Pramāṇa · Search · About · API

Jaimini Bharata (Kannada) 2.19

Jaimini Bhārata (Kannada) 2.19

Language
Kannada

2.19

ಗೌರಿಯರಸನ ಕೂಡೆ ಕಾದಿದ ಪರಾಕ್ರಮದ |
ಸೌರಂಭಮಿಂತುಟೆ ನಿವಾತಕವಚರನಿರಿದ |
ಗೌರವಮಿದೀಗಲೇ ಭೀಷ್ಮ ಕರ್ಣ ದ್ರೋಣ ಮಾದ್ರಪತಿ ಮೊದಲಾಗಿಹ ||
ಕೌರವಬಲದೊಳಖಿಳ ವೀರಭಟರಂ ಗೆಲ್ದ |
ಪೌರುಷಮಿನಿತೆ ಸಾಕು ಬರಿದೆ ಬಳಲಿಸಬೇಡ |
ಶೌರಿಯಂ ಕರೆಸೆನುತೆ ಕಣೆಗಳಂ ಕಡಿದೆಚ್ಚನಾ ಸುಧನ್ವಂ ನರನನು ||19||