Karnata Bharata Kathamanjari 1.21.2
Karṇāṭa Bhārata Kathāmañjarī 1.21.2
- Language
- Kannada
1.21.2
ಎನಲು ನಕ್ಕನು ಶ೦ಭು ಭಕ್ತನ
ಮನದ ದೃತಿಯನು ಭುಜ ಬಲವನಾ
ತನ ಪರಾಕ್ರಮ ಲಕ್ಷ್ಮಿಯನು ಪಾರ್ವತಿಗೆ ತೋರಿಸುತ |
ನೆನೆದು ನುಡಿದನಿದೇನು ತಮ್ಮಡಿ
ನಿನಗೆ ತಪದಲಿ ಖಡ್ಗವೇಕೀ
ಧನು ಶರಾವಳಿಯೇಕೆ ನಿನ್ನ೦ಗವಣೆ ಯೇನೆ೦ದ || ೨ ||