Jaimini Bharata (Kannada) 1.4: ನಾಲ್ಕನೆಯ ಸಂಧಿ
Jaimini Bhārata (Kannada) 1.4
- Language
- Kannada
ನಾಲ್ಕನೆಯ ಸಂಧಿ
1.4.p1
ಜೈಮಿನಿ ಭಾರತ ನಾಲ್ಕನೆಯ ಸಂಧಿ=== ===ಪದ್ಯ - ಸೂಚನೆ
1.4.p2
ಜೈಮಿನಿ ಭಾರತ ನಾಲ್ಕನೆಯ ಸಂಧಿ=== ===ಪದ್ಯ - ಸೂಚನೆ
1.4.p3
ಜಡಿದು ಭದ್ರಾವತಿಯೊಳಮಲತರ ವಾಜಿಯಂ |
ಪಿಡಿದುಕಲಿಯೌವನಾಶ್ವನ ಚಾತುರಂಗಮಂ |
ಬಡಿದವನನದಲ್ಲಿ ಕಾಣಿಸಿಕೊಂಡು ಹಸ್ತಿನಾವತಿಗೆ ಭೀಮಂ ಬಂದನು ||
ಜಡಿದು= ಹೊಡೆದು,ಯುದ್ಧಮಾಡಿ, ಭದ್ರಾವತಿಯೊಳಮಲತರ-: ಭದ್ರಾವತಿಯೊಳು ಅಮಲತರ ವಾಜಿಯಂ= ಭದ್ರಾವತಿಯಲ್ಲಿದ್ದ ಶ್ರೇಷ್ಟವಾದ ಕುದುರೆಯನ್ನು, ಪಿಡಿದು= ಹಿಡಿದು, ಕಲಿಯೌವನಾಶ್ವನ= ಶೂರನಾದ ಯೌವನಾಶ್ವನ, ಚಾತುರಂಗಮಂ= ಚತುರಂಗಸೈನ್ಯವನ್ನು (ರಥ,ಕುದುರೆ,ಆನೆ,ಪದಾತಿ ಸೈನ್ಯ) ಬಡಿದವನನದಲ್ಲಿ-: ಬಡಿದು= ಸೊಲಿಸಿ ಅವನನು ಅಲ್ಲಿ, ಕಾಣಿಸಿಕೊಂಡು= ನೋಡಿಕೊಂದು ಹಸ್ತಿನಾವತಿಗೆ ಭೀಮಂ= ಹಸ್ತನಾವತಿಗೆ ಭೀಮನು ಬಂದನು
1.4.p4
ಯುದ್ಧಮಾಡಿ,ಭದ್ರಾವತಿಯಲ್ಲಿದ್ದ ಶ್ರೇಷ್ಟವಾದ ಕುದುರೆಯನ್ನು, ಹಿಡಿದು, ಶೂರನಾದ ಯೌವನಾಶ್ವನ ಚತುರಂಗ ಸೈನ್ಯವನ್ನು (ರಥ,ಕುದುರೆ,ಆನೆ,ಪದಾತಿ ಸೈನ್ಯ) ಸೊಲಿಸಿ ಅವನನ್ನು ಅಲ್ಲಿ, ಯೌವನಾಶ್ವನನ್ನು ಕಂಡು, (ಮರ್ಯಾದೆಯಿಂದ ನೋಡಿಕೊಂದು ಹಸ್ತನಾವತಿಗೆ ಬರಲು ಹೇಳಿ) ಹಸ್ತಿನಾವತಿಗೆ ಹಸ್ತನಾವತಿಗೆ ಭೀಮನು ಬಂದನು (ಪದ್ಯ - ಸೂಚನೆ),
1.4.p5
ಪದ್ಯ - ೧
1.4.1
ಜನಮೇಜಯಕ್ಷಿತಪ ಕೇಳ್ ಪ್ರಣಯ ಕಲಹದೊಳ್ |
ಮುನಿದ ಕಾಂತೆಯ ಕುಪಿತ ವದನಾರವಿಂದದೊಳ್ |
ಮಿನುಗುವೆಳನಗೆ ತೋರುವನ್ನೆಗಂ ಚಿತ್ತದೊಳ್ ಕುದಿವ ನಾಗರಿಕನಂತೆ ||
ಅನಿಲಸುತನಾಹಯಂ ಪೊಳಲ ಪೊರಮಡುವಿನಂ |
ಮನದುಬ್ಬೆಗದೊಳೆ ಚಿಂತಿಸಿ ಮತ್ತೆ ಕರ್ಣಜಾ |
ತನ ವದನಮಂ ನೋಡುತನುತಾಪದಿಂ ತನ್ನ ಪಳಿದುಕೊಳುತಿಂತೆಂದನು ||1||
1.4.1_6
ಜನಮೇಜಯಕ್ಷಿತಪ ಕೇಳ್= ಜನಮೇಜಯ ರಾಜನೇ ಕೇಳು,ಬೆಟ್ಟದ ಮೇಲಿಂದ ನಾಡಿದಾಗ ಯಜ್ಞಾಶ್ವವು ಕಾಣದಿರಲು, ಪ್ರಣಯ ಕಲಹದೊಳ್ ಮುನಿದ ಕಾಂತೆಯ ಕುಪಿತ ವದನಾರವಿಂದದೊಳ್-:ಪ್ರಣಯ ಕಲಹದಲ್ಲಿ ಪತ್ನಿಯ ಮುಖದಲ್ಲಿ, ಮಿನುಗುವೆಳನಗೆ ತೋರುವನ್ನೆಗಂ= ಮಿನುಗವ ಎಳೆನಗೆ ಕಾಣುವ ಅನ್ನೆಗಂ=ಅಲ್ಲಿಯವರೆಗೆ, ಚಿತ್ತದೊಳ್=ಮನಸ್ಸಿನಲ್ಲಿ, ಕುದಿವ=ವ್ಯಥೆಪಡುವ, ನಾಗರಿಕನಂತೆ= ಮನುಷ್ಯನಂತೆ,(ಚಿಂತೆಪಡುವಂತೆ) ಅನಿಲಸುತನಾಹಯಂ-; ಅನಿಲಸುತ=ಭೀಮನು, ಆ ಹಯಂ= ಆಕುದುರೆಯು, ಪೊಳಲ ಪೊರಮಡುವಿನಂ= ಪಟ್ಟಣದಿಮದ ಹೊರಬರುವವರೆಗೆ, ಮನದುಬ್ಬೆಗದೊಳೆ ಚಿಂತಿಸಿ-: ಮನದ ಉಬ್ಬೆಗದೊಳ್= ಉದ್ವೇಗದಿಂದ ಚಿಂತಿತನಾಗಿ, ಮತ್ತೆ ಕರ್ಣಜಾತನ ವದನಮಂ= ವೃಷಕೇತುವಿನ ಮುಖವನ್ನು, ನೋಡುತನುತಾಪದಿಂ= ನೋಡುತ ಅನುತಾಪದಿಂದ, ತನ್ನ ಪಳಿದುಕೊಳುತಿಂತೆಂದನು-: ತನ್ನ ಪಳಿದು= ಹಳಿದುಕೊಂಡು, ಇಂತೆಂದನು= ಹೀಗೆ ಹೇಳಿದನು.
1.4.1_7
ಜನಮೇಜಯ ರಾಜನೇ ಕೇಳು,ಬೆಟ್ಟದ ಮೇಲಿಂದ ನಾಡಿದಾಗ ಯಜ್ಞಾಶ್ವವು ಕಾಣದಿರಲು, ಮಿನುಗವ ಎಳೆನಗೆ ಕಾಣುವ ಅಲ್ಲಿಯವರೆಗೆ ಮನಸ್ಸಿನಲ್ಲಿ, ವ್ಯಥೆಪಡುವ, ಮನುಷ್ಯನಂತೆ,(ಚಿಂತೆಪಡುವಂತೆ) ಭೀಮನು, ಆ ಕುದುರೆಯು ಪಟ್ಟಣದಿಮದ ಹೊರಬರುವವರೆಗೆ ಮನದ ಉದ್ವೇಗದಿಂದ ಚಿಂತಿತನಾಗಿ, ಮತ್ತೆ ವೃಷಕೇತುವಿನ ಮುಖವನ್ನು, ನೋಡುತ ಅನುತಾಪದಿಂದ, ತನ್ನನ್ನು ಹಳಿದುಕೊಂಡು,ಹೀಗೆ ಹೇಳಿದನು. (ಪದ್ಯ - ೧),
1.4.1_8
ಪದ್ಯ - ೨
1.4.2
ಉದ್ರೇಕದಿಂ ಮುನಿವರನೊಳಾಡಿ ತಪ್ಪಿದ ಗು |
ರುದ್ರೋಹಮೊಂದಚ್ಯುತನೊಳಾಡಿ ಹೊಳೆದ ದೈ |
ವದ್ರೋಹಮೆರಡರಸನವಸರಕೊದಗದ ಸ್ವಾಮಿದ್ರೋಹಮೈದೆ ಮೂರು ||
ಮದ್ರಚಿತ ವೀರಪ್ರತಿಜ್ಞೆ ಕೈಗೂಡದಾ |
ತ್ಮದ್ರೋಹಮದುವೆ ನಾಲ್ಕಿದರ ಸಂಗಡಕೆ ಧ |
ರ್ಮದ್ರೋಹಮೈದಾಗದಿಹುದೆ ತನಗಶ್ವಮಂ ಕಂಡು ಕೊಂಡೊಯ್ಯದಿರಲು ||2||
1.4.2_9
ಉದ್ರೇಕದಿಂ= ಅತಿ ಉತ್ಸಾಹದಿಂದ, ಮುನಿವರನೊಳಾಡಿ-: ಮುನಿವರನೊಳು ಆಡಿ =ಗುರುವೇದವ್ಯಾಸರ ಹತ್ತಿರ ಪ್ರತಿಜ್ಞೆಮಾಡಿ, ತಪ್ಪಿದ ಗುರುದ್ರೋಹಂ=ಪ್ರತಿಜದ್ಞೆಗೆ ತಪ್ಪಿದ ಗುರುದ್ರೋಹ ಒಂದು, ಅಂದುದಚ್ಯುತನೊಳಾಡಿ ಹೊಳೆದ ದೈವದ್ರೋಹಮೆರಡು-:ಅಂದು ಅಚ್ಯುತನೊಳು= ಕೃಷ್ಣನ ಹತ್ತಿರ,ಆಡಿ= ವಚನತಪ್ಪೆನು ಎಂದು ಹೇಳಿ, ಹೊಳೆದ/ಹೋದ/ ಹೊರಳಿದ= ಮಾತಿಗೆ ತಪ್ಪಿದ, ದೈವದ್ರೋಹಂ ಎರಡು=ದೈವದ್ರೋಹವು ಎರಡನೆಯದು; ಅರಸನವಸರಕೊದಗದ ಸ್ವಾಮಿದ್ರೋಹಮೈದೆ ಮೂರು-: ಅರಸನ ಅವಸರಕೆ ಒದಗದ ಸ್ವಾಮಿದ್ರೋಹಂ ಐದೆ ಮೂರು-:ಅರಸನಾದ ಧರ್ಮಜನ ಅವಸರಕೆ= ಕಾರ್ಯಕ್ಕೆ, ಒದಗದ= ಸಹಕರಿಸದ, ಸ್ವಾಮಿದ್ರೋಹಂ=ಸ್ವಾಮಿದ್ರೋಹವು, ಐದೆ= ಮಾಡಿದರೆ, ಮೂರು= ಮೂರನೆಯದು; ಮದ್ರಚಿತ= ನನ್ನಿಂದ ಮಾಡಲ್ಪಟ್ಟ, ವೀರಪ್ರತಿಜ್ಞೆ= ಪ್ರತಿಜ್ಞೆಯನ್ನು, ಕೈಗೂಡದ ಆತ್ಮದ್ರೋಹಂ= ಪೂರ್ಣ ಮಾಡದಿರುವುದು ಆತ್ಮದ್ರೋಹ, ಅದುವೆ= ಅದು ನಾಲ್ಕಿದರ-:ನಾಲ್ಕು ಇದರ ಸಂಗಡಕೆ ಧರ್ಮದ್ರೋಹಮೈದಾಗದಿಹುದೆ-:ಇದರ ಸಂಗಡಕೆ ಧರ್ಮದ್ರೋಹಂ= ಇದರ ಜೊತೆಯಲ್ಲಿ ಧರ್ಮದ್ರೋಹವು ಸೇರಿ, ಐದು ಪಾಪಕೃತ್ಯವು, ತನಗಶ್ವಮಂ-:ತನಗೆ=ತನಗೆ ಬರುವುದು, ತಾನು ಅಶ್ವಮಂ= ಅಶ್ವವನ್ನು, ಕಂಡು=ಹುಡುಕಿ, ಕೊಂಡೊಯ್ಯದಿರಲು-: ಕೊಂಡೊಯ್ಯದೆ ಇರಲು= ತೆಗೆದುಕೊಂಡು ಹೋಗದಿದ್ದರೆ, ಎಂದನು ಭೀಮ. ತಾತ್ಪರ್ಯ :ಅತಿ ಉತ್ಸಾಹದಿಂದ ಗುರುವೇದವ್ಯಾಸರ ಹತ್ತಿರ ಪ್ರತಿಜ್ಞೆಮಾಡಿ, ಪ್ರತಿಜ್ಞೆಗೆ ತಪ್ಪಿದ ಗುರುದ್ರೋಹ ಒಂದು, ಅಂದು ಕೃಷ್ಣನ ಹತ್ತಿರ, ವಚನತಪ್ಪೆನು ಎಂದು ಹೇಳಿ, ಮಾತಿಗೆ ತಪ್ಪಿದ, ದೈವದ್ರೋಹವು ಎರಡನೆಯದು; ಅರಸನಾದ ಧರ್ಮಜನ ಕಾರ್ಯಕ್ಕೆ, ಸಹಕರಿಸದೆ,ಇರುವುದು, ಸ್ವಾಮಿದ್ರೋಹವು, ಮೂರನೆಯದು; ನನ್ನಿಂದ ಮಾಡಲ್ಪಟ್ಟ ಪ್ರತಿಜ್ಞೆಯನ್ನು ಪೂರ್ಣ ಮಾಡದಿರುವುದು ಆತ್ಮದ್ರೋಹ, ಅದು ನಾಲ್ಕು; ಇದರ ಜೊತೆಯಲ್ಲಿ ಧರ್ಮದ್ರೋಹವು ಸೇರಿ, ಐದು ಪಾಪಕೃತ್ಯವು, ತಾನು ಅಶ್ವವನ್ನು ಹುಡುಕಿ ತೆಗೆದುಕೊಂಡು ಹೋಗದಿದ್ದರೆ ತನಗೆ ಆಗುವುದು, ಎಂದನು ಭೀಮ. (ಪದ್ಯ - ೧),
1.4.2_10
ಪದ್ಯ - ೩
1.4.3
ಪುಸಿದನೆ ಬಯಲ್ಗೆ ವೇದವ್ಯಾಸಮುನಿ ಪುಸಿದೊ |
ಡಸುರಾರಿ ಸೈರಿಪನೆ ಸೈರಿಸಿದೊಡೊಳ್ಳಿತೆಂ |
ಮಸಿರುವುದೆ ಶಕುನಂಗಳುಸಿರಿದೊಡಭಾಗ್ಯಬೇ ಭುವರನಭಾಗ್ಯನಾಗೆ ||
ಮಸುಳಿಪುದೆ ಶಶಿಕುಲಂ ಮಸುಳಿಸಿದೊಡದ್ದಪುದೆ |
ವಸುಧೆಯದ್ದೊಡೆ ತನ್ನ ನುಡಿ ಬಂಜೆಯಪ್ಪುದಿದು |
ಪೊಸತದೇಂ ಪಾಪದಿಂ ಕಾಣಿಸದೊ ತುರಗಮೆಂದನಿಲಜಂ ಚಿಂತಿಸಿದನು ||3||
1.4.3_11
ಪುಸಿದನೆಬಯಲ್ಗೆ ವೇದವ್ಯಾಸಮುನಿ=ವೇದವ್ಯಾಸಮುನಿ ಇಲ್ಲದಿರವಕುದುರೆ ಇದೆಯೆಂದು,ಪುಸಿದನೆ= ಸುಳ್ಳು ಹೇಳಿದನೇ? ಪುಸಿದೊಡಸುರಾರಿ= ಸುಳ್ಳು ಹೇಳಿದರೆ,ಅಸುರಾರಿ= ಸರ್ವಜ್ಞ ಕೃಷ್ಣ, ಸೈರಿಪನೆ= ಸಹಿಸುತ್ತಾನೆಯೇ? ಸೈರಿಸಿದೊಡೊಳ್ಳಿತೆಂಮಸಿರುವುದೆ-:ಸೈರಿಸಿದೊಡ ಒಳ್ಳಿತೆಂಮ ಉಸಿರುವುದೆ ಶಕುನಂಗಳು= ಒಮ್ಮೆ ಕೃಷ್ಣ ಸುಮ್ಮನಿದ್ದರೆ, ಶಕುನಗಳು ಒಳ್ಳಿತು ಎಂದು= ಒಳ್ಳೆಯದಾಗುವುದು ಎಂದು, ಉಸಿರುವುದೇ? ಉಸಿರಿದೊಡಭಾಗ್ಯನೇ= ಹಾಗೊಮ್ಮೆಹೇಳಿದರೆ, ಧರ್ಮಜನು ಭಾಗ್ಯಹೀನನೇ? ಭೂವರನಭಾಗ್ಯನಾಗೆ ಮಸುಳಿಪುದೆ ಶಶಿಕುಲಂ= ಭೂಪಾಲ ಧರ್ಮಜನು ಅಭಾಗ್ಯನದರೆ, ಮಸುಳಿಪುದೆ ಶಶಿಕುಲಂ=ಚಂದ್ರವಂಶ ಹೆಸರು ಪಡೆಯುವುದೇ? ಮಸುಳಿಸಿದೊಡದ್ದಪುದೆ ವಸುಧೆಯದ್ದೊಡೆ-:ಮಸುಳಿಸಿದೊಡೆ=ಶಶಿಕುಲ ಪ್ರಕಾಶಹೀನವಾದರೆ, ಅದ್ದಪುದೆ ವಸುಧೆಯದ್ದೊಡೆ-:ಅದ್ದಪುದೆ ವಸುಧೆ ಅದ್ದೊಡೆ= ಭೂಮಿ ಭೂಮಿ ಕುಸಿದರೆ ಒಳಿತಾಗವುದೇ? ಆಗವುದೇ ತನ್ನ ನುಡಿ ಬಂಜೆಯಪ್ಪುದಿದು-:ತನ್ನ ಮಾತು ಹುಸಿಯಾಗುವುದು- ಇದು ಪೊಸತದೇಂ-:ಇದು ಹೊಸ ಬಗೆ; ಅದೇಂ ಪಾಪದಿಂ ಕಾಣಿಸದೊ ತುರಗಮೆಂದನಿಲಜಂ_:ತುರಗಂ ಎಂದು ಅನಿಲಜಂ ಚಿಂತಿಸಿದನು-:ಅದು ಏನು ಪಾಪದಿಮದ ಕುದುರೆಯು ಕಾಣಿಸದೆ ಇರುವುದು ಎಂದು ಭೀಮನು ಚಿಂತಿತನಾದನು.
1.4.3_12
ವೇದವ್ಯಾಸಮುನಿ ಇಲ್ಲದಿರವ ಕುದುರೆ ಇದೆಯೆಂದು,ಸುಳ್ಳು ಹೇಳಿದನೇ? ಸುಳ್ಳು ಹೇಳಿದರೆ,ಸರ್ವಜ್ಞ ಕೃಷ್ಣ,ಸಹಿಸುತ್ತಾನೆಯೇ? ಒಮ್ಮೆ ಕೃಷ್ಣ ಸುಮ್ಮನಿದ್ದರೆ, ಶಕುನಗಳು ಒಳ್ಳೆಯದಾಗುವುದು ಎಂದು, ಹೇಳುವುದೇ? ಹಾಗೊಮ್ಮೆ ಕೆಡುಕು ಹೇಳಿದರೆ, ಧರ್ಮಜನು ಭಾಗ್ಯಹೀನನೇ? ಭೂಪಾಲ ಧರ್ಮಜನು ಅಭಾಗ್ಯನದರೆ, ಚಂದ್ರವಂಶ ಹೆಸರು ಪಡೆಯುವುದೇ? ಶಶಿಕುಲ ಪ್ರಕಾಶಹೀನವಾದರೆ, ಭೂಮಿಗೆ (ಕೆಡುಕಾದೀತು). ಭೂಮಿ ಕುಸಿದರೆ ಒಳಿತಾಗವುದೇ? ಹಾಗೆ ಆದರೆ ತನ್ನ ಮಾತು ಹುಸಿಯಾಗುವುದು- ಇದು ಹೊಸ ಬಗೆ; ಅದು ಯಾವ ಪಾಪದಿಂದ ಕುದುರೆಯು ಕಾಣಿಸದೆ ಇರುವುದು ಎಂದು ಭೀಮನು ಚಿಂತಿತನಾದನು.
(ಪದ್ಯ - ೩),
1.4.3_13
ಪದ್ಯ - ೪
1.4.4
ಪಾತಕಿಗೆ ನುಡಿದ ಸೊಲ್ ಪುಸಿಯಹುದು ಪರದಾರ |
ಸೂತಕಿಗೆ ನೆನೆದೆಣಿಕೆ ಬಯಲಹುದು ಗುರುವಿಪ್ರ |
ಪಾತಕಿಗೆ ಕಾಣ್ಬೊಡವೆ ಮರೆಯಹುದು ತಥ್ಯಮಿದು ಜಗದೊಳೆನಗಾವ ಭವದ ||
ಜಾತಕಿಲ್ಬಿಷವೊ ಯಾದವಕುಲ ಮಹಾಂಬುನಿಧಿ |
ಶೀತಕಿರಣಂ ತನ್ನ ಶರಣರನುಳದನೊ ಹಯ |
ಮೇತಕಿಂತಕಟ ಕಾಣಿಸದೊ ಶಿವಶಿವಾಯೆಂದು ಪವನಜಂ ಚಿಂತಿಸಿದನು ||4||
1.4.4_14
ಪದ್ಯ - ೫
1.4.5
ತಲ್ಲಕ್ಷಣಂಗಳಿಂ ಸಲ್ಲಲಿತಮಾದ ಹಯ |
ಮಿಲ್ಲಿ ವಿಧಿವಶದಿಂದಮಿಲ್ಲದಿರ್ದೊಡೆ ಧರಾ |
ವಲ್ಲಭನ ರಂಜಿಸುವ ಮೆಲ್ಲಡಿಗಳಂ ಕಾಣಬಲ್ಲೆನೆ ಮಹೀತಳದೊಳು ||
ಎಲ್ಲಿರ್ದೊಡಾ ತಾಣದಲ್ಲಿ ಪೊಕ್ಕರಸಿ ತಂ |
ದಲ್ಲದೆನ್ನಯ ಭಾಷೆ ಸಲ್ಲದಿದಕೆಂತೆನುತೆ |
ಘಲ್ಲಿಸುವ ಚಿಂತೆಯಿಂ ನಿಲ್ಲದೆ ವೃಕೋದರಂ ತಲ್ಲಣಿಸುತಿರುತಿರ್ದನು ||5|||
1.4.5_15
ತಲ್ಲಕ್ಷಣಂಗಳಿಂ-:ತತ್ = ಆ (ಯಜ್ಞದ ಕುದುರೆಯ), ಲಕ್ಷಣಂಗಳಿಂ= ಲಕ್ಷಣಗಳಿಂದ, ಸಲ್ಲಲಿತಮಾದ= ಯೋಗ್ಯವಾದ, ಹಯಮಿಲ್ಲಿ= ಹಯಂ, ಇಲ್ಲಿ, ವಿಧಿವಶದಿಂದಮಿಲ್ಲದಿರ್ದೊಡೆ-:ವಿಧಿವಶದಿಂದಂ= ದೈವಯೊಗದಿಂದ, ಇಲ್ಲದಿರ್ದೊಡೆ= ಇಲ್ಲದಿದ್ದರೆ, ಧರಾವಲ್ಲಭನ= ಧರ್ಮಜನ, ರಂಜಿಸುವ ಮೆಲ್ಲಡಿಗಳಂ ಕಾಣಬಲ್ಲೆನೆ=ಹೊಳೆಯುವ ಮೃದು ಪಾದಗಲನ್ನು ನಾನು ನೋಡಬಲ್ಲೆನೇ? (ನೊಡಲಾರೆನು). ಮಹೀತಳದೊಳು=ಭೂಮಿಯಮೇಲೆ, ಎಲ್ಲಿರ್ದೊಡಾ= ಎಲ್ಲಿ ಇದ್ದರೂ, ತಾಣದಲ್ಲಿ= ಆ ಜಾಗದಲ್ಲಿ, ಪೊಕ್ಕರಸಿ-:ಕೊಕ್ಕು ಅರಸಿ=ಹೊಕ್ಕು ಹುಡುಕಿ, ತಂದಲ್ಲದೆನ್ನಯ=:ತಂದಲ್ಲದೆ ಎನ್ನಯ= ತರದಿದ್ದರೆ ನನ್ನ, ಭಾಷೆ ಸಲ್ಲದಿದಕೆಂತೆನುತೆ-:ಭಾಷೆ ಸಲ್ಲದು=ನೆರವೇರದು, ಇದಕೆ ಎಂತು ಎನುತ= ಇದಕ್ಕೆ ಏನು ಮಾಡಬೇಕು ಎಂದು, ಘಲ್ಲಿಸುವ= ಗಾಢವಾದ ಚಿಂತೆಯಿಂ= ಚಿಂತೆಯಿಂದ, ನಿಲ್ಲದೆ= ಚಡಪಡಿಕೆಯಿಂದ, ವೃಕೋದರಂ=ಭೀಮನು ತಲ್ಲಣಿಸುತಿರುತಿರ್ದನು= ಕಳವಳಿಸುತ್ತಿದ್ದನು.
