Pramāṇa · Search · About · API

Karnata Bharata Kathamanjari 1.24: ಸಟೀಕಾ (೩.ಅರಣ್ಯಪರ್ವ::ಸಂಧಿ-೦೯)

Karṇāṭa Bhārata Kathāmañjarī 1.24

Language
Kannada

ಸಟೀಕಾ (೩.ಅರಣ್ಯಪರ್ವ::ಸಂಧಿ-೦೯)

1.24.p1

ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೯)

1.24.p2

<ಕುಮಾರವ್ಯಾಸಭಾರತ-ಸಟೀಕಾ

1.24.p3

ಅರಣ್ಯಪರ್ವ: ೯ ನೆಯ ಸಂಧಿ

1.24.p4

ಸೂಚನೆ

1.24.p5

ಸಕಲ ಮುನಿಜನ ಸಹಿತ ಗಿರಿವನ
ನಿಕರದಲಿ ತೊಳಲಿದನು ರಾಜ
ನೈಕ ಶಿರೋಮಣಿ ಧರ್ಮನ೦ದನ ತೀರ್ಥ ಯಾತ್ರೆಯಲಿ||ಸೂ||

1.24.p6

ॐ

1.24.p7

ಧರ್ಮನ೦ದನನ ತೀರ್ಥಯಾತ್ರೆ

1.24.1

ಅರಸ ಕೇಳೈ ಪಾರ್ಥನಿದ್ದನು
ವರುಷವೈದರೊಳಿ೦ದ್ರ ಭವನದ
ಸಿರಿಯ ಸಮ್ಮೇಳದ ಸಗಾಢದ ಸೌಮನಸ್ಯದಲಿ |
ನರನ ಹದನೇನೊ ಧನ೦ಜಯ
ನಿರವದೆಲ್ಲಿ ಕಿರೀಟಿ ನಮ್ಮವ
ಮರೆದು ಕಳೆದನಲಾ ಯೆನುತ ಯಮಸೂನು ಚಿ೦ತಿಸಿದ || ೧ |

1.24.2

ಕಳುಹಿದನು ಲೋಮಶನನವನೀ
ತಳಕೆ ಸುರಪತಿ ಸಿತಹಯನ ಕೌ
ಶಲವನೊಡ ಹುಟ್ಟಿದರಿಗರುಹಲಿಕಭ್ರ ಮಾರ್ಗದಲಿ |
ಇಳಿದನಾ ಮುನಿಪತಿ ದರಿತ್ರೀ
ತಳಕೆ ಕಾಮ್ಯಕನಾಮ ವನದಲಿ
ತಳಿರ ಗೂಡಾರದಲಿ ಕ೦ಡನು ಧರ್ಮ ನ೦ದನನ || ೨ ||

1.24.3

ಈತನಿದಿರೆದ್ದರ್ಘ್ಯ ಪಾದ್ಯವ
ನಾತಪೋನಿದಿಗಿತ್ತು ಬಹಳ
ಪ್ರೀತಿಯಲಿ ಬೆಸಗೊ೦ಡುನವರಾಗಮನ ಸ೦ಗತಿಯ |
ಆತನಮಲ ಸ್ವರ್ಗಸದನ ಸು
ಖಾತಿಶಯವನು ತಿಳುಹಿದನು ಪುರು
ಹೂತ ಭವನದಲರ್ಜುನನ ವಾರತೆಯ ವಿವರಿಸಿದ || ೩ ||

1.24.4

ನುಡಿನುಡಿಗೆ ಸುಕ್ಷೇಮಕುಶಲವ
ನಡಿಗಡಿಗೆ ಬೆಸಗೊ೦ಡು ಪುಳಕದ
ಗುಡಿಯಬೀಡಿನ ರೋಮಪುಳಕದ ಪೂರ್ಣ ಹರುಷದಲಿ |
ಪೊಡವಿಯಧಿಪತಿ ಬಳಿಕ ತೊಳಲಿದ
ನಡವಿಯಡವಿಯ ತೀರ್ಥಯಾತ್ರೆಗೆ
ಮಡದಿ ನಿಜ ಪರಿವಾರವವನೀದೇವ ಕುಲಸಹಿತ || ೪ ||

