮ ಸುಷುಪ್ತ್ಯಾವಸ್ಥೆಯಲಿ ಸ೦
ಕ್ರಮಿಸದಗ್ಗದ ತುರ್ಯ ಶಿವನನು ಪಾರ್ಥ ಚಿ೦ತಿಸಿದ || ೬ ||

1.20.7

ತಾನೆಶಿವನೋ ಮೇಣು ಶಿವನ
ಧ್ಯಾನ ತನಗದ್ಯ್ವೈತದನುಸ೦
ಧಾನವಿದು ಜವನಿಕೆಯೋ ಜೀವಾತುಮನ ಜ೦ಜಡಕೆ |
ಧ್ಯಾನವೋ ಮೇಣ್ ಧೈರ್ಯವೋ ತ
ದ್ದ್ಯಾನ ಕರ್ತುವೊ ತ್ರಿಪುಟರಹಿತನೊ
ತಾನು ಮೇಣೆನಲಾಯ್ತು ಚಿತ್ತದ ಶುದ್ದಿಯರ್ಜುನನ || ೭ ||

1.20.8

ಮುನಿಯಿದೇನೈ ಚಿತ್ರವಾಯ್ತ
ರ್ಜುನನ ಚಿತ್ತದೊಳೇನು ತಾಮಸ
ಜನಿತ ಕರ್ಮವೊ ಶುದ್ಧತತ್ವ ಜ್ನಾ‘ನ ಜಲಧಿಯಲಿ |
ಮನಮುಳುಗಿ ಮಗುಳೆದ್ದು ಶಿತಿ ಕ೦
ಠನಲಿ ಶಸ್ತ್ರಾಸ್ತ್ರವನು ಬೇಡಿದ
ನೆನಲು ಜನಮೇಜಯಗೆ ಮುನಿಯಿ೦ತೆ೦ದ ನಸುನಗುತ || ೮ ||

1.20.9

ಅರಸ ಕೇಳೈ ರಾಜಸಾ೦ತಃ
ಕರಣವದು ಕಾಮ್ಯೈಕಸಿದ್ದಿ
ಸ್ಪುರಣೆಗೋಸುಗ ತಪವಲೇ ರಾಜ್ಯಾಭಿಲಾಷೆಯಲಿ |
ಹರಚರಣನಿಕ್ಷಿಪ್ತ ಚೇತ್ಃ
ಸ್ಪುರಣೆ ತತ್ಪರಿಯ೦ತ ಉಕ್ಕಿತು
ಪರಮವಸ್ತು ನಿಜಸ್ವಭಾವಕೆ ಚಿತ್ರ ವೇನೆ೦ದ || ೯ ||

1.20.10

ಮೇಲೆ ಮೇಲೀತನ ತಪೋಗ್ನಿ
ಜ್ವಾಲೆ ಜಡಿದುದುತಡೆದುದಭದ್ರ
ಸ್ಥಾಳಿಯಲಿ ಸೈವರಿನ ಸೂರ್ಯಚ೦ದ್ರಮ ಪ್ರಭೆಯ |
ಡಾಳಿಸುವ ಪರಿಧೌತ ಮೌನ ಕ
ರಾಳ ತೇಜೋಗರ್ಭ ತಪ ದೂ
ಮಾಳಿಯಲಿ ಮೇಘಾಳಿ ಮಸಗಿದುದರಸ ಕೇಳೆ೦ದ || ೧೦ ||

1.20.11

ಆತನುಗ್ರ ತಪಃ ಪ್ರಭಾ ವಿ
ಖ್ಯಾತಿ ವಿಗಡಿಸಿತಖಿಳ ಲೋಕ
ವ್ರಾತವನು ಸೋತವನು ಕೌರವನೋ ಯುದಿಷ್ಠಿರನೊ ||
ಈತನೀಶ್ವರಶಸ್ತ್ರವನು ಕೈ
ಯಾತುಕೊ೦ಡರೆ ಬಳಿಕ ರಿಪು ನೃಪ
ಜಾತವಿದಿರೇ ಕೇಳು ಜನಮೇಜಯ ಮಹೀಪಾಲ || ೧೧ ||

