Pramāṇa · Search · About · API

Jaimini Bharata (Kannada) 2.9

Jaimini Bhārata (Kannada) 2.9

Language
Kannada

2.9

ದಿವ್ಯಹಯ ರಥ ಚಾಪ ಶರ ಕೇತು ಕಂಬುಗಳ್ |
ಸವ್ಯಸಾಚಿತ್ವಮಿವು ನಿನಗೊದಗಿದವು ರಣದೊ |
ಳವ್ಯಯಂ ಸಾರಥ್ಯಮಂ ಮಾಡಲ್ಲಿನ್ನು ಜಯವಹುದೆ ಹುಲುಸೂತನಿಂದೆ ||
ಸವ್ಯವಾಹನಸಖಂ ತೊಲಗಿಸುವ ಬಹಳಮೇ |
ಘ ವ್ಯೂಹಸಂಘಾತದೊಡ್ಡವಣೆ ಮುರಿವುದೇ ಕೃ |
ತವ್ಯಜನವಾತದಿಂದಲೆ ಮರುಳೆ ಹೋಗೆನುತವಂ ಕಿರೀಟಿಯನೆಚ್ಚನು ||9||