Jaimini Bharata (Kannada) 2.12
Jaimini Bhārata (Kannada) 2.12
- Language
- Kannada
2.12
ತೆಕ್ಕೆವರಿದೇಳ್ವ ಕರ್ಬ್ಬೊಗೆಯ ಹೊರಳಿಗಳ ದಶ |
ದಿಕ್ಕುಗಳನವ್ವಳಿಪ ಕೇಸುರಿಯ ಚೂಣಿಗಳ |
ಮಿಕ್ಕು ಸೂಸುವ ತೂರುಗಿಡಿಗಳ ಕಣಾಳಿಗಳ ಕಾರಿಡುವ ಪೊತ್ತುಗೆಗಳ ||
ಕೊಕ್ಕರಿಸುತುಗುವ ತನಿಗೆಂಡದಿಂಡೆಗಳ ಸಲೆ ಮುಕ್ಕುಳಿಸಿ ಮೊಗೆವ ಪೆರ್ಗಿಚ್ಚುಗಳ ವೆಂಕೆ ಮೇ |
ಲಿಕ್ಕಿದುದು ಹಂಸಧ್ವಜನ ಸೇನೆ ಬೆಂದು ಬೇಗುದಿಗೊಂಡುದಾ ಕ್ಷಣದೊಳು ||12||