Karnata Bharata Kathamanjari 1.39.40
Karṇāṭa Bhārata Kathāmañjarī 1.39.40
- Language
- Kannada
1.39.40
ಆವುದೈ ನೀನರಿದ ಬಿಲು ವಿ
ದ್ಯಾ ವಿಷಯ ಘನ ಚಾಪ ವೇದಾ
ರ್ಥಾವಳಿಯು ಶರಮೌಕ್ತಿಕೋಪನ್ಯಾಸವೆಂತೆಂತು |
ಕೋವಿದರ ಭೂಸುರರ ಯುಕ್ತಿಯ
ನೀವು ಕೊಂಡಿರೆ ಶಸ್ತ್ರವಿದ್ಯಾ
ಭಾವ ಗೋಷ್ಠಿಯ ಬಲ್ಲಡರಿಯೆಂದೆಚ್ಚನರ್ಜುನನ || ೪೦ ||