1.4.5_16
ಆ ಯಜ್ಞದ ಕುದುರೆಯ ಲಕ್ಷಣಗಳಿಂದ ಕೂಡಿದ ಯೋಗ್ಯವಾದ ಹಯವು ಇಲ್ಲಿ ದುರ್ದೈವದಿಂದ ಇಲ್ಲದಿದ್ದರೆ ಮನಸ್ಸಿಗೆ ಹಿತಕೊಡುವ ಧರ್ಮಜನ ಮೃದು ಪಾದಗಳನ್ನು ನಾನು ನೋಡಬಲ್ಲೆನೇ? (ನೊಡಲಾರೆನು). ಭೂಮಿಯಮೇಲೆ ಎಲ್ಲಿ ಇದ್ದರೂ ಆ ಜಾಗದಲ್ಲಿ ಹೊಕ್ಕು ಹುಡುಕಿ ತರದಿದ್ದರೆ ನನ್ನ, ಭಾಷೆ ನೆರವೇರದು, ಇದಕ್ಕೆ ಏನು ಮಾಡಬೇಕು ಎಂದು, ಗಾಢವಾದ ಚಿಂತೆಯಿಂದ ಚಡಪಡಿಕೆಯಿಂದ ಭೀಮನು ಕಳವಳಿಸುತ್ತಿದ್ದನು. (ಪದ್ಯ - ೫),
1.4.5_17
ಪದ್ಯ - ೬
1.4.6
ಅನಿತರೊಳನೇಕ ಸೇನೆಗಳ ಸನ್ನಾಹದಿಂ |
ಘನವಾದ್ಯ ರಭಸದಿಂ ಸೂತರ ಪೊಗಳ್ಕೆಯಿಂ |
ದನುಕರಿಸಿದಮಲ ವಸ್ತ್ರಾಭರಣ ಗಂಧಮಾಲ್ಯಾನಿಗಳ ಪೂಜೆಯಿಂದೆ ||
ವಿನುತಾತಪತ್ರ ಚಮರಂಗಳಿಂದೆಡಬಲದೊ |
ಳನುವಾಗಿ ವಾಘೆಯಂ ಪಿಡಿದು ನಡೆತಪ್ಪ ನೃಪ |
ತನುಜರಿಂದಾ ಹಯಂ ನೀರ್ಗೆ ಪೊರಮಟ್ಟು ಸಂಭ್ರಮದೊಳೈತರುತಿರ್ದುದು ||6||
1.4.6_18
ಅನಿತರೊಳನೇಕ-:ಅನಿತರೊಳ್ ಅನೇಕ ಸೇನೆಗಳ ಸನ್ನಾಹದಿಂ= ಅಷ್ಟರಲ್ಲಿ, ಅನೇಕ ಸೇನೆಗಳ ಒಡಗೂಡಿಕೊಂಡು, ಘನವಾದ್ಯ ರಭಸದಿಂ ಸೂತರ ಪೊಗಳ್ಕೆಯಿಂದ= ದೊಡ್ಡ ವಾದ್ಯ ಮೊಳಗುತ್ತಾ, ಹೊಗಳುಭಟ್ಟರ ಹೊಗಳಿಕೆಯಿಂದ ಅನುಕರಿಸಿದಮಲ-:ಅನುಕರಿಸಿದ ಅಮಲ ವಸ್ತ್ರಾಭರಣ ಗಂಧಮಾಲ್ಯಾನಿಗಳ ಪೂಜೆಯಿಂದೆ= ಹಿಂಬಾಲಿಸಿದ ಒಳ್ಳೆಯ ವಸ್ತ್ರಾಭರಣ ಮತ್ತು ಗಂಧ ಮಾಲೆಗಳ ಪೂಜೆಯಿಂದೆ, ವಿನುತಾತಪತ್ರ-:ವಿನುತ ಆತಪತ್ರ ಚಮರಂಗಳಿಂದೆಡಬಲದೊಳನುವಾಗಿ -:ಚಮರಂಗಳಿಂದ ಎಡಬಲದೊಳು ಅನುವಾಗಿ= ಹಿಂಬಾಲಿಸಿದ ಒಳ್ಳೆಯ ವಸ್ತ್ರಾಭರಣ ಮತ್ತು ಗಂಧ ಮಾಲೆಗಳ ಪೂಜೆಯಿಂದ, ಒಳ್ಳೆಯ (ಆತಪತ್ರ) ಛತ್ರಿ ಚಾಮರಗಳಿಂದ ಎಡಬಲದೊಳಗೆ ಅನುಕೂಲಕರವಾಗಿ ವಾಘೆಯಂ ಪಿಡಿದು ನಡೆತಪ್ಪ= ಲಗಾಮನ್ನು ಹಿಡಿದು ನಡೆದು ಬರುತ್ತಿರುವ, ನೃಪತನುಜರಿಂದಾ= ರಾಜನ ಮಕ್ಕಳಿಂದ. ಹಯಂ= ಕುದುರೆಯು ನೀರ್ಗೆ= ನೀರಿಗೆ, ಪೊರಮಟ್ಟು= ಹೊರಬಂದು ಸಂಭ್ರಮದೊಳೈತರುತಿರ್ದುದು-:ಸಂಭ್ರಮದೊಳು ಐತರುತಿರ್ದುದು= ಸಂಭ್ರಮದಿಂದ ಬರುತ್ತಿತ್ತು.
1.4.6_19
ಪದ್ಯ ೭
1.4.7
ವಿಧುಬಿಂಬದುದಯಮಂ ಕಂಡೊತ್ತರಿಸಿ ಪಯೋ |
ನಿಧಿ ಮೇರೆವರಿದುಕ್ಕುವಂತೆ ನಿರ್ಮಳವಾದ |
ಸುಧೆಯೇಳ್ಗೆಯಂ ಕಂಡ ಪುಳಕುಂ ನೆಗಳ್ದು ಜಂಭಾರಿ ಸಂಭ್ರಮಿಸುವಂತೆ |
ಅಧಿಕಬಲ ಯೌವನಾಶ್ವಾವನಿಪನೈಶ್ವರ್ಯ |
ಪಧುವಿನ ಕಟಾಕ್ಷದಂತೊಪ್ಪುವ ತುರಂಗಮಂ |
ಕುಧರೋಪಮಾನ ಪವಮಾನಜಂ ಕಂಡು ನೆರೆ ಸುಮ್ಮಾನಮಂ ತಾಳ್ದನು ||7||
1.4.7_20
ವಿಧುಬಿಂಬದುದಯಮಂ= ವಿಧುಬಿಂಬದ= ಪೂರ್ಣಚಂದ್ರನ ಉದಯಮಂ= ಉದಯವನ್ನು, ಕಂಡೊತ್ತರಿಸಿ=ಕಂಡು, ಒತ್ತರಿಸಿ=ಉಬ್ಬಿ, ಪಯೋನಿಧಿ= ಸಮುದ್ರವು ಮೇರೆವರಿದುಕ್ಕುವಂತೆ-: ಮೇರೆವರಿದು= ಗಡಿಮೀರಿ, ಉಕ್ಕುವಂತೆ= ಉಬ್ಬರಹೊಂದುವಂತೆ, ನಿರ್ಮಳವಾದ= ಶುದ್ಧವಾದ, ಸುಧೆಯೇಳ್ಗೆಯಂ ಕಂಡ=ಅಮೃತದ ಉದ್ಭವವನ್ನು ಕಂಡ, ಪುಳಕುಂ ನೆಗಳ್ದು ಜಂಭಾರಿ ಸಂಭ್ರಮಿಸುವಂತೆ= ಪುಳಕಗೊಂಡು ಇಂದ್ರನು ಸಂತಸಗೊಂಡಂತೆ, ಅಧಿಕಬಲ= ದೊಡ್ಡ ಸೈನ್ಯವನ್ನು ಹೊಂದಿದ, ಯೌವನಾಶ್ವಾವನಿಪನೈಶ್ವರ್ಯ ಪಧುವಿನ-: ಯೌವನಾಶ್ವ ಅವನಿಪನ=ರಾಜನ, ಐಶ್ವರ್ಯಕಟಾಕ್ಷದಂತೆ= ಸಂಪತ್ತೆಂಬ ವಧುವಿನ ಕಟಾಕ್ಷ= ಕಣ್ಣಿನಂತೆ, ಒಪ್ಪುವ= ಇರುವ, ತುರಂಗಮಂ= ಕುದುರೆಯನ್ನು, ಕುಧರೋಪಮಾನ= ಕುಧರ= ಬೆಟ್ಟಕ್ಕೆ,ಉಪಮಾನ=ಸಮನಾದ, ಪವಮಾನಜಂ= ಭೀಮನು, ಕಂಡು ನೆರೆ= ತುಂಬಾ ಸುಮ್ಮಾನಮಂ ತಾಳ್ದನು=ಸಂತೋಷ ಪಟ್ಟನು. ತಾತ್ಪರ್ಯ :ಪೂರ್ಣಚಂದ್ರನ ಉದಯವನ್ನು ಕಂಡು ಉಬ್ಬಿ, ಸಮುದ್ರವು ಗಡಿಮೀರಿ ಉಬ್ಬರಹೊಂದುವಂತೆ, ಶುದ್ಧವಾದ, ಅಮೃತದ ಉದ್ಭವವನ್ನು ಕಂಡ ಪುಳಕಗೊಂಡು ಇಂದ್ರನು ಸಂತಸಗೊಂಡಂತೆ, ದೊಡ್ಡ ಸೈನ್ಯವನ್ನು ಹೊಂದಿದ,ಯೌವನಾಶ್ವ ರಾಜನ ಸಂಪತ್ತೆಂಬ ವಧುವಿನ ಕಣ್ಣಿನಂತೆ ಇರುವ, ಕುದುರೆಯನ್ನು, ಬೆಟ್ಟಕ್ಕೆ ಸಮನಾದ ಭೀಮನು, ಕಂಡು ತುಂಬಾ ಸಂತೋಷ ಪಟ್ಟನು. (ಪದ್ಯ - ೭),
1.4.7_21
ಪದ್ಯ - ೮
1.4.8
ಚತುರಪದಗತಿಯ ಸರಸಧ್ವನಿಯ ವರ್ಣಶೋ |
ಭಿತದಲಂಕಾರದ ಸುಲಕ್ಷಣದ ಲಾಲಿತ |
ಶ್ರುತಿರಂಜನದ ವಿಶೇಷಾರ್ಥಸಂಚಿತದ ವಿಸ್ತಾರದಿಂ ಪೊಸತೆನಿಸುವ ||
ನುತ ಸತ್ಕವಿಪ್ರೌಢತರ ಸುಪ್ರಬಂಧದಂ |
ತತಿ ಮನೋಹರಮೆನಿಪ ವಾಜಿಯಂ ಕಂಡು ಹ |
ರ್ಷಿತನಾಗಿ ನೋಡುತಿರ್ದಂ ಕಲಾವಿದನಪ್ಪ ಮಾರುತಿ ಮಹೋತ್ಸವದೊಳು ||8||
1.4.8_22
ಪದ್ಯ - ೯
1.4.9
ಮೂಜಗದೊಳೀ ತುರಂಗಮವೆ ಪೊಸತೆಂದು ವರ |
ವಾಜಿಯಂ ನಿಟ್ಟಿಸುವ ಭೀಮಸೇನನ ಪದಸ |
ರೋಜಯುಗಳಕ್ಕೆರಗಿ ಮೇಘನಾದಂ ನೀವು ನೋಳ್ಪುದೆನ್ನಧಟನೀಗ ||
ವಾಜಿಯಂ ತಹೆನೆನುತ್ತಲ್ಲಿಂ ತಳರ್ದು ಮಾ |
ಯಜಾಲಮಂ ಬೀಸಿದಂ ನಭೋಮಂಡಲ |
ಕ್ಕಾಜನಪನಶ್ವರಕ್ಷೆಯಬಲಂ ಕಂಗೆಡಲ್ ಭೂಪ ಕೇಳದ್ಭುತವನು ||9||
1.4.9_23
ಪದ್ಯ - ೧೦
1.4.10
ತುರುಗಿತೆತ್ತೆತ್ತಲುಂ ಪ್ರಳಯಕಾಲದ ಮೇಘ |
ಮೆರಗುತಿವೆ ಬರಿಯ ಬರಸಿಡಲ್ಪಳೆತ್ತೆತ್ತಲುಂ |
ಕರೆಯುತಿದೆ ಬಿರುಗಾಳಿ ದೂಳನೆತ್ತೆತ್ತಲುಂ ಕತ್ತಲೆಗಳಿಟ್ಟಣಿಸಿವೆ ||
ತೆರೆಯಬಾರದು ಕಣ್ಣ ಮರೆದು ಕಣ್ದೆರೆಯೆ ದಿ |
ಕ್ಕರಿಯಬಾರದು ಮಹಾದ್ಭುತಮಿದೆತ್ತಣದೊ ಜಗ |
ದೆರೆಯನೇ ಬಲ್ಲನೆನುತಿರ್ದುದಾ ಸೈನಿಕಂ ಹೈಡಿಂಬಿಕೃತ ಮಾಯೆಗೆ ||10||
1.4.10_24
ತುರುಗಿತೆತ್ತೆತ್ತಲುಂ ಪ್ರಳಯಕಾಲದ ಮೇಘ ಮೆರಗುತಿವೆ-:ಎತ್ತೆತ್ತೆಲು= ಎಲ್ಲಾಕಡೆ, ಪ್ರಳಯಕಾಲದ ಮೋಡಗಳು ತುರುಗಿತು=ವ್ಯಾಪಿಸಿತು. ಬರಿಯ ಬರಸಿಡಲ್ಗಳೆತ್ತೆತ್ತಲುಂ-: ಬರಿಯ ಬರಸಿಡಿಲ್ ಗಳು, ಎತ್ತೆತ್ತಲುಂ= ಎಲ್ಲಾಕಡೆ, ಕರೆಯುತಿದೆ ಬಿರುಗಾಳಿ ದೂಳನೆತ್ತೆತ್ತಲುಂ= ಬಿರುಗಾಳಿ ಬೀಸಿ ಧೂಳನು ಎತ್ತೆತ್ತೆಲುಂ ಎಲ್ಲಾಕಡೆ ಕರೆಯುತಿದೆ=ಬೀರುತ್ತಿದೆ, ಕತ್ತಲೆಗಳಿಟ್ಟಣಿಸಿವೆ= ಕತ್ತಲೆಗಳು ಕತ್ತಲೆ, ಇಟ್ಟಣಿಸಿದೆ= ದಟ್ಟವಾಗಿದೆ, ತೆರೆಯಬಾರದು ಕಣ್ಣ ಮರೆದು ಕಣ್ದೆರೆಯೆ ದಿಕ್ಕರಿಯಬಾರದು, ಕಣ್ಣುಬಿಡುವಂತಿಲ್ಲ, ಬಿಟ್ಟರೆ ದಿಕ್ಕು ಅರಿಯಬಾರದು=ತಿಳಿಯಲಾರದು, ಮಹಾದ್ಭುತಮಿದೆತ್ತಣದ-: ಮಹಾದ್ಭುತಂ ಇದು ಎನೆ=ಎನ್ನಲಾಗಿ, ಜಗದೆರೆಯನೇ= ಜಗದ ಎರೆಯನೇ= ಜಗತ್ತಿನ ತಂದೆಯೇ, ಬಲ್ಲನೆನುತಿರ್ದುದಾ= ಬಲ್ಲನು ಎನುತಿರ್ದುದು ಆ ಸೈನಿಕಂ ಹೈಡಿಂಬಿಕೃತ= ಹೈಡಿಂಬಿ ಕೃತ ಮಾಯೆಗೆ= ಎನ್ನುತ್ತಿತ್ತು ಆ ಸೈನಿಕ ಸಮೂಹ ಮೇಘನಾದ ಮಾಡಿದ ಮಾಯೆಗೆ. ತಾತ್ಪರ್ಯ :ಮೇಘನಾದ ಮಾಡಿದ ಮಾಯೆಗೆ, ಎಲ್ಲಾಕಡೆ, ಪ್ರಳಯಕಾಲದ ಮೋಡಗಳು ವ್ಯಾಪಿಸಿತು. ಬರಿಯ ಬರಸಿಡಿಲುಗಳು, ಎಲ್ಲಾಕಡೆ, ಬಿರುಗಾಳಿ ಬೀಸಿ ಧೂಳನು ಎಲ್ಲಾಕಡೆ ಬೀರುತ್ತಿದೆ, ಕತ್ತಲೆ, ದಟ್ಟವಾಗಿದೆ, ಕಣ್ಣುಬಿಡುವಂತಿಲ್ಲ, ಬಿಟ್ಟರೆ ದಿಕ್ಕು ತಿಳಿಯಲಾರದು, ಮಹಾದ್ಭುತವು ಇದು ಎನ್ನಲಾಗಿ, ಜಗದ ಜಗತ್ತಿನ ತಂದೆಯೇ, ಬಲ್ಲನು ಎನ್ನುತ್ತಿತ್ತು ಆ ಸೈನಿಕ ಸಮೂಹ . (ಪದ್ಯ - ೧೧),
1.4.10_25
ಪದ್ಯ - ೧೧
1.4.11
ಗಗನದೊಳ್ ಸುಳಿಯುತನಿಮಿಷನೊರ್ವನಿವನ ಮಾ |
ಯೆಗೆ ಭಯಂಗೊಂಡು ಕಡುವೇಗದಿಂ ಪೋಗಿ ವ |
ಜ್ರಿಗೆ ದೂರಲಾತಂ ಚರರ ಕಳುಪಿ ಕೇಳಿದೊಡೀತ ನಾಂ ಭೀಮಸುತನ ||
ಮಗನಧ್ವರಕೆ ಹಯವನೊಯ್ದಪೆನೆನಲ್ಕವಂ |
ಮಗುಳದಂ ಪೋಗಿ ಸುರಪತಿಗೆ ಬಿನ್ನೈಸೆ ನಸು |
ನಗುತವಂ ದೇವರ್ಕಳೊಡಗೂಡಿ ಬಂದನಲ್ಲಿಗೆ ಸಮರಮಂ ನೋಡಲು ||11||
1.4.11_26
ಗಗನದೊಳ್=ಆಕಾಶದಲ್ಲಿ ಸುಳಿಯುತ= ಸಂಚರಿಸುವ, ಅನಿಮಿಷನು ಓರ್ವನು ಇವನ ಮಾಯೆಗೆ ಭಯಂಗೊಂಡು= ದೇವತೆಗಳಲ್ಲಿಒಬ್ಬನು ಇವನ ಮಾಯೆಗೆ ಭಯಪಟ್ಟು, ಕಡುವೇಗದಿಂ= ಬುಹು ವೇಗದಿಂದ, ಪೋಗಿ ವಜ್ರಿಗೆ= ಹೋಗಿ ಇಂದ್ರನಿಗೆ, ದೂರಲು ಆತಂ ಚರರ ಕಳುಪಿ= ದೂರಲು ಆತನು ಸೇವಕರನ್ನು ಕಳುಹಿಸಿ, ಕೇಳಿದೊಡೀತ= ಅವನು ವಿಚಾರಿಸಿದಾಗ, ನಾಂ ಭೀಮಸುತ= ನಾನು ಭೀಮಸೇನನ ಮಗ, ನಮಗನಧ್ವರಕೆ= ನಮಗೆ ಅಧ್ವರಕೆ= ಯಜ್ಞಕ್ಕೆ, ಹಯವನೊಯ್ದಪೆನೆನಲ್ಕವಂ-:ಹಯವನು ಒಯ್ದಪೆನು= ಕುದುರೆಯನ್ನು ಒಯ್ಯುವೆನು, ಮಗುಳದಂ ಪೋಗಿ ಸುರಪತಿಗೆ ಬಿನ್ನೈಸೆ= ಹಿಂತಿರುಗಿ ಹೋಗಿ ಇಂದ್ರನಿಗೆ ಹೇಳು ಎನಲು, ನಸುನಗುತವಂ= ನಸುನಗುತ ಅವಂ=ಅವನು, ದೇವರ್ಕಳೊಡಗೂಡಿ-: ದೇವರ್ಕಳ ಒಡಗೂಡಿ= ದೇವತೆಗಳನ್ನು ಕೂಡಿಕೊಂಡು, ಬಂದನಲ್ಲಿಗೆ-:ಬಂದನು ಅಲ್ಲಿಗೆ ಸಮರಮಂ ನೋಡಲು= ಯುದ್ಧವನ್ನು ನೋಡಲು ಅಲ್ಲಿಗೆ ಬಂದನು. ತಾತ್ಪರ್ಯ :ಆಕಾಶದಲ್ಲಿ ಸಂಚರಿಸುವ, ದೇವತೆಗಳಲ್ಲಿ ಒಬ್ಬನು ಇವನ ಮಾಯೆಗೆ ಭಯಪಟ್ಟು, ಬುಹು ವೇಗದಿಂದ,ಹೋಗಿ ಇಂದ್ರನಿಗೆ, ದೂರಲು ದೂರಲು ಆತನು ಸೇವಕರನ್ನು ಕಳುಹಿಸಿ, ಅವನು ವಿಚಾರಿಸಿದಾಗ, ನಾನು ಭೀಮಸೇನನ ಮಗ, ನಮಗೆ ಯಜ್ಞಕ್ಕೆ, ಕುದುರೆಯನ್ನು ಒಯ್ಯುವೆನು, ಹಿಂತಿರುಗಿ ಹೋಗಿ ಇಂದ್ರನಿಗೆ ಹೇಳು ಎನಲು, ನಸುನಗುತ ಅವನು, ದೇವತೆಗಳನ್ನು ಕೂಡಿಕೊಂಡು, ಯುದ್ಧವನ್ನು ನೋಡಲು ಅಲ್ಲಿಗೆ ಬಂದನು. (ಪದ್ಯ - ೧೧),
1.4.11_27
ಪದ್ಯ - ೧೨
1.4.12
ಇತ್ತಲೀಕುದುರೆಗಾಪಿನ ಭಟರ ಕಣ್ಗೆ ಬ |
ಲ್ಗತ್ತಲೆಗಳಂ ಧೂಳ್ಗಳಂ ಕವಿಸಿ ಭೀತಿಯಂ |
ಬಿತ್ತಿ ನೆಲಕಿಳಿದು ಪಡಿವಾಘೆಯಂ ಪಿಡಿದರಸುಮಕ್ಕಳಂ ಬೀಳೆಹೊಯ್ದು |
ತತ್ತುರಗಮಂ ಕೊಂಡು ಚಿಗಿದನಾಗಸಕೆಸರ |
ದತ್ತಣಿಂದಂಚೆ ಬೆಳುದಾವರೆಯನಳ್ತಿಯಿಂ |
ಕಿತ್ತು ನಭಕೇಳ್ವಂತೆ ಮೇಗನಾದಂ ಭೀಮಕರ್ಣಜರ್ ಬೆರೆಗಾಗಲು ||12||
1.4.12_28
ಇತ್ತಲೀಕುದುರೆಗಾಪಿನ= ಇತ್ತಲು ಈಕಡೆ ಕುದುರೆಗಾಪಿನ= ಕಾವಲಿನವರ, ಭಟರ ಕಣ್ಗೆ ಬಲ್ಗತ್ತಲೆಗಳಂ=ಯೋಧರ ಕಣ್ಣಿಗೆ ಬಲು= ಬಹಳ ಕತ್ತಲೆಗಳಂ= ಕತ್ತಲೆಯನ್ನು, ಧೂಳ್ಗಳಂ= ಧೂಳನ್ನು, ಕವಿಸಿ ಭೀತಿಯಂ=ಹೆದರಿಕೆಯನ್ನು, ಬಿತ್ತಿ=ಉಂಟುಮಾಡಿ, ನೆಲಕಿಳಿದು= ಆಕಾಶದಲ್ಲಿದ್ದ ಮೇಘನಾದನು ನೆಲಕ್ಕೆ ಇಳಿದು, ಪಡಿವಾಘೆಯಂ=(ಕುದುರೆಯನ್ನು) ರಿಕಾಬು (ಕಾಲಿಗಸಿಕ್ಕಿಸಿಕೊಳ್ಳುವ ಕುಣಿಕೆ) ಲಗಾಮುಗಳನ್ನು, ಪಿಡಿದರಸುಮಕ್ಕಳಂ ಬೀಳೆಹೊಯ್ದು= ಅರಸು ಮಕ್ಕಳನ್ನು ಕೆಳಗೆ ಬೀಳುವಂತೆ ಹೊಡೆದು, ತತ್ತುರಗಮಂ-:ತತ್ ಆ ತುರಗಮಂ= ಕುದುರೆಯನ್ನು, ಕೊಂಡು= ತೆಗೆದುಕೊಂಡು, ಚಿಗಿದನಾಗಸಕೆ ಸರದತ್ತಣಿಂದಂಚೆ -:ಚಿಗಿದನು ಆಗಸಕೆ=ಆಕಾಶಕ್ಕೆ ಹಾರಿದನು, ಹೇಗೆಂದರೆ, ಸರದಿಂದ= ಸರೋವರದಿಂದ ಅಂಚೆ= ಹಂಸವು, ಬೆಳುದಾವರೆಯನಳ್ತಿಯಿಂ-:ಬೆಳು ತಾವರಯ= ಬಿಳಿತಾವರೆಯನ್ನು, ಕಿತ್ತು ನಭಕೇಳ್ವಂತೆ-:ನಭಕೆ ಏಳ್ವಂತೆ=ಆಕಾಶಕ್ಕೆ ಹಾರುವಂತೆ ಮೇಗನಾದಂ= ಮೇಘನಾದನು, ಭೀಮಕರ್ಣಜರ್ ಬೆರೆಗಾಗಲು= ಭೀಮ ಮತ್ತು ಕರ್ಣಜನಾದ ವೃಷಕೇತುಗಳು ಬೆರಗಾಗಲು.