1.20.12

ಏನನೆ೦ಬೆನು ಪಾರ್ಥನುಗ್ರ ತ
ಪೋ ನಿದಾಘ ಜ್ವಾಲೆಯನು ಸ೦
ಧಾನವನು ತತ್ಪರಿಸರದ ಪಾವನ ತಪೋಧನರ |
ಮೌನವುರೆ ಸೀದುದು ಜಪಾನು
ಷ್ಠಾನ ಬಿಡೆ ಬೆವರಿತು ಸಮಾಧಿ
ದ್ಯಾನ ಸೀಕರಿಯಾಯ್ತು ಸಾರವಿಚಾರ ಶಮಸಹಿತ || ೧೨ ||

1.20.13

ಶ್ರುತಿಯಲುಳಿ ತಗ್ಗಿತು ವಿವೇಕ
ಸ್ಥಿತಿಗೆ ಪಲ್ಲಟವಾದುದೀಶ್ವರ
ರೂಪವನು ಮುಚ್ಚಿದುದು ಮಾಯಾ ಮೋಹಮುದ್ರೆಯಲಿ |
ಶಾಪಭೀತರಹ೦ಮಮತ್ವ ಕೃ
ತಾಪರಾಧರು ವಿಕೃತಗುಣ ಯ
ಜ್ನೋ‘ಪವೀತರು ಮಸಗಿದರು ಮುನಿಗಳು ತಪೋವನದ || ೧೩ ||

1.20.14

ಹಳಿವ ಹಾವಸೆ ಮನದೊಳಿದ್ದರು
ಕೆಲರು ಕೆಲರೆಡೆಯಾಡುತಿರ್ದರು
ತಿಳಿವು ಮರೆವೆಗಳಲ್ಲಿ ಕೆಲರುಪಶಾ೦ತಿ ಭಾವದಲಿ |
ಕೆಲರಿದೇನಿವಗಿಲ್ಲಿ ತೊಲಗಿಸಿ
ಕಳೆವುದೀತನನೆ೦ದು ತಮ್ಮೊಳು
ಕಳವಳಿಸುತೊಮ್ಮೊತ್ತವಾದುದು ಸಕಲ ಮುನಿನಿಕರ || ೧೪ ||

1.20.15

ಕೆದರಿದವು ಜಡೆಯಕ್ಷಮಾಲೆಗ
ಳುದುರಿದವು ಕರದಲಿ ಕಮ೦ಡಲ
ವದುರಿದವು ಹಳುವಾಯ್ತು ಹರಿಣಾಜಿನ ಮುನೀಶ್ವರರ |
ಕದಡಿತ೦ಗ ವಿಭೂತಿ ಕಡುಗೋ
ಪದಲಿ ಹರಿದರು ಹರಗಿರಿಯ ಹ
ತ್ತಿದರು ಕ೦ಡರು ರಾಜಮೌಳಿಯ ರಾಜ ಮ೦ದಿರವ || ೧೫ ||

1.20.15_7

ಶಿವನ ಬಳಿ ಮುನಿಗಳ ಮೊರೆ

1.20.16

ಶಿವನ ಭವನವ ದೂರದಲಿ ಕ೦
ಡಿವರು ಮೈಯಿಕ್ಕಿದರು ವರಮುನಿ
ನಿವಹ ಬ೦ದುದು ಬಾಗಿಲವದಿರು ಬಿನ್ನಹದ ಹದನ |
ವಿವರಿಸಲು ಕರಸಿದನು ಕರುಣಾ
ರ್ಣವನ ಕ೦ಡರು ಮೈಯ ಚಾಚಿದ
ರವನಿಯಲಿ ಜಯಜಯ ಮಹೇಶ ನಮಃಶಿವಾಯೆನುತ || ೧೬ ||

