Pramāṇa · Search · About · API

Jaimini Bharata (Kannada) 3: ಜೈಮಿನಿ ಭಾರತ ಹನ್ನೆರಡನೆಯ ಸಂಧಿ

Jaimini Bhārata (Kannada) 3

Language
Kannada

ಜೈಮಿನಿ ಭಾರತ ಹನ್ನೆರಡನೆಯ ಸಂಧಿ

3.p1

ಜೈಮಿನಿ ಭಾರತ

3.p2

ಜೈಮಿನಿ ಭಾರತ - ಹನ್ನೆರಡನೆಯ ಸಂಧಿ

3.p3

ಪದ್ಯ -ಸೂಚನೆ

3.p4

ಅಪರಮಿತಸೈನ್ಯ ಸನ್ನಾಹದಿಂದರ್ಜುನನ |
ಚಪಲಹಯಮಂ ಮರಾಳಧ್ವಜಂ ಪಿಡಿಯಲ್ಕೆ |
ತಪನಸುತನಂದನ ಸುದನ್ವರ್ಗೆ ಕಾಳಗಂ ಪೂಣ್ದುದಾಡಂಬರದೊಳು||

3.p5

ಪದ್ಯ -೧

3.1

ಇನ್ನು ಮೇಲಣ ಕಥೆಯನಾಲಿಸೆಲೆ ಭರತಕುಲ |
ರನ್ನ ಜನಮೇಜಯ ಸುಧ್ವನ್ವಂ ಕಟಾಹದುರಿ |
ಯಂ ನಾರಸಿಂಹ ಜಪದಿಂ ಜಯಿಸೆ ಲಿಖತನೆಸಗಿದ ವೈಷ್ಣವದ್ರೊಹಕೆ ||
ತನ್ನರಿವನುರೆ ಜರೆದುಕೊಂಡಸುದೊರೆವೆನೆಂದು |
ನನ್ನಿಯಿಂದಾ ತೈಲದೊಳ್ ಬೀಳಲವರ್ಗಳಂ |
ವನ್ನಿಸಿ ನೃಪಂ ತೆಗೆಸಲಾ ಪುರೋಹಿತನವನಿಪತಿಗೆ ಬಳಿಕಿಂತೆಂದನು ||1||

3.1_6

ಪದ್ಯ -೨

3.2

ಭೂನಾಥ ಕೇಳ್ನಿನ್ನಸುತನ ದೆಸೆಯಿಂದೆ ನ |
ಮ್ಮೀನೆಲಂ ಪ್ರಜೆ ನಾಡು ಬೀಡೂರು ಪರಿವಾರ |
ಮಾನೆ ಕುದುರೆಗಳಿರ್ದ್ದ ಪಶು ಪಕ್ಷಿ ಮೃಗ ಕೀಟ ತರು ಗುಲ್ಮಲತೆಗಳೆಲ್ಲ ||
ಈ ನಿರುದ್ದಕೆ ಧನ್ಯವಾದುವೇಂ ಕೃತಿಯೊನೀಂ |
ಭಾನುರಶ್ಮಿಗೆ ಕಂದೆರೆಯದ ಗೂಗೆಯವೊಲ |
ಜ್ಞಾನ ದ್ವಿಜಾಧಮಂ ತಾನಾದೆನೀ ದ್ರೋಹಕೆಂದು ಲಿಖಿತಂ ನುಡಿದನು ||2||

3.2_7

ಪದ್ಯ -೩

3.3

ಬಳಿಕಾತನಂ ಸುಮ್ಮನಿರಿಸಿ ನುಡಿದಂ ಶಂಖ |
ನೆಲೆ ಮಹೀಪಾಲ ಹರಿಶರಣರ್ಗೆಡರ್ಗಳೆ |
ತ್ತೊಳವು(ಎತ್ತಣದು?) ಬೆಳಂದಿಂಗಳ್ಗೆ ಬೆಮರುಂಟೆ ಬೇಸಗೆಯೊಳಿವನ ನಿಜಮಂ ಕಾಣದೆ ||
ಬಳಸಿದೆವು ಮೂರ್ಖತೆಯನರಿದು ಮರುಳಾದೆವಿ |
ನ್ನುಳಿದ ಮಾತುಗಳೇಕೆ ಸಾಕೀ ಸುಧನ್ವನಂ |
ಕಳುಹು ಕಾಳಗಕೆನಲ್ ಭೂಪನವನಂ ತೆಗೆದು ಬಿಗಿಯಪ್ಪಿದಂ ಮುದದೊಳು ||3||

