Jaimini Bharata (Kannada) 2: ಜೈಮಿನಿ ಭಾರತ ಹದಿಮೂರನೆಯ ಸಂಧಿ
Jaimini Bhārata (Kannada) 2
- Language
- Kannada
ಜೈಮಿನಿ ಭಾರತ ಹದಿಮೂರನೆಯ ಸಂಧಿ
2.p1
<ಜೈಮಿನಿ ಭಾರತ
2.p2
ಹದಿಮೂರನೆಯ ಸಂಧಿ
2.p3
ಪದ್ಯ -ಸೂಚನೆ
2.p4
ಹಂಸಧ್ವಜನ ಸುತನ ಸಮರಮರಿದಾಗಿ ಬರೆ
ಕಂಸಾರಿ ಬಂದು ಸಾರಥಿಯಾಗಿ ನರನ ಶರ |
ದಿಂ ಸುಧನ್ವನ ಶಿರವನರಿಸಿದಂ ಮೇಲೆ ಸುರಗಣ ಮೈದೆ ಕೊಂಡಾಡಲು ||
2.p5
ಪದ್ಯ -೧
2.1
ಕೇಳಲೆ ನೃಪಾಲಕುಲಮೌಳಿ ಬಳಿಕರ್ಜುನಂ |
ಕಾಳಗಕೆ ನಡೆವ ಭಟರಂ ನಿಲಿಸಿ ಮುಂದುವರಿ |
ವಾಳಪಡೆಯಂ ತೆಗೆಸಿ ಭರದಿಂದೆ ನೂಕಿದಂ ಕಲಿಸುಧನ್ವನ ಸರಿಸಕೆ ||
ಗಾಳಿಯ ಜವಂ ಪೊಡೆವ ಸಿಡಿಲ ಗರ್ಜನೆ ರವಿಯ|
ಮೇಳಮುಂ ದಾವಾಗ್ನಿಯಾಟೋಪಮಂತಕನ |
ಕೋಳಾಹಳಂ ಕೂಡಿಕೊಂಡೊಂದು ರೂಪಾದವೋಲ್ ಕಾಣಿಸುವ ರಥವನು ||1||
2.1_6
ಪದ್ಯ -೨
2.2
ಕುದರೆಗಳ ಖುರಪುಟಧ್ವನಿ ನಿಜವರೂಥ ಚ |
ಕ್ರದ ರವಂ ದೇವದತ್ತದ ಘೋಷಮೆಸೆವ ಸಿಂ |
ಧದ ತುದಿಯ ಕಪಿಯಬ್ಬರಣೆ ಧನುಜ್ರ್ಯಾನಾದಮೊಂದಾಗಿ ಭೀಕರದೊಳು ||
ಪದಿನಾಲ್ಕು ಲೋಕಮಂ ಬೆದರಿಸಲ್ಕಿದು ನರನ |
ಕದನದಾರವಮೆಂದು ತಿಳಿದಂಬುಜಾಸನಂ |
ಮೊದಲಾದ ನಿರ್ಜರರ್ ತಂತಮ್ಮ ವಾಹನವಿಮಾನದಿಂದೈತಂದರು ||2||
2.2_7
ಪದ್ಯ -೩
2.3
ವಾನರಸಮುನ್ನತ ಧ್ವಜರೂಥದೊಳೈದು |
ವಾ ನರ ಸಮರ ಭರವನರಿದು ಕಾಳಗಕೆ ತಾ |
ವಾನರಸಮರ್ಥರೆಂದರ್ಜುನಂ ಬಹನೆಂದು ನಿಜಸಾರಥಿಗೆ ಸೂಚಿಸಿ ||
ದಾನವನರನಾನಿಮಿಷರೊಳ್ ನೀನೆ ಭಟನಹ ನಿ |
ದಾನವನನೇಕಮುಖದಿಂ ಕೇಳ್ದು ಸಂಗ್ರಾಮ |
ದಾನವನರಿಸಿ ಬಂದೆನೆಂದಚ್ಚನಾ ಸುಧನ್ವಂ ಪಾರ್ಥನಂ ಧುರದೊಳು ||3||
2.3_8
ಪದ್ಯ -೪
2.4
ಕ್ರುದ್ಧನಾದಂ ಧನಂಜಯನಿದೇಕೆಮ್ಮೊಡನೆ |
ಯುದ್ದವನಪೇಕ್ಷಿಸುವೆ ಶಿವಶಿವಾ ನೀನಪ್ರ |
ಬುದ್ಧನಲ್ಲವೆ ದೇವದೈತ್ಯ ಮಾನವರೊಳ್ ಮದೀಯವೈರದೊಳೆ ಬಾಳ್ಧ ||
ಉದ್ಧತಪರಾಕ್ರಮಿಗಳುಂಟೆ ಸಂಗರಕೆ ಸ |
ನ್ನದ್ಥರಾದಿನಸುತದ್ರೋಣ ಭೀಷ್ಮಾದಿ ಪ್ರ |
ಸಿದ್ಧ ಭಟರೇನಾದರರಿಯಲಾ ಮರುಳೆ ಹೋಗೆನುತೆಚ್ಚನಾ ಪಾರ್ಥನು ||4||
2.4_9
ಪದ್ಯ -೫
2.5
ಸಾರಥಿಯ ಬಲ್ಪಿಂದೆ ಕೌರವಬಲದ ನಿಖಿಳ |
ವೀರರಂ ಗೆಲ್ದೆಯಲ್ಲದೆ ನಿನ್ನ ನೀ ಧರೆಯೊ |
ಳಾರರಿಯರಕಟ ನೀಂ ಕೃಷ್ಣನಂ ಕರೆಸಿಕೊಂಡಳವಿಗುಡು ಬಳಿಕೆನ್ನೊಳು ||
ಸಾರನ್ನೆಗಂ ಬರಿದೆಬಳಲಬೇಡೆಮ್ಮಲ್ಲಿ |
ಹಾರೈಸದಿರ್ ಜಯವನೆನುತೆಚ್ಚೊಡರ್ಜುನನ |
ತೇರಿರದೆ ತಿರ್ರನೆ ತಿರುಗಿಯಂತೆ ತಿರುಗಿತದನೇನೆಂಬೆನದ್ಭುತವನು ||5||
2.5_10
ಪದ್ಯ -೬
2.6
ಪೂತುರೆ ಸುಧನ್ವ ಸತ್ವಾತಿಶಯದಿಂದೆ ವಿ |
ಖ್ಯಾತನಹೆ ಮದ್ರಥವನೀ ತೆರದೊಳಿಸುವರಂ |
ಪಾತಾಳ ಸುರನಿಲಯಭೂತಳದ ಪಟುಭಟವ್ರಾತದೊಳ್ ಕಾಣೆನಿನ್ನು ||
ನೀ ತರಳನಕಟ ಬರಿದೇತಕಳಿದಪೆ ನಿನ್ನ |
ತಾತನಂ ಬರಹೇಳು ಘಾತಿಸುವರಲ್ಲ ನಾ |
ವಾ ತುರಂಗಮವ ಬಿಡು ಧಾತುಗೆಡಬೇಡೆನುತ್ತಾತನಂ ನರನೆಚ್ಚನು ||6||
2.6_11
ಪದ್ಯ -೭
2.7
ಇನ್ನು ಹಯಮಂ ಬಿಡುವನಲ್ಲ ನಿನಗೆಮ್ಮ ತಾ |
ತಂ ನಳಿನನಾಭನ ಸಹಾಯಮಿಲ್ಲದೆ ಬರಿದೆ |
ತನ್ನನಳುಕಿಸಲರಿಯೆ ಕಕ್ಕುಲಿತೆ ಬೇಡ ನಡೆ ಹಸ್ತಿನಾಪುರಕೆ ಮರಳಿ ||
ಸನ್ನುತತುರಂಗಮೇಧಾಧ್ವರಕೆ ದೀಕ್ಷೆಗೊಂ |
ಬಂ ನರೇಂದ್ರಾಗ್ರಣಿ ಮರಾಳಧ್ವಜಂ ಬಳಿಕ |
ನಿನ್ನ ವಿಕ್ರಮದಿಂದೆ ಜಯಿಸು ಭೂಮಂಡಲವನೆನುತವಂ ತೆಗೆದೆಚ್ಚನು ||7||
2.7_12
ಪದ್ಯ -೮
2.8
ಈ ಚಾಪಮೀ ಬಾಣಮೀ ದಿವ್ಯರಥಮೀ ವ |
ನೇಚರಧ್ವಜಮೀ ಮಹಾಶ್ವಂಗಳೀ ಸವ್ಯ |
ಸಾಚಿತ್ವಮೀ ದೇವದತ್ತಶಂಖಂ ತನಗಿದೇಕೆ ನಿನ್ನಂ ಜಯಿಸದೆ ||
ಈ ಚತುರ್ದಶಜಗವನಣುವೆಂದರಿವೆನಕಟ |
ಗೋಚರವೆ ನೀನೆನಗೆ ಫಡಯೆನುತೆ ತೆಗಿದು ನಾ |
