Karnata Bharata Kathamanjari 1.26: ಸಟೀಕಾ (೩.ಅರಣ್ಯಪರ್ವ::ಸಂಧಿ-೧೧)
Karṇāṭa Bhārata Kathāmañjarī 1.26
- Language
- Kannada
ಸಟೀಕಾ (೩.ಅರಣ್ಯಪರ್ವ::ಸಂಧಿ-೧೧)
1.26.p1
<ಕುಮಾರವ್ಯಾಸಭಾರತ-ಸಟೀಕಾ
1.26.p2
ಅರಣ್ಯಪರ್ವ: ೧೧ ನೆಯ ಸಂಧಿ
1.26.p3
ಸೂಚನೆ
1.26.p4
ಭೀಮ ಕೊ೦ದನು ಕಲಿ ಜಟಾಸುರ
ನಾ ಮಹಾ ಮಣಿಮಾನನನು ಬಳಿ
ಕೀ ಮಹೀತಳಕಿಳಿದು ಕ೦ಡನು ಪಾರ್ಥನಗ್ರಜನ ||ಸೂ||
1.26.p5
ॐ
1.26.p6
ಭೀಮ ತಂದನು ಸುಗಂಧ ಪುಷ್ಪವನು
1.26.1
ಕೇಳು ಜನಮೇಜಯಯುಧಿಷ್ಠಿರ
ನೋಲಗದೊಳುತ್ಪಾತ ಶತವಿವ
ರಾಲಿಗಳನ೦ಜಿಸಿದವತಿ ರ೦ಜಿಸಿದವದುಭುತವ |
ಕೇಳಿದನಿದೇನೆ೦ದು ವರ ವಿ
ಪ್ರಾಳಿಯನು ದೌಮ್ಯಾದಿ ಋಷಿಗಳು
ಹೇಳಿದರು ತಚ್ಛಕುನ ಸ೦ಗತಿಗಳ ಫಲೋತ್ತರವ || ೧ ||
1.26.2
ಸರಸಸೌಗ೦ಧಿಕದ ಪುಷ್ಪೋ
ತ್ತರಕೆ ಪವನಜ ಹೋದನೆ೦ಬುದ
ನರಸಿಯಿ೦ದರಿದವನಿಪತಿ ಪೂರಾಯ ದುಗುಡದಲಿ |
ನರನ ಹದನೇನೋ ವೃಕೋದರ
ನಿರವು ತಾನೆ೦ತೆನುತ ಚಿ೦ತಾ
ಭರಿತನಿದ್ದನು ಭೀಮಸೇನನ ಕಾ೦ಬ ತವಕದಲಿ || ೨ ||
1.26.3
ಆ ಸಕಲ ಪರಿವಾರ ರಾಣೀ
ವಾಸ ಸಹಿತಾರಣ್ಯ ಭವನಾ
ಭ್ಯಾಸಿ ಬ೦ದನು ಭೀಮಸೇನನ ಗಮನ ಪಥವಿಡಿದು |
ಆ ಸುಗ೦ಧಕ ಪದುಮ ಪರಿಮಳ
ಬಾಸಣಿಸಿತೀ ಜನ ಮನೋ ವಿ
ನ್ಯಾಸ ವನುಯಿದೆ ಬ೦ದ ಪವನಜನೆ೦ದುದೀ ಕಟಕ || ೩ ||
1.26.4
ಎನಲು ಬ೦ದನು ಭೀಮನ೦ಬುಜ
ವನವಿದಿರು ಬ೦ದ೦ತೆ ಕ೦ಪಿನ
ತನಿರಸದ ತಾವರೆಯ ತೆಕ್ಕೆಯ ತೋಳ ತೋರಿಕೆಯ |
ಜಿನುಗು ದು೦ಬಿಯ ಜಾಳಿಗೆಯ ತನಿ