3.3_8

ಪದ್ಯ -೪

3.4

ತಂದೆಯ ಚರಣಕೆರಗಿ ಶಂಖಲಿಖಿತರ ಪದಕೆ |
ವಂದಿಸಿ ಪರಕೆಗೊಂಡು ಸಾರಥಿಯನಾದರಿಸಿ |
ಪೊಂದೇರನಳವಡಿಸಿ ತುರಂಗಂಗಳಂ ಪೂಡಿ ಸಿಂಧಮಂ ನಿಡಿದುಮಾಡಿ ||
ಗೊಂದಣದ ಝಲ್ಲೆಗಳ ಕನಕಮಾಲೆಗಳ ಸ್ರ |
ಕ್ಚಂದನ ವಿಭೂಷಣಾವಳಿಗಳಂ ಸಿಂಗರಿಸಿ |
ಬಂದಡರ್ದಂ ಜಯರವದೊಳಾ ಸುಧನ್ವಂ ತಿರಸ್ಕೃತಕುಸುಮಧನ್ವನು ||4||

3.4_9

ಪದ್ಯ -೫

3.5

ಕೇಳ್ಗುಣಮಣಿಯೆ ಧರೆಣಿಪಾಗ್ರಣಿಯೆ ತನ್ನ ಮಗ |
ನೇಳ್ಗೆಯಂ ಕಂಡುಬ್ಬಿದಂ ಮರಾಳಧ್ವಜಂ |
ಸೂಳ್ಗೈದುವಾಗ ತಂಬಟೆ ಭೇರಿ ನಿಸ್ಸಾಳ ಕಹಳಾದಿ ವಾದ್ಯಂಗಳು ||
ತೋಳ್ಗುಟ್ಟುತಾರ್ದು ಸುಮ್ಮಾನದಿಂ ಪಟುಭಟರ್|
ಕೋಳ್ಗೊಂಡು ಕುದಿಯುತಿರ್ದರು ಸಾರ್ಯೋಜನದೊ |
ಳಾಳ್ಗಜ ತುರಂಗ ರಥವಿಟ್ಟಣಿಸಿ ನಡೆದುದುತ್ಸಾಹದಿಂ ನರನ ಮೇಲೆ ||5||

3.5_10

ಪದ್ಯ -೬

3.6

ಬೆರಬೆರಸುತೊತ್ತಿಡಿದು ಮುಂದೆ ಭರದಿಂದೆ ನಡೆ |
ವರಸರಸುಗಳ ಕಂಠಮಾಲೆಗಳ ತೋರಮು |
ತ್ತೊರಸೊರಸು ಮಿಗೆ ಪರಿದವರ ಸೂಸುದಂಬುಲದ ಚೆನ್ನೆಲದ ಮೇಲೊಕ್ಕಿರೆ ||
ಪೊರೆದ ಸಂಧ್ಯಾರುಣದ ಗಗನಮಂಡಲದೊಳಂ |
ಕುರಿಸಿದುಡುಗುಣದಂತೆ ರಂಜಿಸಿತು ದೆಸೆದೆಸೆಗೆ |
ಪರಿಮಳದೆಲರ್ ಪರಿದುದಗರುಚಂದನ ಯಕ್ಷ ಕರ್ದಮದ ಮೊಗವಾಸದ ||6||

3.6_11

(ಪದ್ಯ- ೬)

3.6_12

ಪದ್ಯ -೭

3.7

ಪಡೆಯೊಳನ್ನೋನ್ಯ ಸಂಘರ್ಷಣದೊಳೊಗುವ ಪೊಂ |
ದೊಡವುಗಳ ರೇಣುಗಳೊ ಮೈಗಳಂ ಸೋಂಕಿ ಪುಡಿ |
ವಡೆದ ಕುಂಕುಮ ಸುಗಂಧಾನುಲೇಪನದ ಚೂರ್ಣಂಗಳೋ ಪದಘಾತಿಗೆ ||
ಪೊಡವಿಯಿಂದಿರದೇಳ್ವ ರುಣರಜಂಗಳೊ ತಿಳಿದು |
ನುಡಿಯಲರಿದೆಂಬಿನಂ ಮೇರುವಿನ ಬಣ್ಣಮಂ |
ಪಿಡಿದ ದಿವಿಭಾಗಮಂ ಜನವನೆಚ್ಚರಿಪಂತೆ ಕೆಂಧೂಳಿ ಮಸಗಿತಾಗ ||7||