ರಾಚವೇಳ್ನರನೆಚ್ಚಂ ಸುಧನ್ವನ ಮೇಲೆ ಪಾರ್ಥನೆಣ್ದೆಸೆ ಕಂಪಿಸೆ ||8||
2.8_13
ಪದ್ಯ -೯
2.9
ದಿವ್ಯಹಯ ರಥ ಚಾಪ ಶರ ಕೇತು ಕಂಬುಗಳ್ |
ಸವ್ಯಸಾಚಿತ್ವಮಿವು ನಿನಗೊದಗಿದವು ರಣದೊ |
ಳವ್ಯಯಂ ಸಾರಥ್ಯಮಂ ಮಾಡಲ್ಲಿನ್ನು ಜಯವಹುದೆ ಹುಲುಸೂತನಿಂದೆ ||
ಸವ್ಯವಾಹನಸಖಂ ತೊಲಗಿಸುವ ಬಹಳಮೇ |
ಘ ವ್ಯೂಹಸಂಘಾತದೊಡ್ಡವಣೆ ಮುರಿವುದೇ ಕೃ |
ತವ್ಯಜನವಾತದಿಂದಲೆ ಮರುಳೆ ಹೋಗೆನುತವಂ ಕಿರೀಟಿಯನೆಚ್ಚನು ||9||
2.9_14
(ಪದ್ಯ-೯)
2.9_15
ಪದ್ಯ -೧೦
2.10
ಪಾಂಡವಂ ಬಳಿಕ ಬೇಸಗೆಯ ನಡುವಗಲ ಮಾ |
ರ್ತಾಂಡನಂತಿಹ ಕಲಿಸುಧನ್ವನಂ ಕಂಡು ಮಿಗೆ |
ಖಾಂಡವದಹನಲಬ್ಧವಾಗಿ ಮೂಡಿಗೆಯೊಳಿರ್ದಾಗ್ನೇಯಮಾರ್ಗಣವನು ||
ಗಾಂಡೀವಕಳವಡಿಸಿ ತೆಗೆವಿನಂ ಕರ್ಬೊಗೆಯ |
ಜಾಂಡಮಂ ತೀವಿದುದು ಕಾದುವು ಕುಲಾದ್ರಿಗಳ್ |
ಭಾಂಡಜಲದಂದದಿಂ ಕುದಿದುಕ್ಕಿದುದು ಕಡಲ್ ಪೇಳಲೇನದ್ಭುತವನು ||10||
2.10_16
ಪದ್ಯ -೧೧
2.11
ಆವಗಂ ಪೀರ್ವೊಡಾಸರ್ಗೊಂಡು ತೀರದ ಮ |
ಹಾವಾರ್ಧಿಜಲವನೊಂದೇಸಾರಿ ಸುರಿಗೊಂಬ |
ಡಾವರದೊಳೆದ್ದ ವಡಬಾಗ್ನಿಯೋ ವಿಲಯರುದ್ರನ ಪಣೆಯ ಕಣ್ಗಿಚ್ಚಿದೋ ||
ಭಾವಿಸುವೊಡರಿದೆಂಬೊಲಾದುದು ಧನಂಜಯನ |
ಪಾವಕಾಸ್ತ್ರಂ ಬಳಿಕ ತೆಗೆದು ಬೊಬ್ಬಿರಿದು ಗಾಂ |
ಡೀವದಿಂ ಪಾರಿಸಿದೊಡಾ ಸುಧನ್ವನ ಸರಿಸಕಡರಿತುರಿ ಕಡುಭರದೊಳು ||11||
2.11_17
ಪದ್ಯ -೧೨
2.12
ತೆಕ್ಕೆವರಿದೇಳ್ವ ಕರ್ಬ್ಬೊಗೆಯ ಹೊರಳಿಗಳ ದಶ |
ದಿಕ್ಕುಗಳನವ್ವಳಿಪ ಕೇಸುರಿಯ ಚೂಣಿಗಳ |
ಮಿಕ್ಕು ಸೂಸುವ ತೂರುಗಿಡಿಗಳ ಕಣಾಳಿಗಳ ಕಾರಿಡುವ ಪೊತ್ತುಗೆಗಳ ||
ಕೊಕ್ಕರಿಸುತುಗುವ ತನಿಗೆಂಡದಿಂಡೆಗಳ ಸಲೆ ಮುಕ್ಕುಳಿಸಿ ಮೊಗೆವ ಪೆರ್ಗಿಚ್ಚುಗಳ ವೆಂಕೆ ಮೇ |
ಲಿಕ್ಕಿದುದು ಹಂಸಧ್ವಜನ ಸೇನೆ ಬೆಂದು ಬೇಗುದಿಗೊಂಡುದಾ ಕ್ಷಣದೊಳು ||12||
2.12_18
(ಪದ್ಯ-೧೨)
2.12_19
ಪದ್ಯ -೧೩
2.13
ಕಾದವು ಭಟರ ಕೈದುಗಳ್ ಪಿಡಿಯಲರಿದೆನ |
ಲ್ಕಾದವು ಶರಾಗ್ನಿ ಗಾಹುತಿ ಗಜಹಯಾದಿಗಳ್ |
ಕಾದವು ಧನಂಜಯನ ಮುಂದೆಮ್ಮ ಬಲಗಳೆಂದಾ ಸುಧನ್ವಂ ಕೆರಳ್ದು ||
ಕೋದಂಡಕತಿವೇಗದೊಳ್ ವಾರುಣಾಸ್ತ್ರವಂ |
ಕೋದಂಡಲೆವ ಶಿಖಿಜ್ವಾಲೆಯಂ ನಿಲಿಸಲಿದ |
ಕೋದಂಡಮೆನ್ನೊಳೆನುತಾರ್ದು ತೆಗೆದಚ್ಚನುರಿ ನಂದಿ ಜಲಮಯವಾಗಲು ||13||
2.13_20
(ಪದ್ಯ-೧೩)
2.13_21
ಪದ್ಯ -೧೪
2.14
ನಾದವು ಸಮಸ್ತಬಲಮಖಿಳವಾದಯಗಳ ನಿ|
ನಾದವುಡುಗಿತು ನನೆದು ಗಜ ವಾಜಿ ನಿಕರಮೇ |
ನಾದವುದಕದೊಳೆಂಬುದಂ ಕಾಣೆನಾ ಸುಧನ್ವನ ವಾರುಣಾಸ್ತ್ರದಿಂದೆ ||
ತೋದಳವಳಿದರೆಲ್ಲ ರಂಬುಧಾರೆಗಳದೆಂ |
ತೋ ದಳವನೊರಸಿದವರ್ಜುನಂ ಬೆರಗುವೆ |
ತ್ತೋದಲಳವಡದ ವಟುವಂತಿರ್ದನಾಹವದೊಳರಸ ಕೇಳ್ ಕೌತುಕವನು ||14||
2.14_22
ಪದ್ಯ -೧೫
2.15
ಬಳಿಕೆ ವಾಯವ್ಯಾಸ್ತ್ರದಿಂದ ಶೋಷಿಸಿದನಾ |
ಜಲವನರ್ಜುನ ನದ್ರಿಬಾಣಮಂ ಪೂಡಿದಂ |
ಕಲಿಸುಧನ್ವಂ ತೊಟ್ಟನೈಂದ್ರಶರಮಂ ಫಲುಗುಣಂ ತಿಮಿರಸಾಯಕವನು ||
ಸೆಳದಂ ವರಾಳರ್ಶವಜನ ಸುತಂ ತೆಗೆದನು |
ಜ್ಜ್ವಲರವಿಕಳಂಬಮಂ ಭೀಭತ್ಸು ತುಡುಕಿದಂ |
ಮುಳಿದವಂ ಗರಳವಿಶಿಖವನುಗಿದನಾನರಂ ಗಾರುಡಶಿಲೀಮಖವನು ||15||
2.15_23
ಪದ್ಯ -೧೬
2.16
ಈ ತೆರದೊಳಖಿಳ ದಿವ್ಯಾಸ್ತ್ರಂಗಳಿಸುಗೆಗಳ |
ಚಾತುರ್ಯದಿಂದೊರ್ವರೊರ್ವರಂ ಗೆಲ್ವ ಸ |
ತ್ವಾತಿ ಯದಿಂದೆ ಕಾದಿದರಾ ಸುಧನ್ವಾರ್ಜುನರ್ ಬಳಿಕ ರೋಷದಿಂದೆ ||
ಭೀತಿಗೊಳೆ ಮೂಜಗಂ ತೆಗೆದು ಬ್ರಹ್ಮಾಸ್ತ್ರಮಂ |
ಶ್ವೇತವಾಹನನಾರ್ದಿಸಲ್ಕೆ ಹಂಸಧ್ವಜನ |
ಜಾತಂ ಪ್ರತೀಕಾರಕಾ ಪಿತಾಮಹಶರವನೆಚ್ಚೊಡನೆ ಬೊಬ್ಬಿರಿದನು ||16||
2.16_24
ಪದ್ಯ -೧೭
2.17
ಆ ವರ ಬ್ರಹ್ಮಾಸ್ತ್ರಂ ಗಳೆರಡುಂ ಪೊಣರ್ದಡಗ |