ಈ ಕಡೆ ಕುದುರೆ ಕಾವಲಿನವರ, ಯೋಧರ ಕಣ್ಣಿಗೆ ಬಲು ಕತ್ತಲೆಯನ್ನು, ಧೂಳನ್ನು, ಕವಿಸಿ ಹೆದರಿಕೆಯನ್ನು, ಉಂಟುಮಾಡಿ,ಆಕಾಶದಲ್ಲಿದ್ದ ಮೇಘನಾದನು ನೆಲಕ್ಕೆ ಇಳಿದು,ಕುದುರೆಯನ್ನು ರಿಕಾಬು (ಕಾಲಿಗಸಿಕ್ಕಿಸಿಕೊಳ್ಳುವ ಕುಣಿಕೆ) ಲಗಾಮುಗಳನ್ನು, ಅರಸು ಮಕ್ಕಳನ್ನು ಕೆಳಗೆ ಬೀಳುವಂತೆ ಹೊಡೆದು,ಆ ಕುದುರೆಯನ್ನು, ತೆಗೆದುಕೊಂಡು, ಸರೋವರದಿಂದ ಹಂಸವು, ಬಿಳಿತಾವರೆಯನ್ನು, ಕಿತ್ತು ಆಕಾಶಕ್ಕೆ ಹಾರುವಂತೆ ಭೀಮ ಮತ್ತು ಕರ್ಣಜನಾದ ವೃಷಕೇತುಗಳು ಬೆರಗಾಗಲು. ಮೇಘನಾದನು ಆಕಾಶಕ್ಕೆ ಹಾರಿದನು,, (ಪದ್ಯ - ೧೨),
1.4.12_29
ಪದ್ಯ - ೧೩
1.4.13
ರಾಹು ತುಡುಕಿದ ಚಂದ್ರಮಂಡಲವೊ ಗರುಡನು |
ತ್ಸಾಹದಿಂದೆತ್ತಿ ಕೊಂಡೊಯ್ವಮೃತಕಲಶವೊ ಬ | ಲಾಹಕಂ ತಾಳ್ದ ಬಿಳ್ಮಿಂಚಿನೊಬ್ಬುಳಿಯೊ ಪೊಸತೆನೆ ಘಟೋತ್ಕಚತನಯನು ||
ಬಾಹುಬಲದಿಂದೆಡದ ಕಕ್ಷದೊಳಿರುಂಕಿದ ಮ |
ಹಾಹಯಂ ಗಗನಮಾರ್ಗ ದೊಳ್ಬೆದುತಿರೆ ಕುದುರೆ |
ಗಾಹಿನ ಚತುರ್ಬಲಂ ಕಂಡು ಬೊಬ್ಬರಿದಾರ್ದು ಕಾಳಗಕೆ ಮಂಕೊಂಡುದು ||13||
1.4.13_30
ರಾಹು ತುಡುಕಿದ=ಹಿಡಿದ ಚಂದ್ರಮಂಡಲವೊ ಗರುಡನುತ್ಸಾಹದಿಂದೆತ್ತಿ-:ಗುರುಡನು ಉತ್ಸಾಹದಿಂದ ಎತ್ತಿ, ಕೊಂಡೊಯ್ವಮೃತಕಲಶವೊ-:ಕೊಂಡೊಯ್ವ=ತೆಗೆದುಕೊಂಡು ಹೋಗುವ ಅಮೃತ ಕಲಶವೋ, ಬಲಾಹಕಂ=ಮೋಡವು ತಾಳ್ದ= ಹೊಂದಿರುವ ಬಿಳ್ಮಿಂಚಿನೊಬ್ಬುಳಿಯೊ-:ಬಿಳ್ ಮಿಂಚಿನ ಒಬ್ಬುಳಿಯೊ= ಬಿಳಿಯ ಮಿಂಚಿನ ಗೊಂಚಲೊ! ಪೊಸತೆನೆ-:ಹೊಸತು ಎನೆ= ಎನ್ನುವಂತೆ, ಘಟೋತ್ಕಚತನಯನುಘಟೋದ್ಘಜ ತನಯನು= ಮೇಘನಾದನು, ಬಾಹುಬಲದಿಂದೆಡದ-:ಬಾಹುಬಲದಿಂದೆ ಎಡದ, ಕಕ್ಷದೊಳಿರುಂಕಿದಕಕ್ಷದೊಳ್ ಇರುಂಕಿಸಿದ= ಬಾಹುಬಲದಿಂಸ ಎಡದ ಕಕ್ಷದೊಳ್= ಎಡದ ಕಂಕುಳಲ್ಲಿ ಅವಚಿಕೊಂಡ, ಮಹಾಹಯಂ= ಮಹಾ ಕುದುರೆಯು, ಗಗನಮಾರ್ಗದೊಳೈದುತಿರೆ=ಗಗನಮಾರ್ಗದಲ್ಲಿ ಐದುತಿರೆ= ಬರುತ್ತಿರಲು, ಕುದುರೆಗಾಹಿನ= ಕದರೆಕಾವಲಿನ ಚತುರ್ಬಲಂ=ಚತರ್ಬಲಸೈನ್ಯವೂ, ಕಂಡು ಬೊಬ್ಬರಿದಾರ್ದು-: ಬೊಬ್ಬಿರಿದು ಆರ್ದು=ಕೂಗಿ, ಕಾಳಗಕೆ ಮಂಕೊಂಡುದು= ಯುದ್ಧಕ್ಕೆ ಸಿದ್ಧವಾಯಿತು.
ರಾಹು ಹಿಡಿದ ಚಂದ್ರಮಂಡಲವೊ ಗುರುಡನು ಉತ್ಸಾಹದಿಂದ ಎತ್ತಿ, ತೆಗೆದುಕೊಂಡು ಹೋಗುತ್ತಿರುವ ಅಮೃತ ಕಲಶವೋ, ಮೋಡವು ಹೊಂದಿರುವ ಬಿಳಿಯ ಮಿಂಚಿನ ಗೊಂಚಲೊ! ಹೊಸತು ಎನ್ನುವಂತೆ, ಮೇಘನಾದನು, ಬಾಹುಬಲದಿಂದ ತನ್ನ ಎಡದ ಕಂಕುಳಲ್ಲಿ ಅವಚಿಕೊಂಡ,ಮಹಾ ಕುದುರೆಯು, ಗಗನಮಾರ್ಗದಲ್ಲಿ ಬರುತ್ತಿರಲು, ಕುದರೆ ಕಾವಲಿನ ಚತರ್ಬಲಸೈನ್ಯವೂ, ಅದನ್ನು ಕಂಡು ಬೊಬ್ಬಿರಿದು ಕೂಗಿ, ಯುದ್ಧಕ್ಕೆ ಸಿದ್ಧವಾಯಿತು. (ಪದ್ಯ - ೧೩).
1.4.13_31
ಪದ್ಯ ೧೪
1.4.14
ಜೋಡಾಗಿ ಪೂಡುವೊಡೆ ಸಾಲದೇಳೇ ಹಯಂ |
ಜೋಡಿಸುವೆನೀ ತುರಗಮಂ ತನ್ನ ತೇರ್ಗೆಂದು |
ಗಾಢದಿಂ ಬಾಂಗೆತ್ತಿ ಕೊಂಡೊಯ್ಯದಿರನಬ್ಜಸಖನೆಂಬ ಶಂಖೆಯಿಂದೆ || ರೂಢಿಸಿದ ಮಂದೇಹಸೇನೆ ಬಂದೆಣ್ದೆಸೆಗ |
ಮಾಡಿದುದೊ ಮುತ್ತಿಗೆಯನೆನೆ ಮೇಘನಾದನ ವಿ |
ಭಾಡಿಸಿ ಚತುರ್ಬಲಂ ಕವಿಯೆ ಲೆಕ್ಕಿಸದವಂ ಸೈವರಿದನಾಗಸದೊಳು ||14||
1.4.14_32
ಜೋಡಿ ಜೋಡಿಯಾಗಿ (ಹೂಡುವೊಡೆ)ಕಟ್ಟಲು ಏಳೇ ಕುದುರೆ ಇದೆ, ಸೂರ್ಯನ ರಥಕ್ಕೆ ಎಂಟು ಬೇಕಾಗುವುದು; ಈ ಕುದುರೆಯನ್ನು ತನ್ನ ರಥಕ್ಕೆ ಜೋಡಿಸುವೆನು/ಸೇರಿಸುವೆನು ಎಂದು, ವೇಗದಿಂದ ಆಕಾಶಕ್ಕೆ ಈ ಕುದುರೆಯನ್ನು ಎತ್ತಿ, ಸೂರ್ಯನು ತೆಗೆದುಕೊಂಡು ಹೋಗದೆ ಇರಲಾರನು ಎಂಬ ಅನುಮಾನದಿಂದ,ಯುದ್ಧಕ್ಕೆ ಸಿದ್ಧವಾದ, ಒಗ್ಗೂಡಿದ ಸೈನ್ಯವು, ಎಂಟೂ ದಿಕ್ಕಿಗೆ ನುಗ್ಗಿ, ಮುತ್ತಿಗೆಯನ್ನು ಹಾಕಿತೋ ಎನ್ನುವಮತೆ, ಮೇಘನಾದನ ಮಾಯೆಯನ್ನು ಧಿಕ್ಕರಿಸಿ, ಚತುರ್ಬಲವು ಮುತ್ತಲು, ಅವನು ಅದನ್ನು ಲಕ್ಷಿಸದೆ, ಆಕಾಶದಲ್ಲಿ ಮುಂದುವರಿದನು. (ಪದ್ಯ - ೧೪),
1.4.14_33
ಪದ್ಯ - ೧೫
1.4.15
ಬಳಿಕಾಬಲಂ ಕಂಡುದಭ್ರಮಾರ್ಗದೊಳೆ ಮುಂ |
ದಳೆಯುತಿಹ ಮೇಘನಾದನನೆಲವೊ ಬರಿಮಾಯೆ |
ಗಳನೆಸಗಿ ಮೋಸದೊಳ್ ತುರಗಮಂ ಕೊಂಡು ಬಾಂದಳಕಡರ್ದೊಡೆ ನಿನ್ನನು||
ಉಳುಹುವರೆ ಯೌವನಾಶ್ವನ ಸುಭಟರಕಟ ನಿ |
ನ್ನಳವನರಿಯದೆ ಬಂದು ಕೆಣಕಿದೆಯಲಾ ಜೀವ |
ದುಳಿವನಾರೈದುಕೊಳ್ಳೆನುತಾತನಂ ಮುತ್ತಿಕೊಂಡು ಕವಿದಿ(ದೆ)ಸುತಿರ್ದುದು ||15||
1.4.15_34
ಬಳಿಕಾಬಲಂ-: ಬಳಿಕ ಆ ಬಲಂ= ಸೈನ್ಯವು, ಕಂಡುದಭ್ರಮಾರ್ಗದೊಳೆ-:ಕಂಡುದು=ನೋಡಿತು,ಅಭ್ರ ಮಾರ್ಗದೊಳ್= ಆಕಾಶಮಾರ್ಗದಲ್ಲಿ, ಮುಂದಳೆಯುತಿಹ= ಮಂದುವರಿಯುತ್ತಿರುವ, ಮೇಘನಾದನನೆಲವೊ-: ಮೇಘನಾದನನು=ಮೇಘನಾದನನ್ನು ಎಲವೋ ಬರಿಮಾಯೆಗಳನೆಸಗಿ-: ಬರಿ ಮಾಯೆಗಳನು=ಮಾಯಾವಿದ್ಯೆಯನ್ನು ಎಸಗಿ=ಮಾಡಿ ಮೋಸದೊಳ್=ಮೋಸದಿಂದ, ತುರಗಮಂ=ಕುದುರೆಯನ್ನು, ಕೊಂಡು= ತೆಗೆದುಕೊಂಡು, ಬಾಂದಳಕಡರ್ದೊಡೆ-:ಬಾಂದಳಕ್ಕೆ = ಆಕಾಶಕ್ಕೆ ಅಡರ್ದೊಡೆ= ಹೋದರೆ, ನಿನ್ನನು ಉಳುಹುವರೆ= ಉಳಿಸುವರೆ, ಯೌವನಾಶ್ವನ ಸುಭಟರಕಟ= ಸುಭಟರು ಅಕಟಕಟ! ನಿನ್ನಳವನರಿಯದೆ_; ನಿನ್ನ ಅಳವನು=ಶಕ್ತಿಯನ್ನು ಅರಿಯದೆ, ಬಂದು ಕೆಣಕಿದೆಯಲಾ=ಕೆಣಕದೆಯಲ್ಲಾ! ಜೀವದುಳಿವನಾರೈದುಕೊಳ್ಳೆನುತಾತನಂ-:ಜೀವದುಳಿವನು= ಜೀವವನ್ನು ಉಳಿಸಿಕೊಳ್ಳುವುದನ್ನು ಆರೈದುಕೊಳ್ಳು=ಪ್ರಯತ್ನಮಾಡು, ಎನುತ= ಎನ್ನುತ್ತಾ (ಆ ಸೈನ್ಯವು) ಕವಿದಿ(ದೆ)ಸುತಿರ್ದುದು-:ಕವಿದು= ಮುತ್ತಿಕೊಂಡು,ಎಸೆತಿರ್ದುದು= ಆಯುಧಗಳನ್ನು ಪ್ರಯೋಗಿಸುತ್ತಿದ್ದರು.
ಬಳಿಕ ಆ ಸೈನ್ಯವು,ನೋಡಿತು, ಆಕಾಶಮಾರ್ಗದಲ್ಲಿ, ಮಂದುವರಿಯುತ್ತಿರುವ, ಮೇಘನಾದನನ್ನು ಎಲವೋ ಬರಿ ಮಾಯಾವಿದ್ಯೆಯನ್ನು ಮಾಡಿ ಮೋಸದಿಂದ, ಕುದುರೆಯನ್ನು ತೆಗೆದುಕೊಂಡು, ಆಕಾಶಕ್ಕೆ ಹೋದರೆ, ನಿನ್ನನು ಉಳಿಸುವರೆ, ಯೌವನಾಶ್ವನ ಸುಭಟರು ಅಕಟಕಟ!ನಿನ್ನ ಶಕ್ತಿಯನ್ನು ಅರಿಯದೆ, ಬಂದು ಕೆಣಕದೆಯಲ್ಲಾ! ಜೀವವನ್ನು ಉಳಿಸಿಕೊಳ್ಳುವ ಪ್ರಯತ್ನಮಾಡು, ಎನ್ನುತ್ತಾ (ಆ ಸೈನ್ಯವು) ಮುತ್ತಿಕೊಂಡು,ಆಯುಧಗಳನ್ನು ಪ್ರಯೋಗಿಸುತ್ತಿದ್ದರು. (ಪದ್ಯ - ೧೫),
1.4.15_35
ಪದ್ಯ - ೧೬
1.4.16
ಪಿಂತಿರುಗಿ ನೋಡಿದಂ ಕಂಡೆನಲ್ಲವೆ ಜೀವ |
ಮಂ ತೆಗೆದುಕೊಂಡೊಯ್ವ ಕಾಲನಂ ಪೆಣನಟ್ಟು |
ವಂತಾಯ್ತಲಾ ನಿಮ್ಮ ಸಾಹಸಂ ಜಾಗುಜಾಗೆನುತೆ ಹೈಡಿಂಬಿ ನಗುತೆ ||
ಸಂತತಂ ಕರೆವ ಕಲ್ಮಳೆಗಳಂ ಸೃಜಿಸಿ ಬಲ |
ಮಂ ತವೆ ಪೊರಳ್ಚಿ ಮುಂದಳೆಯಲಾಪುಯ್ಯಲೂ |
ರಂ ತಾಗೆ ಪೊರಮಟ್ಟುದಾ ನೃಪನ ಸೈನ್ಯಮಕ್ಷೌಹಿಣಿಯ ಗಣನೆಯಿಂದೆ ||16||
1.4.16_36
ಪಿಂತಿರುಗಿ= ಹೀತಿರುಗಿ ನೋಡಿದಂ= ನೋಡಿದನು, ಕಂಡೆನಲ್ಲವೆ-:ಕಂಡೆನು ಅಲ್ಲವೆ,=ಇದು ಹೀಗಲ್ಲವೇ? ಜೀವಮಂ= ಜೀವವನ್ನು, ತೆಗೆದುಕೊಂಡೊಯ್ವ ಕಾಲನಂ=ತೆಗೆದುಕೋಡು ಹೋಗುತ್ತಿರುವ ಯಮನನ್ನು, ಪೆಣನಟ್ಟುವಂತಾಯ್ತಲಾ-:ಪೆಣನು ಅಟ್ಟುವಂತೆ ಆಯ್ತಲಾ= ಹೆಣವು ಅಟ್ಟಿಸಿಕೊಂಡು ಹೋಗುವಂತೆ ಆಯಿತಲ್ಲಾ; ನಿಮ್ಮ ಸಾಹಸಂ ಜಾಗುಜಾಗೆನುತೆ=ನಿಮ್ಮ ಸಾಹಸವು ಭೇಷ್-ಭೇಷ್ ಎನುತ= ಎನ್ನುತ್ತಾ, ಹೈಡಿಂಬಿ ನಗುತೆ= ಮೇಘನಾದನು ನಗುತ್ತಾ, ಸಂತತಂ= ಒಂದೇಸಮನೆ ಕರೆವ= ಸುರಿಯುವ, ಕಲ್ಮಳೆಗಳಂ ಸೃಜಿಸಿ= ಕಲ್ಲಿನ ಮಳೆಯನ್ನು ಸೃಷ್ಟಿಸಿ, ಬಲಮಂ ತವೆ ಪೊರಳ್ಚಿ=ಸೈನ್ಯವನ್ನು ಮತ್ತೆ ಹೊರಳಿಸಿ ಹಿಂತಿರುಗುವಂತೆಮಾಡಿ ಮುಂದಳೆಯಲಾಪುಯ್ಯಲೂರಂ-:ಮುಂದಳೆಯಲ್= ಮುಂದುವರೆಯಲು, ಆ ಸುದ್ದಿ, ಊರಂ ತಾಗೆ= ಊರಿಗೆ ಮುಟ್ಟಲು, ಪೊರಮಟ್ಟುದಾ-:ಪೊರಮಟ್ಟುದು = ಹೊರಹೊರಟಿತು ಆ, ನೃಪನ= ರಾಜನ, ಸೈನ್ಯಮಕ್ಷೌಹಿಣಿಯ-:ಸೈನ್ಯಂ= ಸೈನ್ಯವು, ಅಕ್ಷೌಹಿಣಿಯ ಗಣನೆಯಿಂದೆ= ಸೈನ್ಯವು ಅಕ್ಷೋಹಿಣಿಯ ಲೆಕ್ಕದಲಿ ಪೊರಮಟ್ಟುದು= ಹೊರಟಿತು.
ಮೇಘನಾದನು ಹೀತಿರುಗಿ ನೋಡಿದನು, 'ಕಂಡೆನು ಇದು ಹೀಗಲ್ಲವೇ? ಜೀವವನ್ನು ತೆಗೆದುಕೋಡು ಹೋಗುತ್ತಿರುವ ಯಮನನ್ನು, ಹೆಣವು ಅಟ್ಟಿಸಿಕೊಂಡು ಹೋಗುವಂತೆ ಆಯಿತಲ್ಲಾ'; 'ನಿಮ್ಮ ಸಾಹಸವು ಭೇಷ್-ಭೇಷ್', ಎನ್ನುತ್ತಾ, ಮೇಘನಾದನು ನಗುತ್ತಾ, ಒಂದೇಸಮನೆ ಸುರಿಯುವ,ಕಲ್ಲಿನ ಮಳೆಯನ್ನು ಸೃಷ್ಟಿಸಿ, ಸೈನ್ಯವನ್ನು ಮತ್ತೆ ಹಿಂತಿರುಗುವಂತೆಮಾಡಿ, ಮುಂದೆ ಹೋಗುತ್ತಿರಲು, ಆ ಸುದ್ದಿ ಊರಿಗೆ ಮುಟ್ಟಲು, ಆ ರಾಜನ ಸೈನ್ಯವು ಅಕ್ಷೋಹಿಣಿಯ ಲೆಕ್ಕದಲ್ಲಿ ಹೊರ ಹೊರಟಿತು. (ಪದ್ಯ - ೧೬),
1.4.16_37
ಪದ್ಯ - ೧೭
1.4.17
ತನ್ನೊಳಿರ್ದಮಲ ಹಯರತ್ನಮಂ ಕೊಂಡು ಕಳ |
ವಿನ್ನಭಸ್ಥಳಕೊಯ್ದನೆಂಬ ಕಡುಗೋಪದಿಂ |
ಬೆನ್ನಬಿಡದೆದ್ದುನಡೆದುದೊ ಗಗನಕೀಧರಣಿಯೆನೆ ಘಟೋತ್ಕಚತನುಜನು||
ಮುನ್ನ ಮಾಡಿದ ರಜದ ಮಾಯೆಗಿಮ್ಮಡಿಸಿ ಪಡಿ |
ಯನ್ನೆಗಳ್ಚಿದರೊ ವೈರಿಗಳೆನೆ ರಣೋತ್ಸಾಹ |
ದಿನ್ನಡೆವ ಚಾತುರಂಗದ ಪದಹತಕ್ಕೇಳ್ವ ಧೂಳ್ ಮಸಿಗಿತಂಬರದೊಳು ||17||
1.4.17_38
ತನ್ನೊಳಿರ್ದಮಲ ಹಯರತ್ನಮಂ ಕೊಂಡು-:ತನ್ನೊಳು ಇರ್ದ ಅಮಲ ಹಯರತ್ನಮಂ ಕೊಂಡು ಕಳವಿಂ ನ್ನಭಸ್ಥಳಕೆ ಒಯ್ದನು ಎಂಬ=ತನ್ನಲ್ಲಿದ್ದ ಶ್ರೇಷ್ಟವಾದರತ್ದಂತಹ ಕುದುರೆಯನ್ನು ಕಳವಿನಿಂದ ತೆಗೆದುಕೊಂಡು ಆಕಾಶಕ್ಕೆ ಒಯ್ದನು= ತೆಗೆದುಕೊಂಡು ಹೋದನು ಎಂಬ,(ವಿಚಾರ ತಿಳಿದು), ಕಡುಗೋಪದಿಂ = ಬಹಳ ಸಿಟ್ಟಿನಿಂದ, ಬೆನ್ನಬಿಡದೆದ್ದುನಡೆದುದೊಗಗನಕೀಧರಣಿಯೆನೆ-: ಬೆನ್ನಬಿಡದೆ ಎದ್ದು ನಡೆದುದೊ= ಹಿಂಬಾಲಿಸಿಕೊಂಡು ಹೋದರು, ಹೇಗೆಂದರೆ ಗಗನಕೀಧರಣಿಯೆನೆ= ಗಗನಕೆ ಈ ಧರಣಿ ಎನೆ= ಆಕಾಶಕ್ಕೆ ಈ ಭೂಮಿಯೇ ಹೋಯಿತೋ ಎನ್ನುವಂತೆ; ಘಟೋತ್ಕಚತನುಜನು-ಘಟೋತ್ಕಜನ ಅನುಜನು= ಘಟೋತ್ಕಚನ ತಮ್ಮ ಮೇಘನಾದನು, ಮುನ್ನ ಮಾಡಿದ ರಜದ ಮಾಯೆಗಿಮ್ಮಡಿಸಿ= ಮೊದಲು ಮಾಡಿದ ಮಾಯಾತಂತ್ರಕ್ಕೆ, ಇಮ್ಮಡಿಸಿ= ಎರಡರಷ್ಟು, ಪಡಿಯನ್ನೆಗಳ್ಚಿದರೊ ವೈರಿಗಳೆನೆ-: ಪಡಿಯನ್ನು ನೆಗಳ್ಚಿದರೋ ಎನೆ= ಪ್ರತಿ ತಂತ್ರವನ್ನು ಮಾಡಿದರೋ ಎನ್ನುವಮತೆ, ರಣೋತ್ಸಾಹದಿನ್ನಡೆವ-:ರಣೋತ್ಸಾಹದಿಂ ನೆಡೆದ= ಯುದ್ಧದಾವೇಶದಿಂದ ನೆಡೆದ, ಚಾತುರಂಗದ ಪದಹತಕ್ಕೇಳ್ವ ಧೂಳ್= ಚತುರಂಗ ಸೈನ್ಯದ ನೆಡಿಗೆಯಿಂದ ಎದ್ದ ಧೂಳು, ಮಸಿಗಿತಂಬರದೊಳು-:ಮಸುಗಿತು ಅಂಬರದೊಳು=ಆಕಾಶದಲ್ಲಿ ಮುಸುಗಿ ತುಂಬಿಕೊಂಡಿತು.
1.4.17_39
ಪದ್ಯ - ೧೮
1.4.18
ಪಟಹ ನಿಸ್ಸಾಳ ತಮ್ಮಟ ಭೇರಿಗಳ ಸಮು |
ತ್ಕಟನಾದಮುಗ್ರಗಜಘಟೆಯ ಘಂಟಾರವಂ |
ಚಟುಲ ವಾಜಿಗಳ ಖುರಪುಟದ ರಭಸಂ ಹರಿವ ಸುಟಿಯ ರಥಚಕ್ರಧ್ವನಿ ||
ಲಟಕಟಪ ಸಮರಲಂಪಟರ ಭುಜಗಳ ಹೊಯ್ಲ |
ಧಟರ ಚಾಪಸ್ವನಂ ಪಟುಭಟರ ಬೊಬ್ಬೆಯಾ |
ರ್ಭಟೆಗಳೊಂದಾಗಿ ಸಂಘಟಿಸಿತೀಬ್ರಹ್ಮಾಂಡ ಘಟಮಿಂದೊಡೆಯದಿರದೆನೆ ||18||
1.4.18_40
ಯುದ್ಧದಲ್ಲಿ ಬಾರಿಸುವ ಪಟಹ, ನಿಸ್ಸಾಳ, ತಮ್ಮಟ, ಭೇರಿಗಳ, ಸಮುತ್ಕಟನಾದಮುಗ್ರಗಜಘಟೆಯ-:ಸಮುತ್ಕಟ= ಒಟ್ಟುಸೇರಿದ ದೊಡ್ಡ, ನಾದಂ= ಶಬ್ದ, ಅಗ್ರಗಜಘಟೆಯ=ಮುಂಭಾಗದಲ್ಲಿ ಆನಗೆ ಕಟ್ಟಿದ ಗಂಟೆಯ, ಘಂಟಾರವಂ= ಘಂಟೆಯ ನಾದ; ಚಟುಲ ವಾಜಿಗಳ ಖುರಪುಟದ ರಭಸಂ= ಓಡುವ ಕುದುರೆಗಳ ಗೊರಸಿನ ಖುರಪುಟದ ಶಬ್ದ; ಹರಿವ ಸುಟಿಯ ರಥಚಕ್ರಧ್ವನಿ= ವೇಗದ ರಥದ ಗಾಲಿಯ ಶಬ್ದ; ಲಟಕಟಪ ಸಮರಲಂಪಟರ ಭುಜಗಳ ಹೊಯ್ಲು= ಭುಜಕೀರ್ತಿಗಳನ್ನು ಕಟ್ಟದ ಯೋಧರ ಕೂಗು; ಅಧಟರ ಚಾಪಸ್ವನಂ=ಶೂರರ ಬಿಲ್ಲಿ ಠೇಂಕಾರ; ಪಟುಭಟರ ಬೊಬ್ಬೆಯಾರ್ಭಟೆಗಳು ಒಂದಾಗಿ= ಕಾಲಾಳುಗಳ ಬೊಬ್ಬೆ-ಕೂಗು;ಈ ಎಲ್ಲಾ ಸದ್ದು ಒಂದಾಗಿ, ಸಂಘಟಿಸಿತೀಬ್ರಹ್ಮಾಂಡ ಘಟಮಿಂದೊಡೆಯದಿರದೆನೆ= ಸಂಘಟಿಸಿತು ಈ ಬ್ರಹ್ಮಾಂಡ= ಈ ಬ್ರಹ್ಮಾಂಡವೇ ಒಂದಕ್ಕೊಂದು ಡಿಕ್ಕಿಯಾಯಿತೋ, ಈ ಬ್ರಹ್ಮಾಂಡದ ಘಟಂ(ಮಡಕೆ, ದೇಹ) ಇಂದು ಒಡೆಯದೆ ಇರದೇ?= ಶರೀರವು ಒಡೆಯದೇ ಇರುವುದೇ? ಎಂಬತಿತ್ತು.
