Pramāṇa · Search · About · API

Karnata Bharata Kathamanjari 1.35.14_20

Karṇāṭa Bhārata Kathāmañjarī 1.35.14_20

Language
Kannada

1.35.14_20

ಅವಧಿ ತುಂಬದ ಮುನ್ನಲೀ ಪಾಂ
ಡವರ ಕಾಣಿಸಿಕೊಂಬ ಮತ್ತಂ
ತವರು ಸತ್ಯಕೆ ನಡೆಯಬೇಹುದು ಮುನ್ನಿನಂದದಲಿ
ಅವರ ನೆಲೆಗಾಣಿಸುವ ಮಂತ್ರದ
ಹವಣನರುಪುವೆನೆಂದು ರವಿಸುತ
ನವನಿಪಗೆ ನಸುನಗುತ ನುಡಿದನು ರಾಜಕಾರಿಯವ ೧೫
(ಹನ್ನೆರಡು ವರ್ಷ ವನವಾಸ ಮತ್ತು ಒಂದು ವರುಷದ ಅಜ್ಞಾತವಾಸದ)- ಅವಧಿ ತುಂಬದ ಮುನ್ನಲು+ ಈ ಪಾಂಡವರ ಕಾಣಿಸಿಕೊಂಬ= ಹನ್ನೆರಡು ವರ್ಷ ವನವಾಸ ಮತ್ತು ಒಂದು ವರುಷದ ಅಜ್ಞಾತವಾಸದ- ಅವಧಿಯು ತುಂಬದ ಮುನ್ನಲು- ಮುನ್ನವೇ + ಈ ಪಾಂಡವರ ಕಾಣಿಸಿಕೊಂಬ- ಕಾಣಿಸಿಕೊಳ್ಳುವ ಹಾಗೆ ಮಾಡುವ ಉಪಾಯ ಯಾವುದು, ಮತ್ತು ನಡೆಯಬೇಹುದು ಮುನ್ನಿನ+ ಅಂದದಲಿ ಅವರ ನೆಲೆಗಾಣಿಸುವ- ಈ ಪಾಂಡವರು ಕಾಣಿಸಿಕೊಳ್ಳುಂತೆ ಮಾಡಿ ಮತ್ತು ಮತ್ತೆ - ಪುನಃ + ಅಂತು- ಅದೇರೀತಿ, ಹಿಂದಿನ ಹಾಗೆಯೇ, ಹನ್ನೆರಡು ವರ್ಷ ವನವಾಸ ಮತ್ತು ಒಂದು ವರುಷದ ಅಜ್ಞಾತವಾಸಕ್ಕೆ ಕಳಿಸುವ ಉಪಾಯ ಯಾವುದು? ಎಂದಾಗ ಕರ್ಣನು- + ಅವರು ಸತ್ಯಕೆ ಮಂತ್ರದ ಹವಣನು೯ಉಪಾಯನ್ನು+ ಅರುಪುವೆನು(ಹೇಳುವೆನು)+ ಎಂದು ರವಿಸುತನು(ಕರ್ಣ)+ ಅವನಿಪಗೆ ನಸುನಗುತ ನುಡಿದನು ರಾಜಕಾರಿಯವ, ;