ಲಾ ವಿಜಯನೆಣಿಕೆಗೊಂಡೀತನಂ ಗೆಲ್ವ ನಗೆ |
ಯಾವುದೆಂದುಗಿದು ಹೂಡಿದನಕ್ಷಯಾಸ್ತ್ರಮಂ ತನ್ನ ರಥಕವನ ತೇರ್ಗೆ ||
ತೀವಿದುವು ಬಾಣಂಗಳಾಕಾಶಮಂ ಕಾಣೆ |
ನೀವಸುಧೆಯೆತ್ತಣದು ಶಶಿರವಿ ಕುಲಾದ್ರಿ ತಾ |
ರಾವಳಿಗಳೇನಾದು ವೆಣ್ದೆಸೆಯ ನರಿವರಾರೆಂಬಿನಂ ಕೈಗೈದನು ||17||
2.17_25
ಪದ್ಯ -೧೮
2.18
ಇಚ್ಚಾರಿಗೊಂಡು ನರನೆಚ್ಚ ಕೆಂಗರಿಗೋಲ |
ಬಚ್ಚಳೆಯ ಪೊಸಮಸೆಯ ನಿಚ್ಚಳದ ನಿಡುಸರಳ್ |
ಪೆಚ್ಚಿದವು ನಿಮಿಷದೊಳ್ ಮುಚ್ಚಿದವು ಗಗನಮಂ ಕೊಚ್ಚಿದವು ಪರಬಲವನೆ ||
ಬಿಚ್ಚಿದವು ಕವಚಮಂ ಕಚ್ಚಿದವು ಖಂಡಮಂ |
ಚುಚ್ಚಿದವು ಕೂಡ ಥಟ್ಟುಚ್ಚಿದವು ಸೀಳಾಗಿ |
ಪಚ್ಚಿದವು ಮೈಯೊಳಗೆ ಹೆಚ್ಚಿದವು ಹೊಗರಗಲು ಮಚ್ಚಿದವು ನೆಣವಸೆಯನು ||18||
2.18_26
ಪದ್ಯ -೧೯
2.19
ಗೌರಿಯರಸನ ಕೂಡೆ ಕಾದಿದ ಪರಾಕ್ರಮದ |
ಸೌರಂಭಮಿಂತುಟೆ ನಿವಾತಕವಚರನಿರಿದ |
ಗೌರವಮಿದೀಗಲೇ ಭೀಷ್ಮ ಕರ್ಣ ದ್ರೋಣ ಮಾದ್ರಪತಿ ಮೊದಲಾಗಿಹ ||
ಕೌರವಬಲದೊಳಖಿಳ ವೀರಭಟರಂ ಗೆಲ್ದ |
ಪೌರುಷಮಿನಿತೆ ಸಾಕು ಬರಿದೆ ಬಳಲಿಸಬೇಡ |
ಶೌರಿಯಂ ಕರೆಸೆನುತೆ ಕಣೆಗಳಂ ಕಡಿದೆಚ್ಚನಾ ಸುಧನ್ವಂ ನರನನು ||19||
2.19_27
ಪದ್ಯ -೨೦
2.20
ಕೇಳವನಿಪಾಲಕ ಸುಧನ್ವನಿಸುವಿಸುಗೆಯಂ ಪೇಳಲರಿಯೆಂ |
ತಿರುಗುತಿರ್ದುದು ವರೂಥಂ ಕು |
ಲಾಲಚಕದ ವೊಲಸವಳಿದಂ ಕಪೀಶ್ವರಂ ಭ್ರಮಣೆಯಿಂ ಥ್ವಜದಮೇಲೆ ||
ಕಾಲಾಟವಡಗಿದುವು ಕುದುರೆಗಳ್ ಸೂತನಂ |
ಕಾಲನೊಯ್ದುಂ ಧನಂಜಯನೊಡಲೊಳಂಬುಗಳ್ |
ಕೀಲಿಸಿದುವಿಕ್ಕೆಲದ ಸೇನೆಯಂ ಸವರಿದುವು ಹೊಗರುಗುವ ಹೊಸಗಣೆಗಳು ||20||
2.20_28
ಪದ್ಯ -೨೧
2.21
ವ್ಯಥಿಸಿದಂ ಗಾಯದಿಂ ಸೂತನಳಿಯಲ್ಕೆ ಸಾ |
ರಥಿತನವನುಂ ತಾನೆ ಮಾಡುತಿದಿರಾದನತಿ |
ರಥತ ನೂಳಗ್ಗಳೆಯನರ್ಜುನನಾ ಸುಧನ್ವಂಗೆ ಬಳಿಕೀತನಂ ಧುರದೊಳು ||
ಮಥಿಸದಿರ್ದೊಡೆ ತನ್ನನೇಕೆ ಪಡೆದಳೊ ಬರಿದೆ |
ಪೃಥೆ ನೆಲಕೆ ಪೊರೆಯಾಗಿ ಶಿವಶಿವಾ ಬಂದುದೇ |
ಪೃಥಿವಿಪನ ಮಖಕೆಡರಕಟಯೆನುತೆ ಮನದೊಳಗೆ ಕೃಷ್ಣನಂ ಧ್ಯಾನಿಸಿದನು ||21||
2.21_29
ಪದ್ಯ -೨೨
2.22
ಅರಸ ಕೇಳರ್ಜುನಂ ಧ್ಯಾನಿಸಲ್ಕಾಗಳಿಭ |
ಪುರದೊಳರಿದಂ ಮುರಧ್ವಂಸಿ ಹಂಸಧ್ವಜನ |
ಧುರಮಂ ಸುಧನ್ವನ ಪರಾಕ್ರಮವನೆಚ್ಚರಿಸಿ ಧರ್ಮತನಯಾದಿಗಳ್ಗೆ ||
ತೆರಳದು ಕೀರಿಟಗಾಹವಮೆಂದು ವಹಿಲದಿಂ |
ಗರುಡವಾಹನನಾಗಿ ಬಂದನಾ ಕ್ಷಣಕಲ್ಲಿ |
ಗರವಿಂದನಾಭನಾನತರ ನೆನಹಿಗೆ ನಿತ್ಯ ನೆಂಬುದಂ ತೋರುವಂತೆ ||22||
2.22_30
ಪದ್ಯ -೨೨
2.23
ಕಶ್ಯಪ ವಸಿಷ್ಠಾದಿ ಪರಮಋಷಿಮುಖ್ಯರಾ|
ಲಸ್ಯಮಿಲ್ಲದೆ ಮಾಡುವ ಧ್ಯಾನಕೊಮ್ಮೆಯುಂ |
ದೃಶ್ಯಮಿಲ್ಲದ ಚಿನ್ಮಯಾನಂದರೂಪನೀಕುಂತೀಕುಮಾರಕರ್ಗೆ ||
ವಶ್ಯನಾಗಿಹನೆಂತೊ ಶಿವಶಿವಾ ನೀಲಮೇ |
ಘಶ್ಯಾಮಲನ ಲೀಲೆ ಪೊಸತೆಂದು ಸಉರರುಲಿಯೆ |
ಸ್ವಶ್ಯಾಲಕನ ರಥಾಗ್ರಕೆ ಸುಪರ್ಣಸ್ಕಂಧದಿಂದೆ ಮುರಹರನಿಳಿದನು ||23||
2.23_31
ಪದ್ಯ -೨೪
2.24
ಮೊಳಗಿದವು ನಿಸ್ಸಾಳಕೋಟಿಗಳ್ ಫಲುಗುಣನ |
ದಳಗೊಳಗೆ ತನತನಗೆರಗುತಿರ್ದುದುತ್ಸವದ |
ಲಳಿ ಮಸಗಿ ಕಳಕಳದ ಬೊಬ್ಬೆಯಿಂ ಮಿಕ್ಕುದು ರಭಸಮಭ್ಧಘೋಷಣವನು ||
ಬಳಿಕೆ ನಸುನಗುತೆ ಚರಣಕೆ ಮಣಿದ ಪಾರ್ಥನಂ |
ಸೆಳೆದು ಬಿಗಿಯಪ್ಪಿ ಮೈದಡವಿ ಬೋಳೈಸಿ ರಥ |
ದೊಳಗೆ ಕುಳ್ಳಿರ್ದು ನಲವಿಂದೆಮುರರಿಪು ಕುದುರೆಗಳ ಮಾಘೆಯಿಂ ಕೊಂಡನು ||24||
2.24_32
ಪದ್ಯ -೨೫
2.25
ಇನಿತೆಲ್ಲಮಂ ನೋಡುತಿರ್ದಂ ಸುಧನ್ವನನು|
ದಿನಮಂತರಂಗದೊಳ್ ಧ್ಯಾನಿಸುವ ನಿರ್ಮಲಾ |
ತ್ಮನದಿವ್ಯಮೂರ್ತಿಯಂ ಪಾರ್ಥನ ರಥಾಗ್ರದೊಳ್ ಕಂಡು ಪುಳಕೋದ್ಗಮದೊಳು ||
ತನುವನೀಡಾಡಿ ಸಾಷ್ಟಾಂಗಪ್ರಣಾಮದಿಂ |
ಮನದೊಳಗೆ ಹಿಗ್ಗಿ ತನ್ನಾಳ್ತನಕ್ಕೆ ಸಾಕಿನ್ನು |
