Karnata Bharata Kathamanjari 1.12.36_13
Karṇāṭa Bhārata Kathāmañjarī 1.12.36_13
- Language
- Kannada
1.12.36_13
ಉಪಾಯ ನಾಲ್ಕರೊಳು+ (೧. ಸಾಮ (ಸಮಾಧಾನ ಪಡಿಸುವುದು) ೨.ದಾನ (ಲಂಚ ಕೊಡುವುದು) .೩ ಬೇಧ (ಕಲಹ ಹುಟ್ಟಿಸುವುದು) .೪. ದಂಡ (ಶಿಕ್ಷಿಸುವುದು)) ಏರಿಹುದೆ(ತೊಡಗಿರುವುದೇ?) ಮನ;
ರಾಜಧರ್ಮದ ಮೂರು ವರ್ಗದೊಳು+ (ರಾಜ ತೇಜಸ್ತ್ರಯ :- ೧.ಯುದ್ಧದಲ್ಲಿ ಹಿಂತಿರುಗದ ಗುಣ ೨.ಯುದ್ಧಕ್ಕೆ ಕರೆದರೆ ಹೋಗುವುದು. ೩.ಭಾರ್ಯಾಸಾ ಸಂರಕ್ಷಣ- ಪತ್ನಿಯ ರಕ್ಷಣೆ) ಎಚ್ಚರುಂಟೇ,
ನಯ ವಿಧಾನದಲಿ ಮೂರು ಶಕ್ತಿಗಳೊಳಗೆ (ಶಕ್ತಿ ತ್ರಯ :- ೧. ಪ್ರಭು ೨. ಮಂತ್ರ. ೩. ಉತ್ಸಾಹ) ಮನ ಬೇರೂರಿಹುದೆ,
ಸಪ್ತಾಂಗದಲಿ (ರಾಜ್ಯಾಂಗ ಸಪ್ತಕ:- ೧.ಸ್ವಾಮಿ, ೨. ಅಮಾತ್ಯ, ೩.ಸುಹೃತ್, ೪.ಕೋಶ, ೫.ರಾಷ್ಟ್ರ,, ೬.ದುರ್ಗ, ೭.ಬಲ) ಮೈದೋರಿಹೈ (ಮೈದೊರು- ಪಸರಿಸು,ಕಾಣಿಸಿಕೊಳ್ಳು)- ಬೇಸರೆಯೆಲೇ (ಬೇಸರವಿಲ್ಲವಲ್ಲವೇ, ಈ ವಿಚಾರಗಳಲ್ಲಿ ಉದಾಸೀನವಿಲ್ಲ ಅಲ್ಲವೇ?) ಭೂಪಾಲ ನೀನೆಂದ