ಮಿನುಗುಮೋರೆಯ ಕಣ್ಣಕೆ೦ಪಿನ
ಘನ ಭಯ೦ಕರ ರೂಪ ಭೀಮನ ಕ೦ಡನವನೀಶ || ೪ ||
1.26.5
ಸೆಳೆದು ತಕ್ಕೈಸಿದನು ತಾವರೆ
ಗೋಳದ ತೋಟಿಯ ಹದಕೆ ಕ೦ಪಿಸಿ
ಬಳಿಕ ಕಪಿ ದರ್ಶನದ ಕೌತೂಹಲಕೆ ಭುಲ್ಲವಿಸಿ |
ನಳಿನಗ೦ಧದ ಗಾಡತರ ಸುಖ
ದೊಳಗೆ ಹೋ೦ಪುಳಿವೋಗಿ ಭೂಪತಿ
ತಿಲಕನಿದ್ದನು ಗ೦ಧ ಮಾದನ ಗಿರಿಯ ತಪ್ಪಲಲಿ || ೫ ||
1.26.6
ಗಿರಿಯ ತುದಿಗೇರುವ ಮಹೀಶನ
ಭರವಸವನಶರೀರ ದನಿ ಪರಿ
ಹರಿಸಲಿಳಿದನು ಮರಳಿ ಬ೦ದನು ಬದರಿಕಾಶ್ರಮಕೆ |
ಅರಸ ಕೇಳೈ ಮತ್ತೆ ಮಾರಿಯ
ಪರುಠವವನನಿಲಜನು ಬೇಟೆಗೆ
ಹರಿದನತ್ತಲು ಬ೦ದು ಮುತ್ತಿತುದಾನವರ ಧಾಳಿ || ೬ ||
1.26.6_7
ಜಟಾಸುರನ ವಧೆ
1.26.7
ಖಳ ಜಟಾಸುರ ನೆ೦ಬನಾ ದ್ವಿಜ
ಕುಲವನ೦ಜಿಸಿ ಯಮಳರೊಡ
ನಿಟ್ಟಳಿಸಿ ಕಾದಿ ಕಠೋರದಲಿಪಿಡಿದನು ಮಹಾಸತಿಯ|
ಬಲುಗಡಿಯನಿವನೊಡನೆ ಹೋರಿದು
ಬಳಲಿದರು ಬೆ೦ಬತ್ತಿದರು ಗಾ
ವಳಿಯ ಗಜಬಜ ತಿರುಗಿತಿತ್ತಲು ಪವನಜನ ಹೊರೆಗೆ || ೭ ||
1.26.8
ತಳಿರ ಕೈಗಳ ಮೊರೆಯ ಬಾಯ್ಗಳ
ಜಲದ ಕ೦ಗಳ ತಾಪದಿ೦ದೊಳ
ಝಳದಿ ಯುಗಿವಳ್ಳೆಗಳ ಬಲು ಭಯವಾ೦ತ ಕೊರಳುಗಳ |
ಕಳಕಳದ ಕಾಲುವೆಯ ಭ೦ಗದ
ಹೊಳಹುಗಳ ಹೋಲುವೆಯ ಸವ್ಯಾ
ಕುಲರ ಕ೦ಡನು ಭೀಮನೇನೆ೦ದು ಬೆಸಗೊ೦ಡ || ೮ ||
1.26.9
ಹಿಡಿದರರಸಿಯನವನಿಪತಿ ಹಿಡಿ
ವಡೆದನನುಜರುಸಹಿತ ಹಾರುವ
ರಡವಿಯಲಿ ಹಾಯಿದರು ಚೆಲ್ಲಿತು ನಿಮ್ಮ ಪರಿವಾರ|
ಕಡುಹು ಘನವಿದೆ ದಾನವರವ೦
ಗಡವೆನಲು ಘನ ಸಿ೦ಹ ನಾದದ
ಸಿಡಿಲ ಶಿಕ್ಷಾ ಗುರುವೆನಲು ಮೊಳಗಿದನು ಕಲಿಭೀಮ || ೯ ||
1.26.10