ನೆನೆದೆಣಿಕೆ ಕೈಸಾರ್ದುದೆಂದು ಕಣ್ದಣಿಯದಚ್ಯುತನಂ ನಿರೀಕ್ಷಿಸಿದನು ||25||
2.25_33
(ಪದ್ಯ-೨೫)
2.25_34
ಪದ್ಯ -೨೬
2.26
ಅತಸೀಕುಸುಮಗಾತ್ರನಂ ಕಮಲನೇತ್ರನಂ |
ಸ್ಮಿತ ರುಚಿರಶುಭ ರದನನಂ ಚಾರು ವದನನಂ |
ಕೃತಮೃಗಮದೋಲ್ಲಸತ್ಸುಲಲಾಟನಂ ಮಣಿಕೀರಿಟನಂ ಕಂಬುಗಳದ ||
ಅತುಲ ತುಲಸೀಮಾಲನಂ ರಮಾಲೋಲನಂ |
ಧೃತಕೌಸ್ತುಭೋದ್ಭಾಸನಂ ಪೀತವಾಸನಂ |
ನುತಸಮಸ್ತಾಭರಣನಂ ಪುಣ್ಯಚರಣನಂ ಕಲಿಸುಧನ್ವಂ ಕಂಡನು ||26||
2.26_35
(ಪದ್ಯ-೨೬)
2.26_36
ಪದ್ಯ -೨೭
2.27
ಜಯ ಚತುರ್ಮುಖಜನಕ ಜಯ ಚಾರುಚಾರಿತ್ರ |
ಜಯ ಚಿದಾನಂದ ಜಯ ಚೀರಾಂಬರಜ್ಞೇಯ |
ಜಯ ಜಯ ಚ್ಯುತಿದೂರ ಜಯ ಚೂಡಬರ್ಹಶೊಭಿತ ಚೇತನಸ್ವರೂಪ ||
ಜಯ ಚೈದ್ಯಮಥನ ಜಯ ಚೋದಿತಾಕಿಳಲೋಕ |
ಜಯ ಚೌರ್ಯಕೃತಲೀಲ ಜಯ ಚಂಡಶತಕಿರಣ |
ಜಯ ಚಕ್ರಧರಯೆಂದು ಕೃಷ್ಣನಂ ಕಲಿಸುಧನ್ವಂ ಪೊಗಳ್ದಂ ಮನದೊಳು ||27||
2.27_37
ಪದ್ಯ -೨೮
2.28
ಜೀಯ ಜಗದಂತರಾತ್ಮಕ ಸರ್ವಚೈತನ್ಯ |
ಜೀಯ ಶುದ್ಧಾದ್ವಯ ನಿರಂಜನ ನಿರಾವರಣ |
ಜೀಯ ನಿನ್ನೊಳಗೀ ಸಮಸ್ತಮಧ್ಯಸ್ತಮಾಗಿದೆ ನೀನೆ ಸತ್ಯರೂಪ ||
ಜೀಯ ನಾರಾಯಣ ಮುಕುಂದ ಮಾಧವ ಕೃಷ್ಣ |
ಜೀಯ ಚಕ್ರಿಯೆ ಪೀತವಾಸ ಲಕ್ಷ್ಮೀಲೋಲ |
ಜೀಯ ಸರ್ವಸ್ವತಂತ್ರನೆ ಬಿಡಿಸು ಸಂಸಾರಪಾಶದಿಂದೆನ್ನನೆಂದು ||28||
2.28_38
ಪದ್ಯ -೨೯
2.29
ಭಯಭರಿತಭಕ್ತಿಯಿಂ ಭಾವಿಸಿದನಾ ಜಗ |
ನ್ಮಯನಂ ಬಳಿಕ ದೇವ ಕೇಳ್ ನಿನ್ನ ಸರ್ವಜ್ಞ |
ತೆಯನೆನಗೆ ತೋರಿಸಿದೆ ಲೇಸಾಯ್ತು ನಿನ್ನ ಕೃಪೆಯಿಲ್ಲದೊಡೆ ಪಾಂಡವರ್ಗೆ ||
ಜಯಮೆತ್ತಣದು ಲೋಕದೊಳ್ ಸಾಕೆದಂತಿರಲಿ ಬಯಲ ಭಂಜನೆ ಬೇಡ ಮಾಡಲೊಂದು ಪ್ರತಿ |
ಜ್ಞೆಯನರ್ಜುನರ ನಿನ್ನ ಮುಂದೆನ್ನಮೇಲೆನುತ್ತಾ ಸುಧನ್ವಂ ನುಡಿದನು ||29||
2.29_39
ಪದ್ಯ -೩೦
2.30
ಅರ್ಜುನಂ ಕೇಳ್ದನೆಲೆ ಮರುಳೆ ನೋಡಾದೊಡಿ |
ನ್ನಾರ್ಜಿಸಿದ ಸುಕೃತಮೆಳ್ಳನಿತಿಲ್ಲದಿಹ ಪುಣ್ಯ |
ವರ್ಜಿತನ ಒಓಕಮಾಗಲಿ ತನಗೆ ನಿನ್ನ ತಲೆಯಂ ಮೂರುಬಾಣದಿಂದೆ ||
ನಿರ್ಜರರ್ ಮೆಚ್ಚಲರಿಯದೊಡೆಂದು ನುಡಿಯಲ್ಕೆ |
ದುರ್ಝಯನಿವಂ ನಿನಗೆ ಸಾಧ್ಯನಲ್ಲೆಂದು ಹರಿ |
ಗರ್ಜಿಸಿದನಾ ಪಾರ್ಥನಂ ಬಳಿಕ ಹಂಸಧ್ವಜನ ತನಯನಿಂತೆಂದನು ||30||
2.30_40
ಪದ್ಯ -೩೧
2.31
ಗರ್ವದಿಂ ನುಡಿದೆಲಾ ಪಾರ್ಥ ಕೃಷ್ಣನ ಮುಂದೆ |
ಗೀರ್ವಾಣರೆಲ್ಲರುಂ ನೋಡುತ್ತಿರಲೀಗ ನೀಂ |
ಸರ್ವಶಕ್ತಿಯೊಳಿಸುವ ಮೂರುಬಾಣಂಗಳಂ ನಡುವೆ ಖಂಡಿಸದಿರ್ದೊಡೆ ||
ಉರ್ವಿಯೊಳ್ ಪಾತಕಿಗಳಾಗಿರ್ದವರ ಗತಿಗ |
ಡರ್ವೆನೆಂದಾ ಸುಧನ್ವಂ ಬಳಿಕ ಮೇದಿನಿಯ |
ದಿರ್ವಿನಂ ತೆಗೆದಚ್ಚನರ್ಜುನನ ತೇರೊಂದು ನಲ್ವಮಾತ್ರಂ ತೊಲಗಲು||31||
2.31_41
ಪದ್ಯ -೩೨
2.32
ತೇರ್ಮಗುಳ್ದಳವಿಯಿಂ ತೊಲಗಿ ಬೆಂಡಾಗಿ ನಾ |
ನೂರ್ಮೊಳಂ ಪೋಗಲ್ಕೆ ತಲೆದೂಗಿ ಮುರಹರಂ |
ಕಾರ್ಮೊಳಗುವಂತಿರೆ ಸುಧನ್ವನಂ ಕೊಂಡಾಡಿ ನೋಡಿ ಪಾರ್ಥನ ಮೊಗವನು||
ಘೂರ್ಮಿಸಿದನಂದಿನ ಜಯದ್ರಥನ ಕಥೆ ಬಂದು |
ದಾರ್ಮುಳಿದೊಡಂ ಮಣಿವನಲ್ಲ ಮೇಣಿವನೊಡನೆ |
ಮಾರ್ಮಲೆವರಿಲ್ಲ ನೀನೆನ್ನೊಳಾಲೋಚಿಸದೆ ನುಡಿದೆ ಭಾಷೆಯನೆಂದನು ||32||
2.32_42
ಪದ್ಯ -೩೩
2.33
ಇವನೇಕಪತ್ನೀವ್ರತಸ್ಥನಾಗಿಹುದರಿಂ |
ತವೆ ತಾತ ನಾಜ್ಞೆಯಂ ಪಾಲಿಸುತೆ ಬಹುದರಿಂ |
ಕವಲಿಲ್ಲದೆಮ್ಮನರ್ಚಿಪ ಭಕ್ತನಹುದರಿಂದಜ ಭವ ಸುರೇಶ್ವರರ್ಗೆ ||
ಬವರದೊಳ್ ಮಣಿವನಲ್ಲಿನ್ನಿವನ ಶೌರ್ಯಮಂ |
ಜವಗೆಡಿಸಿ ನಮ್ಮನುರೆ ಬಳಲಿಸುವ ಧೈರ್ಯಮಂ |
ಭುವನತ್ರಯವನಂಜಿಸುವ ವಿಪುಲವೀರ್ಯಮಂ ನೋಡೆಂದು ಹರಿ ನುಡಿದನು ||33||
2.33_43
ಪದ್ಯ -೩೪
2.34
ಅನಿತರೊಳ್ ಕಲಿಸುಧನ್ವಂ ಕೇಳ್ದು ನುಡಿದನೆಲೆ |
ವನಜಾಕ್ಷ ಬೆಟ್ಟಮಂ ಕೊಡೆವಿಡಿದು ಪಟ್ಟಿಯಂ |