ಯುದ್ಧದಲ್ಲಿ ಬಾರಿಸುವ ಪಟಹ, ನಿಸ್ಸಾಳ, ತಮ್ಮಟ, ಭೇರಿಗಳ,ಒಟ್ಟುಸೇರಿದ ದೊಡ್ಡ, ಶಬ್ದ, ಮುಂಭಾಗದಲ್ಲಿ ಆನಗೆ ಕಟ್ಟಿದ ಗಂಟೆಯ, ಘಂಟೆಯ ನಾದ; ಓಡುವ ಕುದುರೆಗಳ ಗೊರಸಿನ ಖುರಪುಟದ ಶಬ್ದ; ವೇಗದ ರಥದ ಗಾಲಿಯ ಶಬ್ದ; ಭುಜಕೀರ್ತಿಗಳನ್ನು ಕಟ್ಟದ ಯೋಧರ ಕೂಗು; ಶೂರರ ಬಿಲ್ಲಿನ ಠೇಂಕಾರ; ಕಾಲಾಳುಗಳ ಬೊಬ್ಬೆ-ಕೂಗು; ಈ ಎಲ್ಲಾ ಸದ್ದು ಒಂದಾಗಿ, ಈ ಬ್ರಹ್ಮಾಂಡವೇ ಒಂದಕ್ಕೊಂದು ಡಿಕ್ಕಿಯಾಯಿತೋ, ಈ ಬ್ರಹ್ಮಾಂಡದ ಶರೀರವು ಒಡೆಯದೇ ಇರುವುದೇ? ಎಂಬತಿತ್ತು. (ಪದ್ಯ - ೧೮),
1.4.18_41
ಪದ್ಯ - ೧೯
1.4.19
ಎತ್ತಿಬಹ ಸತ್ತಿಗೆಯ ಮೊತ್ತಂಗಳೆತ್ತಲುಂ |
ಕತ್ತಲಿಸೆ ಪೊತ್ತ ಮಸೆವೆತ್ತ ಬಲ್ಗತ್ತಿಗಳ |
ಕಿತ್ತು ಭಟರೆತ್ತಿ ಜಡಿಯುತ್ತಿರಲ್ಕತ್ತ ಬೆಳೆಗಿತ್ತುವವು ಮತ್ತೆ ಬಲಕೆ ||
ಸುತ್ತಲುಂ ಕೆತ್ತವೋಲ್ ಮತ್ತಗಜಮೊತ್ತರಿಸಿ |
ಮುತ್ತಿನಡೆಯುತ್ತೆಲರನೊತ್ತಿ ನಿಲಿಸುತ್ತಿರಲು |
ದತ್ತ ಚಮರೋತ್ಥಿತ ಮರುತ್ತತಿಯೊಳುತ್ತಮ ಹಿಮೋತ್ತರಂ ಬಿತ್ತರಿಸಿತು ||19||
1.4.19_42
ಎತ್ತಿಕೊಂಡು ಬರುವ ಛತ್ರಿಯ ಗುಂಪುಗಳಿಂದ ಎಲ್ಲಾ ಕಡೆಯೂ ಕತ್ತಲುಂಟಾಗಲು,ಹೊತ್ತಿರುವ ಮಸೆದ ದೊಡ್ಡ ಕತ್ತಿಗಳನ್ನು ಒರೆಯಿಂದ ತೆಗೆದು ಯೋಧರು ಎತ್ತಿ ಝಳಿಪಿಸುತ್ತರಲು,ಆ ಸೈನ್ಯಕ್ಕೆ ಪ್ರದೇಶದಲ್ಲಿ ಬೆಳಕನ್ನು ಉಂಟುಮಾಡುವುವು; ಸುತ್ತಲೂ ಜೋಡಿಸಿದಂತೆ ಮದಿಸಿದ ಆನೆಯ ಸುತ್ತ, ಮುತ್ತಿ ನೆಡಯುತ್ತಿರೆ ಗಾಳಿಯನ್ನು, ಒತ್ತಿ ಅದು ಚಲಿಸಲು ಬಿಡದಂತೆ ಹೋಗುತ್ತಿರಲು, ಚಾಮರಗಳಿಂದ ಹೊರಟ ಗಾಳಿಯು, ಸಮೂಹದಲ್ಲಿ,ಸೊಗಸಾದ ತಂಪಾದ (ಗಾಳಿಯನ್ನು) ಹರಡುವಂತೆ ಮಾಡಿತು ಅಥವಾ ಬೀಸಿತು (ಪದ್ಯ - ೧೯),
1.4.19_43
ಪದ್ಯ - ೨೦
1.4.20
ತಡೆಯೊಳಿರ್ದಖಿಳ ಮೇಘಂಗಳಂ ಪ್ರಳಯದೊಳ್ |
ಬಿಡಲು ಘುಡಿಘುಡಿಸುತ್ತೆ ನಡೆವಂದದಿಂದೆ ಬೊ |
ಬ್ಬಿಡುತವಧಿಯಿಲ್ಲದೈತರುತಿರ್ಪ ಯೌವನಾಶ್ವನ ಸೈನ್ಯಮಂ ನೋಡುತೆ ||
ಎಡಗಯ್ಯ ತುರುಗಮಂ ಬಲಿದಡವಳಿಸಿ ತನ್ನ |
ಕಡುಗಮಂ ಜಡಿದನಿಬರೆಲ್ಲರಂ ಚಿತ್ತದೊಳ್ |
ಗಡಣಿಸದೆ ಕಲಿಘಟೋತ್ಕಚಸುತಂ ನಸುನಗುತೆ ಗಗನದೊಳ್ ಬರುತಿರ್ದನು||20||
1.4.20_44
ತಡೆಯೊಳಿರ್ದಖಿಳ-:ತಡೆಯೊಳ್= ನಿರ್ಬಂಧದಲ್ಲಿ, ಇರ್ದ= ಇದ್ದ, ಮೇಘಂಗಳಂ= ಮೋಡಗಲನ್ನು, ಪ್ರಳಯದೊಳ್=ಪ್ರಳಯಕಾಲದಲ್ಲಿ, ಬಿಡಲು= ಬಿಟ್ಟಾಗ, ಘುಡಿಘುಡಿಸುತ್ತೆ ನಡೆವಂದದಿಂದೆ=(ಗುಡುಗು ಸಿಡಲಿನಿಂದ) ಆರ್ಭಟ ಮಾಡುತ್ತಾ ಚಲಿಸುವಂತೆ, ಬೊಬ್ಬಿಡುತವಧಿಯಿಲ್ಲದೈತರುತಿರ್ಪ-:ಬೊಬ್ಬಿಡುತ ಅವಧಿಯಿಲ್ಲದೆ ಐತರುತಿರ್ಪ= ಆರ್ಭಟಿಸುತ್ತಾ ವೇಗವಾಗಿ ಬರುತ್ತಿರುವ, ಯೌವನಾಶ್ವನ ಸೈನ್ಯಮಂ= ಸೈನ್ಯವನ್ನು, ನೋಡುತೆ= ನೋಡಿ, ಎಡಗಯ್ಯ ತುರುಗಮಂ=ಎಡದ ಕೈ ಕಂಕುಳಲ್ಲಿದ್ದ ಕುದುರೆಯನ್ನು, ಬಲಿದಡವಳಿಸಿ-: ಬಲಿದು ಅಳವಡಿಸಿ= ಅಲ್ಲಿ ಗಟ್ಟಿಯಾಗಿ ಹಿಡಿದುಕೊಂಡು, ತನ್ನ ಕಡುಗಮಂ= ತನ್ನ ಖಡ್ಗವನ್ನು, ಜಡಿದನಿಬರೆಲ್ಲರಂ-: ಜಡಿದು ಅನಿಬರ ಎಲ್ಲರಂ= ಅವರೆಲ್ಲರನ್ನೂ ಹೊಡೆದು, ಚಿತ್ತದೊಳ್= ಮನದಲ್ಲಿ, ಗಡಣಿಸದೆ= ಲಕ್ಷಮಾಡದೆ, ಕಲಿಘಟೋತ್ಕಚಸುತಂ=ವೀರ ಮೇಘನಾದನು, ನಸುನಗುತೆ= ನಸುನಗತ್ತಾ ಗಗನದೊಳ್=ಆಕಾಶದಲ್ಲಿ, ಬರುತಿರ್ದನು= ಬರುತ್ತಿದ್ದನು.ತಾತ್ಪರ್ಯ :
ನಿರ್ಬಂಧದಲ್ಲಿ ಇದ್ದ, ಮೋಡಗಳನ್ನು ಪ್ರಳಯಕಾಲದಲ್ಲಿ ಬಿಟ್ಟಾಗ, ಗುಡುಗು ಸಿಡಲಿನಿಂದ ಆರ್ಭಟ ಮಾಡುತ್ತಾ ಚಲಿಸುವಂತೆ, ಆರ್ಭಟಿಸುತ್ತಾ ವೇಗವಾಗಿ ಬರುತ್ತಿರುವ, ಯೌವನಾಶ್ವನ ಸೈನ್ಯವನ್ನು ನೋಡಿ, ಎಡದ ಕೈ ಕಂಕುಳಲ್ಲಿದ್ದ ಕುದುರೆಯನ್ನು ಅಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ತನ್ನ ಖಡ್ಗವನ್ನು ಬೀಸಿ ಅವರೆಲ್ಲರನ್ನೂ ಹೊಡೆದು, ಮನದಲ್ಲಿ ಲಕ್ಷಮಾಡದೆ (ಗಾಬರಿಗೊಳ್ಳದೆ, ವೀರ ಮೇಘನಾದನು ನಸುನಗತ್ತಾ ಆಕಾಶದಲ್ಲಿಬರುತ್ತಿದ್ದನು. (ಪದ್ಯ - ೨೦),
1.4.20_45
ಪದ್ಯ - ೨೧
1.4.21
ಡಿಳ್ಳಮಾದುದೆ ಯೌವನಾಶ್ವಭೂಪತಿಯ ಬಲ |
ಮೊಳ್ಳೆಗರ ನೂಕು ನೂಕು ನೂಕಾವೆಡೆಯೊಳಾ ಕುದುರೆ |
ಗಳ್ಳನಂ ತೋರು ತೋರೆನುತೆ ನಡೆತಂದು ಹೈಡಿಂಬಿಯಂ ಮುತ್ತಿಕೊಂಡು ||
ಒಳ್ಳಿತೋ ವೀರ ಹಯಚೋರ ಜೀವದೊಳಾಸೆ |
ಯುಳ್ಳೊಡೀಕುದುರೆಯಂ ಬಿಟ್ಟು ಸಾಗಲ್ಲದೊಡೆ |
ಕೊಳ್ಳಾ ಮಹಾಸ್ತ್ರಪ್ರತತಿಯನೆಂದಂಬರವನಂಬಿನಿಂ ತುಂಬಿಸಿದರು ||21||
1.4.21_46
ಡಿಳ್ಳಮಾದುದೆ=ಅಶಕ್ತವಾದುದೇ? ಯೌವನಾಶ್ವ ಭೂಪತಿಯ ಬಲಂ=ಯೌವನಾಶ್ವ ರಾಜನ ಸೈನ್ಯವು ಅಶಕ್ತವಾದುದೇ? (ಅಲ್ಲ). ಒಳ್ಳೆಗರ(ನೀರುಹಾವು = ಅಶಕ್ತರು) ನೂಕು ನೂಕು ನೂಕು= ಅಶಕ್ತರನ್ನು ಅತ್ತ ಸರಿಸು, ಆವೆಡೆಯೊಳ= ಆ ಕುದುರೆಗಳ್ಳನಂ ತೋರು ತೋರೆನುತೆ-:ತೋರು ಎನುತೆ= ಆ ಕುದರೆಗಳ್ಳನು ಯಾವಕಡೆ ಇರುವನು,ತೋರಿಸು, ತೋರಿಸು ಎನುತೆ= ಎನ್ನುತ್ತಾ ನಡೆತಂದು= ಬಂದು ಹೈಡಿಂಬಿಯಂ= ಮೇಘನಾದನನ್ನು ಮುತ್ತಿಕೊಂಡು, ಒಳ್ಳಿತೋ ವೀರ= ಒಳ್ಳೆಯದೋ? ವೀರ! ಹಯಚೋರ= ಕುದುರೆ ಕಳ್ಳ, ಜೀವದೊಳಾಸೆಯುಳ್ಳೊಡೀಕುದುರೆಯಂ-: ಜೀವದಾಸೆ ಉಳ್ಳೊಡೆ ಕುದುರೆಯಂ= ಜೀವದಾಸೆ ಇದ್ದರೆ ಕುದುರಯನ್ನು, ಬಿಟ್ಟು ಸಾಗಲ್ಲದೊಡೆ-:ಸಾಗು ಅಲ್ಲದೊಡೆ ಕೊಳ್ಳಾ=ಇಲ್ಲದಿದ್ದರೆ, ತೆಗೆದುಕೋ ಮಹಾಸ್ತ್ರಪ್ರತತಿಯನೆಂದಂಬರವನಂಬಿನಿಂ-: ಮಹಾಸ್ತ್ರಪ್ರತತಿಯನು ಎಂದು ಅಂಬರವನು ಅಂಬಿನಿಂ ತುಂಬಿಸಿದರು =ಅನೇಕ ಮಹಾಸ್ತ್ರಗಳ ಹೊಡೆತವನ್ನು ಎಂದು ಆಕಾಶವನ್ನು ಬಾಣಗಳಿಂದ ತುಂಬಿಸಿದರು.
ಯೌವನಾಶ್ವ ರಾಜನ ಸೈನ್ಯವು ಅಶಕ್ತವಾದುದೇ? (ಅಲ್ಲ). ಅಶಕ್ತರನ್ನು ನೂಕು ನೂಕು ಅತ್ತ ಸರಿಸು; ಆ ಕುದರೆಗಳ್ಳನು ಯಾವಕಡೆ ಇರುವನು,ತೋರಿಸು, ತೋರಿಸು ಎನ್ನುತ್ತಾ ಬಂದು ಮೇಘನಾದನನ್ನು ಮುತ್ತಿಕೊಂಡು, ಒಳ್ಳೆಯದೋ? ವೀರ! ಕುದುರೆ ಕಳ್ಳ, ಜೀವದಾಸೆ ಇದ್ದರೆ ಕುದುರಯನ್ನು, ಬಿಟ್ಟು ಸಾಗು; ಇಲ್ಲದಿದ್ದರೆ, ತೆಗೆದುಕೋ ಅನೇಕ ಮಹಾಸ್ತ್ರಗಳ ಹೊಡೆತವನ್ನು ಎಂದು ಆಕಾಶವನ್ನು ಬಾಣಗಳಿಂದ ತುಂಬಿಸಿದರು. (ಪದ್ಯ - ೨೧),
1.4.21_47
ಪದ್ಯ - ೨೨
1.4.22
ನಿಮ್ಮರಾಯನ ಪೊರೆಯ ಪರಿವಾರದೊಳ್ ನೀವೆ |
ದಿಮ್ಮಿದರೊ ಮತ್ತೆ ಕೆಲರೊಳರೊ ಕಳವಲ್ಲ ಹಯ |
ಮಮ್ಮೊಗದ ಮುಂದೆ ಕಂಡೊಯ್ವೆನಾರ್ಪೊಡೆ ಶಕ್ತಿಯಿಂ ಬಿಡಿಸಿಕೊಳ್ಳಿ ಬರಿದೆ ||
ಉಮ್ಮಳಿಸಬೇಡ ನೀವತಿಸಾಹಸಿಗಳಾದೊ |
ಡೊಮ್ಮೆ ಹಮ್ಮೈಸದಿರಿ ಸಾಕೆಂದು ಮೇಘನಾ |
ದಮ್ಮಹಾಮಾಯಾ ಭಯಂಗಳಂ ಸೃಜಿಸಿದಂ ಮೂಜಗಂ ತಲ್ಲಣಿಸಲು ||22||
1.4.22_48
ನಿಮ್ಮರಾಯನ= ನಿಮ್ಮ ರಾಜನ, ಪೊರೆಯ= ರಕ್ಷಣೆಯ, ಪರಿವಾರದೊಳ್= ಸೈನ್ಯ ಪರಿವಾರದಲ್ಲ, ನೀವೆ ದಿಮ್ಮಿದರೊ= ನೀವೇ ಶೂರರೋ, ಮತ್ತೆ ಕೆಲರೊಳರೊ= ಮತ್ತೂ ಕೆಲವರು ಇದ್ದಾರೋ? ಕಳವಲ್ಲ= ಇದು ಕಳ್ಳತನವಲ್ಲ, ಹಯಮಮ್ಮೊಗದ-:ಹಯಂ ಮೊಗದ ಮುಂದೆ= ಕುದುರೆಯನ್ನು ನಿಮ್ಮ ಎದುರೇ, ಕಂಡೊಯ್ವೆನಾರ್ಪೊಡೆ-:ಕೊಂಡು ಒಯ್ವೆನು ಆರ್ಪಡೆ= ತೆಗೆದುಕೊಂಡು ಹೋಗುತ್ತೇನೆ; ಆರ್ಪೊಡೆ ಶಕ್ತಿಯಿಂ ಬಿಡಿಸಿಕೊಳ್ಳಿ= ಸಾದ್ಯವಾದರೆ ಶಕ್ತಿಯಿಂದ ಬಿಡಿಸಿಕೊಳ್ಳಿ; ಬರಿದೆ ಉಮ್ಮಳಿಸಬೇಡ= ಸುಮ್ಮನೆ ಮಾತನ್ನಾಡಬೇಡಿ; ನೀವತಿಸಾಹಸಿಗಳಾದೊಡೊಮ್ಮೆ-: ನೀವು ಅತಿ ಸಾಹಸಿಗಳು ಆದೊಡೆ ಒಮ್ಮೆ ಹಮ್ಮೈಸದಿರಿ= ನೀವು ಬಹಳ ಶೂರರಾದರೆ ಒಮ್ಮೆ ಸುಮ್ಮನೆ ಮಾತಾಡಬೇಡಿ, ಸಾಕೆಂದು= ಸಾಕು ಮಾತು ಎಂದು, ಮೇಘನಾದಮ್ಮಹಾಮಾಯಾ= ಮೇಘನಾದಂ ಮಹಂ ಮಾಯಾ ಭಯಂಗಳಂ ಸೃಜಿಸಿದಂ ಮೂಜಗಂ ತಲ್ಲಣಿಸಲು= ಮೇಘನಾದನು ಮೂರು ಲೋಕವೂ ಭಯಪಡುವಂತೆ ಮಹಾ ಮಾಯೆಯನ್ನು ಸೃಷ್ಟಿಸಿದನು.
ನಿಮ್ಮ ರಾಜನ ರಕ್ಷಣೆಯ ಸೈನ್ಯ ಪರಿವಾರದಲ್ಲಿ, ನೀವೇ ಶೂರರೋ, ಮತ್ತೂ ಕೆಲವರು ಇದ್ದಾರೋ? ಇದು ಕಳ್ಳತನವಲ್ಲ; ಕುದುರೆಯನ್ನು ನಿಮ್ಮ ಎದುರೇ, ತೆಗೆದುಕೊಂಡು ಹೋಗುತ್ತೇನೆ; ಸಾದ್ಯವಾದರೆ ಶಕ್ತಿಯಿಂದ ಬಿಡಿಸಿಕೊಳ್ಳಿ; ಸುಮ್ಮನೆ ಮಾತನ್ನಾಡಬೇಡಿ; ನೀವು ಬಹಳ ಶೂರರಾದರೆ ಒಮ್ಮೆಯೂ ಸುಮ್ಮನೆ ಮಾತಾಡಬೇಡಿ; ಸಾಕು ಮಾತು ಎಂದು, ಮೇಘನಾದನು ಮೂರು ಲೋಕವೂ ಭಯಪಡುವಂತೆ ಮಹಾ ಮಾಯೆಯನ್ನು ಸೃಷ್ಟಿಸಿದನು. (ಪದ್ಯ - ೨೨),
1.4.22_49
ಪದ್ಯ - ೨೩
1.4.23
ಪೊಡೆವ ಸಿಡಲ್ ಕರೆವ ಮಳೆ ಜಡಿವ ಕಲ್ಗುಂಡು ಧೂ |
ಳಿಡುವ ಬಿರುಗಾಳಿ ಕಂಗೆಡಿಪ ಕತ್ತಲೆ ಮೇಲೆ |
ಕೆಡೆವ ಗಿರಿತರುಗಳುರೆ ಕಡಿವ ವಿವಿಧಾಯುಧಂ ನಡುವ ಶಸ್ತ್ರಾಸ್ತ್ರಂಗಳು ||
ಪಿಡಿವ ಪುಲಿಕರಡಿ ಬಾಯ್ವಿಡುವ ಭೂತಂಗಳಸು |
ಗುಡಿವ ಪಾವುಗಳಟ್ಟಿ ಸುಡುವ ಕಾಳ್ಕಿಚ್ಚುಳಿಯ |
ಗುಡದವನ ಮಾಯೆಯಂ ತಡೆವರಿಲ್ಲಾಬಲಂ ಪುಡಿವಡೆದುದೇವೇಳ್ವೆನು ||23||
1.4.23_50
ಪೊಡೆವ ಸಿಡಲ್= ಅವನ ಮಾಯೆಯಿಂದ, ಹೊಡೆಯುವ ಸಿಡಲು, ಕರೆವ ಮಳೆ= ಸುರಿಯುವ ಮಳೆ, ಜಡಿವ ಕಲ್ಗುಂಡು= ಬೀಳುವ ಕಲ್ಗುಂಡು, ಧೂಳಿಡುವ ಬಿರುಗಾಳಿ=ಧೂಳಿನಂದ ಕೂಡಿದ ಬಿರುಗಾಳಿ, ಕಂಗೆಡಿಪ ಕತ್ತಲೆ=ಕಂಗೆಡಿಸುವ ಕತ್ತಲೆ, ಮೇಲೆ ಕೆಡೆವ ಗಿರಿತರುಗಳು= ಇದಲ್ಲದೆ ಮೇಲಿಂದ ಬೀಳುವ ಬೆಟ್ಟ ಮರಗಳು, ಉರೆ ಕಡಿವ ವಿವಿಧಾಯುಧಂ=ಹೆಚ್ಚು, ಕತ್ತರಿಸುವ ನಾನಾ ಆಯುಧಗಳು, ನಡುವ ಶಸ್ತ್ರಾಸ್ತ್ರಂಗಳು= ಚುಚ್ಚುವ ಶಸ್ತ್ರಾಸ್ತ್ರಗಳು, ಪಿಡಿವ ಪುಲಿಕರಡಿ= ಹಿಡಿಯುವ ಹುಲಿಕರಡಿಗಳು, ಬಾಯ್ವಿಡುವ ಭೂತಂಗಳಸು= ದೊಡ್ಡದಾಗಿ ಬಾಯಿಕಳೆದುಕೊಂಡು ಬರುವ ಭೂತಗಳು, ಅಸುಗುಡಿವ ಪಾವುಗಳಟ್ಟಿ= ಪ್ರಾಣ ಹೀರುವ ಹಾವುಗಳ ರಾಶಿ, ಸುಡುವ ಕಾಳ್ಕಿಚ್ಚು=ಸುಡುವ ಕಾಳ್ಗಚ್ಚಿ ನಂತಹ ಬೆಂಕಿ; , ಉಳಿಯ= ಉಳಿಯ ಗುಡದವನ ಮಾಯೆಯಂ= ಬದುಕಲು ಬಿಡದ ಅವನ ಮಾಯರಯಂ ತಡೆವರಿಲ್ಲ ಆ =ಮಾಯೆಯನ್ನು, ತಡೆಯುವವರು ಇಲ್ಲ; ಪುಡಿವಡೆದುದೇವೇಳ್ವೆನು-: ಪುಡಿ ಪುಡಿ ವಡೆದುದು ಏ ವೇಳ್ವೆನು= ಆ ಸೈನ್ಯ, ಪುಡಿಪುಡಿಯಾಯಿತು ಏನೆಂದು ಹೇಳಲಿ. *ತಾತ್ಪರ್ಯ :
ಅವನ ಮಾಯೆಯಿಂದ, ಹೊಡೆಯುವ ಸಿಡಲು, ಸುರಿಯುವ ಮಳೆ, ಬೀಳುವ ಕಲ್ಗುಂಡು, ಧೂಳಿನಂದ ಕೂಡಿದ ಬಿರುಗಾಳಿ, ಕಂಗೆಡಿಸುವ ಕತ್ತಲೆ, ಇದಲ್ಲದೆ ಮೇಲಿಂದ ಬೀಳುವ ಬೆಟ್ಟ ಮರಗಳು, ಇನ್ನೂ ಹೆಚ್ಚು, ಕತ್ತರಿಸುವ ನಾನಾ ಆಯುಧಗಳು, ಚುಚ್ಚುವ ಶಸ್ತ್ರಾಸ್ತ್ರಗಳು, ಹಿಡಿಯುವ ಹುಲಿಕರಡಿಗಳು, ದೊಡ್ಡದಾಗಿ ಬಾಯಿಕಳೆದುಕೊಂಡು ಬರುವ ಭೂತಗಳು, ಪ್ರಾಣ ಹೀರುವ ಹಾವುಗಳ ರಾಶಿ, ಸುಡುವ ಕಾಳ್ಗಚ್ಚಿ ನಂತಹ ಬೆಂಕಿ; ಬದುಕಲು ಬಿಡದ ಅವನ, ಮಾಯೆಯನ್ನು, ತಡೆಯುವವರು ಇಲ್ಲ; ಆ ಸೈನ್ಯ, ಪುಡಿಪುಡಿಯಾಯಿತು ಏನೆಂದು ಹೇಳಲಿ. (ಪದ್ಯ - ೨೩),
1.4.23_51
ಪದ್ಯ - ೨೪
1.4.24
ಮಾಯೆಯಿಂ ಪಡೆಯೆಲ್ಲಮಂ ಕೊಂದು ಹಯಮಂ ವಿ |
ಹಾಯಸಪಥದೊಳೊಯ್ವ ಹೈಡಿಂಬಿಯಂ ಕಂಡ |
ಜೇಯರಂಬರದ ವಿವರಂಗಳಂ ಪುಗುವೆಂಟುಸಾವಿರ ಮಹಾರಥರನು ||
ಆ ಯೌವನಾಶ್ವ ನೃಪನಟ್ಟಿದೊಡೆ ನಭದೊಳಸ |
ಹಾಯಶೂರನ ಮಾರ್ಗಮಂ ಕಟ್ಟಿ ನಿಲ್ಲು ಖಳ ||
ಸಾಯದಿರ್ ಬಿಡುಬಿಡು ತುರಂಗಮವನೆನುತೆ ಸೈಗರೆದರಂಬಿನ ಮಳೆಯನು ||24||
1.4.24_52
ಮಾಯೆಯಿಂ ಪಡೆಯೆಲ್ಲಮಂ ಕೊಂದು= ಮಾಯೆಯಿಂದ ಶತ್ರುಸೈನ್ಯವನ್ನು ಕೊಂದು, ಹಯಮಂ ವಿಹಾಯಸಪಥದೊಳ್(ಆಕಾಶಮಾರ್ಗ) ಒಯ್ವ ಹೈಡಿಂಬಿಯಂ= ಕುದುರೆಯನ್ನು ಆಕಾಶಮಾರ್ಗದಲ್ಲಿ ಒಯ್ಯುವ ಮಾಘನಾದನನ್ನು, ಕಂಡಜೇಯರಂಬರದ-:ಕಂಡು ಅಜೇಯರ್ ಅಂಬರದ= ಆಕಾಶದಲ್ಲಿ ಅಜೇಯರಾದ, ವಿವರಂಗಳಂ= ಆಕಾಶದ ಪ್ರದೇಶಗಳನ್ನು, ಪುಗುವೆಂಟುಸಾವಿರ ಮಹಾರಥರನು-:ಪುಗುವ ಎಂಟು ಸಾವಿರ= ಹೊಗುವ ಎಂಟುಸಾವಿರ ಮಹಾರಥರನ್ನು, ಆ ಯೌವನಾಶ್ವ ನೃಪನಟ್ಟಿದೊಡೆ= ಆ ಯೌವನಾಶ್ವ ನೃಪನು ಅಟ್ಟಿದೊಡೆ= ಕಳಿಸಿದಾಗ, ನಭದೊಳ್ ಅಸಹಾಯಶೂರನ ಮಾರ್ಗಮಂ=ಆಕಾಶದಲ್ಲಿ ಅಸಹಾಯಶೂರನನ್ನು, ಕಟ್ಟಿ= ಅಡ್ಡಗಟ್ಟಿ, ನಿಲ್ಲು ಖಳ ಸಾಯದಿರ್ ಬಿಡುಬಿಡು ತುರಂಗಮವನೆನುತೆ- ತುರಂಗಮನು ಎನುತೆ= ನಿಲ್ಲು ನೀಚನೇ,ಸಾಯಬೇಡ, ಬಿಟ್ಟುಬಿಡು ಕುದುರೆಯನ್ನು ಎನ್ನುತ್ತಾ, ಸೈಗರೆದರಂಬಿನ ಮಳೆಯನು-: ಸೈಗರೆದರು ಅಂಬಿನ ಮಳೆಯನು= ಬಾಣದ ಮಳೆಯನ್ನು ಸುರಿಸಿದರು.
