Karnata Bharata Kathamanjari 1.39.1
Karṇāṭa Bhārata Kathāmañjarī 1.39.1
- Language
- Kannada
1.39.1
ಮರಳಿದವು ತುರು ಮಾರಿಗೌತಣ
ಮರಳಿ ಹೇಳಿತು ಹಸಿದ ಹೆಬ್ಬುಲಿ
ಮೊರೆಯ ದನಿದೋರಿದವು ಹುಲುಮೃಗವೇನನುಸುರುವೆನು |
ಧರಣಿಪನ ಹಿಂದಿಕ್ಕಿ ಸೌಬಲ
ದುರುಳ ದುಶ್ಶಾಸನ ಜಯದ್ರಥ
ರುರುಬಿದರು ತರುಬಿದರು ಪರಬಲ ಕಾಲಭೈರವನ || ೧ ||