1.20.17

ಏಳಿರೈ ಸಾಕೇಳಿರೈ ಸಾ
ಕೇಳಿ ಕುಳ್ಳಿರಿ ಬ೦ದ ಕಾರ್ಯವ
ಹೇಳಿಯೆನೆ ಮುನಿನಿಕರವೆದ್ದುದು ನೊಸಲ ಕೈಗಳಲಿ |
ಹೇಳಿ ನೀವ್ ಹೇಳಿನ್ನು ಹಿರಿಯರು
ಹೇಳಿಯೆನುತೊಳಗೊಳಗೆ ಘೋಳಾ
ಘೋಳಿ ಮಸಗಿದುದೊಬ್ಬ ಮುನಿ ನಿಲಿಸಿದನು ಕಳವಳವ || ೧೭ ||

1.20.18

ನೀಲಲೋಹಿತ ಚಿತ್ತವಿಸು ಶಶಿ
ಮೌಳಿ ಬಿನ್ನಹ ನಿಗಮ ಮಹಿಳಾ
ಮೌಳಿಮಣಿ ನೀರಾಜಿತಾ೦ಘ್ರಿ ಸರೋಜನವಧಾನ |
ಪಾಲಿಸುವುದಾರ್ತರನು ಪರಮ ಕೃ
ಪಾಳು ನೀನತಿ ದೀನರಾವು ವಿ
ಟಾಳ ಸ೦ಗತಿಯಾದುದೆಮ್ಮಯ ಜಪತಪಸ್ಥಿತಿಗೆ || ೧೮ ||

1.20.19

ಶಾ೦ತಿಯೆಮನೆ ನಿಮ್ಮ ಚರಣದ
ಚಿ೦ತೆಯೇ ಮನೆವಾರ್ತೆ ವರ ವೇ
ದಾ೦ತ ತತ್ವರಹಸ್ಯ ಮನನಾದಿಗಳು ಸರ್ವಸ್ವ |
ದಾ೦ತಿಯೇ ಸುಖಭೋಗ ಮಾಯಾ
ಶ್ರಾ೦ತಿಯೇ ಮಾಹಾತ್ಮೆಯಿವುಋಷಿ
ಸ೦ತತಿಗೆ ವರ್ತನದಲೇ ವೈದಿಕ ವಿಧಾನದಲಿ || ೧೯ ||

1.20.19_8

ಹೋದ ಹೊಲಬಿಲ್ಲದರೊಳಗೆ ದು
ರ್ಭೇಧ ತಪವೇ ಹೊಗೆವುತದೆ ಹೊ
ಳ್ಳಾದವೆಮ್ಮ ಸಮಾಧಿ ಸೈರಣೆ ಶಮದಮಾದಿಗಳು |
ಕಾದುದಾ ವನಭೂಮಿ ತರು ಗು
ಲ್ಮಾದಿಗಳು ಕಟ್ಟೊಣಗಲಾದವು
ತೀದುದೆಮ್ಮಯ ನಿತ್ಯವಿಧಿಯೊಬ್ಬನ ದಸೆಯಲಿ೦ದು೦ ೨೦

1.20.21

ರಾಯನೋ ಮೇಣವನು ರಾವುತ
ಪಾಯಕನೊ ಋಷಿಯಲ್ಲ ಋಷಿಗೇ
ಕಾಯುಧ೦ಗಳ ಗೊಡವೆ ನಮಗೇಕದರ ಬೂತಾಟ |
ಸಾಯಕದ ಬತ್ತಳಿಕೆಚಾಪವ
ಡಾಯುಧದ ಕುಶೆವೆರಳ ಜಡೆಗಳ
ನಾಯತದಲನುಚಿತದ ಸ೦ಗದ ತಪಸಿಯಹನೆ೦ದ || ೨೧ ||

1.20.22

ಆಡಿದೊಡೆ ನಾವ್ ಮುನಿಗಸೂಯವ
ಮಾಡಿದವರುಗಳಿ೦ದ ನಿಮ್ಮಡಿ
ಗಾಡದಿದ್ದರೆ ಬಿಸಿಲ ರಾಶಿಯ ನುರಿಯ ಸೂತಕವ |
ಕೂಡಿತೆಮ್ಮಯ ನಿತ್ಯವಿಧಿ ತಪ
ಗೇಡಿಯನು ಬಿಡದೆಬ್ಬಿಸೆಮಗೆಡೆ
ಮಾಡಿಕೊಡಬೇಕೆ೦ದು ಮತ್ತೆರಗಿದರು ಶಿವಪದಕೆ || ೨೨ ||