ನನೆಯಲೀ ಯದವೊಲೀ ಪಾರ್ಥನಂ ರಕ್ಷಸುವೆ ನೀಂ ಕೃಪೆಯೊಳಾವು ಬರಿದೆ ||
ತೊನೆದೊಡೇನಹುದಿನ್ನು ರಣದೊಳೀದೇಹಮಂ |
ನಿನಗೊಪ್ಪಿಸದೆ ಬಿಡೆಂ ಸಾಕದಂತಿರಲೊಮ್ಮೆ |
ಮುನಿದು ನೋಡಳುಕಿದೊಡೆ ನಿನ್ನ ಕಿಂಕರನಲ್ಲೆನುತ ರಥವನೊಡೆಯೆಚ್ಚನು ||34||
2.34_44
ಪದ್ಯ -೩೫
2.35
ಸುರ್ರನೆ ಸುಳಿದು ಸುತ್ತಿ ಬೆಂಡಾಗೆ ಕುದುರೆಗಳ್ |
ಕಿರ್ರನೆ ಪಪೀಶ್ವರಂ ಪಲ್ಗಿರಿದು ಚೀರಲ್ಕೆ |
ಕರ್ರನೆ ಕವಿಯೆ ಕಣ್ಗೆ ಕೆತ್ತಲೆ ಶಿರೋಭ್ರಮಣೆಯಿಂ ಕೃಷ್ಣ ಫಲುಗುಣರ್ಗೆ ||
ಘರ್ರನೆ ಪೊರಳ್ದು ಗಾಲಿಗಳೇಳೆ ಧರಣಿಯಂ |
ತಿರ್ರನೆ ತಿರುಗುವ ಸುಟ್ಟುರೆಗಾಳಿಯಂದದಿಂ |
ಸರ್ರನೆ ಸರಿದುದು ಹಿಂದಕೆ ರಥಂ ಮತ್ತವನಸುರಾರಿ ಬಣ್ಣಿಸಿದನು ||35||
2.35_45
(ಪದ್ಯ-೩೫)
2.35_46
ಪದ್ಯ -೩೬
2.36
ಪೊಡವಿಪತಿ ಕೇಳ್ ಬಳಿಕ ಕಣ್ ಕೆಂಡದಂತಾಗೆ |
ಕುಡಿಹುಬ್ಬು ಧೂಮಲತೆಯೆಂಬೊಲಿರೆ ಹುಂಕಾರ |
ದೊಡವೆ ನಿಶ್ವಾಸಮಂ ಬಿಗುವ ನಾಸಾಪುಟಂ ಜ್ವಾಲೆಯಂದೊಳೊಪ್ಪಿರೆ ||
ಕಿಡಿಯಿಡುವ ಕೋಪಮಂ ತಾಳ್ದಂ ಧನಂಜಯಂ |
ಕಡೆಗಾಲದಂದಿನ ಧನಂಜಯಂ ತಾನೆನಲ |
ಪಡೆ ನಡುಗೆ ದೊಬ್ಬಿರಿದು ಪೂಡಿದಂ ಬಾಣಮಂ ಸಳೆದು ನಿಕಾರ್ಮುಕವನು ||36||
2.36_47
ಪದ್ಯ -೩೭
2.37
ಖತಿಯಿಂವೆ ಫಲುಗುಣಂ ಪೂಡಿದ ಮಹಾಸ್ತ್ರಮಂ |
ಶತಪತ್ರಲೋಚನಂ ಕಂಡದಕೆ ಮುನ್ನತಾ |
ನತುಲಗೋವರ್ಧನವನಾಂತು ಗೋಕುಲವನೋವಿದ ಸುಕೃತಫಲವನಿತು ||
ಅತಿಶಯದ ಶಕ್ತಿಯಂ ನೆಲಗೊಳಿಸಿ ಬೇಗದಿಂ |
ಪ್ರತಿಭಟನ ಶಿರವನಿಳುಹಿನ್ನೆಂದು ಬೆಸೆಸಲು |
ನ್ನತಪರಾಕ್ರಮಿ ಧನಂಜಯನಾರ್ದು ಕಿವಿವರಿಗೆ ತೆಗೆದಚ್ಚನಾ ಶರವನು ||37||
2.37_48
ಪದ್ಯ -೩೮
2.38
ಅಹಹ ಮುರಹರ ಪಾರ್ಧನಿಸುವ ಬಾಣಕೆ ನಿನ್ನ |
ಬಹಳ ಸುಕೃತವನಿತ್ತೆ ಲೇಸಾದುದಿದನರಿಯೆ |
ಬಹುದೆ ನೋವಿಲ್ಲಲಾ ನಿನಗೆನುತ ತೀವ್ರದಿಂ ಕೊರಳ ಸಿರಸಕೆ ನಭದೊಳು ||
ಬಹ ಸರಳನೆಚ್ಚು ನಿಮಿಷಾರ್ಧದೊಳ್ ಕಡಿದು ಗಹ |
ಗಹಿಸುವ ಸುಧನ್ವನಂ ಕಂಡವನ ಸೈನ್ಯದೊಳ್ |
ಕಹಳೆಗಳ್ ಸೂಳೈಸಿದವು ಮೆಚ್ಚಿದರ್ ಇದವಿಜರಚ್ಯುತಂ ಬೆರೆಗಾದನು ||38||
2.38_49
ಪದ್ಯ -೩೯
2.39
ಮೂರುಬಾಣದೊಳಿವನ ತಲೆಯನರಿದಪೆನೆಂದು |
ತೋರಿಯಠಾಡಿದೆನಾಂ ಪ್ರತಿಜ್ಞೆಯನದರೊಳೊಂದು |
ಮೀರಿಪೋದುದು ಕೋಲೆರಡರಿಂವೆ ರಿಪುಶಿರವನಿಳುಹಬೇಕೆನುತೆ ನರನು ||
ಏರಿಸಿದ ನಂಬಂ ಶರಾಸನಕೆ ಬಳಿಕದಕೆ |
ಹೇರಿದಂ ಹರಿ ತನ್ನ ಕೃಷ್ಣಾವತಾರದೊಳ್ |
ಮೀರಿ ಧರೆಯಂ ಪೊರೆದ ಪುಣ್ಯಮಂ ಮೇಲೆ ಫಲಗುಣನೆಚ್ಚನಾ ಕಣೆಯನು ||39||
2.39_50
ಪದ್ಯ -೪೦
2.40
ಆಗಳತಿ ರೋಷದಿಂದಾಲಿಗಳ್ ಕೆಂಪಡರ |
ಲೀಗಳರ್ಜುನನ ಬಾಣಕೆ ನಿನ್ನ ಪುಣ್ಯಮಂ |
ನೀಗಿದೆಯಲಾ ದೇವ ನೋಡು ಬಹ ದಿವ್ಯಾಸ್ತ್ರಮಂ ಕತ್ತರಿಸದಿರ್ದೊಡೆ ||
ಭೋಗದೊಳರುಂಧತಿಯ ಕೊಡಿದ ವಷಿಷ್ಠನಂ |
ಪೋಗಿ ಕೊಂದವನ ದುರ್ಗತಿಗೆ ತಾನಿಳಿವೆನೆನು |
ತಾಗಸದೊಳರ್ಕನಂತೈತಪ್ಪ ಸರಳಂ ಸ ಧನ್ವನಿಕ್ಕಿಡಿಗೈದನು ||40||
2.40_51
ಪದ್ಯ -೪೧
2.41
ಕೊಡೆ ಮೊಳಗಿದುವು ನಿಸ್ಸಾಳಂಗಳೈದೆ ಕೊಂಡಾಡಿದರ್ ಸುರರಭ್ರದೊಳಿ ಬಳಿಕ ಕೃಷ್ಣ ನಂ |
ನೋಡಿ ನುಡಿದಂ ಪಾರ್ಥನೆರಡಂಬು ಮುರಿದುದಿನ್ನೊಂದರೊಳಿವನ ಶಿರವನು ||
ರೂಢಿಯಿಂದರಿಯದೊಡೆ ಹರಿಹರ ವಿಭೇದಮಂ |
ಮಾಡಿ ನಿಂದಿಸಿದವನ ಗತಿಯಾಗಲೆನಗೆನುತ |
ಪೂಡಿದಂ ಮತ್ತೆ ಕೋದಂಡದೊಳ್ ಬಾಣಮಂ ನೃಪತಿ ಕೇಳದ್ಭುತವನು ||41||
2.41_52
ಪದ್ಯ -೪೨
2.42
ಆ ಹೂಡಿದರ್ಜುನನ ಮಾರ್ಗಣದ ಮೊದಲೊಳಾ ವಾಹನಂಗೈದು ಕಮಲಜನಂ ನಿಲಿಸಿ ವೃಷಭ |
ವಾಹನನ ಕೋಲ್ದುದಿಗೆ ತಂದಿರಿಸಿ ಸಾಯಕದ ನಡುವೆ ತಾನೇ ವ್ಯಾಪಿಸಿ ||
ಕಾಹುಗಳನುರೆ ಬಲಿದು ರಾಮಾವವಾರದೊಳ್ ದೇಹಮಳ್ಳನಿತುದಿನ ಮಾರ್ಜಿಸಿದ ಪುಣ್ಯಮಂ |
