Jaimini Bharata (Kannada) 2.1
Jaimini Bhārata (Kannada) 2.1
- Language
- Kannada
2.1
ಕೇಳಲೆ ನೃಪಾಲಕುಲಮೌಳಿ ಬಳಿಕರ್ಜುನಂ |
ಕಾಳಗಕೆ ನಡೆವ ಭಟರಂ ನಿಲಿಸಿ ಮುಂದುವರಿ |
ವಾಳಪಡೆಯಂ ತೆಗೆಸಿ ಭರದಿಂದೆ ನೂಕಿದಂ ಕಲಿಸುಧನ್ವನ ಸರಿಸಕೆ ||
ಗಾಳಿಯ ಜವಂ ಪೊಡೆವ ಸಿಡಿಲ ಗರ್ಜನೆ ರವಿಯ|
ಮೇಳಮುಂ ದಾವಾಗ್ನಿಯಾಟೋಪಮಂತಕನ |
ಕೋಳಾಹಳಂ ಕೂಡಿಕೊಂಡೊಂದು ರೂಪಾದವೋಲ್ ಕಾಣಿಸುವ ರಥವನು ||1||