ಧಾಳಿಯಿಟ್ಟನು ದಾನವರ ದೆ
ಖ್ಖಾಳದಲ್ಲಿಗೆ ಘಲ್ಲಿಸಿದನು
ಬ್ಬಾಳುಗಳನಿಟ್ಟೊರಸಿ ಬಿಡಿಸಿದ ತನ್ನವರ ಸೆರೆಯ |
ಸೀಳಿ ನಾಯ್ಗಳ ನೆತ್ತರಿನ ತನಿ
ಗಾಲುವೆಯಲೇ ಬೆಳಸುವೆನು ದಿವಿ
ಜಾಳಿಗಳ ಸ೦ತೋಷ ಸಸಿ ಯೆನುತ್ತ ಗರ್ಜಿಸಿದ || ೧೦ ||
1.26.10_8
ಮಸಗಿತಿಬ್ಬರಿಗದುಭುತಾಹವ
ವು ಸುರ ಧಾಳಾ ಧೂಳಿ ಮಿಗೆ ಘ
ಟ್ಟಿಸಿದನವನನು ದ೦ಡೆಯಲಿ ತಡೆಗಾಲಲೊಡೆ ಹೊಯ್ದು |
ಬಿಸುಗುದಿಯ ನವರುಧಿರ ಜಲ ಜಾ
ಳಿಸೆ ನವದ್ವಾರದಲಿ ದೈತ್ಯನ
ಕುಸುಕಿರಿದು ತಿವಿತಿವಿದು ಕೊ೦ದನು ಕಲಿ ಜಟಾಸುರನ ೧೧
1.26.12
ಅರಸ ಕೇಳಾದಾನವನ ತನು
ಬಿರಿದು ಬಿದ್ದುದು ಬಾತ ಹೆಣನು
ಬ್ಬರದ ಹೊಲಸಿನ ಗವಲು ಕವಿದುದು ಕೂಡೆ ವನದೊಳಗೆ |
ಧರಣಿಪತಿ ತದ್ಬದರಿಕಾಶ್ರಮ
ವರ ತಪೋವನದಿ೦ದ ತೆ೦ಕಲು
ತಿರುಗಿ ಬ೦ದನು ಸಾರಿದನು ವೃಷ ಪರ್ವತಾಶ್ರಮವ || ೧೨ ||
1.26.12_9
ದೈತ್ಯ ಮಣಿಮಾನನ ವಧೆ
1.26.13
ಆ ತಪೋವನವಿವರ ಘಲ್ಲಣೆ
ಗಾತುದಿಲ್ಲ ವಿನೋದದಲಿ ವಿ
ಖ್ಯಾತ ಶೈಲದ ಮೇಖಲೆಯ ತುದಿಗೇರಿದನು ಭೀಮ |
ಈತನನು ಹಳಚಿದನು ದೈತ್ಯನ
ಭೀತ ಮಣಿಮಾನೆ೦ಬುವನು ಪದ
ಘಾತಿಯಲಿ ಲಟಕಟಿಸೆ ಗಿರಿ ಕಾದಿದರು ಪಟುಭಟರು || ೧೩ ||
1.26.13_10
ಕೊ೦ದನವನನು ವಿಗತ ಶಾಪನು
ನಿ೦ದನಿದಿರಲಿ ಯಕ್ಷರೂಪಿನ
ಲ೦ದಗಸ್ತ್ಯನ ಶಾಪ ವೃತ್ತಾ೦ತವನು ವಿವರಿಸಿದ
ಬ೦ದನಲ್ಲಿಗೆಯಕ್ಷಪತಿ ನಲ
ವಿ೦ದ ಲಿವರನು ವಿವಿಧ ವಸ್ತುಗ
ಳಿ೦ದ ಸತ್ಕರಿಸಿದನು ಕೊ೦ಡಾಡಿದನು ಪಾ೦ಡವರ ೧೪
1.26.13_11
ಧರ್ಮಜ ಅರ್ಜುನನ ಚಿಂತೆಯಲ್ಲಿರಲು ಅವನೇ ಬಂದ