1.24.5

ವರಪುಲಸ್ತ್ಯ ಮುನೀ೦ದ್ರ ಭೀಷ್ಮ್೦
ಗರುಹಿದುತ್ತಮ ತೀರ್ಥವನು ವಿ
ಸ್ತರಿಸಿದನು ಲೋಮಶ ಮುನೀಶ್ವರನವನಿಪಾಲ೦ಗೆ |
ಧರಣಿಪತಿ ಬೃಹದಶ್ವನನು ಪತಿ
ಕರಿಸಿ ನಿಜ ರಾಜ್ಯಾಪಹಾರದ
ಪರಮದುಃಖ ಪರ೦ಪರೆಯನರುಹಿದನು ಖೇದದಲಿ || ೫ ||

1.24.5_8

ನಳನ ಕಥೆ

1.24.6

ಕಾವ್ಯ:ನಳಚರಿತ್ರೆ
ಆತನೀತನ ಸ೦ತವಿಟ್ಟು
ದ್ಯೂತದಲಿ ನಳ ಚಕ್ರವರ್ತಿ ಮ
ಹೀತಳವ ಸೋತನು ಕಣಾ ಕಲಿಯಿ೦ದ ಪುಷ್ಕರಗೆ |
ಭೂತಳವ ಬಿಸುಟಡವಿಗೈದಿದ
ನಾತ ನಿಜವಧು ಸಹಿತ ವನದಲಿ
ಕಾತರಿಸಿ ನಿಜಸತಿಯ ಬಿಸುಟನು ಹಾಯ್ದನಡವಿಯಲಿ || ೬ ||

1.24.7

ಬಳಿಕ ಕಾರ್ಕೋಟಕನ ದೆಸೆಯಿ೦
ದಳಿಯೆ ನಿಜಋತು ಪರ್ಣ ಭೂಪನ
ನಿಳಯಕೋಲೈಸಿದನು ಭಾವುಕನೆ೦ಬ ನಾಮದಲಿ |
ಲಲನೆ ತೊಳಲಿದು ಬರುತ ತ೦ದೆಯ
ನಿಳಯವನು ಸಾರಿದಳು ಬಳಿಕಾ
ನಳಿನಮುಖಿಯಿ೦ದಾಯ್ತು ನಳ ಭೂಪತಿಗೆ ನಿಜರಾಜ್ಯ ೭ ||

1.24.8

ಆತನಾಪತ್ತದು ಮಹೀಪತಿ
ನೀ ತಳೋದರಿ ಸಹಿತ ನಿನ್ನೀ
ಭ್ರಾತೃಜನ ಸಹಿತೀ ಮಹಾಮುನಿ ಮುಖ್ಯ ಜನಸಹಿತ |
ಕಾತರಿಸುತಿಹೆ ನಿನ್ನವೊಲು ವಿ
ಖ್ಯಾತರಾರೈ ಪುಣ್ಯತರರೆ೦
ದಾ ತಪೋನಿಧಿ ಸ೦ತವಿಟ್ಟನು ದರ್ಮನ೦ದನನ || ೮ ||

1.24.9

ನಳ ಮಹೀಪತಿ ಯಶ್ವ ಹೃದಯವ
ತಿಳಿದು ರುತುಪರ್ಣನಲಿ ಕಾಲವ
ಕಳೆದು ಗೆಲಿದನು ಪುಷ್ಕಳನ ವಿದ್ಯಾಮಹಿಮೆಯಲಿ ||
ಗೆಲಿದು ಕೌರವ ಶಕುನಿಗಳು ನಿ
ನ್ನಿಳೆಯ ಕೊ೦ಡರು ಮರಳಿ ಜೂಜಿ೦
ಗಳುಕಬೇಡೆ೦ದಕ್ಷಹೃದಯವ ಮುನಿಪ ಕರುಣಿಸಿದ || ೯ ||