3.7_13

(ಪದ್ಯ- ೭)

3.7_14

ಪದ್ಯ -೮

3.8

ಮೊಗಗೈಗಳಿಂ ತಮ್ಮೊಡಲ ನೀರನಾನೆಗಳ್ |
ತೆಗೆದು ಚೆಲ್ಲಲ್ ಪೊನಲ್ವರಿದ ಮಡುಗಳ ಕೆಸರೊ |
ಳೊಗೆದ ನೃಪಮಂಡಲದ ಕನಕಾಭರಣ ಕಿರಣ ತರುಣಾತಪದೊಳಲರ್ದು ||
ಮಿಗೆ ಸುಳಿವ ಚಾಮರಂಗಳ ರಾಜಹಂಸಾವ |
ಳಿಗಳ ಸಂಚಾರಮಂ ಕೆಳಗೊಂಡ ಬೆಳುದಾವ |
ರೆಗಳ ಹಂತಿಗಳಂತೆ ಪಡೆಯೊಳೆಸೆದುವು ತಳ್ತಿಡಿದ ಸತ್ತಿಗೆಯ ಸಾಲ್ಗಳು ||8||

3.8_15

ಪದ್ಯ -೯

3.9

ಮುಂಕೊಂಬ ಮಂದಿ ಕುದುರೆಗೆ ಧರಾಮಂಡಲಂ |
ಸಂಕುಲದ ವಾದ್ಯಧ್ವನಿಗೆ ದಿಶಾಮಂಡಲಂ |
ಸುಂಖ್ಯೆಯಿಲ್ಲದೆ ಸಿಂಧ ಸೀಗುರಿ ಪತಾಕೆಗೆ ನಭೋ ಮಂಡಲಂ ಮೀರಿದ ||
ಬಿಂಕದಿಂದಿರಿವ ಕಲಿತನಕೆ ರಣಮಂಡಲಂ |
ಸಂಕೋಚಮೆನೆ ಬಂದು ಪಿಡಿದು ಪಾರ್ಥನ ತುರುಗ |
ಮಂ ಕಟ್ಟಿ ಬಳಸಿ ಪದ್ಮವ್ಯೂಹಮಾಗಿ ನಿಮದಾರ್ದುದಾ ಸೇನೆ ನಲಿದು ||9||

3.9_16

(ಪದ್ಯ- ೯)

3.9_17

ಪದ್ಯ -೧೦

3.10

ಸುತ್ತ ಪದ್ಮವ್ಯೂಹಮಂ ರಚಿಸಿನಡುವೆ ನರ |
ನುತ್ತಮತುರಂಗಮಂ ಕಟ್ಟಿ ಕಾಳಗಕೆ ಭಟ |
ರೊತ್ತಾಗಿ ನಿಂದರರಿವೀರರಂ ಬರಹೇಳೆನುತ್ತ ರಸನಾಜ್ಞೆಯಿಂದೆ ||
ಇತ್ತ ಪಾರ್ಥಂಗೆ ಚರರೈತಂದು ನುಡಿದರೀ |
ವೃತ್ತಾಂತಮಂ ಬಳಿಕ ಪ್ರದ್ಯುಮ್ಯನಂ ಕರೆದು |
ಮತ್ತೆ ಬಂದುದು ವಿಘ್ನಮಿದುಕಿನ್ನುಪಾಯಮೇನೆಂದೊಡವನಿಂತೆಂದನು||10||