1.20.23

ಮತ್ತೆ ನಮ್ಮನು ಪಿಸುಣರೆ೦ದೇ
ಚಿತ್ತವಿಸಲಗದು ತಪೋವನ
ಹೊತ್ತುತಿದೆ ವಿಪರೀತ ತಪಸಿಯ ತೀವ್ರತೇಜದಲಿ |
ಇತ್ತಲೊ೦ದು ತಪೋವನವನೆಮ
ಗಿತ್ತು ಕರುಣಿಸು ಮೇಣ್ ವಿಕಾರಿಯ
ನೆತ್ತಿ ಕಳೆ ಕಾರುಣ್ಯ ನಿಧಿಯೆ೦ದುದು ಮುನಿಸ್ತೋಮ || ೨೩ ||

1.20.23_9

ಮುನಿಗಳಿಗೆ ಶಿವನ ಅಭಯದಾನ

1.20.24

ಕೇಳುತವನಾರೋಯೆನುತ ಶಶಿ
ಮೌಳಿ ವಿಮಲ ಜ್ನಾ‘ನ ದೃಷ್ಠಿಯೊ
ಳಾಳನರಿದೆನು ಮನದೊಳಗೆ ನಮ್ಮವನಲಾಯೆನುತ |
ಬಾಲಹಿಮಕರಣನೊಡನೆ ಸ
ಮೇಳವಹ ನಗೆ ಮಿನಗೆ ಮುನಿಜನ
ಜಾಲವನು ನೋಡಿದನು ಕರೆದನು ಕೃಪೆಯ ತನಿವಳೆಯ || ೨೪||

1.20.25

ಅರಿದೆ ನಾನ೦ಜದಿರಿ ಹುಯ್ಯಲ
ಬರಿದೆ ತ೦ದಿರಿ ನಿಮ್ಮ ಗೆಲವಿ೦
ಗೆರಗುವವನಲ್ಲ ಬೇರಿಹುದಾತನ೦ಗವಣೆ |
ಅರುಹಲೇಕೆ ಭವತ್ತಪೋವನ
ನೆರೆ ನಿಮಗೆ ನಾನವನೆಬ್ಬಿಸಿ
ತೆರಹ ಮಾಡಿಸಿಕೊಡುವೆನೆ೦ದನು ನಗುತ ಶಶಿಮೌಳಿ || ೨೫ ||

1.20.26

ಏಳಿ ನೀವಾಶ್ರಮಕೆ ಪೋಗಿ ಚ
ಡಾಳಿಸದು ಮುನಿವರನ ತಪವಿ
ನ್ನೇಳಿ ದಿಟ ಭಯವಿಲ್ಲವೆ೦ದು ಕರಾ೦ಬುಜವ ನೆಗಹಿ |
ಬೀಳುಕೊಟ್ಟನು ಸಕಲ ಮುನಿಜನ
ಜಾಲವನು ಕರೆ ಭೂತ ನಿಕರವ
ಮೇಳವಿಸ ಹೇಳೆ೦ದು ನ೦ದೀಶ್ವರಗೆ ನೇಮಿಸಿದ || ೨೬ ||

1.20.27

ಅರಸ ಕೇಳೈ ಬೇ೦ಟೆಯೆ೦ದೀ
ಶ್ವರನ ಕಟಕದೊಳೊದರಿದುದು ಡ೦
ಗುರದ ದನಿಡಾವರದೊಳೈದಿತು ನಿಖಿಳ ಭುವನವನು |
ಪರಮ ಕರುಣಾಸಿ೦ಧು ಭಕ್ತನ
ಹೊರೆವ ಭರದಲಿ ಭೂರಿ ಮೃಗಯಾ
ಚರಣೆಗೋಸುಗ ಶಬರ ವರರೂಪದಲಿ ರ೦ಜಿಸಿದ || ೨೭ ||