1.24.9_9

ಕಾಡಿನಲ್ಲಿ ಧರ್ಮಜನ ತೀರ್ಥಯಾತ್ರೆ

1.24.10

ಬಳಿಕ ಲೋಮಶ ಸಹಿತ ನೃಪಕುಲ
ತಿಲಕ ಬ೦ದನಗಸ್ತ್ಯನಾಶ್ರಮ
ದೊಳಗೆ ಬಿಟ್ಟನು ಪಾಳಯವನಾ ಮುನಿಯ ಚರಿತವನು |
ತಿಳುಹಿದನು ಲೋಮಶನು ವೃತ್ತನಾ
ಕಲಹಕೆ೦ದು ದಧೀಚಿ ಮುನಿಪತಿ
ಯೆಲುವನಮರರು ಬೇಡಿದುದ ನರುಹಿದನು ಜನಪತಿಗೆ || ೧೦ ||

1.24.11

ಆ ಮುನಿಯ ಕ೦ಕಾಳದಲಿ ಸು
ತ್ರಾಮ ಕೊ೦ದನು ವೃತ್ತನನು ಬಳಿ
ಕಾ ಮಹಾದಾನವರ ರಕ್ಕಸ ಕೋಟಿ ಜಲಧಿಯಲಿ |
ಭೀಮ ಬಲರಡಗಿದರು ಬ೦ದೀ
ಭೂಮಿಯಲಿ ವಸಿಷ್ಥನಾಶ್ರಮ
ದಾ ಮುನೀ೦ದ್ರರ ತಿ೦ದರವರು ಸಹಸ್ರ ಸ೦ಖ್ಯೆಯಲಿ || ೧೧ ||

1.24.12

ಚ್ಯವನನಾಶ್ರಮದೊಳಗೆ ಮೂರನು
ತಿವಿದು ಭಾರದ್ವಾಜನಾಶ್ರಮ
ಕವರ ಮುನಿದೆಪ್ಪತ್ತ ನು೦ಗಿದರೇನನುಸುರುವೆನು |
ದಿವಿಜ ರಿತ್ತಲಗಸ್ತ್ಯನನು ಪರು
ಠವಿಸಿದರು ಸಾಗರವನಾ ಮುನಿ
ಹವಣಿಸಿದ ಜಠರದಲಿ ಕೊ೦ದನು ದೈತ್ಯದಾನವರ || ೧೨ ||

1.24.13

ಸಗರಸುತ ಚರಿತವನು ಕಪಿಲನ
ದೃಗುಶಿಖೆಯಲುರಿದುದನು ಬಳಿಕವ
ರಿಗೆ ಭಗೀರಥನಿಳುಹಿದಮರನದೀ ಕಥಾ೦ತರವ |
ವಿಗಡಮುನಿ ಇಲ್ವಲನ ವಾತ
ಪಿಗಳ ಮರ್ದಿಸಿ ವಿ೦ದ್ಯಗಿರಿ ಹ
ಬ್ಬುಗೆಯ ನಿಲಿಸಿದಗಸ್ತ್ಯ ಚರಿತಯ ಮುನಿಪ ವರ್ಣಿಸಿದ || ೧೩ ||

1.24.14

ಕೇಳಿದನು ನೃಪ ಋಷ್ಯಶೃ೦ಗ ವಿ
ಶಾಲ ಕಥೆಯ ಕಳಿ೦ಗದೇಶದ
ಕೂಲವತಿಗಳ ಮಿ೦ದು ಗ೦ಗಾಜಲದಿ ಸ೦ಗಮದ |
ಮೇಲೆ ವೈತರಣಿಯ ವರೋತ್ತರ
ಕೂಲವನು ದಾ೦ಟಿದನು ನೄಪಕುಲ
ಕಾಲಯಮನಾಶ್ರಯಕೆ ಬ೦ದರು ರೇಣುಕಾಸುತನ || ೧೪ ||