ಮಾಯೆಯಿಂ ಪಡೆಯೆಲ್ಲಮಂ ಕೊಂದು= ಮಾಯೆಯಿಂದ ಶತ್ರುಸೈನ್ಯವನ್ನು ಕೊಂದು, ಹಯಮಂ ವಿಹಾಯಸಪಥದೊಳ್(ಆಕಾಶಮಾರ್ಗ) ಒಯ್ವ ಹೈಡಿಂಬಿಯಂ= ಕುದುರೆಯನ್ನು ಆಕಾಶಮಾರ್ಗದಲ್ಲಿ ಒಯ್ಯುವ ಮೇಘನಾದನನ್ನು ಕಂಡು, ಆಕಾಶದಲ್ಲಿ ಅಜೇಯರಾದ, ಆಕಾಶದ ಪ್ರದೇಶಗಳನ್ನು, ಹೊಗುವ ಎಂಟುಸಾವಿರ ಮಹಾರಥರನ್ನು, ಆ ಯೌವನಾಶ್ವ ನೃಪನು ಕಳಿಸಿದಾಗ, ಆಕಾಶದಲ್ಲಿ ಅಸಹಾಯಶೂರ ಮೇಘನಾದನನ್ನು, ಅಡ್ಡಗಟ್ಟಿ, ಬಿಡುಬಿಡು ಸಾಯಬೇಡ, ನಿಲ್ಲು ನೀಚನೇ, ಬಿಟ್ಟುಬಿಡು ಕುದುರೆಯನ್ನು ಎನ್ನುತ್ತಾ, ಬಾಣದ ಮಳೆಯನ್ನು ಸುರಿಸಿದರು. (ಪದ್ಯ - ೨೪),
1.4.24_53
ಪದ್ಯ - ೨೫
1.4.25
ಪದ್ಯ - ೨೫[ಸಂಪಾದಿಸಿ] ವೀರರಹುದೋ ಜಗಕೆ ನೀವಲಾ ಸ್ವಾಮಿಹಿತ |
ಕಾರಿಗಳ್ ತಲೆಯಾಸೆಯಿಲ್ಲೆನುತೆ ಹೈಡಿಂಬಿ |
ತೋರಗದೆಯಿಮದವರ ತೇರ್ಗಳಂ ಚಾಪಬಾಣಂಗಳಂ ಕುದುರೆಗಳನು ||
ಸಾರಥಿಗಳಂ ಧ್ವಜಪತಾಕೆಗಳನಪ್ಪಳಿಸಿ |
ವಾರುವಂಬೆರಸಿ ಕಡುವೇಗದಿಂದೈತಂದು |
ಮಾರುತಸುತನ ಮುಂದೆ ನಿಲುತಿರ್ದನನ್ನೆಗಂ ಮತ್ತೆ ಪಡಿಬಲಮೊದವಿತು ||25||
1.4.25_54
ವೀರರಹುದೋ ಜಗಕೆ ನೀವಲಾ= ಜಗತ್ತಿದಲ್ಲಿ ನೀವು ವೀರರು ಆಗಿದ್ದೀರೋ? ಸ್ವಾಮಿಹಿತಕಾರಿಗಳ್ ನಿಮಗೆ ತಲೆಯಾಸೆಯಿಲ್ಲೆನುತೆ-:ತಲೆಯಾಸೆ= ಜೀವದಾಸೆ ಇಲ್ಲ ಇಲ್ಲವೇ ಎನ್ನುತ್ತಾ, ಹೈಡಿಂಬಿ ತೋರಗದೆಯಿಮದವರ-: ಹೈಡಿಂಬಿ=ಮೇಘನಾದನು, ತೋರಗದೆಯಿಮದವರ-:ತೋರ= ದೊಡ್ಡ, ಗದೆಯಿಂದ ಅವರ, ತೇರ್ಗಳಂ= ರಥಗಳನ್ನು, ಚಾಪಬಾಣಂಗಳಂ= ಬಿಲ್ಲ ಬಾಣಗಳನ್ನು, ಕುದುರೆಗಳನು ಸಾರಥಿಗಳಂ= ಕುದರೆ ಸಾರಥಿಗಳನ್ನು, ಧ್ವಜಪತಾಕೆಗಳನಪ್ಪಳಿಸಿ= ಧ್ವಜ ಪತಾಕೆಗಳನ್ನು ಅಪ್ಪಳಿಸಿ, ವಾರುವಂಬೆರಸಿ-:ವಾರುವಂ ಬೆರಸಿ= ಕುದುರೆಯ ಜೊತೆಗೂಡಿ, ಕಡುವೇಗದಿಂದೈತಂದು- ಕಡು= ಹೆಚ್ಚಿನ,ವೇಗದಿಂದ,ಐತಂದು= ಬಂದು, ಮಾರುತಸುತನ= ವಾಯುಸುತನ= ಭೀಮನ ಮುಂದೆ, ನಿಲುತಿರ್ದನನ್ನೆಗಂ-:ನಿಂತಿರ್ದನು ಅನ್ನೆಗಂ= ಆ ಸಮಯಕ್ಕೆ. ಮತ್ತೆ= ಪುನಃ, ಪಡಿಬಲಮೊದವಿತು-: ಪಡಿಬಲ= ಮತ್ತೊಂದು ಸೈನ್ಯ, ಒದವಿತು= ಬಂದಿತು.ತಾತ್ಪರ್ಯ :
ಜಗದಲ್ಲಿ ನೀವು ವೀರರಾಗಿದ್ದೀರೋ? ಸ್ವಾಮಿಹಿತಕಾರಿಗಳು, ನಿಮಗೆ ಜೀವದಾಸೆ, ಇಲ್ಲವೇ ಎನ್ನುತ್ತಾ, ಮೇಘನಾದನು, ದೊಡ್ಡ, ಗದೆಯಿಂದ ಅವರ, ರಥಗಳನ್ನು, ಬಿಲ್ಲು ಬಾಣಗಳನ್ನು, ಕುದುರೆ ಸಾರಥಿಗಳನ್ನು, ಧ್ವಜ ಪತಾಕೆಗಳನ್ನು ಅಪ್ಪಳಿಸಿ, ಕುದುರೆಯ ಜೊತೆಗೂಡಿ, ಹೆಚ್ಚಿನ ವೇಗದಿಂದ ಬಂದು, ಭೀಮನ ಮುಂದೆ,ನಿಂತಿದ್ದನು. ಆ ಸಮಯಕ್ಕೆ. ಪುನಃ, ಮತ್ತೊಂದು ಸೈನ್ಯ,ಬಂದಿತು. (ಪದ್ಯ - ೨೫),
1.4.25_55
ಪದ್ಯ - ೨೬
1.4.26
ಹರಿಗಳೀಂ ನಾಗಂಗಳಿಂ ಸ್ಯಂದನಂಗಳಿಂ |
ಶರಝಾಲ ಕದಳಿದಳ ಪುಂಡರೀಕಂಗಳಿಂ| ಸುರಗಿಖಡ್ಗಂಗಳಿಂ ನಡೆವ ಕಾಂತಾರದಂತೆಸವ ಚತುರಂಗದೊಡನೆ ||
ಭರದಿಂ ಸುವೇಗನೆಂಬಾ ಯೌವನಾಶ್ವ ಭೂ |
ವರನ ತನುಜಾತನಾಹನಕೆ ನಿರ್ಭೀತನು |
ಬ್ಬರದ ಬಿಲ್ದಿರುವಿನಬ್ಬರದ ಕೋಳಾಹಳಕೆ ಧರೆ ಬಿರಿಯೆ ನಡೆತಂದನು ||26||
1.4.26_56
ಹರಿಗಳೀಂ= ಸಿಂಹಗಳಿಂದ / ಕುದುರೆಗಳಿಂದ, ನಾಗಂಗಳಿಂ= ಹಾವುಗಳಿಂದ/ ಆನೆಗಳಿಂದ, ಸ್ಯಂದನಂಗಳಿಂ= ಹುಳಗಳಿಂದ /ರಥಗಳಿಂದ, ಶರಝಾಲ= ಹುಲ್ಲುಗಳ /ಬಾಣಗಳಿಂದಲೂ, ಕದಳಿದಳ=ಬಾಳೆ ಎಲೆಗಳಿಂದ / ಗಿಡ್ಡ ಖಡ್ಗದಿಂದ, ಪುಂಡರೀಕಂಗಳಿಂ=ಹುಲಿಗಳಿಂದಲೂ /ಬಿಳಿ ಪತಾಕೆಗಳಿಂದಲೂ, ಸುರಗಿ ಮರದಿಂದಲೂ,/ ಹುಲಿಗಳಿಂದಲೂ, ಸುರಗಿಖಡ್ಗಂಗಳಿಂಸುರಗಿಮರದಿಂದಲೂ / ಖಡ್ಗಗಳಿಂದಲೂ,ಕೂಡಿರುವ ಈ ಸೈನ್ಯ, ನಡೆವ ಕಾಂತಾರದಂತೆಸವ-:ನಡೆವ ಕಾಂತಾರದಂತೆ ಎಸೆವ=ಕಾಣುವ, ಚತುರಂಗದೊಡನೆ=ಚತುರಂಗ ಸೈನ್ಯದೊನೆ, ಭರದಿಂ= ವೇಗವಾಗಿ ಸುವೇಗನೆಂಬಾ= ಸುವೇಗನು ಎಂಬ ಯೌವನಾಶ್ವ ಭೂವರನ ತನುಜಾತನು= ಮಗನು, ಆಹವಕೆ= ಯುದ್ಧಕ್ಕೆ, ನಿರ್ಭೀತನುಬ್ಬರದ-:ನಿರ್ಭೀತನು ಉಬ್ಬರದ ಬಿಲ್ದಿರುವಿನಬ್ಬರದ= ಬಿಲ್ಲು ತಿರುಗಿಸುವ= ನಾಣಿನ ಹಗ್ಗಕ್ಕೆ, ಕೋಳಾಹಳಕೆ= ಗಲಾಟೆಯ ಗದ್ದಲಕ್ಕೆ, ಧರೆ= ಭೂಮಿ ಬಿರಿಯೆ=ಒಡೆತುವಂತೆ, ರಾಜನು ನಡೆತಂದನು ||26||
1.4.26_57
ಒಂದೇ ಪದಕ್ಕೆ ಎಡು ಅರ್ಥ ಬರುವಂತೆ ಕಾಡಿಗೂ ಸೈನ್ಯಕ್ಕೂ ಹೋಲಿಸಿ ಹೇಳಿದೆ : ಸಿಂಹಗಳಿಂದ / ಕುದುರೆಗಳಿಂದ, ಹಾವುಗಳಿಂದ/ ಆನೆಗಳಿಂದ, ಹುಳಗಳಿಂದ /ರಥಗಳಿಂದ, ಹುಲ್ಲುಗಳಿಂದ /ಬಾಣಗಳಿಂದಲೂ, ಬಾಳೆ ಎಲೆಗಳಿಂದ / ಗಿಡ್ಡ ಖಡ್ಗದಿಂದ, ಹುಲಿಗಳಿಂದಲೂ /ಬಿಳಿ ಪತಾಕೆಗಳಿಂದಲೂ, ಸುರಗಿ ಮರದಿಂದಲೂ,/ ಹುಲಿಗಳಿಂದಲೂ, ಖಡ್ಗಗಳಿಂದಲೂ,ಕೂಡಿರುವ ಈ ಸೈನ್ಯ, ನಡೆಯುತ್ತಿರುವ ಕಾಡಿನಂತೆ, ಕಾಣುವ, ಚತುರಂಗ ಸೈನ್ಯದೊನೆ, ವೇಗವಾಗಿ ಸುವೇಗನೆಂಬ ಸುವೇಗನು ಎಂಬ ಯೌವನಾಶ್ವರಾಜನ ಮಗನು, ಯುದ್ಧಕ್ಕೆ ನಿರ್ಭೀತನು ಬಿಲ್ಲು ನಾಣಿನ ಹಗ್ಗದ ಠೇಂಕಾರ ಮೊದಲಾದ ಗದ್ದಲಕ್ಕೆ, ಭೂಮಿ ಒಡೆಯುವಂತಿರಲು, ರಾಜನು ಬಂದನು.
(ಪದ್ಯ - ೨೬)
1.4.26_58
ಪದ್ಯ - ೨೭
1.4.27
ಅಂಬರದೊಳಡ್ಡೈಸಿದೊಡೆ ನಮ್ಮ ರಥಿಕರ್ಕ |
ಳಂ ಬಗೆಯದಹಿತಂ ಹಯಂಬೆರಸಿ ಸೈವರಿದ |
ನೆಂಬುದಂ ಕೇಳ್ದಾಗಳಾ ಯೌವನಾಶ್ವಭೂಪಂ ತಾನೆ ಕೋಪದಿಂದೆ ||
ತುಂಬಿವರಿ ಸಂಪಗೆಯಲರ ಪರಿಮಳದ ಸೂರೆ |
ಗಂ ಬಯಸಿ ಬಂದುದಿದು ಮಿಗೆ ಪೊಸತೆನುತೆ ಹರಿಸಿ |
ದಂ ಬೇಗದಿಂ ಮಣೀವರೂಥಮಂ ಕೆಲಬಲದ ಮನ್ನೆಯರ ಗಡಣದಿಂದೆ ||27||
1.4.27_59
ಅಂಬರದೊಳ್= ಆಕಾಶದಲ್ಲಿ, ಅಡೈಸಿದೊಡೆ= ಅಡ್ಡಹಾಕಿದಾಗ, ನಮ್ಮ ರಥಿಕರ್ಕಳಂ= ನಮ್ಮ ರಥಿಕರನ್ನು, ಬಗೆಯದಹಿತಂ-:ಬಗೆಯದೆ=ಲೆಕ್ಕಿಸದೆ, ಅಹಿತಂ+ಶತ್ರುವು, ಹಯಂಬೆರಸಿ-ಹಯಂ=ಕುದುರೆಯ, ವೆರಿಸಿ= ಸಹಿತ, ಸೈವರಿದನೆಂಬುದಂ-:ಸೈವರಿದನು ಎಂಬುದಂ= ಹೋದನು ಎಂಬುದಂ, ಕೇಳ್ದಾಗಳಾ-:ಕೇಳ್ದು ಆಗಳು ಆ ಯೌವನಾಶ್ವಭೂಪಂ= ಕೇಳಿ ಆಗ ಆ ಯೌವನಾಶ್ವರಾಜನು, ತಾನೆ ಕೋಪದಿಂದೆ= ಕೋಪದಿಂದ ತಾನೆ, ತುಂಬಿವರಿಸಂಪಗೆಯಲರ-:ತುಂಬಿ, ಅರಿ(ಶತ್ರು) ಸಂಪಿಗೆಯ= ತನ್ನ ಸಾವಿಗೆಕಾರಣವಾಗುವ ಸಂಪಿಗೆಯ ಅಲರ= ಹೂವುಗಳ, ಪರಿಮಳದ ಸೂರೆಗಂ= ಕಂಪಿಗೆ ಅದನ್ನು ಹೀರಲು, ಬಯಸಿ ಬಂದುದಿದು-:ಬಂದುದು =ಮಂದಂತಾಗಿದೆ. ಇದು ಮಿಗೆ= ಬಹಳ ಪೊಸತೆನುತೆ-:ಪೊಸತು ಎನುತೆ= ಹೊಸದು ಎಂದು, ಹರಿಸಿದಂ= ಓಡಿಸಿದನು, ಬೇಗದಿಂ= ಅವಸದಿಂದ, ಮಣೀವರೂಥಮಂ= ತನ್ನ ಮಣಿರಥವನ್ನು, ಕೆಲಬಲದ ಮನ್ನೆಯರ ಗಡಣದಿಂದೆ= ಅಕ್ಪಕ್ಕದಲ್ಲಿದ್ದ ಹೊಗಳಿಹಾಡುವ ಹೆಂಗಸರ ಗುಂಪು ಹೊಗಳಿ ಹಾಡುತ್ತಿರಲು.