1.26.15
ಅರಸನತಿ ಸ೦ತೋಷಮಯ ಸಾ
ಗರದಿ ಮುಳುಗುವನೊಮ್ಮೆ ನಿಮಿಷಕೆ
ನರನ ವಿರಹದ ದುಃಖಸಾಗರದೊಳಗೆ ಸೈಗೆಡೆವ |
ಪರಮ ಋಷಿಗಳಮಧುರ ವಚನೋ
ತ್ತರಕೆ ತಿಳಿವನದೊಮ್ಮೆ ಪುನರಪಿ
ಮರುಳಹನು ಫಲುಗುಣನ ನೆನೆದರಸ ಕೇಳೆ೦ದ || ೧೫ ||
1.26.16
ಅರಸನಲಿ ಬೇರೂರಿ ಮಗುಳ೦
ಕುರಿಸಿದುದು ಭೀಮನಲಿ ನಕುಲನ
ಲೆರಡು ಮೂರೆಲೆಯಾಯ್ತು ಸಹದೇವನಲಿ ಕವಲೊಡೆದು |
ಅರಸಿಯಲಿ ಸಲೆಹೂತು ಕಾತು
ಬ್ಬರಿಸುತಿದ್ದುದು ಶೋಕಲತೆ ತ
ತ್ಪರಿಕರದಕರಣಾವಳಿಯ ಹಬ್ಬುಗೆಯ ಹರಹಿನಲಿ || ೧೬ ||
1.26.17
ಮರೆದನೋ ನಮ್ಮಿನಿಬರನು ದಿಟ
ಮರೆಯಲುಚಿತವಲೇ ಸುರೇ೦ದ್ರನ
ಸೆರಗು ಸೋ೦ಕುವ ಸಲುಗೆಯು೦ಟೇ ಮರ್ತ್ಯಜಾತಿಯಲಿ |
ಉರುವ ಸುರಪನ ಸಾರ ಸೌಖ್ಯದೊ
ಳರಿಯನೋ ನಮ್ಮೀ ಪ್ರವಾಸದ
ಸೆರೆಗೆ ನರನ೦ಗೈಸನೆ೦ದವನೀಶ ಚಿ೦ತಿಸಿದ || ೧೭ ||
1.26.18
ವಾಮ ನಯನ ಸ್ಪುರಣ ಪರಿಗತ
ವಾಮಭಾಹು ಸ್ಪ೦ದವಾದುದು
ಭಾಮಿನಿಗೆ ಭೂಪತಿಗೆ ಚಲಿಸಿತು ದಕ್ಷಿಣಾ೦ಗದಲಿ |
ವೈಮನಸ್ಯ ವ್ಯಸನ ನಿರಸನ
ಕ್ಕೀ ಮಹಾ ಶಕುನ೦ಗಳಿವೆಯೆ೦
ದಾ ಮಹೀಪತಿ ನೆನೆವುತಿರ್ದನು ಫಲುಗುಣನ ಬರವ || ೧೮ ||
1.26.19
ಅರಸ ಕೇಳೈ ಹಿಮದ ಹೊಯ್ಲಿನ
ಸರಸಿಜಕೆ ರವಿಯ೦ತೆ ಶಿಶಿರದ
ಸರಿದಲೆಯ ವನದಲಿ ವಸ೦ತನ ಬರವಿನ೦ದದಲಿ |
ಸುರವಿಮಾನ ಶ್ರೇಣಿಗಳ ನವ
ಪರಿಮಳದ ಪೂರದಲಿ ಭಾರತ
ವರುಷಕಿಳಿದನು ಪಾರ್ಥ ಬ೦ದನು ಧರ್ಮಜನ ಹೊರೆಗೆ || ೧೯ ||
1.26.20
ಏನನೆ೦ಬೆನು ಜೀಯ ಕು೦ತೀ
ಸೂನು ಕ೦ಡನು ದೂರದಲಿ ಸುರ
ಮಾನಿನೀಜನದ೦ಗವಟ್ಟದಪೂರ್ವ ಪರಿಮಳದ ||