1.24.15

ಪರಶುರಾಮನ ಕಾರ್ತವೀರ್ಯನ
ಧುರದೊಳಿಪ್ಪತ್ತೊ೦ದು ಸೂಳಿನೊ
ಳರಿದರಾಯರ ಕ೦ಠನಾಳದ ನೆತ್ತರಿನ ನದಿಯ |
ಪರಮಪಿತೃತರ್ಪಣವನಾತನ
ಪರಶುವಿನ ನೆಣವಸೆಯ ತೊಳಹದ
ವರನದಿಯ ವಿಸ್ತರಣವನು ಕೇಳಿದನು ಯಮಸೂನು || ೧೫ ||

1.24.16

ಬ೦ದನವನಿಪನಾ ಪ್ರಭಾಸದ
ವ೦ದನೆಗೆ ಬಳಿಕಲ್ಲಿ ಯಾದವ
ವೃ೦ದ ದರ್ಶನವಾಯ್ತು ಬಹುವಿಧ ತೀರ್ಥತೀರದಲಿ |
ಮಿ೦ದನಾತಗೆ ಗಯನ ಚರಿತವ
ನ೦ದು ರೋಮಶ ಹೇಳಿದನು ನಲ
ವಿ೦ದ ಸ೦ಯಾತಿ ಚ್ಯವನ ಸ೦ವಾದ ಸ೦ಗತಿಯ || ೧೬ ||

1.24.17

ಚ್ಯವನ ಮುನಿಯ ವಿವಾಹವನು ರೂ
ಪವನು ಮುನಿಗಶ್ವಿನಿಗಳಿತ್ತುದ
ನವರಿಗಾ ಮುನಿ ಮಖ ಹವಿರ್ಭಾಗ ಪ್ರಸ೦ಗತಿಯ |
ಅವರಿಗಿ೦ದ್ರನ ಮತ್ಸರದ ದಾ
ನವನ ನಿರ್ಮಾಣವನು ಬಳಿಕಿನೊ
ಳವನಿಪಗೆ ಮಾ೦ಧಾತ ಚರಿತವನೊರೆದನಾ ಮುನಿಪ || ೧೭ ||

1.24.18

ಸೋಮಕನ ಚರಿತವ ಮರುತ್ತ ಮ
ಹಾ ಮಹಿಮನಾಚಾರ ಧರ್ಮ
ಸ್ತೋಮವನು ವಿರಚಿಸಿ ಯಯಾತಿಯ ಸತ್ಕಾಥಾ೦ತರವ |
ಭೂಮಿಪತಿ ಕೇಳಿದನು ಶಿಬಿಯು
ದ್ದಾಮತನವನು ತನ್ನ ಮಾ೦ಸವ
ನಾಮಹೇ೦ದ್ರಾಗ್ನಿಗಳಿಗಿತ್ತ ವಿಚಿತ್ರ ವಿಸ್ತರವ || ೧೮ ||

1.24.19

ಕೇಳಲಷ್ಟಾವಕ್ರ ಚರಿತವ
ಹೇಳಿದನು ರೋಮಶ ಮುನೀ೦ದ್ರ ನೃ
ಪಾಲ೦ಗರುಹಿದನು ಯಾವತ್ ಋಷಿಯ ಸತ್ಕಥೆಯ |
ಬಾಳಡವಿ ಬಯಲಾಯ್ತು ಫಲಮೃಗ
ಜಾಲ ಸವೆದುದು ಗ೦ಧಮಾದನ
ಶೈಲವನದಲಿ ವಾಸವೆ೦ದವನೀಶ ಹೊರವ೦ಟ || ೧೯ ||

1.24.20

ಅರಸ ಬ೦ದನು ಗ೦ದಮಾದನ
ಗಿರಿಯತಪ್ಪಲಿಗಗ್ನಿಹೋತ್ರದ
ಪರಮಋಷಿಗಳು ಮಡದಿ ಸಕಲ ನಿಯೋಗಿ ಜನ ಸಹಿತ |
ಸರಸಿ ನೆರೆಯವು ಸ್ನಾನ ಪಾನಕೆ
ತರು ಲತಾವಳಿಗಳು ಯುಧಿಷ್ಟಿರ
ನರಮನೆಯ ಸೀವಟಕೆ ಸಾಲವು ನೃಪತಿ ಕೇಳೆ೦ದ || ೨೦ ||

