Pramāṇa · Search · About · API

Jaimini Bharata (Kannada) 2.35

Jaimini Bhārata (Kannada) 2.35

Language
Kannada

2.35

ಸುರ್ರನೆ ಸುಳಿದು ಸುತ್ತಿ ಬೆಂಡಾಗೆ ಕುದುರೆಗಳ್ |
ಕಿರ್ರನೆ ಪಪೀಶ್ವರಂ ಪಲ್ಗಿರಿದು ಚೀರಲ್ಕೆ |
ಕರ್ರನೆ ಕವಿಯೆ ಕಣ್ಗೆ ಕೆತ್ತಲೆ ಶಿರೋಭ್ರಮಣೆಯಿಂ ಕೃಷ್ಣ ಫಲುಗುಣರ್ಗೆ ||
ಘರ್ರನೆ ಪೊರಳ್ದು ಗಾಲಿಗಳೇಳೆ ಧರಣಿಯಂ |
ತಿರ್ರನೆ ತಿರುಗುವ ಸುಟ್ಟುರೆಗಾಳಿಯಂದದಿಂ |
ಸರ್ರನೆ ಸರಿದುದು ಹಿಂದಕೆ ರಥಂ ಮತ್ತವನಸುರಾರಿ ಬಣ್ಣಿಸಿದನು ||35||