3.10_18

ಪದ್ಯ -೧೧

3.11

ನಿನ್ನಂ ಕಳುಹುವಂದು ಹಯದ ಮೇಲಾರೈಕೆ |
ಗೆನ್ನನಟ್ಟಿದನಲಾ ಪಿತನಾತನಾಜ್ಞೆಯಂ |
ಮನ್ನಿಸುವ ಕಾಲಮಲ್ಲವೆ ತನಗೆ ನೀನಿದಕ್ಕೆಣಿಕೆಗೊಳಬಹುದೆ ಬರಿದೆ ||
ತನ್ಮ ಭೂಜಬಲದಿಂದೆ ಬಿಡಿಸಿ ತಂದಪೆನಶ್ವ |
ಮುನ್ನೋಡು ಸಾಕೆನುತ ಪಾರ್ಥನಂ ಬೀಳ್ಕೊಂಡು |
ಪನ್ಮಗಾರಿಧ್ವಜನ ತನಯನೈದಿದನಹಿತ ಮೋಹರಕೆ ಸೇನೆಸಹಿತ ||11||

3.11_19

ಪದ್ಯ -೧೨

3.12

ಲಟಕಟಿಸುತಾಗ ಸಾತ್ಯಕಿ ಸಾಂಬ ಕೃತವರ್ಮ |
ಶಠ ನಿಶಠರನಿರುದ್ಧ ಗದ ಮುಖ್ಯರಾದ ಪಟು |
ಭಟರಖಿಳ ಯಾದವ ಚತುರ್ಬಲಂ ಜೋಡಿಸಿತು ಸಮರಸನ್ನಾಹದಿಂದೆ ||
ದಿಟಮಿಂದಜಾಂಡಘಟಮೊಡೆಯದಿರದೆಂಬಿನಂ |
ಪಟಹ ಡಿಂಡಿಮ ಡೌಡೆ ಭೇರಿ ನಿಸ್ಸಾಳ ತಂ |
ಬಟ ಮುರಜ ಡಕ್ಕೆ ಡಮರುಗ ಕೊಂಬು ಕಹಳೆಗಳೆ ಬಹುಳರವಮಳ್ಳಿರಿದುದು ||12||

3.12_20

ಪದ್ಯ -೧೩

3.13

ಮೊಗಸಿತರಿಬಲವನನುಸಾಲ್ವಕನ ಸೇನೆಯೂ |
ಮ್ಮೊಗದೊಳೊರೆಯುಗಿದ ಫಣಿಕುಲದಂತೆ ರಣದವಕ |
ಮೊಗದೊದಗಿತಂಬುಧಿಯ ತೆರೆಯಂತೆ ಯೌವನಾಶ್ವನ ಸೈನ್ಯಮೊಂದೆಸೆಯೊಳು ||
ಯುಗದಂತ್ಯದಭ್ರದಂತೆದ್ದುದುರವಣಿಸಿ ಸಂ |
ಯುಗಕೆ ನೀಲಧ್ವಜದ ಸೈನಿಕಂ ಬಳಿಕ ಕರ |
ಯುಗಳಂ ಮುಗಿದು ಕಿರೀಟಿಗೆ ವಿನಯದಿಂದೆ ಬಿನ್ನೈಸಿದಂ ಕರ್ಣಸೂನು ||13||

3.13_21

(ಪದ್ಯ- ೧೩)

3.13_22

ಪದ್ಯ -೧೪

3.14

ತಾತ ಚಿತ್ತೈಸು ಗೋಷ್ಪದಜಲಕೆ ಹರಿಗೋಲ |
ದೇತಕೆ ವೃಥಾ ಕುದುರೆಮಂದಿಯಂ ನೋಯಿಸದಿ |
ರೀತಗಳನೆಲ್ಲರಂ ತೆಗೆಸೆನಗೆ ಸೆಲವಿಂದಿನಾಹವಂ ಪರಬಲವನು ||
ಘಾತಿಸಿ ತುರಂಗಮಂ ತಾರದೊಡೆ ಬಳಿಕ ರವಿ |
ಜಾತನ ಕುಮಾರಕನೆ ನೋಡು ಸಾಕೆನುತ ವೃಷ |
ಕೇತು ಪಾರ್ಥನ ಬೆಸಂಬಡೆದು ರಥವೇರಿದಂ ಮೀರಿದ ಪರಾಕ್ರಮದೊಳು ||14||