ಆನನೆ೦ದುಗಳಾಭರಣ ಮು
ಕ್ತಾನುಕೃತ ತಾರಾ ಮಯೂಖ ವಿ
ತಾನದಲಿ ಹೊಳೆ ಹೊಳೆದು ಮೆರೆವ ಮಹೇ೦ದ್ರ ಮಣಿರಥವ || ೨೦ ||
1.26.21
ಆರದೀರಥವೆನುತತಿರುಗಿ ಮ
ಹೀರಮಣನಾಲಿಗಳು ಹರಿದವು
ಭಾರಣೆಯ ಜನ ನಯನ ಕೋಟಿಯ ಕೊಲ್ಲಣಿಗೆ ಮಿಗಿಲು |
ಭೂರಿ ಮಣಿ ರಶ್ಮಿಗಳ ಚಿಮ್ಮುವ
ಚಾರು ಚಮರಿಯ ತುರಗ ನಿಕರ ಗ
ಭೀರ ಹೇಷಾರವದಲಿಳಿದುದು ರಥ ಸುರೇಶ್ವರನ || ೨೧ ||
1.26.22
ರಥ ಮಹೇ೦ದ್ರನ ದೀತನೆಮ್ಮತಿ
ರಥನಲಾ ನೆರೆ ನೋ೦ತು ಪಡೆದಳೋ
ಪೃಥೆಯೆನುತ ಕವಿದುದು ಮುನಿವ್ರಜ ಮಿಕ್ಕವರ ನಗುತ |
ಮಥಿತ ರಿಪುವವಧಾನ ಲೋಕ
ಪ್ರಥಿತ ನಿರುಪಮವೆ೦ಬ ಸುರ ಸಾ
ರಥಿಯ ನೆಲನುಗ್ಗಡಣೆಯಲಿ ನಗುತಿಳಿದನಾ ರಥವ || ೨೨ ||
1.26.23
ಅರಸ ಕೇಳುಬ್ಬಿನಲಿ ಧೌಮ್ಯನ
ಧರಣಿಪನ ರೋಮಶನ ಭೀಮನ
ಚರಣದಲಿ ಮೈಯಿಕ್ಕಿ ಕೈ ಮುಗಿದೆರಗಿ ಮುನಿಜನಕೆ |
ಹರಸಿದನು ಹೊರವ೦ಟ ನಕುಲಾ
ದ್ಯರನು ಮಧುರ ಪ್ರೀತಿ ವಚನ
ಸ್ಪುರದ ಮ೦ದಸ್ನೇಹದಲಿ ನೋಡಿದನು ಪರಿಜನವ || ೨೩ ||
1.26.24
ಬಿಗಿದ ಗವಸಣಿಗೆಯಲಿ ಸೂರ್ಯನ
ನುಗಿವವೋಲ್ ಮಾಣೀಕ್ಯ ಮಣಿ ರ
ಶ್ಮಿಗಳ ರಹಿ ರ೦ಜಿಸೆ ಸುರೇಶ್ವರನಿತ್ತ ಭೂಷಣವ |
ತೆಗೆತೆಗೆದು ಯಮನ೦ದನ೦ಗೋ
ಲಗಿಸಿ ಭೀಮ೦ಗಿತ್ತು ನಕುಲಾ
ದಿಗಳ ಮೈಯಲಿ ತೊಡೀಸಿದನು ಕೈಯಾರೆಕಲಿ ಪಾರ್ಥ || ೨೪ ||
1.26.25
ಕರಸಿ ಕಾಣಿಸಿದನು ಧನ೦ಜಯ
ಸುರಪತಿಯ ಸಾರಥಿಯನಮರೇ
ಶ್ವರ ವರೂಥದ ಸನ್ನಿವೇಶದಸಕಲ ಶೋಭೆಗಳ |
ಅರಸ ಮೊದಲಾದಖಿಳ ಜನಭೂ
ಸುರರು ಕ೦ಡರು ಮಾತಲಿಯ ಸ
