Pramāṇa · Search · About · API

Jaimini Bharata (Kannada) 1.3.2_8

Jaimini Bhārata (Kannada) 1.3.2_8

Language
Kannada

1.3.2_8

ಎಲ್ಲಿಯುಂ = ಎಲ್ಲೆಡೆಯೂ ಪರಿವ = ಹರಿವ ಪೆರ್ದೊರೆಯಿಂದೆ-> ಪೆರ್ದು=ಹಿರಿದು= ದೊಡ್ಡ ತೊರೆ ಹಳ್ಳ,,ದೊಡ್ಡದು ಕೆರೆಯಿಂದೆ,
ಯೆಲ್ಲಿಯುಂ = ಎಲ್ಲೆಡೆಯೂ ಕುಸುಮದ = ಹೋವಿನ ಆಗರದಿಂದೆ ಸರದಿಂದೆ=ಸರಸ್ಸಿನಿಂದ,
ಯೆಲ್ಲಿಯುಂ = ಎಲ್ಲೆಡೆಯೂ ರತ್ನಮಯದಿಳೆಯಿಂದೆ->ರತ್ನಮಯದ ಇಳೆ=ಭೂಮಿಯಿಂದ ಬೆಳೆಯಿಂದೆ ಮಣಿಕೃತಕ ಶೈಲದಿಂದ = ಕೃತಕ ಮಣಿಯ ಬೆಟ್ಟದಿಂದಲೂ,
ಎಲ್ಲಿಯುಂ = ಎಲ್ಲೆಡೆಯೂ ಸುಳಿವ ಗೋವ್ರಜದಿಂದೆ ==ತಿರುಗಾಡುತ್ತಿರುವ ದನಗಳ ಹಿಂಡಿನಿಂದ, ಗಜದಿಂದೆ =ಆನೆಗಳಿಂದ,
ಯೆಲ್ಲಿಯುಂ = ಎಲ್ಲೆಡೆಯೂ ಕತ್ತುರಿಯ ಮೃಗದಿಂದೆ =ಕಸ್ತೂರಿ ಮೃಗದಿಂದಲೂ, ಖಗದಿಂದೆ = ಪಕ್ಷಿಗಳಿಂದಲೂ,
ಯೆಲ್ಲಿಯುಂ = ಎಲ್ಲೆಡೆಯೂ ವಿರಚಿತ =ಸಂದರವಾಗಿ ರಚಿಸಿದ ಭವನದಿಂದೆ=ಮನೆಗಳಿಂದಲೂ, ಜನದಿಂದೆ= ಜನರಿಂದಲೂ ಆ ನಾಡ ಸಿರಿ=ಸಂಪತ್ತು ಮೆರೆದುದು.