Pramāṇa · Search · About · API

Jaimini Bharata (Kannada) 2.23

Jaimini Bhārata (Kannada) 2.23

Language
Kannada

2.23

ಕಶ್ಯಪ ವಸಿಷ್ಠಾದಿ ಪರಮಋಷಿಮುಖ್ಯರಾ|
ಲಸ್ಯಮಿಲ್ಲದೆ ಮಾಡುವ ಧ್ಯಾನಕೊಮ್ಮೆಯುಂ |
ದೃಶ್ಯಮಿಲ್ಲದ ಚಿನ್ಮಯಾನಂದರೂಪನೀಕುಂತೀಕುಮಾರಕರ್ಗೆ ||
ವಶ್ಯನಾಗಿಹನೆಂತೊ ಶಿವಶಿವಾ ನೀಲಮೇ |
ಘಶ್ಯಾಮಲನ ಲೀಲೆ ಪೊಸತೆಂದು ಸಉರರುಲಿಯೆ |
ಸ್ವಶ್ಯಾಲಕನ ರಥಾಗ್ರಕೆ ಸುಪರ್ಣಸ್ಕಂಧದಿಂದೆ ಮುರಹರನಿಳಿದನು ||23||