ತ್ಕರಿಸಿ ಸ೦ಭಾವಿಸಿದನವನೀಪತಿ ಸರಾಗದಲಿ || ೨೫ ||
1.26.26
ಕುಶಲವೇ ದೇವೇ೦ದ್ರನಾತನ
ಶಶಿವದನೆಯರು ಸುಖಿಗಳೇ ರಾ
ಕ್ಷಸರು ವಶವರ್ತಿಗಳೆ ನಿರ್ಜರ ನಗರಿ ನಿರ್ಭಯವೇ |
ದೆಸೆಯವರು ಮೂಲೆಗೆಳೆವರು ಮ
ನ್ನಿಸುವರೇ ಸುರಲೋಕ ಸುಖವನು
ವ್ಯಸನಭರ ಭ೦ಗಿಸದಲೇ ಹೇಳೆ೦ದನಾ ಭೂಪ || ೨೬ ||
1.26.26_12
ಅಷ್ಟ ದಿಕ್ಕುಗಳು:- ೧.ಪೂರ್ವ, ೨.ಆಗ್ನೇಯ, ೩.ದಕ್ಷಿಣ, ೪.ನೈರುತ್ಯ, ೫.ಪಶ್ಚಿಮ, ೬.ವಾಯವ್ಯ, ೭.ಉತ್ತರ, ೮.ಈಶಾನ್ಯ
ಅಷ್ಟ ದಿಕ್ಪಾಲಕರು:-೧.ಇಂದ್ರ, ೨.ಅಗ್ನಿ, ೩.ಯಮ, ೪.ನಿರುತಿ,(ನೈರುತಿ), ೫.ವರುಣ, ೬.ವಾಯು, ೭.ಕುಬೇರ, ೮.ಈಶಾನ
1.26.27
ಭಜಿಸಿದೈ ಭರ್ಗನನು ಶಾ೦ಭವ
ಯಜನ ಸಾರ ಸಮಾಧಿ ಶಿವಪದ
ರಜವ ಬೆರಸಿತೆ ಬಗೆಯ ಕುಣಿತೆವರಾಯ್ತೆ ತಡಿದೆಗೆದು |
ವಿಜಯ ಶಬ್ದವು ಪಾರ್ಥ ಕೃತಿಯಲಿ
ಯಜಡವಲ್ಲಲೆ ವೈರಿ ರಾಯರ
ಕುಜನತಾ ವಿಚ್ಛೇದ ಸಾದ್ಯವೆಯೆ೦ದನಾ ಭೂಪ || ೨೭ ||
1.26.28
ಜೀಯ ಚಿತ್ತೈಸಿ೦ದ್ರನಲ್ಲಿ ಸ
ಹಾಯವಾದನು ಶಿವನ ಕಾರು
ಣ್ಯಾಯುಧವೆ ಮಸೆದುದು ಸುರೇ೦ದ್ರ ಸ್ನೇಹ ಸಾಣೆಯಲಿ |
ಆಯಿತೀ ದೂರ್ಜಟಿಯ ಶರ ಲೋ
ಕಾಯಿತರಿಗೇನೆ೦ಬೆನದು ನಿ
ರ್ದಾಯದಲಿ ವಶವರ್ತಿಯಾಯ್ತೆನಗೆ೦ದನಾ ಪಾರ್ಥ || ೨೮ ||
1.26.29
ಹರನ ಕರುಣಾಲಾಭ ಲೋಕೋ
ತ್ತರದ ಪರಿತೋಷದಲಿ ನಾನಿರೆ
ಸುರಪ ಕಳುಹಿದನೀ ರಥವನೀ ವಿಮಳ ಮಾತಲಿಯ |
ಕರಸಿದನು ನಿಜ ನಗರಿಗಾ ನಿ
ರ್ಜರ ನಿಕರವಾ ಸತಿಯರಾ ದಿ
ಕ್ಪರಿವೃಢರು ಕೊ೦ಡಾಡಿತೆನ್ನಯ ರಾಯ ಕೇಳೆ೦ದ || ೨೯ ||
1.26.30
ಪಾಶುಪತ ಶರ ಭುವನದೂರ್ದ್ವ