ಶತ್ರುವನ್ನು, ಆಕಾಶದಲ್ಲಿ, ಅಡ್ಡಹಾಕಿದಾಗ, ನಮ್ಮ ರಥಿಕರನ್ನು ಲೆಕ್ಕಿಸದೆ, ಶತ್ರುವು ಕುದುರೆಯ ಸಹಿತ, ಹೊರಟುಹೋದನು ಎಂಬುದನ್ನು ಕೇಳಿ ಆಗ ಆ ಯೌವನಾಶ್ವರಾಜನು, ಕೋಪದಿಂದ ತಾನೆ, 'ತುಂಬಿ, (ಅರಿ)ತನ್ನ ಸಾವಿಗೆಕಾರಣವಾಗುವ ಸಂಪಿಗೆಯ ಹೂವುಗಳ ಪರಿಮಳದ ಕಂಪಿಗೆ ಅದನ್ನು ಹೀರಲುಬಯಸಿ ಮಂದಂತಾಗಿದೆ. ಇದು ಬಹಳ ಹೊಸದು ಎಂದು, , ಅಕ್ಕಪಕ್ಕದಲ್ಲಿದ್ದ ಹೊಗಳಿಹಾಡುವ ಹೆಂಗಸರ ಗುಂಪು ಹೊಗಳಿ ಹಾಡುತ್ತಿರಲು,ಅವಸರದಿಂದ, ತನ್ನ ಮಣಿರಥವನ್ನು ಶತ್ರುವಿನ ಕಡೆ ಓಡಿಸಿದನು, (ಪದ್ಯ - ೨೭),
1.4.27_60
ಪದ್ಯ - ೨೮
1.4.28
ಇದು ಭಗೀರಥ ರಥವ ಬೆಂಕೊಂಡು ಪರಿವ ಸುರ |
ನದಿಯ ಪ್ರವಾಹಮೆನಲಾ ನೃಪನ ವರವರೂ |
ಥದ ಪಿಂತೆ ಬಹುವಾದ್ಯರಭಸದಿಂದೆಡೆವರಿಯದೈತಪ್ಪ ಚತುರಂಗದ ||
ಪದಹತಿಗೆ ಧರೆ ನಡುಗುತಿರೆ ಜಹ್ನುಮುನಿಪನಂ |
ತದರ ಸಂಭ್ರಮಕೆ ಸೈರಿಸದಂತರಂಗದೊಳ್ |
ಕುದಿಯುತಿರ್ದಂ ಕರ್ಣಸುತನವನ ಭಾವಮಂ ಪವನಜಾತಂ ಕಂಡನು ||28||
1.4.28_61
(ಯೌವನಾಶ್ವನ ಸೈನ್ಯ) ಇದು ಭಗೀರಥನ ರಥವನ್ನು ಬೆಂಕೊಂಡು= ಅನುಸರಿಸಿ, ಪರಿವ= ಹರಿವ ಸುರನದಿಯ= ಗಂಗೆಯ, ಪ್ರವಾಹಮೆನಲಾ- ಪ್ರವಾಹಂ ಎನಲು ಆ ನೃಪನ ವರವರೂ ಥದ ಪಿಂತೆ= ಪ್ರಹಾವೋ ಎನ್ನುವಂತೆ ಆ ರಾಜನ ವರ= ಉತ್ತಮ ರಥದ ಹಿಂದೆ, ಬಹುವಾದ್ಯರಭಸದಿಂದೆಡೆವರಿಯದೈತಪ್ಪ-:ಬಹುವಾದ್ಯ ರಭಸದಿಂದ ಎಡವರಿಯದೆ ಐತಪ್ಪ= ಬಹುವಾದ್ಯ ರಭಸದಿಂದ ಮಧ್ಯೆ ಎಡೆಯಿಲ್ಲದಂತೆ ಬರುತ್ತಿರುವ, ಚತುರಂಗದ ಪದಹತಿಗೆ ಧರೆ ನಡುಗುತಿರೆ= ಚತುರಂಗಸೈನ್ಯದ ಹೆಜ್ಜೆಯಹೊಡೆತಕ್ಕೆ ಭೂಮಿ ನಡುಗುತ್ತಿದೆ, ಜಹ್ನುಮುನಿಪನಂತದರ ಸಂಭ್ರಮಕೆ= ಜಹ್ನು ಋಷಿಯು ಗಂಗೆಅವನ ಆಶ್ರಮಕ್ಕೆ ಹರಿದು ಬರಲು ಅದನ್ನು ಸಹಿಸದ ಋಷಿ ಗಂಗೆಯನ್ನು ಕುಡಿದುಬಿಟ್ಟ, ಅದೇರೀತಿ, ಸೈರಿಸದಂತರಂಗದೊಳ್ ಕುದಿಯುತಿರ್ದಂ ಕರ್ಣಸುತನು-:ಸೈರಿಸದೆ ಅಂತರಂಗದೊಳ್ ಕುದಿಯುತಿರ್ದಂ ಕರ್ಣಸುತ= ಕರ್ಣನಮಗ ವೃಷಕೇತು ಗಂಗಾಪ್ರವಾಹದಂತೆ ಬರುತ್ತಿರುವ ಅನುಸಾಲ್ವನ ಸೈನ್ಯವನ್ನು ತಡೆಯಲು ಕುದಿಯುತಿರ್ದಂ= ಉದ್ವೇಗದಿಂದ ಉತ್ಸಾಹಭರಿತನಾಗಿದ್ದನು. ಅವನ ಭಾವಮಂ= ಇ ಭಾವನೆಯನ್ನು, ಪವನಜಾತಂ= ಭೀಮನು ಕಂಡನು= ನೋಡಿದನು. ತಾತ್ಪರ್ಯ :
ಯೌವನಾಶ್ವನ ಸೈನ್ಯ, ಭಗೀರಥನ ರಥವನ್ನು ಅನುಸರಿಸಿ,ಹರಿದ ಗಂಗೆಯ ಪ್ರಹಾವೋ ಎನ್ನುವಂತೆ ಆ ರಾಜನ ಉತ್ತಮವಾದ ರಥದ ಹಿಂದೆ, ಬಹುವಾದ್ಯ ರಭಸದಿಂದ ಮಧ್ಯೆ ಎಡೆಯಿಲ್ಲದಂತೆ ಬರುತ್ತಿರುವ, ಚತುರಂಗಸೈನ್ಯದ ಹೆಜ್ಜೆಯ ಹೊಡೆತಕ್ಕೆ ಭೂಮಿ ನಡುಗುತ್ತಿತ್ತು. ಗಂಗೆಯು ಜಹ್ನು ಋಷಿಯು ಆಶ್ರಮಕ್ಕೆ ಹರಿದು ಬರಲು ಅದನ್ನು ಸಹಿಸದ ಋಷಿ ಗಂಗೆಯನ್ನು ಕುಡಿದುಬಿಟ್ಟ, ಅದೇ ರೀತಿ, ಕರ್ಣನಮಗ ವೃಷಕೇತುವು ಗಂಗಾಪ್ರವಾಹದಂತೆ ಬರುತ್ತಿರುವ ಅನುಸಾಲ್ವನ ಸೈನ್ಯವನ್ನು ತಡೆಯಲು ಉದ್ವೇಗದಿಂದ ಕಾತರಿಸುತ್ತಿದ್ದನು. ಅವನ ಈ ಭಾವನೆಯನ್ನು ಭೀಮನು ನೋಡಿದನು. (ಪದ್ಯ - ೨೮),
1.4.28_62
ಪದ್ಯ - ೨೯
1.4.29
ಕಟ್ಟಿ ತರುಮೂಲಕಶ್ವಮನದರ ಕಾವಲ್ಗೆ |
ದಿಟ್ಟಹೈಡಿಂಬಿಯಂ ಬೈಚಿಟ್ಟು ತಮ್ಮನುರೆ |
ಯಟ್ಟಿ ಬಹಯೌವನಾಶ್ವನ ಪಡೆಗೆ ಕಾರ್ಣಿಯಂ ಕಳುಹಿ ಕಾಲಾಗ್ನಿಯಂತೆ ||
ಇಟ್ಟಿಣಿಸುತೈದುವ ಸುವೇಗನ ಬಲೌಘಕಿದಿ |
ರಿಟ್ಟು ನಿಂದಂ ಭೀಮನುತ್ಸಾಹದಿಂದೆ ಪೆ |
ರ್ಬೆಟ್ಟೊತ್ತಿ ನೂಕುವ ಮಹಾವಾತಘಾತಮಂ ತಡೆದೊಲೆಯದಿಪ್ಪಂತಿರೆ ||29||
1.4.29_63
ಕಟ್ಟಿ ತರುಮೂಲಕೆ=ಮರದಬುಡಕ್ಕೆ ಅಶ್ವಮನು ಅದರ ಕಾವಲ್ಗೆ ದಿಟ್ಟಹೈಡಿಂಬಿಯಂ ಬೈಚಿಟ್ಟು= ಕುದುರೆಯನ್ನುಮರದಬುಡಕ್ಕೆ ಕಟ್ಟಿ, ದಿಟ್ಟ=ದೈರ್ಯಶಾಲಿ ಮೇಘನಾದನನ್ನು ಅದರ ಕಾವಲಿಗೆ ಗುಟ್ಟಾಗಿ ಇಟ್ಟು, ತಮ್ಮನರೆಯಟ್ಟಿ-:ತಮ್ಮನು= ತಮ್ಮನ್ನು, ಉರೆಯಟ್ಟಿ= ವೇಗವಾಗಿ ಅಟ್ಟಿಸಿಕೊಂಡು, ಬಹಯೌವನಾಶ್ವನ-: ಬಹ= ಬರುತ್ತಿರುವ ಯೌವನಾಶ್ವನ, ಪಡೆಗೆ= ಸೈನ್ಯಕ್ಕೆ ಕಾರ್ಣಿಯಂ= ಕರ್ಣನಮಗನನ್ನು ಕಳುಹಿ= ಕಳುಹಿಸಿ, ಕಾಲಾಗ್ನಿಯಂತೆ= ಪ್ರಳಯಕಾಲದ ಬೆಂಕಿಯಂತೆ ಇಟ್ಟಿಣಿಸುತೈದುವ-: ಇಟ್ಟನಿಸುತ ಐದುವ= ಒತ್ತೊತ್ತಾಗಿ ಬರುತ್ತಿರುವ, ಸುವೇಗನ ಬಲೌಘಕಿದಿರಿಟ್ಟು-:ಬಲ ಔಘಕೆ= ಸೈನ್ಯದ ಸಮೂಹಕ್ಕೆ,ಇದಿರಿಟ್ಟು= ಎದುರಾಗಿ, ನಿಂದಂ ಭೀಮನುತ್ಸಾಹದಿಂದೆ-:ನಿಂತನು, ಭೀಮನು ಉತ್ಸಾಹದಿಂದೆ= ಬೀಮನು (ಯುದ್ಧದ)ಉತ್ಸಾಹದಿಂದ ನಿಂತನು,ಹೇಗೆಂದರೆ, ಪೆರ್ಬೆಟ್ಟೊತ್ತಿ ನೂಕುವ ಮಹಾವಾತಘಾತಮಂ ತಡೆದೊಲೆಯದಿಪ್ಪಂತಿರೆ-: ಪೆರು ಬೆಟ್ಟು ಒತ್ತಿ= ದೊಡ್ಡಬೆಟ್ಟವು ಒತ್ತಿ ನೂಕುವ,ಮಹಾವಾತ ಆಘಾತವಂ= ಮಹಾಬಿರುಗಳಿಯ ಹೊಡೆತವನ್ನು,ತಡೆದು, ಒಲೆಯದೆ ಇಪ್ಪಂತೆ ಇರೆ= ಅಲುಗಾಡದೆ ಇರುವಂತೆ (ಭೀಮನು ನಿಂತನು). ತಾತ್ಪರ್ಯ :
ಕುದುರೆಯನ್ನು ಮರದ ಬುಡಕ್ಕೆ ಕಟ್ಟಿ,ದೈರ್ಯಶಾಲಿ ಮೇಘನಾದನನ್ನು ಅದರ ಕಾವಲಿಗೆ ಗುಟ್ಟಾಗಿ ಇಟ್ಟು, ತಮ್ಮನ್ನು ವೇಗವಾಗಿ ಅಟ್ಟಿಸಿಕೊಂಡು, ಬರುತ್ತಿರುವ ಯೌವನಾಶ್ವನ ಸೈನ್ಯಕ್ಕೆ ಕರ್ಣನಮಗನನ್ನು ಕಳುಹಿಸಿ, ಪ್ರಳಯಕಾಲದ ಬೆಂಕಿಯಂತೆ ಒತ್ತೊತ್ತಾಗಿ ಬರುತ್ತಿರುವ ಸುವೇಗನ ಸೈನ್ಯದ ಸಮೂಹಕ್ಕೆ ಎದುರಾಗಿ, ದೊಡ್ಡಬೆಟ್ಟವು ಒತ್ತಿ ನೂಕುವ ಮಹಾಬಿರುಗಾಳಿಯ ಹೊಡೆತವನ್ನು ತಡೆದು, ಅಲುಗಾಡದೆ ಇರುವಂತೆ ಬೀಮನು ಯುದ್ಧದ ಉತ್ಸಾಹದಿಂದ ನಿಂತನು, (ಪದ್ಯ - ೨೯),
1.4.29_64
ಪದ್ಯ - ೩೦
1.4.30
ಕೇಳ್ ಮಹೀಪಾಲಕ ಸುವೇಗನ ಭಟರ್ ಚೂಣಿ |
ಯೊಳ್ ಮುತ್ತಿಕೊಂಡರ್ ವೃಕೋದರನನಿತ್ತ ಕೆಂ |
ಧೂಳ್ ಮುಸುಕಲೆಣ್ದೆಸೆಗಳಂ ನೃಪರ ಮಣಿಭೂಷಣದಕಾಂತಿ ಝಗಝಗಿಸಲು|| ತೋಳ್ ಮಿಡುಕಿನಿಂದಾರ್ದು ಝಳಪಿಸುವ ಭಟರ ಕರ |
ವಾಳ್ ಮಿಂಚೆ ಛತ್ರಚಮರಂಗಳ ವಿಡಾಯಿ ಮಿಗೆ |
ಸೂಳ್ ಮೆರೆಯೆ ನಿಸ್ಸಾಳಠೋಟಿ ಕಲಿಯೌವನಾಶ್ವಕ್ಷಿತಿಪನೈತಂದನು ||30||
1.4.30_65
ಕೇಳ್ ಮಹೀಪಾಲಕ= ಜನಮೇಜಯ ರಾಜನೇ ಕೇಳು, ಸುವೇಗನ ಭಟರ್= ಸೈನ್ಯದ ಭಟರು, ಚೂಣಿಯೊಳ್=ಮುಂದಿನ ಸಾಲಿನವರು ತಮ್ಮೆದುರು ಇರುವ, ಮುತ್ತಿಕೊಂಡರ್ ವೃಕೋದರನನು= ಭೀಮನನ್ನು ಮುತ್ತಿಕೊಂಡರು, ಇತ್ತ ಕೆಂಧೂಳ್ ಮುಸುಕಲೆಣ್ದೆಸೆಗಳಂ-: ಮುಸುಕಲು ಎಣ್ ದೆಸೆಗಳಂ= ಈ ಕಡೆ ಕೆಂಪು ಧೂಳು ಎಂಟು ದಿಕ್ಕುಗಳಲ್ಲೂ ಮುಸುಕುತ್ತಿರಲು, ನೃಪರ= ರಾಜರು ಧರಿಸಿದ ಮಣಿಭೂಷಣದ ಕಾಂತಿ ಝಗಝಗಿಸಲು, ತೋಳ್ ಮಿಡುಕಿನಿಂದ ಆರ್ದು=ಬಾಹು ಬಲದ ಪರಾಕ್ರಮದಿಂದ ಝಳಪಿಸುವ ಭಟರ= ಯೋದರ ಕರವಾಳ್= ಕತ್ತಿಗಳು ಮಿಂಚೆ ಛತ್ರಚಮರಂಗಳ= ಛತ್ರ ಚಾಮರಗಳ, ವಿಡಾಯಿ= ಸಾಲುಗಳು, ಮಿಗೆ ಸೂಳ್ ಮೆರೆಯೆ= ಬಹಳ ಕೂಗಿನ ಆರ್ಭಟ ಹೆಚ್ಚಲು, ನಿಸ್ಸಾಳಠೋಟಿ= ಕಹಳೆ ಮೊದಲಾದ ವಾದ್ಯಗಳು, ಕಲಿಯೌವನಾಶ್ವಕ್ಷಿತಿಪನೈತಂದನು-: ಕಲಿ= ಶೂರ, ಯೌವನಾಶ್ವ ಕ್ಷಿತಿಪ= ಯೌವನಾಶ್ವ ರಾಜನು, ಐತಂದನು= ಬಂದನು. .ತಾತ್ಪರ್ಯ :
ಜನಮೇಜಯ ರಾಜನೇ ಕೇಳು, ಸೈನ್ಯದ ಭಟರ ಮುಂದಿನ ಸಾಲಿನವರು ತಮ್ಮೆದುರು ಇರುವ, ಭೀಮನನ್ನು ಮುತ್ತಿಕೊಂಡರು. ಈ ಕಡೆ ಕೆಂಪು ಧೂಳು ಎಂಟು ದಿಕ್ಕುಗಳಲ್ಲೂ ಮುಸುಕುತ್ತಿರಲು,ರಾಜರು ಧರಿಸಿದ ಮಣಿಭೂಷಣದ ಕಾಂತಿ ಝಗಝಗಿಸಲು, ಬಾಹು ಬಲದ ಪರಾಕ್ರಮದಿಂದ ಝಳಪಿಸುವ ಯೋದರ ಕತ್ತಿಗಳು ಮಿಂಚೆ ಛತ್ರ ಚಾಮರಗಳ ಸಾಲುಗಳು ಮೆರೆಯೆ, ಅತಿಯಾಗಿ ಕೂಗಿನ ಆರ್ಭಟ ಹೆಚ್ಚಲು, ಕಹಳೆ ಮೊದಲಾದ ವಾದ್ಯಗಳು ಮೊಳಗುತ್ತಿರಲು, ಶೂರ ಯೌವನಾಶ್ವ ರಾಜನು ಬಂದನು. (ಪದ್ಯ - ೩೦),
1.4.30_66
ಪದ್ಯ - ೩೦
1.4.31
ಒತ್ತಿಬಹ ಯೌವನಾಶ್ವನ ಪಡೆಯ ಚೂಣಿಯಂ |
ಕಿತ್ತು ನಿಂದಂ ಕರ್ಣಸುತನದಂ ಕಂಡು ಕವಿ |
ದತ್ತವನಮೇಲೆ ಕರಿ ತುರಗ ರಥ ಪಾಯದಳವೊಂದಾಗಿ ಸಂದಣಿಯೊಳು ||
ಹತ್ತಿಸಿದ ಚಾಪಮಂ ಜೇಗೈದು ಕೂಡೆ ಮಸೆ |
ವೆತ್ತ ಕೂರಂಭುಗಳನಾರ್ದಿಸಲ್ ಸೇನೆ ಮುರಿ |
ದತ್ತವನ ಬಾಣಘಾತಿಗೆ ಹಯದ ಚೋರನೇಂ ವೀರನೋ ಜಗದೊಳೆನುತೆ ||31||
1.4.31_67
ಒತ್ತಿಬಹ= ಮುಂದಕ್ಕೆ ಬರುತ್ತಿರುವ ಯೌವನಾಶ್ವನ ಪಡೆಯ= ಸೈನ್ಯದ, ಚೂಣಿಯಂ ಕಿತ್ತು= ಎದುರುಭಾಗದವರನ್ನು ಓಡಿಸಿ, ನಿಂದಂ+ ಧೃಡವಾಗಿನಿಂತನು ಕರ್ಣಸುತನು; ಅದಂ= ಅದನ್ನು, ಕಂಡು ಕವಿದತ್ತವನಮೇಲೆ-:ಕವಿದು ಅತ್ತ ಅವನ ಮೇಲೆ= ಅದನ್ನು ಕಂಡು, ಅವನ ಮೇಲೆ ಕರಿ ತುರಗ ರಥ ಪಾಯದಳ ಒಂದಾಗಿ ಸಂದಣಿಯೊಳು= ಸಮೂಹದಲ್ಲಿ ಕವಿದು ಬಿದ್ದರು, ಆಗ ಹತ್ತಿಸಿದ= ಹೆದೆ ಏರಿಸಿದ ಚಾಪಮಂ= ಬಿಲ್ಲನ್ನು, ಜೇಗೈದು= ಠೇಂಕಾರ ಮಾಡಿ, ಕೂಡೆ ಮಸೆವೆತ್ತ= ಕೂಡಲೆ ಮಸೆದ, ಕೂರಂಭುಗಳನಾರ್ದಿಸಲ್-: ಕೂರಂಬುಗಳನು= ಚೂಪಾದ= ಬಾಣಗಳನ್ನು ಆರ್ದಿಸಲು=ಜೋರಾಗಿ ಬಿಡಲು, ಸೇನೆ ಮುರಿದತ್ತವನ= ಹಿಮ್ಮಟ್ಟಿತು, ಬಾಣಘಾತಿಗೆ= ಬಾಣದ ಹೊಡೆತಕ್ಕೆ, ಹಯದ= ಕುದುರೆಯ, ಚೋರನೇಂ= ಕಳ್ಳನುಏಂ= ಎಷ್ಟೊಂದು ವೀರನೋ= ವೀರನಪ್ಪಾ, ಜಗದೊಳೆನುತೆ= ಲೋಕದಲ್ಲಿ.ತಾತ್ಪರ್ಯ :
ಮುಂದಕ್ಕೆ ಬರುತ್ತಿರುವ ಯೌವನಾಶ್ವನ ಸೈನ್ಯದ, ಎದುರು ಭಾಗದವರನ್ನು ಓಡಿಸಿ,ಕರ್ಣಸುತನು ಧೃಡವಾಗಿನಿಂತನು; ಅದನ್ನು ಕಂಡು, ಅವನ ಮೇಲೆ ಕರಿ ತುರಗ ರಥ ಪಾಯದಳ ಒಂದಾಗಿ ಒಗ್ಗಟ್ಟಿನಲ್ಲಿ ಕವಿದುಬಿದ್ದರು. ಆಗ ಹೆದೆ ಏರಿಸಿದ ಬಿಲ್ಲನ್ನು ಠೇಂಕಾರ ಮಾಡಿ, ಕೂಡಲೆ ಮಸೆದ ಚೂಪಾದ ಬಾಣಗಳನ್ನು ಜೋರಾಗಿ ಬಿಡಲು, ಲೋಕದಲ್ಲಿ ಕುದುರೆಯಕಳ್ಳನು ಎಷ್ಟೊಂದು ವೀರನಪ್ಪಾ, ಎನ್ನುತ್ತಾ ಬಾಣದ ಹೊಡೆತಕ್ಕೆ ಸೇನೆ ಹಿಮ್ಮಟ್ಟಿತು, (ಪದ್ಯ - ೩೦),
1.4.31_68
ಪದ್ಯ - ೩೨
1.4.32
ಎಲ್ಲಿ ಹಯಚೋರನಂ ತೋರವನ ನೆತ್ತರಂ |
ಚೆಲ್ಲುವೆಂ ಭೂತಗಣಕೆನುತೆ ಖತಿಯಿಂದೆ ನಿಂ |
ದಲ್ಲಿ ನಿಲ್ಲದೆ ಬರ್ಪ ಯೌವನಾಶ್ವನ ರಥಕೆ ಮಾರಾಂತು ಕರ್ಣಸೂನು ||
ಬಿಲ್ಲೊಳಂಬಂ ಪೂಡಲಾರು ನೀನೆಲವೊ ನ |
ಮ್ಮಲ್ಲಿ ಸೆಣಸಿದೆ ನೋಡಿದೊಡೆ ಬಾಲಕಂ ನಿನ್ನೊ |
ಳೊಲ್ಲೆನಾಹವಕೆಮ್ಮ ಕುದುರೆಯಂ ಬಿಟ್ಟು ಪೋಗೆಂದೊಡವನಿಂತೆಂದನು ||32||
1.4.32_69
ಎಲ್ಲಿ ಹಯಚೋರನಂ= ಕುದುರೆ ಕಳ್ಳನನ್ನು ತೋರಿಸು, ತೋರವನ ನೆತ್ತರಂ ಚೆಲ್ಲುವೆಂ ಭೂತಗಣಕೆ= ಅವನ ರಕ್ತವನ್ನು ಭೂತಗಣಕ್ಕೆ ಹಾಕುವೆ, ಎನುತೆ= ಎನ್ನುತ್ತಾ, ಖತಿಯಿಂದೆ = ಸಿಟ್ಟಿನಿಂದ, ನಿಂದಲ್ಲಿ ನಿಲ್ಲದೆ ಬರ್ಪ= (ಕೂಗುತ್ತಾ) ನಿಂತಲ್ಲಿ ನಿಲ್ಲದೆಬರುತ್ತಿರುವ, ಯೌವನಾಶ್ವನ ರಥಕೆ ಮಾರಾಂತು ಕರ್ಣಸೂನು= ಯೌವನಾಶ್ವನ ರಥಕ್ಕೆ, ಮಾರಾಂತು= ಎದುರುಬಂದು ಕರ್ಣಸೂನು= ವೃಷಕೇತು, ಬಿಲ್ಲೊಳಂಬಂ-:ಬಿಲ್ಲೊಳು ಅಂಬಂ=ಬಿಲ್ಲಿನಲ್ಲಿ ಬಾಣವನ್ನು ಪೂಡಲಾರು-ಪೊಡಲು ಆರು ನೀನೆಲವೊ=ನೀನು ಎಲವೊ=ಹೂಡಲು, ಎಲವೊ ನೀನು ಯಾರು, ನಮ್ಮಲ್ಲಿ ಸೆಣಸಿದೆ ನೋಡಿದೊಡೆ ಬಾಲಕಂ= ನಮ್ಮೊಡನೆ ಯುದ್ಧಕ್ಕೆಬಂದೆ, ನೋಡಿದರೆ ಬಾಲಕನು; ನಿನ್ನೊಳೊಲ್ಲೆನಾಹವಕೆಮ್ಮ-:ನಿನ್ನೊಳು=ನಿನ್ನೊಡನೆ, ಒಲ್ಲೆನು= ಇಷ್ಟವಿಲ್ಲ, ಆಹವಕೆ= ಯುದ್ಧಕ್ಕೆ, ಕುದುರೆಯಂ ಬಿಟ್ಟು= ಕುದುರೆಯನ್ನು ಬಿಟ್ಟು, ಪೋಗೆಂದೊಡವನಿಂತೆಂದನು-:ಪೋಗು ಎಂದೊಡೆ ಇಂತೆಂದನು= ಹೋಗು ಎಂದಾಗ, ಹೀಗೆ ಹೇಳಿದನು. *ತಾತ್ಪರ್ಯ :
ಕುದುರೆ ಕಳ್ಳನನ್ನು ತೋರಿಸು, ಅವನ ರಕ್ತವನ್ನು ಭೂತಗಣಕ್ಕೆ ಹಾಕುವೆ, ಎನ್ನುತ್ತಾ,ಸಿಟ್ಟಿನಿಂದ ಕೂಗುತ್ತಾ ನಿಂತಲ್ಲಿ ನಿಲ್ಲದೆ ಬರುತ್ತಿರುವ, ಯೌವನಾಶ್ವನ ರಥಕ್ಕೆ, ಎದುರು ಬಂದು, ವೃಷಕೇತು ಬಿಲ್ಲಿನಲ್ಲಿ ಬಾಣವನ್ನು ಹೂಡಲು, ಎಲವೊ ನೀನು ಯಾರು? ನಮ್ಮೊಡನೆ ಯುದ್ಧಕ್ಕೆ ಬಂದೆ, ನೋಡಿದರೆ ಬಾಲಕನು; ನಿನ್ನೊಡನೆ ಯುದ್ಧಕ್ಕೆ ತೊಡಗಲು ಇಷ್ಟವಿಲ್ಲ, ಕುದುರೆಯನ್ನು ಬಿಟ್ಟು ಹೋಗು ಎಂದಾಗ, ವೃಷಕೇತು ಹೀಗೆ ಹೇಳಿದನು. (ಪದ್ಯ - ೩೨),
1.4.32_70
ಪದ್ಯ - ೩೩
1.4.33
ಆರಾದೊಡೇನಶ್ವಮಂ ಬಿಡುವನಲ್ಲ ಮದ |
ವಾರಣಂ ಪಿರಿದಾದೊಡೆಳಸಿಂಗಮಂಜಿ ಕೆಲ |
ಸಾರುವುದೆ ನಿನ್ನ ತನುವಿನ ತೋರದಾಯತಕೆ ಕಲಿಗಳೆದೆ ಕಾತರಿಪುದೆ ||
ವೀರನಾದೊಡೆ ಕೈದುಮುಟ್ಟಿಗಳ ಘೋರ ಪ್ರ |
ಹಾರಮಂ ತೋರಿಸೀ ಸ್ಥೂಲಸೂಕ್ಷ್ಮಂಗಳ ವಿ |
ಚಾರಮೇಕೆನುತ ವೃಷಕೇತು ತೆಗೆದೆಚ್ಚನಾ ನೃಪನ ಕಾಯಂ ನೋಯಲು ||33||
1.4.33_71
ಆರಾದೊಡೇನಶ್ವಮಂ-: ಆರಾದೊಡೆ ಏನು ಅಶ್ವಮಂ ಬಿಡುವನಲ್ಲ= ನಾನು ಯಾರಾದರೇನು ಕುದುರೆಯನ್ನು ಬಿಡುವವನಲ್ಲ, ಮದವಾರಣಂ= ಮದಗಜವು ಪಿರಿದಾದೊಡೆಳಸಿಂಗಮಂಜಿ-: ಪಿರಿದಾದೊಡೆ ಎಳೆಸಿಂಗಂ ಅಂಜಿ= ಮದಗಜವು ದೊಡ್ಡದಾರೆ, ಸಿಂಹದ ಮರಿಯು, ಕೆಲಸಾರುವುದೆ= ಓಡಿಹೋಗುವುದೇ? ನಿನ್ನ ತನುವಿನ ತೋರದ ಆಯತಕೆ= ನಿನ್ನ (ದೇಹದ) ದೊಡ್ಡ ಆಕಾರಕ್ಕೆ, ಕಲಿಗಳೆದೆ-:ಕಲಿಗಳ ಎದೆ= ಶೂರರ ಎದೆ, ಕಾತರಿಪುದೆ= ಹೆದರುವುದೆ?/ನಡುಗುವುದೆ? ವೀರನಾದೊಡೆ= ವೀರನಾಗಿದ್ದರೆ, ಕೈದುಮುಟ್ಟಿಗಳ: ಕೈದು= ಆಯುಧ, ಮಟ್ಟಿಗಳ= ಮಷ್ಟಿಗಳ, ಘೋರ ಪ್ರಹಾರಮಂ= ಶಕ್ತಿಯುಳ್ಳಹೊಡೆತದಿಂದ, ತೋರಿಸೀ-:ತೋರಿಸು ಈ ಸ್ಥೂಲಸೂಕ್ಷ್ಮಂಗಳ= ದೊಡ್ಡವನು ಚಿಕ್ಕವನು ಎನ್ನುವ ವಿಚಾರಮೇಕೆನುತ-:ವಿಚಾರಂ ಏಕೆ ಎನುತ= ವಿಚಾರಗಳು ಏಕೆ ಎನ್ನುತ್ತಾ, ವೃಷಕೇತು ತೆಗೆದೆಚ್ಚನಾ-:ತೆಗೆದು ಎಚ್ಚನು= ಹೊಡೆದನು ನೃಪನ ಕಾಯಂ ನೋಯಲು= ವೃಷಕೇತು ವೃಷಕೇತುವಿಗೆ ನೋವಾಗುವಂತೆ ಬಾಣದ ಪ್ರಯೋಗ ಮಾಡಿದನು.