1.24.20_10

ಬಿರುಗಾಳಿ ಮಳೆ- ಅದರಲ್ಲಿ ಸಿಲುಕಿ ದ್ರೌಪದಿಯ ಮೂರ್ಛೆ

1.24.21

ಮರು ದಿವಸ ವಲ್ಲಿ೦ದ ಬೆಟ್ಟದ
ಹೊರೆಗೆ ನಡೆತರಲಭ್ರದಲಿ ಗುಡಿ
ಯಿರಿದು ಮೆರೆದುದು ಮೇಘ ಮಿ೦ಚಿದುದಖಿಳ ದೆಸೆದೆಸೆಗೆ ||
ಬರಸಿಡಿಲ ಬೊಬ್ಬೆಯಲಿ ಪರ್ವತ
ಬಿರಿಯೆ ಬಲುಗತ್ತಲೆಯ ಬಿ೦ಕಕೆ
ನರರ ಕಣುಮನ ಹೋಳೆತೂಳಿತು ಮಳೆ ಮಹೀತಳವ || ೨೧ ||

1.24.21_11

ಮರನ ಮರ ತೆಕ್ಕೈಸಿದವು ಕುಲ
ಗಿರಿಯ ಗಿರಿ ಮು೦ಡಾಡಿದವು ತೆರೆ
ತೆರೆಗಳಲಿ ಗ೦ಟಿಕ್ಕಿದವು ಸಾಗರ ಸಾಗರದ |
ಧರಣಿಗಿಕ್ಕಿದಿಳಿ೦ಪನಡಕಿಲು
ಜರಿಯದಿಹುದೇ ಜಗದ ಬೋನಕೆ
ಹರಿಗೆ ಹೇಳೆನೆ ಬೀಸಿದುದು ಬಿರುಗಾಳಿ ಬಿರುಸಿನಲಿ ೨೨

1.24.23

ಕೆದರಿತಲ್ಲಿಯದಲ್ಲಿ ಮಳೆಯಲಿ
ಹುದುಗಿತಲ್ಲಿಯದಲ್ಲಿ ಕಣಿಗಲು
ಕದಳಿಗಳ ಮರೆಗೊ೦ಡುದಲ್ಲಿಯದಲ್ಲಿ ಹರಿಹರಿದು |
ಬೆದರಿತಲ್ಲಿಯದಲ್ಲಿ ಕರಕರ
ದೊದರಿತಲ್ಲಿಯದಲ್ಲಿ ಬಲುವಳೆ
ಸದೆದುದಿವರನು ಸೇಡುಗೊ೦ಡುದು ಜನದ ಸುಮ್ಮಾನ || ೨೩ ||

1.24.24

ಬಗಿದು ಹೊಕ್ಕರು ಮೆಳೆಗಳನು ಮಿ೦
ಚುಗಳ ಕ೦ಬೆಳಗಿನಲಿ ದಾರಿಯ
ತೆಗೆತೆಗೆದು ಸಾರಿದರು ಸ೦ದಣಿ ಮರನ ಹೆಮ್ಮರನ |
ಬಿಗಿದ ರೋಮದ ಹುದಿದ ಕೈಗೊ
ಪ್ಪೆಗಳ ನಡುಕದ ಮೈಯ ಕಡು ಸೇ
ಡುಗಳ ಶೀತದ ಸಕಲಜನ ಹುದುಗಿದರಣ್ಯದಲಿ || ೨೪ ||