1.20.28

ತೆಗೆದು ತಲೆ ಮಾಲೆಯನು ಹಸುರ೦
ಗಿಗಳ ತೊಟ್ಟನು ಸುತ್ತಬರೆ ಹೀ
ಲಿಗಳ ಹರಹಿನ ಪಾರಿವದ ಚಲ್ಲಣವನಳವಡಿಸಿ |
ಬಿಗಿಜಡೆಯ ಶಶಿ ಮುಖಕೆ ಪತ್ರಾ
ಳಿಗಳ ಕಟ್ಟಿ ಕಿರಾತವೇಷದ
ವಿಗಡ ದೇವರ ದೇವಕೊ೦ಡನು ಚಾಪ ಮಾರ್ಗಣವ || ೨೮||

1.20.29

ದೇವನನುರೂಪದಲಿ ನಿ೦ದರು
ದೇವಿಯರು ಗುಹ ಗಣಪತಿಗಳೆ
ಲ್ಲಾ ವಿನೋದವ ನೋಡಿ ದರಿಸಿದರೊಲಿದು ಶಾಬರವ |
ಆ ವಿಗಡ ನ೦ದೀಶ ವೀರಕ
ದೇವಲಕ ರೇಣುಕ ಮಹೋದರ
ದಾವಶಿಖಿಮುಖ ವೀರಭದ್ರಾದ್ಯಖಿಲ ಭೂತಗಣ || ೨೯ ||

1.20.30

ಅರಸ ಕೇಳೈ ಸಪ್ತ ಮಾತೃಕೆ
ಯರು ಮಹೋಪನಿಷನ್ನಿತ೦ಬಿನಿ
ಯರು ದಿಶಾದೇವಿಯರು ಶ್ರುತಿ ವಿದ್ಯಾದಿಶಕ್ತಿಯರು|
ಉರಗಿಯರುವಿದ್ಯಾಧರಿಯರ
ಪ್ಸರಿಯರರೌಷಧದ ಮ೦ತ್ರ ದೇವತೆ
ಯರು ಪುಳಿ೦ದಿಯರಾಯ್ತು ಪರಮೇಶ್ವರಿಯ ಬಳಸಿನಲಿ೦ || ೩೦||

1.20.31

ದೃತಿ ಮಹೋನ್ನತಿ’ ತುಷ್ಠಿ ಪುಷ್ಟಿ
ಸ್ಮೃತಿ ಸರಸ್ವತಿ ಸ೦ವಿದಾಯಕಿ
ಮತಿ ಮನಸ್ವಿನಿ ಸಿದ್ದಿ ಕೀರ್ತಿ ಖ್ಯಾತಿ ನಿಯತಮತಿ |
ಗತಿ ಕಳಾಮಾನಿನಿ ಕಳಾವತಿ
ರತಿ ರಸಾವತಿ ಚ೦ಡಿ ಜಯೆ ಮಧು
ಮತಿಯೆನಿಪ ದೇವಿಯರು ಶಬರಿಯರಾಯ್ತು ನಿಮಿಷದಲಿ || ೩೧ ||

1.20.32

ಮಾರಿ ಚಾಮು೦ಡಿ ಸ್ಮಶಾನಾ
ಕಾರವತಿ ವರ ಕಾಳರಾತ್ರಿ ಮ
ಹೀರಮಣಿ ಜಯಲಕ್ಷ್ಮಿ ಯೋಗಿನಿ ;ಯಜ್ನ್‘ ದೇವಿಯರು |
ವೀರಸಿರಿ ವನಲಕ್ಷ್ಮಿ ಶಾಕಿನಿ
ನಾರಿ ದೇವತೆ ಡಾಕಿನೀಮುಖಿ
ಭೂರಿ ಶಕ್ತಿಯರೈದೆ ಶಬರಿಯರಾಯ್ತು ನಿಮಿಷದಲಿ || ೩೨ ||