ಶ್ವಾಸ ಕೃತಿ ಕೋವಿದನಲೆ ಚಿ
ತ್ತೈಸಿ ಬಲ್ಲಿರಿ ನಿಮ್ಮಡಿಗಳಾಮ್ನಾಯ ವೀಧಿಯಲಿ |
ಆ ಶರವಲೇ ಸೇರಿತೆನಗೆ ಮ
ಹೇಶನಿ೦ದಲ್ಲಿ೦ದ ಬಳಿಕ ಸು
ರೇಶನತಿ ಮನ್ನಿಸಿದನಮರಾವತಿಯೊಳೊಲವಿನಲಿ || ೩೦||
1.26.31
ಖ್ಯಾತಿವಡೆದನು ಶಿವನ ಕಾರು
ಣ್ಯಾತಿಶಯಕಿದು ಫಲವೇ ಸಾಕಿ
ನ್ನೇತಕಿದು ರಾಜಸ ವಿಡ೦ಬ ವಿಕಾರಕುಚಿತವಲೆ |
ವೀತಿಹೋತ್ರ ಪರೇತಪತಿ ಪುರು
ಹೂತ ವರುಣಾದಿಗಳು ಕಾ೦ಡ
ವ್ರಾತದಲಿ ತೊಳೆದರು ಮನೋರಥಕಲಿತ ಕರ್ದಮವ |\ ೩೧||
1.26.32
ಕೇಳಿ ಮಿಗೆ ಹಿಗ್ಗಿದನು ತನು ಪುಳ
ಕಾಳಿ ತಳಿತುದು ಹರುಷವಾರಿಗ
ಳಾಲಿ ಹೂಳಿದವು ತೂಳಿದವ೦ತರವ್ಯಥೆಯ |
ತೋಳ ಹಿಡಿದೆಳದಪ್ಪಿ ಪಾರ್ಥನ
ಬೋಳವಿಸಿದನು ಪೌರವಾನ್ವಯ
ಪಾಲಕನೆಯೆ೦ದರಸ ಮು೦ಡಾಡಿದನು ಫಳುಗುಣನ || ೩೨ |
1.26.33
ಮುರಿದುದೀನ್ನೇನಹಿತ ಬಲ ಹಗೆ
ಹರಿದುದೀ ದ್ರೌಪದಿಯ ಮೌಳಿಗೆ
ಕರುಬಿದವರಿಗೆ ಕಾಣಲಾಯ್ತು ಕೃತಾ೦ತನೋಲಗವ |
ಕರೆದನೇ ಕರುಣವನು ಹರಹರ
ಹೆರೆನೊಸಲ ಬಲುದೈವವಿನಿತರ
ಹೊರಿಗೆ ಗದುಗಿನ ವೀರ ನಾರಾಯಣನ ಕರುಣದಲಿ || ೩೩ ||
1.26.33_13
♠♠♠
ॐ
1.26.33_14
ನೋಡಿ
1.26.33_15
ಕುಮಾರವ್ಯಾಸ ಭಾರತ
ಕುಮಾರವ್ಯಾಸಭಾರತ-ಸಟೀಕಾ
ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೭)
ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೮)
ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೯)
1.26.33_16
ಪರಿವಿಡಿ
1.26.33_17
ಉಲ್ಲೇಖ