Pramāṇa · Search · About · API

Jaimini Bharata (Kannada) 2.17

Jaimini Bhārata (Kannada) 2.17

Language
Kannada

2.17

ಆ ವರ ಬ್ರಹ್ಮಾಸ್ತ್ರಂ ಗಳೆರಡುಂ ಪೊಣರ್ದಡಗ |
ಲಾ ವಿಜಯನೆಣಿಕೆಗೊಂಡೀತನಂ ಗೆಲ್ವ ನಗೆ |
ಯಾವುದೆಂದುಗಿದು ಹೂಡಿದನಕ್ಷಯಾಸ್ತ್ರಮಂ ತನ್ನ ರಥಕವನ ತೇರ್ಗೆ ||
ತೀವಿದುವು ಬಾಣಂಗಳಾಕಾಶಮಂ ಕಾಣೆ |
ನೀವಸುಧೆಯೆತ್ತಣದು ಶಶಿರವಿ ಕುಲಾದ್ರಿ ತಾ |
ರಾವಳಿಗಳೇನಾದು ವೆಣ್ದೆಸೆಯ ನರಿವರಾರೆಂಬಿನಂ ಕೈಗೈದನು ||17||