ನಾನು ಯಾರಾದರೇನು ಕುದುರೆಯನ್ನು ಬಿಡುವವನಲ್ಲ, ಮದಗಜವು ದೊಡ್ಡದಾರೆ, ಸಿಂಹದ ಮರಿಯು ಓಡಿಹೋಗುವುದೇ? ನಿನ್ನ (ದೇಹದ) ದೊಡ್ಡ ಆಕಾರಕ್ಕೆ, ಶೂರರ ಎದೆ, ಹೆದರುವುದೆ?/ನಡುಗುವುದೆ? ವೀರನಾಗಿದ್ದರೆ ಆಯುಧ, ಮಷ್ಟಿಗಳ ಶಕ್ತಿಯುಳ್ಳ ಹೊಡೆತದಿಂದ,ತೋರಿಸು ಈ ದೊಡ್ಡವನು ಚಿಕ್ಕವನು ಎನ್ನುವ ವಿಚಾರಗಳು ಏಕೆ ಎನ್ನುತ್ತಾ, ವೃಷಕೇತು ಯವೌನಾಸ್ವನಿಗೆ ನೋವಾಗುವಂತೆ ಬಾಣದ ಪ್ರಯೋಗ ಮಾಡಿದನು. (ಪದ್ಯ - ೩೩),
1.4.33_72
ಪದ್ಯ - ೩೪
1.4.34
ಲೋಕದೊಳ್ ತನ್ನೊಳ್ ಪೊಣರ್ವ ಭಟರಿಲ್ಲ ನೀ |
ನೇ ಕಲಿಕಣಾ ಪಸುಳೆಯೆಂದು ಸೈರಿಸಿದೆ ನಿನ |
ಗಾಕೆವಾಳಿಕೆಯ ಧೀರತ್ವಮುಂಟಾದೊಡದು ಬಳಿಕೆಮ್ಮ ಪುಣ್ಯಮೆನಂತೆ ||
ಆಕರ್ಣಪೂರದಿಂ ತೆಗೆದೆಚ್ಚನಾ ಭೂಪ |
ನೀಕರ್ಣಸಂಭವಂ ಕಡಿದನೆಡೆಯೊಳ್ ಸರಳ |
ನೇಕಾರ್ಣವಂ ಮೇರೆದಪ್ಪಿತೆನೆ ಮುಸುಕಿದಂ ಕಣೆಯಿಂದವನ ರಥವನು ||34||
1.4.34_73
ಲೋಕದೊಳ್= ಈ ಜಗತ್ತಿನಲ್ಲಿ, ತನ್ನೊಳ್= ತನ್ನೊಡನೆ ಪೊಣರ್ವ= ಹೋರಾಡುವ ಭಟರಿಲ್ಲ= ಯೋಧರಿಲ್ಲ, ನೀನೇ ಕಲಿಕಣಾ= ಶೂರನು ಕಣಯ್ಯಾ, ಪಸುಳೆಯೆಂದು= ಎಳೆಯ ಪ್ರಾಯದವನೆಂದು,ಸೈರಿಸಿದೆ= (ನಿನ್ನ ಕುದುರೆ ಕದ್ದ ತಪ್ಪನ್ನು) ಸಹಿಸಿದೆ ನಿನಗಾಕೆವಾಳಿಕೆಯ-: ನಿನಗೆ ಆಕೆವಾಳಿಕೆಯ= ಶೂರತನದ, ಧೀರತ್ವಮುಂಟಾದೊಡದು-: ಧೀರತ್ವಂ ಉಂಟಾದೊಡೆ ಅದು= ಶೌರ್ಯದ ಧೀರತನವಿದ್ದರೆ ಅದು, ಬಳಿಕೆಮ್ಮ ಪುಣ್ಯಮೆನಂತೆ= ಬಳಿಕ ಎಮ್ಮ= ನಮ್ಮ ಪುಣ್ಯಮಂತೆ= ಅದು ನಮ್ಮ ಪುಣ್ಯವೆಂದು ಹೇಳುತ್ತಾ, ಆಕರ್ಣಪೂರದಿಂ= ಕಿವಿಯವರೆಗೂ ಬಾಣವನ್ನು . ತೆಗೆದೆಚ್ಚನಾ ಭೂಪನು= ಎಳೆದು ಬಿಟ್ಟನು ಆ ರಾಜನು, ಈ ಕರ್ಣಸಂಭವಂ=ವೃಷಕೇತು, ಕಡಿದನೆಡೆಯೊಳ್=ಕಡಿದನು ಎಡೆಯೊಳ್=(ಅದನ್ನು) ಮಧ್ಯದಲ್ಲಿ. ಸರಳನೇಕಾರ್ಣವಂ-: ಸರಳನು ಏಕಾರ್ಣವ= ಸಮುದ್ರಗಳೆಲ್ಲಾ ಮೇರೆದಪ್ಪಿತೆನೆ= ಒಂದಾಗಿ ಉಕ್ಕಿಬಂದಿತೋ ಎನ್ನುವಂತೆ ಬಾಣಗಳನ್ನು, ಮುಸುಕಿದಂ=ಮುಚ್ಚಿದನು, ಕಣೆಯಿಂದವನ-:ಕಣೆಯಿಂದ= ಬಾಣದಿಂದ, ಅವನ ರಥವನು= ರಥವನ್ನು.ತಾತ್ಪರ್ಯ :
1.4.34_74
ಪದ್ಯ - ೩೫
1.4.35
ಮಾರ್ಗದೊಳ್ ಮಾರ್ಗಣಂಗಳನರಿದು ಕರ್ಣಜಂ |
ಕೂರ್ಗಣೆಯ ಕಾರ್ಗಾಲಮಂ ಸೃಜಿಸಲಾ ನೃಪನ |
ತೇರ್ಗೆರಗಿ ಕೂರ್ಗೊಂಡು ಮುತ್ತಿತು ಶರೌಘಮದನೇನೆಂಬೆನಾಕ್ಷಣದೊಳು ||
ಏರ್ಗಳಿಂದೊರ್ಗುಡಿಸಿ ಸಾರಥಿ ಬೀಳಲ್ಕೆ ಕೆ |
ನ್ನೀರ್ಗಾರಿ ದೀರ್ಘಶಯನಂಗೆಯ್ಯೆ ಕುದುರೆಗಳ್ |
ನೇರ್ಗೋಲ ಪೋರ್ಗಳಾ ನೃಪನಂಗದೊಳ್ ಕಾಣಿಸಿದುವು ಜಾಳಂದ್ರದಂತೆ ||35||
1.4.35_75
ಕರ್ಣಜಂ= ವೃಷಕೇತು, ಮಾರ್ಗದೊಳ್= ದಾರಿಮಧ್ಯದಲ್ಲಿ, ಮಾರ್ಗಣಂಗಳನು ಅರಿದು= ಬಾಣಗಳನ್ನು ಕತ್ತರಿಸಿ, ಕೂರ್ಗಣೆಯ= ಚೂಪಾದ ಬಾಣಗಳ, ಕಾರ್ಗಾಲಮಂ=ಮಳೆಯನ್ನು ಸೃಜಿಸಲಾ= ಉಂಟುಮಾಡಲು ಆ ನೃಪನ=ರಾಜನ, ತೇರ್ಗೆರಗಿ-:ತೇರ್ಗೆ ಎರಗಿ, ಕೂರ್ಗೊಂಡು=ಹೊಕ್ಕು, ಮುತ್ತಿತು ಶರೌಘಮದನೇನೆಂಬೆನಾಕ್ಷಣದೊಳು-: ಶರೌಘಂ ಅದನು ಏನೆಂಬೆನು ಆ ಕ್ಷಣದೊಳು=ಆಕ್ಷಣದಲ್ಲಿ ಬಾಣಗಳು ಮುತ್ತಿತು, ಅದನ್ನು ಏನಂದು ಹೇಳಲಿ. ಏರ್ಗಳಿಂದೊರ್ಗುಡಿಸಿ-: ಏರ್ಗಳಿಂದ=ಬಾಣಗಳಿಂದ ಓರ್ಗುಡಿಸಿ=ಒಲೆದಾಡಿ, ಸಾರಥಿ=ಸಾರಥಿಯು ಬೀಳಲ್ಕೆ= ಬೀಳಲು, ಕೆನ್ನೀರ್ಗಾರಿ-:ಕೆನ್ನೀರ್ ಕಾರಿ, ದೀರ್ಘಶಯನಂಗೆಯ್ಯೆ-:ದೀರ್ಘಶಯನಂ=ಎಚ್ಚರಾದ ನಿದ್ದೆ (ಮರಣ)ಗೈಯೆ= ಮಾಡಲು, ಕುದುರೆಗಳ್=ಕುದುರಗಳು ನೇರ್ಗೋಲ- ನೇರ ಕೋಲ= ಉದ್ದ ಬಾಣಗಳು, ಪೋರ್ಗಳಾ-:ಪೋರ್ಗಳ್=ಹೊಗಲು, ಆ ನೃಪನಂಗದೊಳ್ ಆ ರಾಜನ ಅಂಗದೊಳ್ = ದೇಹದಲ್ಲಿ, ಕಾಣಿಸಿದುವು= ಕಾಣಿಸುವಂತೆ ಮಾಡಿದವು ಜಾಳಂದ್ರದಂತೆ= ತೂತುಗಳ ಜರಡಿಯಂತೆ.
ವೃಷಕೇತು, ದಾರಿಮಧ್ಯದಲ್ಲಿಯೇ ಆ ಬಾಣಗಳನ್ನು ಕತ್ತರಿಸಿ, ಚೂಪಾದ ಬಾಣಗಳ ಮಳೆಯನ್ನು ರಾಜನ ಮೇಲೆ ಸುರಿಸಲು, ರಾಜನ, ತರಥಕ್ಕೆ ಅವು ಎರಗಿ ಹೊಕ್ಕು ಮುತ್ತಿತು; ಆ ಕ್ಷಣದಲ್ಲಿ ಬಾಣಗಳು ಮುತ್ತಿತು, ಅದನ್ನು ಏನಂದು ಹೇಳಲಿ. ಬಾಣಗಳಿಂದ ಒಲೆದಾಡಿ ಸಾರಥಿಯು ರಕ್ತ ಕಾರಿ, ಮರಣಹೊದಲು ಕುದುರಗಳಿಗೆ ಉದ್ದ ಬಾಣಗಳು, ಹೊಗಲು, ಆ ನೃಪನ ದೇಹದಲ್ಲಿ, ತೂತುಗಳ ಜರಡಿಯು ಕಾಣಿಸುವಂತೆ ಮಾಡಿದವು . (ಪದ್ಯ - ೩೫),
1.4.35_76
ಪದ್ಯ - ೩೬
1.4.36
ಒಡಲೊಳಿಡಿದಸ್ತ್ರಮಂ ಕಿತ್ತೊಡನೆ ಚಿತ್ತದೊಳ್ |
ಕಿಡಿಯಿಡುವ ಕಡುಗೋಪದುರಿ ಮೆಯೊೈಳಿರದೆ ಪೊರ |
ಮಡುವುದೋ ಕಣ್ಗಳಿಂದೆನೆ ಕೆಂಪಡರ್ದಾಲಿಗಳ್ ಭಯಂಕರಮಾಗಲು ||
ತುಡುಕಿ ಪಾವಕಮಹಾಬಾಣಮಂ ತಿರುವಿನೊಳ್ |
ತುಡಿಸಿ ಕಿವಿವರೆಗೆ ತೆಗೆದೆಚ್ಚೊಡವನಂದು ಕೈ |
ಗೆಡದೆ ಕರ್ಣಾತ್ಮಜಂ ವಾರುಣಾಸ್ತ್ರ ಪ್ರಯೋಗದೊಳದಂ ತಂಪಿಸಿದನು||36||
1.4.36_77
ಒಡಲೊಳಿಡಿದ= ದೇಹದೊಳಗೆ ಅಸ್ತ್ರಮಂ= ಬಾಣವನ್ನು, ಕಿತ್ತೊಡನೆ-: ಕಿತ್ತು=ತೆಗೆದು, ಒಡನೆ=ಕೂಡಲೆ ಚಿತ್ತದೊಳ್ ಕಿಡಿಯಿಡುವ= ಮನಸ್ಸಿನಲ್ಲಿ ಕಿಡಿ ಏಳುವಷ್ಟು, ಕಡುಗೋಪದುರಿ-:ಕಡು= ಬಹಳ, ಕೋಪದ ಉರಿ= ಬೆಂಕಿ ಮೆಯೊೈಳಿರದೆ-: ಮೈಯೊಳ್= ಸಿಟ್ಟಿನ ಬೆಂಕಿ ಮೈಯೊಳಗೆ ಇರದೆ, ಪೊರ ಮಡುವುದೋ= ಹೊರಬರುವುದೋ ಕಣ್ಗಳಿಂದೆನೆ-: ಕಂಣ್ಗಳಿಂದ ಎನೆ= ಕಣ್ಣುಗಳಿಂದ ಎನ್ನುವಂತೆ, ಕೆಂಪಡರ್ದಾಲಿಗಳ್-: ಕೆಂಪು ಅಡರ್ದ ಆಲಿಗಳ್=ಕಣ್ನಾಲಿಗಳು ಕೆಂಪು ಆಗಿ, ಭಯಂಕರಮಾಗಲು= ಭಯಯಾನಕವಾಗಿ ಕಾಣಲು, ತುಡುಕಿ ಪಾವಕ(ಅಗ್ನಿ) ಮಹಾಬಾಣಮಂ= ಅಗ್ನಿಯ ಅಸ್ತ್ರದ ಬಾಣವನ್ನು ತೆಗೆದುಕೊಂಡು, ತಿರುವಿನೊಳ್ ತುಡಿಸಿ= ನಾಣಿಗೆ ಹೂಡಿ, ಕಿವಿವರೆಗೆ ತೆಗೆದೆಚ್ಚೊಡೆ= ಎಳದು ಬಾಣಹೊಡೆಯಲು, ಅವನಂದು=ಅವನು/ ವೃಷಕೇತು ಕೈಗೆಡದೆ= ಎಚ್ಚರತಪ್ಪದೆ ಕರ್ಣಾತ್ಮಜಂ=ವೃಷಕೇತು ವಾರುಣಾಸ್ತ್ರ ಪ್ರಯೋಗದೊಳದಂ ತಂಪಿಸಿದನು= ವರುಣಾಸ್ತ್ರ ಪ್ರಯೋಗಿಸಿ ಅದನ್ನು ಶಾಂತಗೊಳಿಸಿದನು.
ಅವನು(ರಾಜನು) ಆಂದು ದೇಹದೊಳಗೆ ಬಾಣವನ್ನು, ಕಿತ್ತು ತೆಗೆದು ಕೂಡಲೆ ಮನಸ್ಸಿನಲ್ಲಿ ಕಿಡಿ ಏಳುವಷ್ಟು ಅತಿಯಾದ ಸಿಟ್ಟಿನ ಬೆಂಕಿ ಮೈಯೊಳಗೆ ಇರದೆ, ಕಣ್ಣುಗಳಿಂದ ಹೊರಬರುವುದೋ ಎನ್ನುವಂತೆ ಕಣ್ನಾಲಿಗಳು ಕೆಂಪು ಆಗಿ, ಭಯಯಾನಕವಾಗಿ ಕಾಣಲು, ಅಗ್ನಿಯಾಸ್ತ್ರದ ಬಾಣವನ್ನು ತೆಗೆದುಕೊಂಡು, ನಾಣಿಗೆ ಹೂಡಿ, ಕಿವಿವರೆಗೆ ಎಳೆದು ಬಾಣಹೊಡೆಯಲು, ವೃಷಕೇತು ಎಚ್ಚರತಪ್ಪದೆ ವೃಷಕೇತು ವಾರುಣಾಸ್ತ್ರ ವರುಣಾಸ್ತ್ರ ಪ್ರಯೋಗಿಸಿ ಅದನ್ನು ಶಾಂತಗೊಳಿಸಿದನು. (ಪದ್ಯ - ೩೬),
1.4.36_78
ಪದ್ಯ - ೩೭
1.4.37
ಹವ್ಯವಾಹಾಸ್ತ್ರಮಂ ವರುಣಾಸ್ತ್ರದಿಂ ಗೆಲ್ದು |
ನವ್ಯಮೇಘಾಸ್ತ್ರಮಂ ಕರ್ಣಜಂ ಪೂಡೆ ವಾ |
ಯವ್ಯಾಸ್ತ್ರದಿಂದೆ ಬರಿಕೈದವಂ ತಿಮಿರಾಸ್ತ್ರಮಂ ಜೋಡಿಸಲ್ಕೀತನು ||
ರವ್ಯಸ್ತ್ರದಿಂದೆ ಬರಿಕೈದವಂ ಶೈಲಾಸ್ತ್ರಮಂ ತುಡಲ್ |
ದಿವ್ಯ ಕುಲಿಶಾಸ್ತ್ರದಿಂ ಮುರಿದಾ ನೃಪಾಲನು |
ಗ್ರವ್ಯಾಳದಸ್ತ್ರಮಂ ತೆಗೆಯಲ್ಕೆ ಗರುಡಾಸ್ತ್ರದಿಂದಿವಂ ಖಂಡಿಸಿದನು ||37||
1.4.37_79
ಹವ್ಯವಾಹಾಸ್ತ್ರಮಂ= ಆಗ್ನೇಯಾಸ್ತ್ರವನ್ನು, ವರುಣಾಸ್ತ್ರದಿಂ ಗೆಲ್ದು= ವರುಣಾಸ್ತ್ರದಿಂದ ಗೆದ್ದು, ನವ್ಯಮೇಘಾಸ್ತ್ರಮಂ= ನವ್ಯಮೇಘಾಸ್ತ್ರವನ್ನು ಕರ್ಣಜಂ= ವೃಷಕೇತು ಪೂಡೆ= ಹೂಡಲು, ವಾಯವ್ಯಾಸ್ತ್ರದಿಂದೆ= ವಾಯವ್ಯಾಸ್ತ್ರದಿಂದ ಅದನ್ನು ಬರಿಕೈದವಂ= ಶಾಂತಗೋಳಿಸಿದನು, ತಿಮಿರಾಸ್ತ್ರಮಂ= ತಿಮಿರಾಸ್ತ್ರವನ್ನು(ಕತ್ತಲೆ) ಜೋಡಿಸಲ್ಕೀತನು-:ಜೋಡಿಸಲ್ಕೆ= ಬಿಡಲು, ಈತನು ಅದನ್ನು ರವ್ಯಸ್ತ್ರದಿಂದೆ= ರವ್ಯಸ್ತ್ರದಿಂದ(ಸೂರ್ಯ) ಬರಿಕೈದವಂ= ಶಾಂತಗೊಳಿಸಿದನು, ಶೈಲಾಸ್ತ್ರಮಂ= ಶೈಲಾಸ್ತ್ರವನ್ನು ತುಡಲ್= ತೊಡಲು ಅದನ್ನು ದಿವ್ಯ ಕುಶಾಸ್ತ್ರದಿಂ= ವಜ್ರಾಸ್ತ್ರದಿಂದ ಅದನ್ನು ಮುರಿದಾ= ಮುರಿದನು ಆ ನೃಪಾಲನು= ರಾಜನು, ಗ್ರವ್ಯಾಳದಸ್ತ್ರಮಂ= ಸರ್ಪಗಳ ಅಸ್ತ್ರವನ್ನು ತೆಗೆಯಲ್ಕೆ= ತೆಗೆಯಲು, ಅದನ್ನು ಗರುಡಾಸ್ತ್ರದಿಂದ ಇವಂ ಗರುಡಾಸ್ತ್ರದಿಂದ ಖಂಡಿಸಿದನು= ನಿಶ್ಕ್ರಿಯಗೊಳಿಸಿದನು.
1.4.37_80
ಪದ್ಯ - ೩೮
1.4.38
ಫೂತುರೇ ತರುಣ ಮಂತ್ರಾಸ್ತ್ರಪ್ರತೀಕಾರ |
ಚಾತುರ್ಯಮುಂಟಲಾ ನಿನ್ನೊಳದು ಲೇಸು ಗೆ |
ಲ್ವಾತುರಮದೇಕೆ ನಿನಗೆನುತವಂ ಕೈದೋರಿಸಲ್ ಕಣೆಗಳಾಗಸದೊಳು ||
ಸೇತುವಂ ಕಟ್ಟಿದವೊಲಿಟ್ಟಣಿಸಲಾಗ ವೃಷ |
ಕೇತು ತರಿದೊಡ್ಡುತಿರಲವರಿರ್ವರೆಡೆಯೊಳ |
ಡ್ಡಾತು ನಿಂದುದು ಬಳೆದು ಚಿನಗಡಿದ ಶರಗಿರಿಯದೇನೆಂಬೆನದ್ಭುತವನು ||38||
1.4.38_81
ಫೂತುರೇ=ಭಲೇ! ತರುಣ= ತರುಣನೇ, ಮಂತ್ರಾಸ್ತ್ರಪ್ರತೀಕಾರ ಚಾತುರ್ಯಮುಂಟಲಾ= ಮಂತ್ರಾಸ್ತ್ರಗಳಿಗೆ ಪ್ರತೀಕಾರ ಮಂತ್ರಾಸ್ತ್ರ ಪ್ರಯೋಗಿಸುವ ಚತುರತೆ ನಿನಗೆ ಉಂಟಲ್ಲವೇ! ನಿನ್ನೊಳದು ಲೇಸು ಗೆಲ್ವಾತುರಮದೇಕೆ-: ಗೆಲ್ವ ಆತುರವು ಅದು ಏಕೆ= ಗೆಲ್ಲಲು ಅವಸರ ಮಾಡಬೇಡ, ನಿನಗೆನುತವಂ-:ನಿನಗೆ, ಎನುತ ಅವಂ=ಎಂದು ಹೇಳುತ್ತಾ ಅವನು, ಕೈದೋರಿಸಲ್= ಕೈತೋರಿಸುತ್ತಾ, ಕಣೆಗಳಾಗಸದೊಳು= ಕಣೆಗಳು ಆಗಸದೊಳು ಸೇತುವಂ ಕಟ್ಟಿದವೊಲಿಟ್ಟಣಿಸಲಾಗ_:ಕಟ್ಟಿದವೊಲ್ ಇಟ್ಟಣಿಸಲು ಆಗ= ಆಕಾಶದಲ್ಲಿ ಬಾಣಗಳ ಸೇತುವೆ ಕಟ್ಟಿದಂತೆ ತುಂಬಿಹೋಗಲು, ವೃಷಕೇತು ತರಿದೊಡ್ಡುತಿರಲವರಿರ್ವರೆಡೆಯೊಳಡ್ಡಾತು-:ತರಿದು ಒಡ್ಡುತಿರಲ್ ಅವರ ಇರ್ವರ= ಈರ್ವರ ಎಡೆಯೊಳಡ್ಡ ಆತು ನಿಂದುದು ಬಳೆದು ಚಿನಗಡಿದ=ಸಣ್ಣದಾಗಿ ಕತ್ತರಿಸಿದ ಶರಗಿರಿಯು ಅದೇನೆಂಬೆನು ಅದ್ಭುತವನು=ವೃಷಕೇತು ಆ ಬಾಣಗಳನ್ನು ಕತ್ತರಿಸಿ ಹಾಕುತ್ತಿರಲು, ಅವರಿಬ್ಬರ ಮಧ್ಯದಲ್ಲಿ ಸಣ್ಣದಾಗಿ ಕತ್ತರಿಸಿದ ಬಾಣಗಳ ಬೆಟ್ಟವು ರಾಶಿಯಾಗಿ ಬೆಳೆದು ನಿಂತಿತು. ಅದ್ಭುತವನ್ನು ಏನೆಂಬೆನು= ಏನೆಂದು ಹೇಳಲಿ
ಭಲೇ! ತರುಣನೇ, ಮಂತ್ರಾಸ್ತ್ರಗಳಿಗೆ ಪ್ರತೀಕಾರ ಮಂತ್ರಾಸ್ತ್ರ ಪ್ರಯೋಗಿಸುವ ಚತುರತೆ ನಿನಗೆ ಉಂಟಲ್ಲವೇ! ಗೆಲ್ಲಲು ಅವಸರ ಮಾಡಬೇಡ, ನಿನಗೆ, ಎಂದು ಹೇಳುತ್ತಾ ಅವನು, ಕೈತೋರಿಸುತ್ತಾ, ಆಕಾಶದಲ್ಲಿ ಬಾಣಗಳ ಸೇತುವೆ ಕಟ್ಟಿದಂತೆ ತುಂಬಿಹೋಗಲು, ವೃಷಕೇತು ಅವನ್ನು ತರಿದು ರಾಶಿ ಮಾಡುತ್ತಿರಲು, ವೃಷಕೇತು ಆ ಬಾಣಗಳನ್ನು ಕತ್ತರಿಸಿ ಹಾಕುತ್ತಿರಲು, ಅವರಿಬ್ಬರ ಮಧ್ಯದಲ್ಲಿ ಸಣ್ಣದಾಗಿ ಕತ್ತರಿಸಿದ ಬಾಣಗಳ ಬೆಟ್ಟವು ರಾಶಿಯಾಗಿ ಬೆಳೆದು ನಿಂತಿತು. ಅದ್ಭುತವನ್ನು ಏನೆಂದು ಹೇಳಲಿ. (ಉತ್ಪ್ರೇಕ್ಷಾಲಂಕಾರ) (ಪದ್ಯ - ೩೮),
1.4.38_82
ಪದ್ಯ - ೩೯
1.4.39
ಅವರಿರ್ವರೆಸುಗೆಯೊಳ್ ಮಂಡಲಾಕೃತಿಯೊಳೊ |
ಪ್ಪುವ ಕಾರ್ಮುಕಂಗಳುದಯಾಸ್ತಮಯಮಪ್ಪ ಶಶಿ |
ರವಿಬಿಂಬದಾಯತದೊಲಿರೆ ನಡುವಣಂಬುಗಳ್ ತನ್ಮರೀಚಿಗಳಂತಿರೆ ||
ಅವಯವದ ಗಾಯದೊಳುಗುವ ರಕ್ತಧಾರೆಗಳ್ |
ತವೆ ಸಂಜೆಗೆಂಪಿಡಿದ ತೆರದಿಂದೆ ಕಂಗೊಳಿಸೆ |
ಭುವನದೊಳ್ ಪೊಸತಾಯ್ತು ಸಂಗರಂ ಸಂಧ್ಯಾಗಮವನಂದು ಸೂಚಿಪಂತೆ||39||
1.4.39_83
ಅವರಿರ್ವರ= ಅವರಿಬ್ಬರ, ಎಸುಗೆಯೊಳ್=(ಬಾಣಗಳ) ಪ್ರಯೋಗದಲ್ಲಿ ಮಂಡಲಾಕೃತಿಯೊಳ್=ವೃತ್ತದಂತೆ, ಒಪ್ಪುವ=ಕಾಣುವ ಕಾರ್ಮುಕಂಗಳು= ಬಾಣಗಳು, ಉದಯಾಸ್ತಮಯಮಪ್ಪ ಶಶಿರವಿಬಿಂಬದ ಆಯತದ ಒಲ್ ಇರೆ=ಉದಯ ಅಸ್ತಮ ಸಮಯದ ಚಂದ್ರ ಸೂರ್ಯರ ಬಿಂಬ/ಮಂಡಲದಂತೆ ಇರಲು, ನಡುವಣಂಬುಗಳ್= ನಡುವಿನ ಅಂಬುಗಳು/ಬಾಣಗಳು, ತನ್ಮರೀಚಿಗಳಂತಿರೆ-ತನ್ ಮರೀಚಿಗಳಂತೆ ಇರೆ= ಅದರ ಕಿರಣಗಳಂತೆ ಇರಲು, ಅವಯವದ= ದೇಹದ, ಗಾಯದೊಳು ಉಗುವ= ಗಾಯದಿಂದ ಹೊರಡುವ, ರಕ್ತಧಾರೆಗಳ್,= ರಕ್ತದ ಹರಿವು, ತವೆ= ಅತಿಯಾದ, ಸಂಜೆಗೆಂಪಿಡಿದ= ಸಂಜೆಯ ಕೆಂಪು ಇಡಿದ=ಹಚ್ಚಿದ, ತೆರದಿಂದೆ= ರೀತಿಯಲ್ಲಿ, ಕಂಗೊಳಿಸೆ= ಪ್ರಕಾಶಿಸಲು, ಭುವನದೊಳ್= ಭೂಮಿಯಮೇಲೆ, ಪೊಸತಾಯ್ತು ಸಂಗರಂ= ಯುದ್ಧವು ಹೊಸಬಗೆಯಾಯಿತು, ಹೇಗೆಂದರೆ ಅದು, ಸಂಧ್ಯಾಗಮವನಂದು ಸೂಚಿಪಂತೆ= ಪ್ರಕೃತಿಯಲ್ಲಿ ಸಂದ್ಯಾಗಮನವನ್ನು ಸೂಚಿಸುವಂತಿತ್ತು.