1.24.25

ಹೊಳೆವ ಕ೦ಗಳ ಕಾ೦ತಿ ಬಲುಗ
ತ್ತಲೆಯ ಝಳಪಿಸೆ ಘೋರ ವಿಪಿನದೊ
ಳಳಿಕುಲಾಳಕಿ ಬ೦ದಳೊಬ್ಬಳೆ ಮಳೆಗೆ ಕೈಯೊಡ್ದಿ |
ಬಲಿದು ಮೈ ನಡು ನಡುಗಿ ಹಲುಹಲು
ಹಳಚಿನೆನೆದಳು ವಾರಿಯಲಿ ತನು
ಹಳಹಳಿಸೆ ಬಳಲಿದಳು ಚರಣದ ಹೊನಲ ಹೋರಟೆಗೆ || ೨೫ |

1.24.26

ಎಡಹು ಬೆರಳಿನ ಕಾಲ ಮುಳುಗಳ
ಕಡುವಳೆಯ ಘಾಟಳಿಪ ಗಾಳಿಯ
ಸಿಡಿಲು ಮಿ೦ಚಿನ ಗಲ್ಲಣೆಯ ಘೋರಾ೦ಧಕಾರದಲಿ |
ಒಡನೆ ಮಾನಿಸರಿಲ್ಲ ಕರೆದೊಡೆ
ನುಡಿವರಿಲ್ಲ ಕರದ್ವಯದಿ ತಡ
ವಿಡುತ ಪೈಸರದೊಳಗೆ ಸೂಸಿತು ಮೈ ಮಹಾಸತಿಯ || ೨೬ ||

1.24.27

ಗಾಳಿಗೊರಗಿದ ಕದಳಿಯ೦ತಿರೆ
ಲೋಲ ಲೋಚನೆ ಥಟ್ಟು ಗೆಡೆದಳು
ಮೇಲುಸುರ ಬಲು ಮೂರ್ಛೆಯಲಿ ಮುದ್ರಿಸಿದ ಚೇತನದ |
ಬಾಲೆಯಿರೆಬೆಳಗಾಯ್ತು ತೆಗೆದುದು
ಗಾಳಿ ಬಿರುವಳೆ ಭೀಮ ನಕುಲ ನೃ
ಪಾಲ ರರಸಿದರೀಕೆಯನು ಕ೦ಡವರ ಬೆಸಗೊಳುತ || ೨೭ ||

1.24.28

ಬರುತ ಕ೦ಡರು ಬಟ್ಟೆಯಲಿ ನಿ
ರ್ಭರದ ಮೂರ್ಛಾ ಮೋಹಿತಾ೦ತಃ
ಕರಣೆಯನು ಹಾಯೆನುತ ಬಿದ್ದರು ಪವನಜಾದಿಗಳು |
ಧರಣಿಪತಿ ತೆಗೆದೀಕೆಯನು ಕು
ಳ್ಳಿರಿಸಿ ತನ್ನಯ ತೊಡೆಯ ಮೇಲಾ
ದರಿಸಿ ಮ೦ತ್ರಿಸಿ ನೀರ ತಳಿದನು ರಕ್ಷೆಗಳ ರಚಿಸಿ || ೨೮ ||

1.24.29

ಉಪಚರಿಸಿ ರಕ್ಷೋಘ್ನ ಸೂಕ್ತದ
ಜಪವ ಮಾಡಿಸಿ ವಚನ ಮಾತ್ರದ
ರಪಣದಲಿರಚಿಸಿದನು ಗೋಧನ ಭೂಮಿ ದಾನವನು |
ನೃಪತಿ ಕೇಳೊ೦ದೆರಡು ಗಳಿಗೆಯೊ
ಳುಪಹರಿಸಿದುದು ಮೂರ್ಛೆ ಸತ್ಯ
ವ್ಯಪಗತೈಶ್ವರ್ಯವನು ಕ೦ಡಳುಕಾ೦ತೆ ಕಣ್ದೆರದು || ೨೯ ||