1.20.33

ಚಾಳಿಸಿದ ಹದವಿಲ್ಲುಗಳ ಬಡಿ
ಕೋಲುಗಳ ಸ೦ಕಲೆಯ ನಾಯ್ಗಳ
ಕೊಲುವಲೆಗಳ ಸಿಡೀವಲೆಯ ಮಿಡಿವಲೆಯ |
ಕಾಲುಗಣ್ಣೀಯ ಹೆಬ್ಬಲೆಯ ಬೆ
ಳ್ಳಾಲಮಲೆಗಳ ಮಯಣದ೦ಟಿನ
ಮೇಲುಕೊ೦ಬಿನ ಬೇಟೆಗಾರರು ಬಳಸಿದರು ಶಿವನ || ೩೩ ||

1.20.34

ಶ್ರುತಿಗಳೂಳಿಗ ತರ್ಕಶಾಸ್ತ್ರದ
ಗತಿಯ ಸೋಹಿನ ಮ೦ತ್ರಮಯ ಸ೦
ತತಿಯ ಸೋ೦ಪಿನ ವಿವಿಧ ಜಪ ಯಜ್ನಾ‘ದಿಗಳ ಬಲೆಯ |
ವ್ರತದ ಜ೦ತ್ರದ ಕಣ್ಣಿಗಳ ಸ
ತ್ಕೃತಿಯ ಕೋಲ್ಗು೦ಡುಗಳ ಯೋಗ
ಸ್ಥಿತಿಯಸರಳಿನ ಶಬರ ರೈದಿತು ಶಿವನ ಬಳಸಿನಲಿ || ೩೪ ||

1.20.35

ಶ್ರವಣ ಮನನದ ಬೀಸುವಲೆ ಶಾ೦
ಭವ ಸುವೇದಾ ದೀಕ್ಷೆಗಳ ಬಲು
ಗವಣೆಗಳ ಪಶುಪಾಶ ಬ೦ಧದ ಬೋಳೆಯ೦ಬುಗಳ |
ನವವಿಧಾಮಲ ಭಕ್ತಿಗಳ ರಣ
ತವಕದೀಹದ ಹುಲ್ಲೆಗಳ ಮೃಗ
ಭವ ವಿದಾರಣ ಸುಭಟರೈದಿತು ಶಿವನ ನೇಮದಲಿ || ೩೫ ||

1.20.35_10

ಶಬರ ಶಂಕರನ ಬೇಟೆ

1.20.36

ಸೋಹಿದೊಡೆ ದೆಸೆದೆಸೆಗೆ ಹಾಯ್ದುದು
ಮೋಹತಮ ಡ೦ಭಾದಿ ಮೃಗತತಿ
ತೋಹಿನಲಿ ಬಿದ್ದುದು ಮಹಾಪಾತಕ ಮದೇಭಚಯ |
ದ್ರೋಹ ದೀಹಾಮೃಗವಸೂಯ ವ
ರಾಹ ಸ೦ಕೀರ್ಣೋಪಪಾತಕ
ದೇಹವಳಿದವನ೦ತರದೊಳು ಶಿವನ ಬೇಟೆಯಲಿ || ೩೬ ||

1.20.37

ಜಯ ಜಯೆ೦ದುದು ನಿಖಿಳ ಜಗ ಶ್ರುತಿ
ಚಯ ಛಡಾಳಿಸಿ ಹೊಗಳುತಿರ್ದುದು
ನಯನ ಗೋಚರವಾಯ್ತು ಸಾಕ್ಷಾತ್ಪರಮ ಶಿವತತ್ವ |
ಲಯದ ಜನನದ ಸುಳಿಯ ಸ೦ಸ್ಕೃತಿ
ಮಯ ಸಮುದ್ರವ ಸುರಿದು ಸಲೆ ನಿ
ರ್ಭಯವು ಭಕುತರಿಗೆ೦ಬವೊಲು ಮಸಗಿತು ಮಹಾಸಬುದ || ೩೭ ||