1.4.39_84
ಅವರಿಬ್ಬರ, ಬಾಣಗಳ ಪ್ರಯೋಗವು ವೃತ್ತದಂತೆ ಕಾಣುವ ಬಾಣಗಳು, ಉದಯ ಮತ್ತು ಅಸ್ತಮ ಸಮಯದ ಚಂದ್ರ ಸೂರ್ಯರ ಬಿಂಬ/ಮಂಡಲದಂತೆ ಇರಲು,ನಡುವಿನ ಅಂಬುಗಳು/ಬಾಣಗಳು, ಅದರ ಕಿರಣಗಳಂತೆ ಇರಲು, ದೇಹದ ಗಾಯದಿಂದ ಹೊರಡುವ ರಕ್ತದ ಹರಿವು ಅತಿಯಾದ ಸಂಜೆಯ ಕೆಂಪುಬಣ್ಣ ಹಚ್ಚಿದ ರೀತಿಯಲ್ಲಿ ಪ್ರಕಾಶಿಸಲು, ಭೂಮಿಯಮೇಲೆ ಈ ಯುದ್ಧವು ಹೊಸಬಗೆಯಾಯಿತು, ಹೇಗೆಂದರೆ ಅದು, ಪ್ರಕೃತಿಯಲ್ಲಿ ಅಂದು ಸಂದ್ಯಾಗಮನವನ್ನು ಸೂಚಿಸುವಂತಿತ್ತು. (ಪದ್ಯ - ೩೯),
1.4.39_85
ಪದ್ಯ - ೪೦
1.4.40
ಎಚ್ಚು ಕೈಗೆಡನಾ ನೃಪಾಲನಾ ಕಣಿಗಳಂ |
ಕೊಚ್ಚಿ ಬೇಸರನೀ ವೃಷಧ್ವಜಂ ಬಳಿಕದಕೆ |
ಮೆಚ್ಚಿ ಕೇಳ್ದಂ ಯೌವನಾಶ್ವನೆಲೆ ಬಾಲ ನೀಂ ಪಸುಳೆಯಾಗಿರ್ದೊಡೇನು ||
ಕೆಚ್ಚೆದೆಯ ಭಟನಪ್ಪೆ ನಿನ್ನ ಪಡೆದವನಾವ |
ನೆಚ್ಚರಿಸು ನಿಮ್ಮ ಮುತ್ತಯ್ಯನಾರೆನುತೆ ತೆಗೆ |
ದೆಚ್ಚೊಡಾತನ ಕೋಲ್ಗಳಂ ಕಡಿದು ನಸುನಗುತೆ ಕರ್ಣಸುತನಿಂತೆಂದನು ||40||
1.4.40_86
ವೃಷಕೇತುವು, ಎಚ್ಚು= ಬಾಣದಿಂದ ಹೊಡೆದು ಕೈಗೆಡನಾ= ಕೈಸೋಲನು, ನೃಪಾಲನಾ ಕಣಿಗಳಂ ಕೊಚ್ಚಿ ಬೇಸರನೀ ವೃಷಧ್ವಜಂ= ರಾಜನ ಬಾಣಗಳನ್ನು ಕತ್ತರಿಸಿ ಬೇಸರಪಡನು (ಈ ವೃಷಧ್ವಜನು), ಬಳಿಕದಕೆಬಳಿಕ= ನಂತರ ಅದಕೆ= ಅದರಿಂದ, ಮೆಚ್ಚಿ ಕೇಳ್ದಂ= ಅದನ್ನು ಮೆಚ್ಚಿ, ಯೌವನಾಶ್ವನೆಲೆ=ಯೌವನಾಶ್ವನು ಎಲೆ, ಬಾಲ ನೀಂ ಪಸುಳೆಯಾಗಿರ್ದೊಡೇನು ಕೆಚ್ಚೆದೆಯ ಭಟನಪ್ಪೆ= ಎಲೈ ಬಾಲಕನೆ ನೀನು ಹರೆಯದವನಾದರೂ,ಕೆಚ್ಚದೆಯುಳ್ಳ ಯೋಧನಾಗಿರುವೆ, ನಿನ್ನ ಪಡೆದವನ=ಹೆತ್ತವನು, ಆವನು= ಯಾರು ಎಚ್ಚರಿಸು= ಹೇಳು, ನಿಮ್ಮ= ನಿನ್ನ ಮುತ್ತಯ್ಯನಾರೆನುತೆ= ಮುತ್ತಯ್ಯನು=ಅಜ್ಜನು ಯಾರು, ಎನುತ= ಎನ್ನುತ್ತಾ, ತೆಗೆದೆಚ್ಚೊಡಾತನ= ತೆಗದುಎಚ್ಚೊಡೆ= ಬಾಣದಿಂದ ಹೊಡೆದಾಗ,ಆತನ= ಅವನ, ಕೋಲ್ಗಳಂ=ಬಾಣಗಳನ್ನು, ಕಡಿದು= ಕತ್ತರಿಸಿ, ನಸುನಗುತೆ= ನಸುನಗುತ್ತಾ, ಕರ್ಣಸುತನಿಂತೆಂದನು= ಕರ್ಣನಮಗನು, ಇಂತು= ಹೀಗೆ, ಎಂದನು= ಹೇಳಿದನು.
ವೃಷಕೇತುವು, ಬಾಣದಿಂದ ಹೊಡೆದು ಕೈಸೋಲನು, ರಾಜನ ಬಾಣಗಳನ್ನು ಕತ್ತರಿಸಿ ಬೇಸರಪಡನು ನಂತರ ಅದರಿಂದ, ಅದನ್ನು ಮೆಚ್ಚಿ, ಯೌವನಾಶ್ವನು ಎಲೈ ಬಾಲಕನೆ ನೀನು ಹರೆಯದವನಾದರೂ,ಕೆಚ್ಚದೆಯುಳ್ಳ ಯೋಧನಾಗಿರುವೆ,ಹೆತ್ತವನು ಯಾರು? ಹೇಳು, ನಿನ್ನ ಅಜ್ಜನು ಯಾರು, ಎನ್ನುತ್ತಾ, ಬಾಣಪ್ರಯೋಗ ಮಾಡಿದಾಗ, ಅವನ,ಆ ಬಾಣಗಳನ್ನು, ಕತ್ತರಿಸಿ, ನಸುನಗುತ್ತಾ, ಕರ್ಣನಮಗನು ಹೀಗೆ ಹೇಳಿದನು. (ಪದ್ಯ - ೩೭),
1.4.40_87
ಪದ್ಯ - ೪೧
1.4.41
ಪುಯ್ಯಲೊಳ್ ಬಂದಳವುದೋರುತಿರ್ಪಾಗ ನಿ |
ಮ್ಮಯ್ಯ ಮುತ್ತಯ್ಯನಾರೆಂದು ತನ್ನಂ ಕೇಳ್ವೆ |
ಕಯ್ಯರಿದು ಕಾಣಬೇಡವೆ ಕರ್ಣ ಕಮಲಹಿತಕರರವರನುಸಿರಬಹುದೆ ||
ಪೊಯ್ಯಲೆಳಸಿದ ವಿರೋಧಿಯ ಕಿವಿಗೆ ವಿರಹಿತಂ |
ಗೆಯ್ಯಬೇಕಲ್ಲದೆಲೆ ಮರುಳೆ ಕೋವಿದನಾದೊ |
ಡೊಯ್ಯನೆ ಪರೋಕ್ಷದೊಳ್ ತಿಳಿದುಕೊಳ್ ಸಾಕೆನುತೆ ವೃಷಕೇತುತೆಗೆದೆಚ್ಚನು||41||
1.4.41_88
ಪುಯ್ಯಲೊಳ್= ಯುದ್ಧದಲ್ಲಿ, ಬಂದಳವುದೋರುತಿರ್ಪಾಗ-:ಬಂದು ಅಳವು ತೋರುತಿರ್ಪಾಗ= ಬಂದು ಶಕ್ತಿ ಪ್ರದರ್ಶಿಸತ್ತಿರುವಾಗ, ನಿಮ್ಮಯ್ಯ= ನಮ್ಮ ತಂದೆ, ಮುತ್ತಯ್ಯನಾರೆಂದು-: ಅಜ್ಜನು ಯಾರೆಂದು, ತನ್ನಂ=ತನ್ನನ್ನು, ಕೇಳ್ವೆ= ಕೇಳುವೆ, ಕಯ್ಯರಿದು= ಕೈಚಳಕನೋಡಿ, ಕಾಣಬೇಡವೆ= ತಿಳಿದುಕೊಳ್ಳಬೇಡವೇ? ಕರ್ಣ ಕಮಲಹಿತಕರರವರನುಸಿರಬಹುದೆ-:ಕರ್ಣನು, ಕಮಲಹಿತಕರ= ಸೂರ್ಯನ (ಹೆಸರ) ಉಸಿರಬಹುದೆ= ಹೆಸರು ಹೇಳಬಹುದೇ, ಪೊಯ್ಯಲು= ಯುದ್ಧಕ್ಕೆ, ಎಳಸಿದ=ಮಾಡಲು ಬಂದ, ವಿರೋಧಿಯ ಕಿವಿಗೆ ವಿರಹಿತಂ= ಅಹಿತವನ್ನು ಗೆಯ್ಯಬೇಕಲ್ಲದೆಲೆ-: ಗೈಯ್ಯಬೇಕು= ಮಾಡಬೇಕು, ಅಲ್ಲದೆ= ಅದಲ್ಲದೆ, ಮರುಳೆ ಕೋವಿದನಾದೊಡೆ= ತಿಳಿದವನಾದೊಡೆ ಒಯ್ಯನೆ=ಉಪಾದಲ್ಲಿ, ಪರೋಕ್ಷದೊಳ್= ಪ್ರತ್ಯೇಕವಾಗಿ, ತಿಳಿದುಕೊಳ್= ತಿಳಿದುಕೋ. ಸಾಕೆನುತೆ= ಸಾಕು ಎನತೆ=ಎನ್ನುತ್ತಾ, ವೃಷಕೇತುತೆಗೆದೆಚ್ಚನು=ವೃಷಕೇತು ಬಾಣತೆಗೆದು ಎಚ್ಚನು= ಹೊಡೆದನು.
ಯುದ್ಧದಲ್ಲಿ ಬಂದು ಶಕ್ತಿ ಪ್ರದರ್ಶಿಸತ್ತರುವಾಗ ನಮ್ಮ ತಂದೆ, ಅಜ್ಜನು ಯಾರೆಂದು, ತನ್ನನ್ನು, ಕೇಳುವೆ, ಕೈಚಳಕನೋಡಿ ತಿಳಿದುಕೊಳ್ಳಬೇಡವೇ? ಕರ್ಣನು, ಸೂರ್ಯನ (ಹೆಸರ)ಹೆಸರು ಹೇಳಬಹುದೇ,(ಗುರು ಹಿರಿಯರ ಹೆಸರನ್ನು ಸಭೆಯಲ್ಲಿ- ಬಹಿರಂಗವಾಗಿ ಹೇಳುವುದು ಸಭ್ಯತೆ ಅಲ್ಲ, ಹೇಳಬಾರದು ಎಂದು ಭಾವ) ಯುದ್ಧ ಮಾಡಲು ಬಂದ ವಿರೋಧಿಯ ಕಿವಿಗೆ ಅಹಿತವನ್ನು ಮಾಡಬೇಕು ಅದಲ್ಲದೆ, ಮರುಳೆ, ತಿಳಿದವನಾದೊಡೆ ಉಪಾಯದಲ್ಲಿ ಪ್ರತ್ಯೇಕವಾಗಿ ತಿಳಿದುಕೋ; ಸಾಕು ಎನ್ನುತ್ತಾ, ವೃಷಕೇತು ಬಾಣತೆಗೆದು ಹೊಡೆದನು. (ಪದ್ಯ - ೪೧),
1.4.41_89
ಪದ್ಯ - ೪೨
1.4.42
ಅಪ್ರತಿಮನಪ್ಪೆ ಬಾಲಕ ಲೇಸುಲೇಸು ಬಾ |
ಣಪ್ರಯೋಗಂಗಳೆನುತೊಂದು ಕಣಿವೂಡಿ ಕ |
ರ್ಣಪ್ರದೇಶಕೆ ತೆಗೆದವಂ ಬಿಡಲ್ಕಿವನುರವನುಗಿಯೆ ಮೈಮರೆದು ಕೂಡೆ ||
ಸಪ್ರಾಣಿಸುತೆ ಕೆರಳ್ದಿನ್ನು ನೋಡೀ ಸಾಯ |
ಕಪ್ರಭಾವವನೆನುತೆ ದೆಸೆದೆಸೆಗುಗುಳ್ವ ಕನ |
ಕಪ್ರಭೇಯೊಳೆಸೆವ ಸರಳಂ ತೊಟ್ಟು ಕೆನ್ನೆಗೆಳೆದಾರ್ದೆಚ್ಚನಾನೃಪನನು ||42||
1.4.42_90
ಅಪ್ರತಿಮನಪ್ಪೆ ಬಾಲಕ ಲೇಸುಲೇಸು= ಬಾಲಕನೇ ನೀನು ಸರಿಸಾಟಿ ಇಲ್ಲದವನು, ಬಾಣಪ್ರಯೋಗಂಗಳು ಲೇಸು ಲೇಸು! ಎನುತ, ಒಂದು ಕಣಿವೂಡಿ= ಒಂದು ಬಾಣ ಹೂಡಿ, ಕರ್ಣಪ್ರದೇಶಕೆ ತೆಗೆದವಂ= ಕಿವಿಯವರೆಗೆ (ತೆಗೆದು)ಎಳೆದು ಅವಂ=ಅವನು ಬಿಡಲ್ಕಿವನುರವನುಗಿಯೆ-:ಬಿಡಲ್ಕೆ=ಬಿಡಲು ಇವನು, ಉರವನು= ಎದೆಯನ್ನು, ಉಗಿಯೆ=ಹೊಗಲು, ಮೈಮರೆದು=ಎಚ್ಚರತಪ್ಪಿ ಕೂಡೆ= ತಕ್ಷಣ, ಸಪ್ರಾಣಿಸುತೆ= ಚೇತರಿಸಿಕೊಂಡು, ಕೆರಳ್ದಿನ್ನು- ಕೆರಳ್ದು ಇನ್ನುನಂತರ ಸಿಟ್ಟಿನಿಂದ, ನೋಡೀ=ನೋಡು ಈ ಸಾಯಕಪ್ರಭಾವವನು= ಬಾಣದ ಶಕ್ತಿಯನ್ನು ನೋಡು ಎನುತೆ= ಎನ್ನುತ್ತಾ, ದೆಸೆದೆಸೆಗುಗುಳ್ವ= ದಿಕ್ಕುದಿಕ್ಕಿಗೆ /ಎಲ್ಲಾದಿಕ್ಕುಗಳಿಗೆ ಉಗುಳ್ವ= ಸೂಸುವ, ಕನಕಪ್ರಭೇಯೊಳೆಸೆವ= ಚಿನ್ನದ ಪ್ರಬೆಯನ್ನು ಎಸೆವ= ಬೀರುವ, ಸರಳಂ= ಬಾಣವನ್ನು ತೊಟ್ಟು= ಹೂಡಿ, ಕೆನ್ನೆಗೆಳೆದು ಕೆನ್ನವರೆಎಳೆದು,ಆರ್ದು= ಆರ್ಭಟಿಸಿ, ಎಚ್ಚನಾನೃಪನನು= ಎಚ್ಚನು= ಹೊಡೆದನು ಆ ನೃಪನನು= ಆ ರಾಜನನ್ನು. ತಾತ್ಪರ್ಯ :
1.4.42_91
ಪದ್ಯ - ೪೩
1.4.43
ಏನೆಂಬೆನರಸ ಕರ್ಣಜನ ಬಾಣದ ಘಾತ |
ಕಾ ನರೇಂದ್ರಂ ಕರದ ಚಾಪಮಂ ಬಿಟ್ಟು ಮೂ |
ರ್ಛಾನುಗತನಾಗಲಾತನ ಬಲಂ ಮುಂಕೊಂಡು ಬಂದಿವನಮೇಲೆ ಕವಿಯೆ ||
ಆನೆಯಂ ವೊಯ್ದೆಳೆವ ಸಿಂಗಮಂ ಮುತ್ತುವ ಮೃ |
ಗಾನೀಕಮಂ ಕಂಡೆವಿಂದೆನುತೆ ತುಳುಕಿದನ |
ನೂನ ಶರಜಾಲಮಂ ಕರಿ ತುರಗ ರಥ ಪದಾತಿಗಳ ಸಂದಣಿ ದಣಿಯಲು ||43||
1.4.43_92
ಏನೆಂಬೆನರಸ= ಏನನು=ಏನನ್ನು, ಎಂಬೆನು= ಹೇಳಲಿ, ಅರಸ ಜನಮೇಜಯನೇ, ಕರ್ಣಜನ= ವೃಷಕೇತುವಿನ, ಬಾಣದ ಘಾತಕೆ= ಬಾಣದ ಪಟ್ಟಿಗೆ, ನರೇಂದ್ರಂ= ರಾಜನು, ಕರದ ಚಾಪಮಂ ಬಿಟ್ಟು= ಕೈಯಲ್ಲರುವ ಬಿಲ್ಲನ್ನು ಬಿಟ್ಟು, ಮೂರ್ಛಾನುಗತನಾಗಲಾತನ-: ಮೂರ್ಛಾನುಗತನು ಆಗಲು= ಮೂರ್ಛೆಹೋಗಲು, ಆತನ ಬಲಂ=ಆತನ ಸೈನ್ಯ, ಮುಂಕೊಂಡು ಬಂದಿವನಮೇಲೆ-:ಬಂದು ಇವನ ಮೇಲೆ ಕವಿಯೆ= ಮುಂದೆ ಬಂದು,ಇವನ ಮೇಲೆ ಮುತ್ತಿಗೆ ಹಾಕಲು, ಆನೆಯಂ ವೊಯ್ದೆಳೆವ= ಆನೆಯನ್ನು ಪೊಯ್ದು=ಹೊಡೆದು,ಎಳೆವ= ಎಳೆದುಕೊಂಡುಹೋಗುವ, ಸಿಂಗಮಂ= ಸಿಂಹವನ್ನು, ಮುತ್ತುವ ಮೃಗಾನೀಕಮಂ-: ಮೃಗ= ಜಿಂಕೆಗಳ ಸಮೂಹವನ್ನು, ಕಂಡೆವಿಂದೆನುತೆ= ಕಂಡೆವು ಇಂದು ಎನುತೆ=ಎನ್ನುತ್ತಾ, (ತುಳುಕಿದನು,) ಅನೂನ= ಮಿತಿ ಇಲ್ಲದಷ್ಟು ಶರಜಾಲಮಂ= ಬಾಣಗಳ ಜಾಲವನ್ನು ಕರಿ=ಆನೆ ತುರಗ=ಕುದುರೆ ರಥ ಪದಾತಿಗಳ=ಭಟರ ಸಂದಣಿ=ಗುಂಪು ದಣಿಯಲು= ಬಳಲುವಂತೆ ತುಳುಕಿದನು= ತುಂಬಿದನು/ಪ್ರಯೋಗಿಸಿದನು.ತಾತ್ಪರ್ಯ :
ಏನನ್ನು ಹೇಳಲಿ, ಅರಸ ಜನಮೇಜಯನೇ,ವೃಷಕೇತುವಿನ ಬಾಣದ ಪಟ್ಟಿಗೆ ರಾಜನು ಕೈಯಲ್ಲರುವ ಬಿಲ್ಲನ್ನು ಬಿಟ್ಟು,ಮೂರ್ಛೆಹೋಗಲು, ಆತನ ಸೈನ್ಯ, ಮುಂದೆ ಬಂದು ಇವನ ಮೇಲೆ ಮುತ್ತಿಗೆ ಹಾಕಲು, ಆನೆಯನ್ನು ಹೊಡೆದು, ಎಳೆದುಕೊಂಡುಹೋಗುವ ಸಿಂಹವನ್ನು ಮುತ್ತುವ ಜಿಂಕೆಗಳ ಸಮೂಹವನ್ನು, ಕಂಡೆವು ಇಂದು ಎನ್ನುತ್ತಾ,ವೃಷಕೇತು, ಮಿತಿ ಇಲ್ಲದಷ್ಟು ಬಾಣಗಳ ಜಾಲವನ್ನು ಆನೆ ಕುದುರೆ ರಥ ಭಟರ ಗುಂಪು ಬಳಲುವಂತೆ ಪ್ರಯೋಗಿಸಿದನು. (ಪದ್ಯ - ೪೩),
1.4.43_93
ಪದ್ಯ - ೪೪
1.4.44
ತರಿತರಿದು ಕತ್ತರಿಸಿ ಚುಚ್ಚಿ ನಟ್ಟುಚ್ಚಳಿಸಿ |
ಕೊರೆದರೆದು ಕಡಿದಿರಿದು ಬಗಿದುಗಿದು ಗಬ್ಬರಿಸಿ |
ಪರಿದು ಸೀಳ್ದುತ್ತರಿಸಿ ಕೆತ್ತಿ ಖಂಡಿಸಿ ಬಿಳಿಚಿ ತಿವಿದಿಕ್ಕಿ ಕೊಯ್ದು ಪೊಯ್ದು ||
ಎರಗಿ ಕವಿದಿಡಿದೊತ್ತಿ ಕದುಕಿ ಕೀಲಿಸಿ ಕೇರಿ |
ತುರುಗಿ ತುಂಡಿಸಿ ತುಳುಕಿ ನಾಂಟಿ ಮರುಮೊನೆಗೊಂಡು |
ನೆರೆ ಪೊರಳ್ಚಿದುವರಿಚತುರ್ಬಲವನೆಲ್ಲಮಂ ಕರ್ಣಜನಿಸುವ ಕಣೆಗಳು ||44||
1.4.44_94
ಕರ್ಣಜನಿಸುವ= ವೃಷಕೇತು ಬಿಟ್ಟ ಕಣೆಗಳು= ಬಾನಗಳು, ತರಿತರಿದು=ಸೀಳಿಸೀಳಿ, ಕತ್ತರಿಸಿ ಚುಚ್ಚಿ ನಟ್ಟುಚ್ಚಳಿಸಿ= ನಾಟಿ ಗಾಯವನ್ನು ಉಬ್ಬಿಸಿ, ಕೊರೆದು ಅರೆದು=ಪಡಿಮಾಡಿ, ಕಡಿದಿರಿದು= ಕಡಿದು ಅರಿದು= ಕತ್ತರಿಸಿ, ಬಗಿದುಗಿದು=ದೇಹವನ್ನು ಬಗೆದು ಕಿತ್ತು, ಗಬ್ಬರಿಸಿ=ರಕ್ತಬರಿಸಿ/ಗಾಯಮಾಡಿ, ಪರಿದು= ಹರಿದು, ಸೀಳ್ದುತ್ತರಿಸಿ= ಸೀಳಿ, ಉತ್ತರಿಸಿ= ಪೆಟ್ಟುಮಾಡಿ, ಕೆತ್ತಿ ಖಂಡಿಸಿ= ತುಂಡುಮಾಡಿ, ಬಿಳಿಚಿ= ಬಿಳುಚುವಂತೆಮಾಡಿ, ತಿವಿದಿಕ್ಕಿ= ತಿವಿದು ಇಕ್ಕಿ= ಹೊಡೆದು, ಕೊಯ್ದು= ಕತ್ತರಿಸಿ, ಪೊಯ್ದು= ಹೊಡೆದು, ಎರಗಿ= ಮೇಲೆಬಿದ್ದು, ಕವಿದಿಡಿದೊತ್ತಿ= ಕವಿದು ಇಡಿದು ಒತ್ತಿ=ಒತ್ತೊತ್ತಿ, ಕದುಕಿ= ಅಲ್ಲಾಡಿಸಿ, ಕೀಲಿಸಿ= ನಾಟಿಸಿ, ಕೇರಿ ತುರುಗಿ= ತಿಕ್ಕಿ, ತುಂಡಿಸಿ= ತುಂಡುಮಾಡಿ, ತುಳುಕಿ ನಾಂಟಿ= ನೆಟ್ಟು, ಮರುಮೊನೆಗೊಂಡು=ಮತ್ತೆಮತ್ತೆ ಚುಚ್ಚಿ, ನೆರೆ= ಬಹಳ ಪೊರಳ್ಚಿದುವರಿಚತುರ್ಬಲವನೆಲ್ಲಮಂ-: ಚತುರ್ಬಲವನು = ಚತುರ್ಬಲ ಸೈನ್ಯವನ್ನೂ ಪೊರಳ್ಚಿ=ಹೊರಳಿಸಿದುವು ಹಿಮ್ಮಟಿಸಿದವು (ಕರ್ಣಜನಿಸುವ ಕಣೆಗಳು)
ವೃಷಕೇತು ಬಿಟ್ಟ ಬಾಣಗಳು ಭಟರನ್ನು, ಸೀಳಿಸೀಳಿ, ಕತ್ತರಿಸಿ ಚುಚ್ಚಿ ನಾಟಿ ಗಾಯವನ್ನು ಉಬ್ಬಿಸಿ, ಕೊರೆದು ಅರೆದು ಕಡಿದು ದೇಹವನ್ನು ಬಗೆದು ಕಿತ್ತು, ರಕ್ತಬರಿಸಿ/ಗಾಯಮಾಡಿ, ಹರಿದು, ಸೀಳಿ, ಪೆಟ್ಟುಮಾಡಿ, ಕೆತ್ತಿ ತುಂಡುಮಾಡಿ, ಬಿಳುಚುವಂತೆಮಾಡಿ, ತಿವಿದು ಹೊಡೆದು, ಕತ್ತರಿಸಿ,ಹೊಡೆದು,ಮೇಲೆಬಿದ್ದು, ಕವಿದು ಇಡಿದು ಒತ್ತೊತ್ತಿ, ಅಲ್ಲಾಡಿಸಿ, ನಾಟಿಸಿ,ತಿಕ್ಕಿ, ತುಂಡುಮಾಡಿ, ನೆಟ್ಟು, ಮತ್ತೆಮತ್ತೆ ಚುಚ್ಚಿ,ಚತುರ್ಬಲ ಸೈನ್ಯವನ್ನೂ ಹೊರಳಿಸಿದುವು ಹಿಮ್ಮಟಿಸಿದವು (ಕರ್ಣಜನಿಸುವ ಕಣೆಗಳು). (ಇದರಲ್ಲಿ ದ್ವಿರುಕ್ತಿ ಮತ್ತು ಅನುಪ್ರಾಸದ ಅಲಂಕಾರವನ್ನು ಉಪಯೋಗಿಸಿದೆ) (ಪದ್ಯ - ೪೪),
First 138 of 230 passages. Read on