ರೂಹುಗಾಣಿಸಿ ಕೊಟ್ಟು ಶಕ್ತಿಯಂ ನೆಲೆಗೊಳಿಸಿ ಮುರಹರಂ ತೋಳ್ವೆಯ್ದನು ||42||
2.42_53
ಪದ್ಯ -೪೩
2.43
ಕೋಟಿಸಿಡಿಲೊಮ್ಮೆ ಗರ್ಜಿಸುವೊಲೂದಿದನಾ ನಿ ಶಾಟದಲ್ಲಣನತುಳಪಾಂಚಜನವನಾ ಕಿ |
ರೀಟಿ ಪಿಡಿದಂ ದೇವದತ್ತಮಂ ಸಪ್ತಾಬ್ಧಿರಭಸಮೊಬ್ಬುಳಿಸುವಂತೆ ||
ಮೀಟಾಡಿಸಿತು ಭೂಮಿಯಂ ಮೇರುಶೈಲಮಂ ದೂಟಾಡಿಸಿತು ರಾಶಿ ತಾರಾ ಗ್ರಹಂಗಳಂ |
ತಾಟಾಡಿಸಿತು ಹುನುಮನುಬ್ಬರಣೆ ಲಗ್ಗೆವರೆ ಮೊಳಗಿದವು ನಿಜಬಲದೊಳು ||43||
2.43_54
ಪದ್ಯ -೪೪
2.44
ಕಂಡ ನೀತೆರನಂ ಸುಧನ್ವನಿಂತೆಂದನೆಲೆ ಪುಂಡರೀಕಾಕ್ಷ ನಿನ್ನಯ ಪುಣ್ಯಮಂ ಸೂರೆ |
ಗೊಂಡವಂ ತಾನೋ ಧನಂಜಯನೊ ಪುಸಿಯದುಸಿರೆನಗೆ ಸಾಕಿನ್ನು ಬರಿದೆ ||
ಕೊಂಡಾಡಬೇಡ ಬಿಡಿಸಂಬನದನೆಡೆಯೊಳಾಂ ಖಂಡಿಸದೊಡೆನ್ನಣುಗನೆಂಬಳೇ ಮಾತೆ ಸತಿ |
ಗಂಡನೆಂದೆಣಿಸುವಳೆ ಸುತನೆ ತಾತಂಗೆ ತಾಂ ಕೇಳ್ ಪ್ರತಿಜ್ಞೆಯನೆಂದನು ||44||
2.44_55
ಪದ್ಯ -೪೫
2.45
ಭೂಸುರರ್ ಬಂದು ಕಾಶಿಯೂಳೆಸೆವ ಮಣಿಕರ್ಣಿ| ಕಾಸಲಿಲದೊಳ್ ಮಿಂದು ಶಾಸ್ತ್ರವಿದಿಯಿಂದಮುಪ |
ವಾಸಮಂ ಮಾಡಿ ಶಿವರಾತ್ರಿಯೋಳ್ ವಿರಚಿಸಿದ ವಿಶ್ವೇಶಪೂಜೆಗಳನು ||
ಹೇಸದೆಡಗಾಲಿಂದೆ ನೂಕಿದನ ದೋಷಮೆನ ಗೀಸಾಯಕ ವನೆಡೆಯೊಳರಿಯದಿರಲಾಗಲೆಂ |
ದಾ ಸುಧನ್ವಂ ತನ್ನ ಭುಜಬಲದೊಳಾರ್ದು ನಿಜಧನುವನೊದರಿಸುತಿರ್ದನು ||45||
2.45_56
ಪದ್ಯ -೪೬
2.46
ಅನಿತರೊಳ್ ತ್ರೈಮೂರ್ತಿಗಳ ದಿವ್ಯಶಕ್ತಿಯಿಂ |ವಿನುತ ರಾಮಾವತಾರದ ಪುಣ್ಯಶಕ್ತಿಯಿಂ |
ದನುಪಮ ಧನುರ್ವೇದದುರುಮಂತ್ರಶಕ್ತಿಯಿಂ ತೀವಿದ ಮಹಾಶರವನು ||
ತನಗೆ ಭುಜಬಲದೊಳುಂಟಾದ ನಿಜಶಕ್ತಿಯಿಂ| ಕನಲಿ ಕಿವಿವರೆಗೆ ತೆಗೆದಾರ್ದು ಫಲುಗುಣನೆಚ್ಚ |
ನೆನಿತು ಸತ್ವಾಥಿಕನೊ ಕಲಿಸುಧನ್ವಂ ಧರೆಯೊಳೇನೆಂಬೆನದ್ಭುತವನು ||46||
2.46_57
ಪದ್ಯ -೪೭
2.47
ಹೆದರಿತುಭಯದ ಸೇನೆ ಕೆದರಿತು ಸುರಸ್ತೋಮ |
ಮೊದರಿತಿನಮಂಡಲಂ ಬೆದರಿತು ಜಗತ್ತ್ರಯಂ |
ಬಿದರಿತು ಕುಲಾದ್ರಿಚಯ ಮುದುರಿತುಡುಸಂದೋಹಮದಿರಿತಿಳೆ ತತ್ಕ್ಷಣದೊಳು ||
ಕದಡಿತು ಮಹಾರ್ಣವಂ ಕದಲಿದಂ ಕಚ್ಛಪಂ ಪುದುಗಿತಣ್ಧೆಸೆಯಾನೆ ಹುದುಗಿದಂ ಭೋಗಿಪಂ |
ಗದಗದಿಸಿತಾ ಸಾಯಕದ ಬಿಸಿಗೆ ಬ್ರಂಹ್ಮಾಂಡಮದನೇನ ಬಣ್ಣಿಸುವೆನು||47||
2.47_58
ಪದ್ಯ -೪೮
2.48
ಬೆಚ್ಚಿದನೆ ಬೆದರಿದನೆ ಚಿತ್ತದೊಳ್ ಕಲಿತನದ ಕೆಚ್ಚು ಕೊರಗಿತೆ ಬಹ ಮಹಾಶರವನಾಗಳಾ |
ರ್ದೆಚ್ಚಂ ಸುಧನ್ವನಿಕ್ಕಡಿಯಾದುದಂದು ಬಿದ್ದುದು ಹಿಂದಣರ್ಧಮಿಳೆಗೆ ||
ಉಚ್ಚಳಿಸಿ ಬಂದು ಕೊಲ್ದುದಿಯವನ ಕಂಠಮಂ ಕೊಚ್ಚಿ ಹಾಯ್ದತ್ತಳಲ್ದುದು (ತ್ತೆರಳ್ದುದು) ಮೇದಿನಿಯೊಳಾಗ |
ಳಚ್ಚಯುತ ಮುರಾರಿ ಕೇಶವ ರಾಮ ಯೆನುತಿರ್ದುದಾ ತಲೆ ಚಿಗಿದು ನಭದೊಳು ||48||
2.48_59
ಪದ್ಯ -೪೯
2.49
ಕಂದು ಕುಂದಿಲ್ಲದ ಸುವೃತ್ತದಿಂದೆಸೆವ ತನ| ಗೊಂದುಬಾರಿಯುಮಿನ್ನು ಪರಪೀಡೆ ಲೇಸಲ್ಲ |
ಪೆಂದು ನಿಜವೈರಮಂ ಬಿಟ್ಟು ಕಮಲಂಗಳಂ ಸಂತೈಸೆ ಗಗನದಿಂದೆ ||
ಬಂದಪನೊ ಸಂಪೂರ್ಣ ಕಲೆಗಳಿಂದಾರಾಜಿ| ಪಿಂದುವೆನೆ ಕೃಷ್ಣನ ಪದಾಂಭೋಜ ಯುಗಳಕೈ |
ತಂದು ಬಿದ್ದದು ಸುಧನ್ವನ ಶಿರಂ ಹರಿಯ ನಾಮಾವಳೀಯನುಚ್ಚರಿಸುತೆ ||49||
2.49_60
ಪದ್ಯ -೫೦
2.50
ತಪ್ಪಿದನಲಾ ಚಕ್ರಿ ಹಾಯೆಂದು ಸುರರುಲಿಯ| ಲುಪ್ಪರಿಸಿ ತಲೆ ಚಿಗಿಯಲವನಟ್ಟೆ ತೋಳ್ಗಳಂ |
ಚಪ್ಪರಿಸಿಕೊಂಡೆದ್ದು ಬಂದು ರಣರಂಗದೊಳ್ ತಿರುತಿರುಗಿ ಚಾರಿವರಿದು ||
ಅಪ್ಪಳಿಸಿ ಹೊಯ್ದೆಳೆದು ಸದೆದಿಟ್ಟೊರಸಿ ಮೆಟ್ಟಿ| ಸೊಪ್ಪಿಸಿ ಪೊರಳ್ದೆದು ತೆವರಿ ಪರಿದರೆಯಟ್ಟಿ |ಚಿಪ್ಪು ಚೀರಾಗಿಸಿತು ಸಕಲ ಪರಿವಾರಮಂ ಮುರಹರಂ ಬೆರಗಾಗಲು ||50||
2.50_61
ಪದ್ಯ -೫೧