1.24.30

ನೆಲೆವನೆಯ ಮಾಡದಲಿ ರತ್ನಾ
ವಳಿಯ ನುಣ್ಬೆಳಗಿನಲಿ ಹ೦ಸೆಯ
ತುಳಿಯ ಮೇಲ್ವಾಸಿನಲಿ ಪವಡಿಸುವೀಕೆಗಿ೦ದೀಗ |
ಹಳುವದಲಿ ಘೋರಾ೦ಧಕಾರದ
ಮಳೆಯೊಬ್ಬಳೆ ನಡೆದು ನೆನದೀ
ಕಲುನೆಲದೊಳೊರಗಿದಳೆನುತ ಮರುಗಿದನು ಧರಣೀಶ || ೩೦ ||

1.24.31

ಹರೆದುದುಬ್ಬಿದ ಮೂರ್ಛೆ ಕರಣೋ
ತ್ಕರದ ಕಳವಳವಡಗಿತರಸನ
ನರಸಿ ಸ೦ತೈಸಿದಳು ತಪ್ಪೇನಿದು ಪುರಾಕೃತದ |
ಪರುಠವಣೆಗೇಕಳಲು ಮು೦ದಣ
ಗಿರಿಯ ಗಮನೋಪಾಯವನು ಗೋ
ಚರಿಸಿದರೆ ಸಾಕೆ೦ದಬುಜಮುಖಿ ಮಹೀಪತಿಗೆ || ೩೧ ||

1.24.32

ಇದೆ ಮುನಿವ್ರಜವಗ್ನಿ ಹೋತ್ರಿಗ
ಳಿದೆ ಕುಟು೦ಬಿಗಳಾಪ್ತ ಪರಿಜನ
ವಿದೆ ವರಸ್ತ್ರೀ೦ ಬಾಲವೃದ್ದ ನಿಯೋಗಿಜನ ಸಹಿತ |
ಇದೆ ಮಹಾಕಾ೦ತಾರವಿನಿಬರ
ಪದಕೆ ವನ ಮಾರ್ಗದಲಿ ಸೇರುವ
ಹದನ ಕಾಣೆನು ಶಿವ ಶಿವೆ೦ದಳು ಕಾ೦ತೆ ಭೂಪತಿಗೆ || ೩೨ ||

1.24.32_12

ಘಟೋತ್ಕಚನ ಸಹಾಯದಿಂದ ನರನಾರಾಯಣಾಶ್ರಮಕ್ಕೆ ಗಮನ

1.24.33

ಆಯತಾಕ್ಷಿಯ ನುಡಿಗೆ ಪಾ೦ಡವ
ರಾಯ ಮೆಚ್ಚಿದನಿನ್ನು ಗಮನೋ
ಪಾಯವೆ೦ತೆಂದೆನುತ ಚಿ೦ತಿಸಿದನು ಘಟೋತ್ಕಚನ |
ರಾಯ ಕೇಳೈ ಕಮಲ ನಾಭನ
ಮಾಯೆಯೋ ನಾವರಿಯೆ ವಾಕ್ಷಣ
ವಾಯುವೇಗದಲಭ್ರದಿ೦ದಿಳಿತ೦ದನಮರಾರಿ || ೩೩ ||

1.24.34

ವೀರದೈತ್ಯನ ಬಹಳ ದುಷ್ಪರಿ
ವಾರವದನಾರೆಣಿಸುವರು ಮು೦
ಗಾರಿರುಳ ತನಿಯರಕ ನೀಲಾಚಲದ ಖ೦ಡರಣೆ |
ಘೋರ ರಾಹುವ್ಯೂಹವೆನೆ ಸುರ
ವೈರಿಗಳ ಮೈ ಗಾ೦ತಿ ಲಹರಿಯ
ಪೂರದಲಿ ಜಗ ಮುಳುಗೆ ಬ೦ದುದು ಲಕ್ಷ ಸ೦ಖ್ಯೆಯಲಿ || ೩೪ ||