3.14_23

ಪದ್ಯ -೧೫

3.15

ತಾರಕಾಸುರನ ಪೆರ್ಬಡೆಗೆ ಮೈದೋರುವ ಕು |
ಮಾರನಂ ತಾನಭ್ರ ಮಾರ್ಗದೋಳ್ ಸುಳಿವ ಮುಂ |
ಗಾರಮಿಂಚಂ ತನ್ನ ಹೊಂದೇರುಗಿರಿಗೆಂಗುವಶನಿಯಂ ತನ್ನ ಘಾತಿ ||
ಪೇರಡವಿಗೈದುವ ದವಾಗ್ನಿಯಂ ತನ್ನ ಪ್ರ |
ಚಾರಂ ನೆಗಳ್ದ ನಡುವಗಲ ರವಿಯಂ ತನ್ನ |
ವೀರಪ್ರತಾಪಂ ತಿರಸ್ಕರಿಸೆ ವೃಷಕೇತು ರಿಪುಸೈನ್ಯಮಂ ಪೊಕ್ಕನು ||15||

3.15_24

(ಪದ್ಯ- ೧೫)XXXI

3.15_25

ಪದ್ಯ -೧೬

3.16

ದೂರದೊಳ್ಕಂಡಂ ಸುಧನ್ವನಾತನ ಬರವ |
ನಾರಿವಂ ಪಾರ್ಥನಾದೊಡೆ ಕಪಿಧ್ವಜಮಿಹುದು |
ದಾರವೃಷಭಾಂಕಿತದ ಕೇತುದಂಡದ ಸುಭಟನಾವನೋ ಪಾಂಡವರೊಳು
ವೀರನಹನೆನುತ ಬಂದಿದಿರಾಗಿ ನಿಂದು ಪರಿ |
ವಾರಮಂ ತೆಗೆಸಿ ಬಿಲ್ಧಿರುವನೊದರಿಸುತೆ ಕೈ |
ವಾರಿಸುತೆ ನಸುನಗುತೆ ಬಾಣಮಂ ತೂಗುತಿನಸುತಜನಂ ಬೆಸಗೊಂಡನು ||16||

3.16_26

ಪದ್ಯ -೧೭

3.17

ಎಲವೊ ನೀನಾರ್ ನಿನ್ನ ಪೆಸರದೇನಾವರ್ಷಿ |
ಕುಲದವಂ ನಿನ್ನ ಪಿತನಾವಾತನೆಂಬುದಂ |
ತಿಳಿಪೆನಗೆ ತಾನೀಗ ವೀರಹಂಸಧ್ವಜನೃಪನ ಕುಮಾರಂ ತನ್ನನು ||
ಇಳೆಯೊಳ್ ಸುಧನ್ವನೆಂಬರ್ ಮಧುಚ್ಛಂದಮುನಿ |
ತಿಲಕನಿಂದಾಯ್ತೆಮ್ಮ ವಂಶಮೆನೆ ಕರ್ಣಜಂ |
ಬಳಿಕ ನಸುನಗೆಯೊಳೆಡಗೈಯ್ಯ ಕೋದಂಡಮಂ ತಿರುಗಿಸುತ್ತಿಂತೆಂದನು ||17||

3.17_27

ಪದ್ಯ -೧೮

3.18

ಗೂಢಮಾಗಿರ್ದಲರ ಪರಿಮಳಂ ಪ್ರಕಟಿಸದೆ |
ರೂಢಿಸಿದ ವಂಶವಿಸ್ತಾರಮಂ ಪೌರುಷದ |
ಮೋಡಿಯಿಂದರಿಯಬಾರದೆ ಸಮರಸಾಧನವಿದರೊಳಹುದೆ ನಿನಗಾದೊಡೆ ||
ಮೂಢ ಕೇಳ್ ಕಶ್ಯಪನ ಕುಲವೆಮ್ಮದೆಂಬರಾ |
ರೂಢನಾಗಿಹ ದಿನಮಣಿಯ ತನಯನಾಹವ |
ಪ್ರೌಢಕರ್ಣನ ಸುತಂ ಪೆಸರನಗೆ ವೃಷಕೇತುವೆಂದೊಡನಿಂತೆಂದನು ||18||

