Jaimini Bharata (Kannada) 3.12
Jaimini Bhārata (Kannada) 3.12
- Language
- Kannada
3.12
ಲಟಕಟಿಸುತಾಗ ಸಾತ್ಯಕಿ ಸಾಂಬ ಕೃತವರ್ಮ |
ಶಠ ನಿಶಠರನಿರುದ್ಧ ಗದ ಮುಖ್ಯರಾದ ಪಟು |
ಭಟರಖಿಳ ಯಾದವ ಚತುರ್ಬಲಂ ಜೋಡಿಸಿತು ಸಮರಸನ್ನಾಹದಿಂದೆ ||
ದಿಟಮಿಂದಜಾಂಡಘಟಮೊಡೆಯದಿರದೆಂಬಿನಂ |
ಪಟಹ ಡಿಂಡಿಮ ಡೌಡೆ ಭೇರಿ ನಿಸ್ಸಾಳ ತಂ |
ಬಟ ಮುರಜ ಡಕ್ಕೆ ಡಮರುಗ ಕೊಂಬು ಕಹಳೆಗಳೆ ಬಹುಳರವಮಳ್ಳಿರಿದುದು ||12||