Jaimini Bharata (Kannada) 2.33
Jaimini Bhārata (Kannada) 2.33
- Language
- Kannada
2.33
ಇವನೇಕಪತ್ನೀವ್ರತಸ್ಥನಾಗಿಹುದರಿಂ |
ತವೆ ತಾತ ನಾಜ್ಞೆಯಂ ಪಾಲಿಸುತೆ ಬಹುದರಿಂ |
ಕವಲಿಲ್ಲದೆಮ್ಮನರ್ಚಿಪ ಭಕ್ತನಹುದರಿಂದಜ ಭವ ಸುರೇಶ್ವರರ್ಗೆ ||
ಬವರದೊಳ್ ಮಣಿವನಲ್ಲಿನ್ನಿವನ ಶೌರ್ಯಮಂ |
ಜವಗೆಡಿಸಿ ನಮ್ಮನುರೆ ಬಳಲಿಸುವ ಧೈರ್ಯಮಂ |
ಭುವನತ್ರಯವನಂಜಿಸುವ ವಿಪುಲವೀರ್ಯಮಂ ನೋಡೆಂದು ಹರಿ ನುಡಿದನು ||33||