3.18_28

ಪದ್ಯ -೧೯

3.19

ಕರ್ಣಸುತನಾದೊಡೊಳ್ಳಿತು ವೀರನಹುದು ನೀಂ |
ನಿರ್ಣಯಿಸಬಲ್ಲೆ ರಣರಂಗವಂ ಮೂಢರಾವ್ |
ವರ್ಣಕದ ಮಾತುಗಳನರಿಯೆವೆನುತೆಚ್ಚಂ ಸುಧನ್ವನೀತನ ಸರಿಸಕೆ ||
ಸ್ವರ್ಣಪುಂಖದ ಕಣಿಗಳೈದಿದುವು ಮಿಂಚಿನ ಪೊ |
ಗರ್ನಭೋಮಂಹಲವನಂಡಲೆಯಲಾಕ್ಷಣಂ |
ದುರ್ನಿರೀಕ್ಷಣಮಾಗಲೆಡೆಯೊಳವನೆಲ್ಲವಂ ತರಿದಿವಂ ಕೋಲ್ಗರೆದನು ||19||

3.19_29

ಪದ್ಯ -೨೦

3.20

ಬರಸಿಡಿಲ ಭರದಿಂದೆ ಮಿಂಚಿನ ಹೊಳಹಿನಿಂದೆ |
ಬಿರುವೆಳೆಗಳೊತ್ತಿಂದೆ ಕರ್ಣಜಂ ಕಣೆಗಳಂ |
ಕರೆಯುತಿರೆ ನಡುವೆ ಖಂಡಿಸಿದಂ ಸುಧನ್ವನಾತನ ಸರಳ್ಗಳನೆಡೆಯೊಳು ||
ತರಿದಂ ವೃಷಧ್ವಜಂ ಬಳಿಕವನ ಕೋಲ್ಗಳಂ |
ಬರಿಕೈದನಾ ಮರಾಳಧ್ವಜನ ಸುತನಿಂತು |
ತೆರಹುಗುಡದೊರ್ವರೊರ್ವರಮೇಲೆ ಮುಳಿದು ಜರೆದೆಚ್ಚಾಡಿದರ್ ಧುರದೋಳು ||20||

3.20_30

ಪದ್ಯ -೨೧

3.21

ಕ್ಷೋಣಿಗೆ ಸುಧನ್ವ ನಾನಿರೆ ನೀಂ ಸುಧನ್ವನೇ |
ಮಾಣಿಸುವೆನೀ ಪೆಸರನೀಕ್ಷಣದೊಳೆಂದು ಪೆÇಸ |
ಸಾಣಿಯಲಗಿನ ಸರಳ್ಗಳನೆಚ್ಚು ಕರ್ಣಜಂ ಪೋರ್ಗಳನವನ ಮೈಯೊಳು ||
ಕಾಣಿಸೆ ಕೆರಳ್ದೆಲವೊ ಮೇದಿನಿಗೆ ರಿಪುಪಂಚ |
ಬಾಣ ವೃಷಕೇತು ತಾನಿರಲಾಗಿ ವೃಷಕೇತು |
ಮೇಣುಂಟೆ ಹೇಳೆನುತಿವಂ ಕಣೆಗರೆದನವನ ತನುವನುಚ್ಚಳಿಸುವಂತೆ ||21||

3.21_31

ಪದ್ಯ -೨೨

3.22

ಭುಗಿಭೂಗಿಸೆ ಕೋಪಾಗ್ನಿ ಮೂಡಿಗೆಯ ಕೋಲ್ಗಳಂ |
ತೆಗೆತೆಗೆದು ಕರ್ಣತನಯಂ ಸುಧನ್ವನ ರಥವ |
ಬಗೆಬಗೆಯೊಳಮರ್ದೆಸೆವ ಛತ್ರ ಚಾಮರ ಸಿಂದ ಸೀಗುರಿ ಪತಾಕೆಗಳು ||
ಮೊಗಮೊಗಿಸಿ ಮುಂಬರಿವ ಕುದುರೆ ಸಾರಥಿಗಳಂ |
ಝಗಝಗಿಪ ಕವಚಮಂ ತನ್ನ ಕಣೆಯಂ ನಡುವೆ |
ತೆಗೆತೆಗೆವ ಕೋಲ್ಗಳಂ ತರಿದವನ ಬಿಲ್ಲನಿಕ್ಕಡಿಗೈದು ಬೊಬ್ಬಿರಿದನು ||22||

