Pramāṇa · Search · About · API

Karnata Bharata Kathamanjari 1.22.42_18

Karṇāṭa Bhārata Kathāmañjarī 1.22.42_18

Language
Kannada

1.22.42_18

ಕುಲಪರ್ವತಗಳು ಇತ್ಯಾದಿಗಳ ವರ್ಣನೆ ಇದ್ದಂತಿದೆ. ಆದರೆ ಸ್ಪಷ್ಟತೆ ಕಷ್ಟ; ಈ ಭಾಗವನ್ನು ಈ ಸಂಪಾದಕನಿಗೆ ಮೂಲ ಮಹಾಭಾರತದಲ್ಲಿ ನೋಡಿದ ನೆನಪಿಲ್ಲ. ಕುಮಾರವ್ಯಾಸನು ಇದನ್ನು ಯಾವ ಪುರಾನದಿಂದ ಆಯ್ದುಕೊಂಡನೆಂಬುದನ್ನು ವಿದ್ವಾಂಸರು ಹೇಳಬೇಕು. ವಾಯುಪುರಾಣದಲ್ಲಿ ಬರುವ ಜಗತ್ತಿನ ವರ್ಣನೆ ಇರಬಹುದೇ- ಅದರೆ ಅದು ಬೇರೆ ರೀತಿ ಇದೆ.
ಒಂದು ದ್ವೀಪದ ಅಥವಾ ಭೂಪ್ರದೇಶದ ಎಲ್ಲೆ ಕಟ್ಟನ್ನು ತಿಳಿಸುವ ಮೂಲಪರ್ವತಗಳಿವು. ಜಂಬು, ಪಕ್ಷ, ಶಾಲ್ಮಲಿ, ಕುಶ, ಕ್ರೌಂಚ, ಶಾಕ ಮತ್ತು ಪುಷ್ಕರ ದ್ವೀಪಗಳಿಗೆ ಸಂಬಂಧಿಸಿದಂತೆ ವಿವಿಧ ಹೆಸರಿನ ಕುಲಪರ್ವತಗಳಿವೆ.
ಮಹೇಂದ್ರ, ಮಲಯ, ಸಹ್ಯ, ಶಕ್ತಿಮಾನ್, ರುಕ್ಷ, ಮತ್ತು ವಿಂಧ್ಯಗಳು ಜಂಬೂ ದ್ವೀಪದ ಭರತವರ್ಷದ ಸಪ್ತ ಕುಲಪರ್ವತಗಳು, ಅಷ್ಟದಿಗ್ಗಜಗಳು ಭೂಮಿಯನ್ನು ಕೆಳಕ್ಕೆ ಬೀಳದಂತೆ ಹೊತ್ತಿರುವಂತೆ ಕುಲಪರ್ವತಗಳು ಭೂಮಿಯನ್ನು ಹಾರಿ ಹೋಗದಂತೆ ಒತ್ತಿ ಹಿಡಿದಿವೆಯೆನ್ನಲಾಗಿದೆ.
ಜೈನಪುರಾಣಗಳಲ್ಲಿ ಹೇಳಿರುವ ಪರ್ವತಗಳು ಇವು; ಹಿಮವಂತ, ಮಹಾಹಿಮವಂತ, ನಿಷಧ, ನೀಲ, ರುಕ್ಮಿ, ಶಿಖರಿ. ಇವು ಜಂಬೂದ್ವೀಪದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಹೋಗುತ್ತ ಕ್ರಮವಾಗಿ ಪೂರ್ವ-ಪಶ್ಚಿಮವಾಗಿ ಹಬ್ಬಿ ಭೂಭಾಗವನ್ನು ಸಪ್ತಕ್ಷೇತ್ರಗಳಾಗಿ ವಿಭಾಗಿಸಿವೆ.
ಸಪ್ತ ಕುಲಶೈಲ :- ೧.ಮಾಹೇಂದ್ರ, ೨.ಮಲಯ, ೩.ಸಹ್ಯ, ೪.ಶುಕ್ತಿ, (?), ೫.ಋಕ್ಷ, ೬.ವಿಂಧ್ಯ, ೭.ಪಾರಿಯಾತ್ರ.
ಸಪ್ತ ಕುಲಾಚಲ :- ೧.ಹಿಮವತ್, ೨.ನಿಷಧ, ೩.ವಿಂಧ್ಯ, ೪.ಮಾಲ್ಯವಚಿತ, ೫.ಪಾರಿಯಾತ್ರಕ, ೬.ಗಂಧಮಾಧನ, ೭.ಹೇಮಕೂಟ.
ಸಪ್ತ ದ್ವೀಪಗಳು :- ೧.ಜಂಬೂ, ೨.ಪ್ಲಕ್ಷ ೩.ಕುಶ, ೪.ಕ್ರೌಂಚ, ೫.ಶಾಖ, ೬.ಶಾಲ್ಮಲಿ,೭.ಪುಷ್ಕಲ.
ಸಪ್ತ ಲೋಕಗಳು :- ೧.ಭೂ, ೨.ಭುವ, ೩.ಸ್ವ (ಸುವ), ೪.ಮಹ, ೫.ಜನ, ೬.ತಪ, ೭.ಸತ್ಯ,
ಸಪ್ತ ಸಮುದ್ರಗಳು :- ೧.ಲವಣ, ೨.ಇಕ್ಷು, ೩.ಸುರೆ, ೪.ಸರ್ಪಿ, ೫.ದಧಿ, ೬.ಕ್ಷೀರ, ೭.ಶುದ್ಧೋದಕ.
♥♥♥