Jaimini Bharata (Kannada) 2.24
Jaimini Bhārata (Kannada) 2.24
- Language
- Kannada
2.24
ಮೊಳಗಿದವು ನಿಸ್ಸಾಳಕೋಟಿಗಳ್ ಫಲುಗುಣನ |
ದಳಗೊಳಗೆ ತನತನಗೆರಗುತಿರ್ದುದುತ್ಸವದ |
ಲಳಿ ಮಸಗಿ ಕಳಕಳದ ಬೊಬ್ಬೆಯಿಂ ಮಿಕ್ಕುದು ರಭಸಮಭ್ಧಘೋಷಣವನು ||
ಬಳಿಕೆ ನಸುನಗುತೆ ಚರಣಕೆ ಮಣಿದ ಪಾರ್ಥನಂ |
ಸೆಳೆದು ಬಿಗಿಯಪ್ಪಿ ಮೈದಡವಿ ಬೋಳೈಸಿ ರಥ |
ದೊಳಗೆ ಕುಳ್ಳಿರ್ದು ನಲವಿಂದೆಮುರರಿಪು ಕುದುರೆಗಳ ಮಾಘೆಯಿಂ ಕೊಂಡನು ||24||