3.22_32

ಪದ್ಯ -೨೩

3.23

ತಂದರಾಗಲೆ ಸುಧನ್ವಂಗೆ ಮಣಿಮಯದ ಮ |
ತ್ತೊಂದು ರಥಮಂ ಬಳಿಕ ಬಿಲ್ವಿಡಿದು ಜೇಗೈದು |
ನಿಂದು ನಿಡಗಣೆಗಳಂ ತಗೆದೆಚ್ಚು ಕರ್ಣಜನ ಕೈಮೆಗಿಂಮಿಗಿಲಾಗಲು ||
ಸ್ಯಂದನ ತುರುಂಗ ಸಾರಥಿಗಳಂ ಕವಚಮಂ |
ಸಿಂಧ ಸೀಗುರಿ ಛತ್ರಚಾಮರ ಪತಾಕೆಗಳ |
ನಂದು ಕತ್ತರಿಸಿ ವೃಷಕೇತುವಿನ ಕರದ ಕೋದಂಡಮಂ ಖಂಡಿಸಿದನು ||23||

3.23_33

ಪದ್ಯ -೨೪

3.24

ವಿರಥನಾದೊಡೆ ಕರ್ಣಸೂನು ಕೈಗೆಡದೆ ಸಂ |
ಗರದೊಳಸಿ ಮುದ್ಗರ ಮುಸುಂಡಿ ತೋಮರ ಖಡ |
ಪರಶು ಗದೆ ಚಕ್ರ ಡೊಂಕಣಿ ಕುಂತ ಶೂಲ ಪಟ್ಟಸ ಭಿಂಡಿವಾಳ ಶಕ್ತಿ ||
ಸುರಗಿ ಮೊದಲಾಗಿರ್ದ ಕೈದುಗಳ ಪರಿವಿಡಿಯೊ |
ಳುರವಣಿಸಿ ಪೊಯ್ದು ಸುಧನ್ವನಂ ಮತ್ತವನ |
ಪೊರೆಯ ಪರಿವಾರಮಂ ನಾನಾಪ್ರಹಾರದಿಂದೈದೆ ಘಾತಿಸುತಿರ್ದನು ||24||

3.24_34

ಪದ್ಯ -೨೫

3.25

ಇತ್ತಲಿಂತಿರಲತ್ತವನ ಸಾರಥಿ ಬೇಗ| ಮತ್ತೊಂದು ರಥಮಂತರಲ್ಕದನಡರ್ದು ಮಸೆ| ವೆತ್ತಕೂರ್ಗಣೆಗಳಂ ಕರ್ಣಜಂ ತೆಗೆದೆಚ್ಚೊಡಾ ಸುಧನ್ವನ ಮೈಯೊಳು||
ತೆತ್ತಿಸಿದವಂಬೊಡೊಲೊಳಿಡಿದ ತನಿವೀರರಸ |
ಮೊತ್ತರಿಸಿ ಮೇಲುಕ್ಕುವಂದದಿಂ ಬಸಿ |ವ ಬಿಸಿನೆತ್ತರೆಸೆದಿರೆ ಕೆರಳ್ದವನೆಚ್ಚೊಡಾ ಕೊಲ್ಗಳಮತರಿಯುತಿವನೆಚ್ಚನು||೨೫||

3.25_35

ಪದ್ಯ -೨೬

3.26

ನಭಕುಪ್ಪರಿಸಿ ನೆಲಕೆ ಪಾಯ್ದೆಡಬಲಕೆ ಮುರಿದು| ರಭಸದಿಂದಾರ್ದೊರ್ವರೊರ್ವರಂ ಮೀರ್ದೊದಗಿ| ವಿಭವದಿಂದಖಿಳ ಶಸ್ತ್ರಾಸ್ತ್ರದಿಂ ಸಮ ವಿಷಮ ಸೋಲುಗೆಲವುಗಳಿಲ್ಲದೆ||
ತ್ರಿಭುವನಕೆ ರಣರಂಗದೊಳ್ಸುಭಟ ನರ್ತನವ |
ನಭಿನಯಿಸುವಂತೆ ಲಾಘವದೃಷ್ಟಿ ಮುಷ್ಟಿಗಳೊ| ಳುಭಯ ವೀರರ್ಖತಿಯೊಳೆಚ್ಚಾಡಿದರ್ಕರ್ಣನಂದನಸುಧನ್ವರಂದು ||26||