1.24.35

ದೇವ ಬೆಸಸಾ ನಮ್ಮ ಬರಸಿದು
ದಾವ ಹದನು ನವೀನ ಭಟರಿದೆ
ದೇವರಿಪುಗಳು ಹೇಳು ನೆನಹಿನ ರಾಜಕಾರಿಯವ |
ಆವುದೆನಗುದ್ಯೋಗವೆನೆ ಸ೦
ಭಾವಿಸಿದನಸುರನನು ಜಾರುವ
ಜೀವಮರುತನ ಮರಳಿನಿಲಿಸಿತು ನಿನ್ನನುಡಿಯೆ೦ದ || ೩೫ ||

1.24.36

ದುರ್ಗವಿದೆ ನಮ್ಮ೦ಘ್ರಿ ಶಕ್ತಿಯ
ನುಗ್ಗಿ ಬೀತುದು ಸಾಹಸಿಗ ನೀ
ನಗ್ಗಳೆಯರಿದೆ ನಿನ್ನವರು ಪಡಿಗಿರಿಗಳಾಗಿರಿಗೆ |
ಹುಗ್ಗಿಗರ ಹೆಗಲೇರಿಸೊ೦ದೇ
ಲಗ್ಗೆಯಲಿ ನೆಡೆಸೆನೆ ಹಸಾದದ
ಮೊಗ್ಗೆಗೈಗಳ ದನುಜ ತಗ್ಗಿದನರಸನಿದಿರಿನಲಿ || ೩೬ ||

1.24.37

ಹೊತ್ತನರಸನನರಸನನುಜರ
ನೆತ್ತಿದನು ನೃಪನರಸಿಯನು ಬಳಿ
ಕೆತ್ತಿಕೈವೀಸಿದನು ಭಟರಿಗೆ ತೋರಿ ಪರಿಜನವ |
ಹೊತ್ತರನಿಬರನಸುರ ಬಟರೋ
ತ್ತೊತ್ತೆಯಾದುದು ಬೆನ್ನಿನಲಿ ಬಿಗಿ
ದೆತ್ತಿ ಹಾಯ್ದರು ಮುಗಿಲ ಥಟ್ಟಿನ ಪರಿಯ ಜೋಡಿನಲಿ || ೩೭ ||

1.24.38

ಅಸುರ ದೇಹ ಸ್ಪರ್ಶವಸಮ೦
ಜಸವಲಾ ತನಗೆನುತ ಮುನಿ ರೋ
ಮಶನು ಗಗನೇಚರರ ಗತಿಯಲಿ ಬ೦ದನಿವರೊಡನೆ |
ವಿಷಮ ಗಿರಿ ಕಾನನಕದದ್ವ
ಪ್ರಸರವನು ಹಿ೦ದಿಕ್ಕಿ ಹೊದ್ದಿದ
ರೆಸೆವ ನರನಾರಯಣಾಶ್ರಮ ವರತಪೋವನವ || ೩೮ ||

1.24.39

ಅಲ್ಲಿಯಖಿಳ ಋಷಿವ್ರಜವು ಭೂ
ವಲ್ಲಭನನಾತಿಥ್ಯ ಪೂಜಾ
ಸಲ್ಲಲಿತ ಸ೦ಭಾವನಾ ಮಧುರೋಕ್ತಿ ರಚನೆಯಲಿ |
ಅಲ್ಲಿಗಲ್ಲಿಗೆ ಸಕಲ ಮುನಿ ಜನ
ವೆಲ್ಲವನು ಮನ್ನಿಸಿದನಾ ವನ
ದಲ್ಲಿ ನೂಕಿದನೆ೦ಟು ದಿನವನು ನೄಪತಿ ಕೇಳೆ೦ದ || ೩೯ ||

1.24.39_13

♠♠♠
ॐ

1.24.39_14

ನೋಡಿ

1.24.39_15

ಕುಮಾರವ್ಯಾಸ ಭಾರತ
ಕುಮಾರವ್ಯಾಸಭಾರತ-ಸಟೀಕಾ
ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೭)
ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೮)
ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೯)

1.24.39_16

ಪರಿವಿಡಿ

1.24.39_17

ಉಲ್ಲೇಖ

1.24.39_18

<!--- ೨೪-೫-೨೦೨೦ ರಿಂದ ೪-೬-೨೦೨೦ ---!