2.51
ಹೊಳೆವ ಕುಂಡಲದ ಕದಪಿನ ಮುರಿದೆಸೆವ ಮೀಸೆ| ಗಳ ನಗೆಮೊಗದ ರದನಪಂಕ್ತಿಗಳ ಬಿಟ್ಟ ಕಂ |
ಗಳ ಬಿಗಿದ ಹುಬ್ಬುಗಳ ಪೆರೆನೊಸಲ ತಿಲಕದ ನವಿರ ಹಿಣಿಲ ಕಾಂತಿಯಿಂದೆ ||
ಕಳಿಕಳಿಪ ತನಿವೀರರಸದುರುಳಿಯಂತೆ ತೊಳ ತೊಳಗುವ ಸುಧನ್ಟನ ಶಿರವನೆರಡು ಕೈಗಳಿಂ |
ನಳಿನದಳಲೋಚನಂ ಪಿಡಿದೆತ್ತಿಕೊಂಡು ನೋಡಿದನವನದೇಂ ಸುಕೃತಿಯೊ ||51||
2.51_62
ಪದ್ಯ -೫೨
2.52
ಕೈದಳದೊಳೆಸೆವ ತಲೆಯಂ ನಾಸಿಕಾಗ್ರದೆಡೆ| ಗೊಯ್ದು ಮುರಮಥನನಾಘ್ರಾಣಿಸಿದನಾತನೇ |
ಗೈದನೆಂಬುದನಚ್ಯುತನೆ ಬಲ್ಲನಾಗಲಾ ಮೊಗದಿಂದೆ ತನ್ನ ಮೊಗೆಕೆ ||
ಐದಿತವನಾತ್ಮವತಿತೇಜದಿಂ ಬಳಿಕಮರ |ರೈದೆ ಬಣ್ಣಿಸಿದರಾ ಶಿರವನಸುರಾಂತಕಂ |
ಮೈದುನಂಗುರೆ ತೋರಿ ಹಂಸಧ್ವಜನ ಮುಂದಕಿಡಲಟ್ಟೆ ಬಿದ್ದದಿಳೆಗೆ ||52||
2.52_63
ಪದ್ಯ -೫೩
2.53
ಭೂಪಾಲ ಕೇಳ್ ನೋಡುತಿರ್ದಂ ಸುಧನ್ವನಾ| ಟೋಪಮಂ ತಲೆ ಪಾರ್ಥನಸ್ತ್ರದಿಂ ಪರಿಯೆ ಸಂ |
ತಾಪದಿಂ ಮರುಗುತಿಳೆಯೊಳ್ ಪೊರಳ್ವಿನಮಾಶಿರಂ ತನ್ನ ಬಳಿಗೆ ಬರಲು||
ಹಾ ಪುತ್ರಯೆನುತೆತ್ತಿಕೊಂಡು ಮುಂಡಾಡಿ ಪಣೆ ಗಾಪಣೆಯನೊಂದಿಸಿ ಪೊಸೆದು ಚೀರ್ದು ಬಹಳ ಪ್ರ |
ಲಾಪದಿಂದಳಲ್ದಂ ಮರಾಳಧ್ವಜಂ ಪೊರೆಯ ಕಲ್ಮರಂ ಕರುಗುವಂತೆ ||53||
2.53_64
ಪದ್ಯ -೫೪
2.54
ಬೀಳ್ಟೆನೋ ಶೈಲಾಗ್ರದಿಂದೆ ಕರ್ಮಡುವಿನೊಳ| ಗಾಳ್ವೆ ನೋ ನಿನ್ನ ನಿಟ್ಟೆಪ ತನ್ನ ಕಂಗಳಂ |
ಕೀಳ್ಟನೊ ಪರಸಿ ಪಡೆದೊಡಲನುರೆ ಸೀಳ್ಟೆನೋ ನಿನ್ನ ನುಡಿಗಳನೆಂದಿಗೆ ||
ಕೇಳ್ಟನೋ ಜನ್ಮ ಜನ್ಮಾಂತರದೊಳಾದೊಡಂ| ಪೇಳ್ಟೆನೋ ನಿನಗೆ ಬೆಸನಂ ಮಗನೆ ಶೋಕಮಂ |
ತಾಳ್ಟೆನೋ ತಾನೆನ್ನೊಳುಸಿರಲಾಗದೆ ಮೌನಮೇಕಕಟ ನಿನಗೆಂದನು ||54||
2.54_65
ಪದ್ಯ -೫೫
2.55
ಕೊಳುಗುಳಕೆ ನಡೆತಂದೆ ಬಿಲ್ಟಿಡಿಯುತೈತಂದೆ| ಪಲುಗುಣನೊಡನೆ ಹೋರಿ ಜಯಿಸಬೇಡವೇ ಹೋರಿ| ಕಲಿತನದೊಳುಕ್ಕಿ ಕಂದದಾತ ನೀನೇಕೆ ಅಂದವಳಿದೆ ರಣದೊಳಗೆ ಕಂದ ||
ನಿಲಯಕೆಂ ತಾಂ ಪುಗುವೆನುಳಿದು ನಿನ್ನಂ ಮಗುವೆ |
ಸಲಹು ಬಾ ದಮ್ಮಯ್ಯ ಮಾತಾಡು ದಮ್ಮಯ್ಯ |
ಬಳಲಿಸದಿರೈ ತಮ್ಮನೊಮ್ಮೆ ನೊಡೈ ತಮ್ಮ ಯೆಂದಳಲೊಳವನಾಳ್ದನು ||55||
2.55_66
ಪದ್ಯ -೫೬
2.56
ಮೋಹಮುಳ್ಳೊಡೆ ತಪ್ತ ತೈಲಪೂರಿತ ಘನಕ| ಟಾಹದೊಳ್ ಕೆಡಪಿಸುವನೇ ತಂದೆ ತನಯನಂ |
ಬಾಹಿರಂಗದ ಶೋಕವೆಂದು ಜರೆಯದೆ ಲೋಕಮೀಗ ಹಲುಬಲ್ ತನ್ನನು ||
ದ್ರೋಹಮಂ ಮಾಡಿದೆಂ ನಿನಗೆನ್ನ ಮೇಲೆ ಮುಳಿ| ದಾಹ ವದೊಳಳಿದೈ ಸುಧನ್ವ ಕಾಯ್ದಣ್ಣೆ ಯೊಳ್ |
ದೇಹಮಂ ಕಾದ ಕೃಷ್ಣಂ ಕಾದಲಹಿತನೇಕಾದನ್ಯೆ ನಿನಗೆಂದನು ||56||
2.56_67
ಪದ್ಯ -೫೭
2.57
ಅಣ್ಣದೇವಂ ಕದನಮಂ ಜಯಿಸಿ ಬಹನೆಂದು ಬಣ್ಣದ ಸೊಡರ್ಗಳಂ ಕೈಗೈಸುವನುಜೆಯಂ |
ಹುಣ್ಣಿಮೆಯ ಶಶಿಯಂದದಾಸ್ಯದೆಳನಗೆಯೊಳೈತಹ ನಿನ್ನ ವಲ್ಲಭೆಯನು ||
ಹಣ್ಣಿದುತ್ಸಾಹಮಂ ಕೇಳ್ದು ತನ್ನೊಡಲೊಳಗೆ ತಣ್ಣಸಂ ತಳ್ತು ಬಹ ನಿನ್ನ ನಿಜಮಾತೆಯಂ |
ಕಣ್ಣಾರೆ ಕಾಣ್ಬೆನೆಂತಕಟ ವಿಪರೀತಮಾದೊಡೆ ತನಯ ಹೇಳೆಂದನು ||57||
2.57_68
ಪದ್ಯ -೫೮
2.58
ತಾತನಲ್ಲವೆ ನಿನಗೆ ತಾನೆನ್ನೊಳಿಂತಕಟ ಮಾತಾಡದಿಹರೆ ನಿನ್ನಂ ಪಡೆದಳಂ ವೀರ |
ಮಾತೆಯೆಂಬರ್ ಕಟ್ಟುನರನ ಹಯವಂ ಕಾದು ನಡೆ ಕೃಷ್ಣಫಲುಗಣರೊಳು ||
ಏತಕೆ ಬರಿದೆ ಸುಮ್ಮನಿಹೆ ಕಂಠಮಾಲೆಯೊಳ್ ಜಾತಿನಾಯಕರತ್ನಮಂ ತೆಗೆದು ಬಿಸುಟಂತೆ |
ಧಾತುಗೆಟ್ಟಿದೆ ತಮ್ಮ ಬಲಮೆಂದು ಹಲುಬಿದಂ ಧರೆಯೊಳ್ ಪೊರಳ್ದುಮರುಗಿ ||58||
2.58_69
ಪದ್ಯ -೫೯
2.59
ಲಂಬಿಸಿದನತಿಶೋಕ ಭಾರದಿಂ ಮೊಗಮಿಟ್ಟು| ಚುಂಬಿಸಿದನಡಿಗಡಿಗೆ ನಾನಾಪ್ರಕಾರದಿಂ| ಪಂಬಲಿಸಿ ಸುತನ ಗುಣಶೀಲಂಗಳಂ ನೆನೆದು ಹಳವಳಿಸಿದಂ ಪೆರ್ಚಿದ ||
ಕಂಬನಿಯ ಕಡಲೊಳಗೆ ಡಾವರಿಪ ವಡಬಶಿಖಿ ಯೆಂಬಿನಂ ಕಾಣಿಸುವಳಲ್ಗಿಚ್ಚಿಗವನೊಡಲ |
