Jaimini Bharata (Kannada) 2.57
Jaimini Bhārata (Kannada) 2.57
- Language
- Kannada
2.57
ಅಣ್ಣದೇವಂ ಕದನಮಂ ಜಯಿಸಿ ಬಹನೆಂದು ಬಣ್ಣದ ಸೊಡರ್ಗಳಂ ಕೈಗೈಸುವನುಜೆಯಂ |
ಹುಣ್ಣಿಮೆಯ ಶಶಿಯಂದದಾಸ್ಯದೆಳನಗೆಯೊಳೈತಹ ನಿನ್ನ ವಲ್ಲಭೆಯನು ||
ಹಣ್ಣಿದುತ್ಸಾಹಮಂ ಕೇಳ್ದು ತನ್ನೊಡಲೊಳಗೆ ತಣ್ಣಸಂ ತಳ್ತು ಬಹ ನಿನ್ನ ನಿಜಮಾತೆಯಂ |
ಕಣ್ಣಾರೆ ಕಾಣ್ಬೆನೆಂತಕಟ ವಿಪರೀತಮಾದೊಡೆ ತನಯ ಹೇಳೆಂದನು ||57||