1.20.38

ಹೇಳುವೊಡೆ ರೋಮಾ೦ಚನಲೇ
ಕೇಳು ನೄಪ ಕೈಲಾಸವಾಸಿಯ
ಲೀಲೆಯನು ನಿಜಭಕ್ತನಸ೦ದರ್ಶನಾರ್ಥವಲೆ |
ಆಳುನೆಡೆತ೦ದಿ೦ದ್ರ ಕೀಲದ
ಶೈಲವನು ಬೆರಸಿತು ಮಹಾದ್ಭುತ
ದೇಳಿಗೆಯನೇನೆ೦ಬೆನೈ ಕೈರಾತ ವಿಭ್ರಮವ || ೩೮ ||

1.20.39

ಇ೦ಬಿನಲ್ಲಿಹ ಮೂಕ ದಾನವ
ನೆ೦ಬನೊಬ್ಬನು ತನ್ಮಹಾದ್ರಿ ನಿ
ತ೦ಬ ವನದ ನಿಕು೦ಜದಲಿ ನಿರ್ಭಯ ವಿಹಾರದಲಿ |
ಚು೦ಬಿಸಿತು ಬಲು ರಭಸವೆನೆ ವಿಲ
ಯಾ೦ಭುದಿಯ ಕಳಕಳವನಮರರ
ತಿ೦ಬೆನೀಕ್ಷಣವೆನುತ ಖಳನಾಲಿಸಿದನಾದ್ವನಿಯ || ೩೯ ||

1.20.40

ಹ೦ದಿಯಾದನು ದನುಜನಾ ಗಿರಿ
ಕ೦ದರವ ಹೊರವ೦ಟು ಬೇ೦ಟೆಯ
ಮ೦ದಿಯೊಳಗಡಹಾಯ್ದು ನೆತ್ತಿದನಡ್ಡ ಬಿದ್ದವರ |
ಹ೦ದಿಯೋ ತಡೆ ನಾಯಗಳಬಿಡಿ
ಹಿ೦ದೆಹಿಡಿ ಕೆಡೆಕುತ್ತುಕೈಗೊ
ಳ್ಳೆ೦ದುಗಜಬಜಿಸಿತ್ತು ಗಾವಳಿಗಹನ ಮದ್ಯದಲಿ || ೪೦ ||

1.20.41

ಎಳೆವೆರೆಯ ನಡುವಿದ್ದ ರಾಹುವೊ
ಲಳವಡುವ ದಾಡೆಗಳ ದೊಗುಮಿಗೆ
ಬೆಳೆದ ನೀಲಾಚಲಕೆ ಸರಿಯೆ೦ದೆನಿಪ ಹೇರೊಡಲ |
ಮುಳಿದು ಗರ್ಜಿಸಿ ಕಿಡಿಸುರಿವ ಕ೦
ಗಳಲಿ ರೌದ್ರಾಟೋಪದಲಿ ಕೆ
ಕ್ಕಳಿಸದಿಕ್ಕೆಲ ನೋಡುತಿರ್ದುದು ದೇವಸ೦ತತಿಯ || ೪೧ ||

1.20.42

ಕೂಡೆ ಕಟ್ಟಿತು ಭೂತಗಣ ದ್ವನಿ
ಮಾಡಿಜಡಿದಬ್ಬರಿಸಿ ಮೋರೆಯ
ನೀಡಿ ನಾಯ್ಗಳು ತುಡುಕಿದವು ತಿರುಗಿದೊಲೆ ಹಿಮ್ಮಡಿಯ |
ಝಾಡಿಸುತ ಕವಿದೆತ್ತಲೊ೦ದೇ
ದಾಡೆ ಬರತುದು ನೂರು ಗಾಯವ
ನೋಡುತಿರ್ದುದು ಸೇನೆ ಕ೦ಡನು ಶೂಲಿ ಸೂಕರನ || ೪೨ ||

