Pramāṇa · Search · About · API

Karnata Bharata Kathamanjari 1.43.92_28

Karṇāṭa Bhārata Kathāmañjarī 1.43.92_28

Language
Kannada

1.43.92_28

ಪೂರ್ವ ಕಥೆ: ದೇವಿ ಭಾಗವತ ಪುರಾಣದ ಪ್ರಕಾರ, ಮಧು ಮತ್ತು ಕೈಟಭರು ವಿಷ್ಣುವಿನ ಕಿವಿಯ ಕೊಳೆಯಿಂದ ಹುಟ್ಟಿದವರು. ಅವರು ಮಹಾದೇವಿಯನ್ನು ಕುರಿತು ಸುದೀರ್ಘ ತಪಸ್ಸನ್ನು ಮಾಡಿದರು. ದೇವಿಯಲ್ಲಿ ಅವರು ತಮಗೆ ಅಜೇಯತೆಯನ್ನೂ ಮತ್ತು ತಮ್ಮಲ್ಲಿ ಪರಸ್ಪರ ಯುದ್ಧದಿಂದ ಮಾತ್ರಾ ತಮ್ಮ ಸಾವು ಆಗಬೇಕೆಂದು ವರವವನ್ನು ಕೇಳಿದರು; ದೇವಿ ಆವರಗಳನ್ನು ನೀಡಿದಳು. ಅಹಂಕಾರ ತುಂಬಿದ ಆ ದೈತ್ಯರು ನಂತರ ಬ್ರಹ್ಮವನ್ನು ಆಕ್ರಮಣ ಮಾಡಲು ಆರಂಭಿಸಿದರು. ಬ್ರಹ್ಮ ವಿಷ್ಣುವಿನ ಸಹಾಯವನ್ನು ಕೋರಿದನು. ಆದರೆ ಅವರಿಗೆ ವಿಷ್ಣುವನ್ನು ಎಚ್ಚರಗೊಳಿಸಲು ಸಾಧ್ಯವಾಗಲಿಲ್ಲ. ವಿಷ್ಣುವು ಆಳವಾದ ಯೋಗ ನಿದ್ರೆಯಲ್ಲಿದ್ದನು. ನಂತರ ಬ್ರಹ್ಮನು ಮಹಾದೇವಿಗೆ ಪ್ರಾರ್ಥಿಸಿದನು. ಅಷ್ಟರಲ್ಲಿ ವಿಷ್ಣು ಎಚ್ಚರಾದನು. ಈ ಎರಡು ರಾಕ್ಷಸರು ವಿಷ್ಣುವಿನೊಡನೆ ಹೋರಾಡಿ ಅವನನ್ನು ಸೋಲಿಸಿದರು. ಮಹಾದೇವಿಯ ಸಲಹೆಯ ನಂತರ, ವಿಷ್ಣು ಈ ಎರಡು ರಾಕ್ಷಸರನ್ನು ನಾಶಮಾಡಲು ಒಂದು ಉಪಾಯವನ್ನು ಬಳಸಿಕೊಳ್ಳುತ್ತಾನೆ. ವಿಷ್ಣು ಇಬ್ಬರೂ ರಾಕ್ಷಸರ ಯುದ್ಧದ ಶಕ್ತಿಗಳನ್ನು ಶ್ಲಾಘಿಸುತ್ತಾನೆ ಮತ್ತು ಅವರಿಗೆ ತಮಗೆ ಬೇಕಾದ ವರವನ್ನು ಕೇಳಲು ವಿಷ್ಣುವು ಹೇಳಿದಾಗ, ಅವರು ತಾವು ಪೂರ್ಣ ತೃಪ್ತಿ ಹೊಂದಿದ್ದಾಗಿ ಹೇಳುತ್ತಾರೆ. ವಿಷ್ಣುವಿನ ವಿರುದ್ಧ ತಮ್ಮ ವಿಜಯದ ಬಗ್ಗೆ ಹೆಮ್ಮೆಪಡುತ್ತಾರೆ; ಅವರು ಬದಲಿಗೆ ವಿಷ್ಣುವನ್ನು ಕುರಿತು ತಾವೇ ಅವನಿಗೆ ಬೇಕಾದ ಎರಡು ವರಗಳನ್ನು ನೀಡಲು ಸಿದ್ಧವೆನ್ನತ್ತಾರೆ; ವಿಷ್ಣು ಬುದ್ಧಿವಂತಿಕೆಯಿಂದ ಮಧು ಮತ್ತು ಕೈಟಭರ ಜೀವವನ್ನು ಕೇಳುತ್ತಾನೆ. ಅಗ ಅವರು ಪರಸ್ಪರ ಹೋರಾಡಿ ಸಾಯುವರು. ಅವರ ದೇಹವೇ ಭೂಮಿ ಎಂಬ ಕಥೆ ಇದೆ. ಬೇರೆ ಪುರಾಣಗಳಲ್ಲಿ ಕಥೆ ಸ್ವಲ್ಪ ಬೇರೆ ರೀತಿ ಇದೆ. ಕಥೆಯ ಅಂತ್ಯ ಒಂದೇ ರೀತಿ ಇದೆ.