ನಿಂಬುಗೊಟ್ಟಂ ಮರುಗುತಿರ್ದುದು ಸಮಸ್ತ ಪರಿವಾರಮಾತನ ಸುತ್ತಲು ||59|||
2.59_70
ಪದ್ಯ -೬೦
2.60
ಕಾಳಗಕೆ ಮುಂಕೊಂಡು ನಡೆವರಾರಿನ್ನು ತಮ ಗೂಳಿಗವನಿತ್ತು ಬೆಸಸುವರುಂಟೆ ನೀನೆ ಕ |
ಟ್ಟಾಳೆಂಬರೀಗಳಿಂತಳಿದಪರೆ ದಾತಾರ ವೀರ ಸುಕುಮಾರಧೀರ ||
ಕಾಳಾದುದಕಟ ಚಂಪಕನಗರದರಸುಗಳ ಬಾಳುವೆ ಮಹಾದೇವ ಹಾಯೆಂದೊರಲ್ದು ಪಡೆ |
ಗೋಳಿಟ್ಟುದಾನೆ ಕುದುರೆಗಳೊರೆವ ಕಂಬನಿ ಬಳಲ್ಗಿವಿಗಳಿಂ ಜೋಲ್ದುವು ||60||
2.60_71
ಪದ್ಯ -೬೦
2.61
ಬಳಿಕ ಆ ಸುಧನ್ವನ ಸಹೋದರಂ ಸುರಥಂ ಬಹಳ ಶೋಕಭಾರಮಂ ತಳೆದಿರ್ದ ಅವಂ ಕೂಡೆ ತಿಳಿದು ಕಡುಗೋಪದಿಂ ಬಿಲ್ಕೊಂಡು ನುಡಿದನೆಲೆ ತಾತ ಕೇಳೀತನನಿಂದು ||
ನಳಿನನಾಭನ ಮುಂದೆ ಭಾಷೆಯಂ ಪೂರೈಸಿ ಕೊಳುಗುಳದೊಳಳಿದನಿದಕಿನ್ನು ದುಃಖಿಸಲೇತ |ಕಳಲದಿರು ಧುರದೊಳೆನ್ನಾಟೋಪಮಂ ನೋಡೆನಲ್ಕರಸನಿಂತೆಂದನು ||61||
2.61_72
ಪದ್ಯ -೬೨
2.62
ಉಂಟು ಕೃಷ್ಣನ ಮುಂದೆ ಭಾಷೆಯಂ ಪೂರೈಸಿ ಟಿಂಟಣಿಸದೊಡಲಂ ತೊರೆದು ಮುಕ್ತಿ ರಾಜ್ಯಮಂ |
ವೆಂಟಳಿಕೊಂಡಂ ಸುಧನ್ವನಿಂತಿದಕಾಗಿ ಧೈತಿಗೆಟ್ಟಳಲ್ದುದಿಲ್ಲ |
ಕಂಠಮಂ ಕತ್ತರಿಸಿಸಲಾ ಶಿರಂ ತನ್ನೆಡೆಗೆ ಬಂಟುಗಡದೈದಿದೊಡೆ ತೆಗೆದೆತ್ತಿಕೊಂಡು ವೈಕುಂಠನೀಕ್ಷಿಸಿ ಮತ್ತೆ ಬಿಸುಟನೆಂಬುದಕೆ ಮರುಗುವೆನೆಂದೊಂಡಿತೆಂದನು ||62||
2.62_73
ಪದ್ಯ -೬೩
2.63
ತಾತ ಚಿತ್ತೈಸಿದರೊಳೇನಹುದು ತಿರುಗಿ ಬಿಸು| ಡೀ ತಲೆಯ ನಸುರಾಂತಕನ ಚರಣದೆಡೆಗೆ ಸಹ |
ಜಾತನಂ ಕೊಂದಾತನಂ ಕೊಲ್ವೆನೆಂದು ಸುರಥಂ ರಥಕಡರ್ದಬಳಿಕ ||
ಖಾತಿಯಿಂದ ಆ ಶಿರವನು ಆ ಮರಾಳಧ್ವಜಂ ಪೀತಾಂಬರನ ಪೊರೆಗೆ ಹಾಯ್ಕಲಾಮುರಹರಂ |
ಪ್ರೀತಿಯಿಂ ತೆಗೆದು ನಭಕಿಡಲದಂ ರುಂಡಮಾಲೆಯೊಳಾಂತನಲ್ಲಿ ಶಿವನು ||63||
2.63_74
ಪದ್ಯ -೬೪
2.64
ಅಡಗಿತಾ ಶಿರಮಲ್ಲಿ ಹಂಸಧ್ವಜಂ ತನ್ನ |
ಪಡೆಸಹಿತ ನಿಂದನಾಹವಕೆ ಸನ್ನಾಹದಿಂ |
ದೊಡಹುnÖದಂ ಮಡಿದಳಲ್ಗೆ ಸುರಥಂ ರಥಕಡರ್ದು ನಿಜಕಾರ್ಮುಕವನು ||
ಮಿಡಿದು ಕೃಷ್ಣಾರ್ಜುನರ ಸರಸಕೈತರಲವನ |
ಕಡುಶೌರ್ಯಮಂ ಕಂಡಾ ಶಂಕೆಯಿಂ ದೇವಪುರ |
ದೊಡೆಯ ಲಕ್ಷ್ಮೀವರಂ ಮಾಡಿದಂತನ್ನವೈದುನನೊಳಾಲೋಚನೆಯನು ||64||
2.64_75
ಅಡಗಿತು ಆ ಶಿರಂ ಅಲ್ಲಿ ಹಂಸಧ್ವಜಂ ತನ್ನ ಪಡೆಸಹಿತ ನಿಂದನು ಆಹವಕೆ ಸನ್ನಾಹದಿಂದ = [ಸುಧನ್ವನ ಶಿರವು ಶಿವನ ರುಂಡ ಮಾಲೆಯಲ್ಲಿ ಸೇರಿ ಅಡಗಿತು. ಹಂಸಧ್ವಜನು ತನ್ನ ಸೈನ್ಯ ಸಹಿತ ಯುದ್ಧ ಮಾಡಲು ಸಿದ್ಧನಾಗಿ ನಿಂತನುÀ] ; ಒಡಹುಟ್ಟಿದಂ ಮಡಿದ ಅಳಲ್ಗೆ ಸುರಥಂ ರಥಕೆ ಅಡರ್ದು ನಿಜಕಾರ್ಮುಕವನು ಮಿಡಿದು ಕೃಷ್ಣಾರ್ಜುನರ ಸರಸಕೆ ಐತರಲು = [ಒಡಹುಟ್ಟಿದ ಸುಧನ್ವನ ಸಾವಿನಿಂದ ದುಃಖಪಟ್ಟು, ಸೇಡು ತೀರಿಸಲು, ಸುರಥನು ರಥವನ್ನು ಹತ್ತಿ, ತನ್ನ ಬಿಲ್ಲನ್ನು ಠೇಂಕಾರ ಮಾಡಿ ಕೃಷ್ಣಾರ್ಜುನರ ಹತ್ತಿರಕ್ಕೆ ಬಂದನು.]; ಅವನ ಕಡುಶೌರ್ಯಮಂ ಕಂಡು ಆ ಶಂಕೆಯಿಂ ದೇವಪುರ ದೊಡೆಯ ಲಕ್ಷ್ಮೀವರಂ ಮಾಡಿದಂ ತನ್ನ ವೈದುನನೊಳು ಆಲೋಚನೆಯನು = [ಅವನ ಮಹಾಶೌರ್ಯವನ್ನು ನೋಡಿ, ಭಯದಿಂದ ದೇವಪುರ ದೊಡೆಯ ಲಕ್ಷ್ಮೀವರನಾದ ಕೃಷ್ಣನು ತನ್ನ ವೈದುನ ಅರ್ಜುನನ ಜೊತೆ ಸಮಾಲೋಚನೆ ಮಾಡಿದನು.]
(ಪದ್ಯ-೬೪)
2.64_76
ಸಂಧಿ ೧೩ಕ್ಕೆ ಪದ್ಯಗಳು ೮೦೬.
2.64_77
ಹೋಗಿ
2.64_78
<ಜೈಮಿನಿ ಭಾರತ ಹನ್ನೆರಡನೆಯ ಸಂಧಿ
ಜೈಮಿನಿ ಭಾರತ/ಹದಿನಾಲ್ಕನೆಯ ಸಂಧಿ>
2.64_79
ನೋಡಿ
2.64_80
ಜೈಮಿನಿ ಭಾರತ-ಸಂಧಿಗಳು*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34
2.64_81
ಪರಿವಿಡಿ
2.64_82
ಒಲ್ಲೇಖ
2.64_83
ವರ್ಗಕನ್ನಡ ಸಾಹಿತ್ಯ
ವರ್ಗಹಳಗನ್ನಡ ಸಾಹಿತ್ಯ