Jaimini Bharata (Kannada) 2.11
Jaimini Bhārata (Kannada) 2.11
- Language
- Kannada
2.11
ಆವಗಂ ಪೀರ್ವೊಡಾಸರ್ಗೊಂಡು ತೀರದ ಮ |
ಹಾವಾರ್ಧಿಜಲವನೊಂದೇಸಾರಿ ಸುರಿಗೊಂಬ |
ಡಾವರದೊಳೆದ್ದ ವಡಬಾಗ್ನಿಯೋ ವಿಲಯರುದ್ರನ ಪಣೆಯ ಕಣ್ಗಿಚ್ಚಿದೋ ||
ಭಾವಿಸುವೊಡರಿದೆಂಬೊಲಾದುದು ಧನಂಜಯನ |
ಪಾವಕಾಸ್ತ್ರಂ ಬಳಿಕ ತೆಗೆದು ಬೊಬ್ಬಿರಿದು ಗಾಂ |
ಡೀವದಿಂ ಪಾರಿಸಿದೊಡಾ ಸುಧನ್ವನ ಸರಿಸಕಡರಿತುರಿ ಕಡುಭರದೊಳು ||11||