Karnata Bharata Kathamanjari 1.5.14_10
Karṇāṭa Bhārata Kathāmañjarī 1.5.14_10
- Language
- Kannada
1.5.14_10
ಪರೀಕ್ಷಿತನು ಬೇಟೆಗೆ ಹೋದಾಗ ಆಯಾಸಗೊಂಡು,ಅಲ್ಲಿ ಧ್ಯಾನಸ್ಥನಾಗಿದ್ದ ಶಮೀಕನೆಂಬ ಋಷಿಯ ಆಶ್ರಮಕ್ಕೆ ಹೋದನು, ಋಷಿಯು ತನ್ನನ್ನು ಉಪಚರಿಸಲಿಲ್ಲ ಎಂದು ಸಿಟ್ಟಿನಿಂದ ಅಲ್ಲಿಯೇ ಹರಿಯುತ್ತಿದ್ದ ಹಾವನ್ನು ಹೊಡೆದು ಅವನ ಕೊರಳಿಗೆ ಹಾಕಿ ಹೋದನು.
ಋಷಿಯ ಮಗ ಶೃಂಗಿಯು ಬಂದು ನೋಡಿ ಸಿಟ್ಟಿನಿಂದ ತಂದೆ ಕೊರಳಿಗೆ ಸತ್ತ ಹಾವನ್ನು ಹಾಕಿದವನು ಏಳು ದಿನಗಳ ಒಳಗೆ ಹಾವು ಕಚ್ಚಿ ಸಾಯಲಿ ಎಂದು ಶಾಪ ಕೊಟ್ಟನು. ಅದರಂತೆ ಪರೀಕ್ಷಿತನು ಹಾವುಕಚ್ಚಿ ಸತ್ತನು. ಅದರ ಸೇಡಿಗೆ ಪರೀಕ್ಷಿತನ ಮಗ ಜನಮೇಜಯ ಸರ್ಪಗಳನ್ನು ಬಲಿಕೊಡುವ ಸರ್ಪ ಯಾಗ ಮಾಡಿದನು. ವಾಸುಕಿಯ ಮೊಮ್ಮಗ ಆಸ್ತೀಕನು ಬಂದು ಯಾಗ ಸಮಯದಲ್ಲಿ ಸರ್ಪಗಳ ಪ್ರಾಣಭಿಕ್ಷೆ ಬೇಡಿದನು. ಜನಮೇಜಯನು ಒಪ್ಪಿ ಸರ್ಪಯಾಗ ನಿಲ್ಲಿಸಿದನು. ಆ ಪಾಪದ ಪರಿಹಾರಕ್ಕಾಗಿ ಜನಮೇಜಯನು ಮಹಾಭಾರತದ ಕಥೆಯನ್ನು ಕೇಳಿದನು.