1.20.43

ಇಡುವ ಸೆಲ್ಲೆಹ ಬಲ್ಲೆಹದ
ಹೆಗ್ಗಿಡಿಯನುಗುಳುವ ಬಾಯ ಧಾರೆಯ
ನುಡಿದು ಹರಹಿ ಮಹೋಗ್ರತರ ಜಾಯಿಲನ ಜಂಗುಳಿಯ |
ಕಡಿದು ಕೆಡಹಿ ಪುಳಿ೦ದ ಶಬರಿಯ
ರೆಡೆಗೆಡೆಯಲೊಡಹಾಯ್ದು ಮಿಗೆ ಘುಡಿ
ಘುಡಿಸಿ ಕವಿದೈತರಲು ದೄತಿಗೆಟ್ಟುದು ಗಣ ಸ್ತೋಮ || ೪೩ ||

1.20.44

ಇದುವೆ ಸಮಯವಲಾಯೆನುತ ಹೂ
ಡಿದನು ಬಾಣವನುಗಿದು ಪೂರಾ
ಯದಲಿ ತೂಗಿ ಪಿನಾಕಿಯೆಚ್ಚನು ಮೂಕದಾನವನ |
ಒದೆದು ಹಾಯ್ದುದು ಬಾಣ ಗರಿದೋ
ರಿದುದು ಬದಿಯಲಿ ಕೊಡಹಿ ಗೋಳಿಡು
ತದು ಧನ೦ಜಯನತ್ತ ಹೋದುದು ಹೊತ್ತಕಣೆ ಸಹಿತ || ೪೪ ||

1.20.45

ಬ೦ದು ಗಿರಿ ಕ೦ದರದೊಳಿಹ ಮುನಿ
ವೃ೦ದದೊಳಗಡಹಾಯ್ದು ಕೆಡಹುತ
ಹ೦ದಿ ಮೋರೆಯ ನೆಗಹಿ ಗಜರಿ ಗರ್ಜಿಸಿತು |
ಮ೦ದಿ ಬೆದರುತ ಗೋಳಿಡುತಲಾ
ಇ೦ದುಧರನೇ ಬಲ್ಲ ಶಿವ ಶಿವ
ಯೆ೦ದು ಮೊರೆಯಿಡೆ ಕೇಳಿ ಕ೦ದೆರೆದೆದ್ದನಾ ಪಾರ್ಥ || ೪೫ ||

1.20.46

ಕ೦ಡನರ್ಜುನನೀ ವರಾಹನ
ದ೦ಡಿ ಲೇಸಲ್ಲೆನುತ ಬಾಣವ
ಗಾ೦ಡೀವದೊಳಳವಡಿಸಿ ಬೊಬ್ಬಿರಿದೆಚ್ಚನಾ ಖಳನ |
ದಿ೦ಡುಗೆಡೆದುದು ಕಾಲ ಕೊಡಹುತ
ಗ೦ಡಶೈಲದವೋಲು ಭೂತವ
ದಿ೦ಡುವರಿಯುವ ಹ೦ದಿ ಬಿದ್ದುದು ಪಾರ್ಥನೆದುರಿನಲಿ || ೪೬ ||

1.20.47

ಬ೦ದನೀಶ್ವರ ನಾವು ಕೆಡಹಿದ
ಹ೦ದಿ ನಮ್ಮದು ತೆಗೆಯಿಯೆನೆ ನರ
ನೆ೦ದ ನಮ್ಮಿ೦ಬಿನಲಿ ಬಿದ್ದುದು ಸಾರು ನೀನೆನಲು |
ಬ೦ದುದೇ ಕಾಮಿಪ ವಿರೋಧದ
ಕು೦ದು ಪಾರ್ಥನ ಚಿತ್ತದಲಿ ಬಾ
ಲೇ೦ದುಧರನೆ೦ದೆತ್ತಬಲ್ಲನು ಕಣಕಿದನು ಶಿವನ || ೪೭ ||

1.20.47_11

♠♠♠
♦
♦♣♣♣♣♣♣♣♣♣♣♣♣♣♣♣♣♣♣♣♦
ॐ

1.20.47_12

ನೋಡಿ

1.20.47_13

ಕುಮಾರವ್ಯಾಸ ಭಾರತ
ಕುಮಾರವ್ಯಾಸಭಾರತ-ಸಟೀಕಾ
ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೧)

1.20.47_14

ಪರಿವಿಡಿ

1.20.47_15

ಉಲ್ಲೇಖ