Jaimini Bharata (Kannada) 2.38
Jaimini Bhārata (Kannada) 2.38
- Language
- Kannada
2.38
ಅಹಹ ಮುರಹರ ಪಾರ್ಧನಿಸುವ ಬಾಣಕೆ ನಿನ್ನ |
ಬಹಳ ಸುಕೃತವನಿತ್ತೆ ಲೇಸಾದುದಿದನರಿಯೆ |
ಬಹುದೆ ನೋವಿಲ್ಲಲಾ ನಿನಗೆನುತ ತೀವ್ರದಿಂ ಕೊರಳ ಸಿರಸಕೆ ನಭದೊಳು ||
ಬಹ ಸರಳನೆಚ್ಚು ನಿಮಿಷಾರ್ಧದೊಳ್ ಕಡಿದು ಗಹ |
ಗಹಿಸುವ ಸುಧನ್ವನಂ ಕಂಡವನ ಸೈನ್ಯದೊಳ್ |
ಕಹಳೆಗಳ್ ಸೂಳೈಸಿದವು ಮೆಚ್ಚಿದರ್ ಇದವಿಜರಚ್ಯುತಂ ಬೆರೆಗಾದನು ||38||