Jaimini Bharata (Kannada) 2.13
Jaimini Bhārata (Kannada) 2.13
- Language
- Kannada
2.13
ಕಾದವು ಭಟರ ಕೈದುಗಳ್ ಪಿಡಿಯಲರಿದೆನ |
ಲ್ಕಾದವು ಶರಾಗ್ನಿ ಗಾಹುತಿ ಗಜಹಯಾದಿಗಳ್ |
ಕಾದವು ಧನಂಜಯನ ಮುಂದೆಮ್ಮ ಬಲಗಳೆಂದಾ ಸುಧನ್ವಂ ಕೆರಳ್ದು ||
ಕೋದಂಡಕತಿವೇಗದೊಳ್ ವಾರುಣಾಸ್ತ್ರವಂ |
ಕೋದಂಡಲೆವ ಶಿಖಿಜ್ವಾಲೆಯಂ ನಿಲಿಸಲಿದ |
ಕೋದಂಡಮೆನ್ನೊಳೆನುತಾರ್ದು ತೆಗೆದಚ್ಚನುರಿ ನಂದಿ ಜಲಮಯವಾಗಲು ||13||