3.26_36

ಪದ್ಯ -೨೭

3.27

ಒತ್ತುವರಿಸುವರೆಚ್ಚ ಕಣೆಗಳಂ ಕಣೆಗಳಿಂ |
ಕತ್ತರಿಸಿ ಮೆತ್ತುವರೊಡಲೊಳಂಬನಂಬನುರೆ |
ಕಿತ್ತು ಬಿಸುಡುವರಸೃಗ್ವಾರಿಯಂ ವಾರಿಯಿಂ ತೊಳೆದೊಡನೆ ಕವಳಗೊಂಡು||
ಮತ್ತೆ ಕೈಗೆಡದೆಚ್ಚು ಬೊಬ್ಬಿಸಿವರೀತೆರದೊ |
ಳಿತ್ತಂಡದಗ್ಗಳಿಕೆ ಸಮಮಾಗೆ ಖತಿಯೊಳೊಂ |
ಭತ್ತುನಾರಾಚದಿಂದಾ ಸುಧನ್ವಂ ಕರ್ಣತಯನಂ ಘಾತಿಸಿದನು ||27||

3.27_37

ಪದ್ಯ -೨೮

3.28

ರಾಯ ಕೇಳಾಗ ಪೂರಾಯ ಗಾಯದೊಳಸ್ರ |
ತೋಯದಿಂದವಯವಂ ತೋಯಲಳವಳಿದು ರಾ |
ಧೇಯಜಂ ಬಹಳಬಾಧೇಯನಾಗಲ್ಕವನ ಸಾರಥಿ ರಥವ ತಿರುಗಿಸೆ |
ಜೇಯನೇರಿಸಿ ಬಿಲ್ಗಜೇಯ ಹರಿಸೂನು ಸಹ |
ಸಾಐತಿಕೆಯಿಂದೆ ನಿಜಸಾಯಕವನುಗಿಯುತಡ |
ಹಾಯಿದಂ ಕರೆಕೊಳ್ ಸಹಾಯಿಗಳನೆನುತ ಕಡುಗಲಿ ಸುಧನ್ವನ ಸರಿಸಕೆ ||28||

3.28_38

ಪದ್ಯ -೨೯

3.29

ಅರಿದನಚ್ಯುತನಸುತನೆಂಬುದಂ ಟೆಕ್ಕೆಯದ |
ಕುರುಪಿಂದೆ ನುಡಿದನವನಿಲ್ಲಿ ನಿನಗಬಲೆಯರ |
ಮರೆಯಿಲ್ಲ ನಿನ್ನಿಸುಗೆಗಳುಕು ವರದಾರೆನುತ ಕಲಿಸುಧನ್ವಂ ಕಣೆಗಳ ||
ಬಿರುವಳೆಗೆರಯಲೆಡೆಯೊಳರಿದೆಲವೊ ಸಂಗರದೊ |
ಳುರುವ ಜಯವಧು ತನ್ನ ಭುಜದೊಳಿಹಳೆನುತೆ ಕೆಂ |
ಗರಿಯ ಬಾಣಂಗಳಂ ಮುಸುಕಿದಂ ಪ್ರದ್ಯುಮ್ನನವನ ರಥದೆಣ್ದೆಸೆಯೊಳು ||29||

3.29_39

ಪದ್ಯ -೩೦

3.30

ಅಸಮಸಾಯಕನೆಂದು ಬಣ್ಣಿಪರ್ ನಿನ್ನನಿಂ |
ದಸಮಸಾಯಕ ನಾನೊ ನೀನೋ ನೋಡೆನುತ ಪೊಸ |
ಮಸೆಯ ವಿಶಿಖಂಗಳಿಂ ಸುರಿದಂ ಸುಧನ್ವನಾತನ ಕಣೆಗಳಂ ಖಂಡಿಸಿ ||
ವಸುಮತಿಗೆ ವೀರ ನೀನಸಮಸಾಯಕನಾದೊ |
ಡುಸಿರೆನಗೆ ಸಮಸಾಯಕರದಾರ್ ತ್ರಿಲೋಕದೊಳ್ |
ಪ್ರಸಿಯಬೇಡೆಉತ ಕೂರಂಬುಗಳನಂಬರಕೆ ತುಂಬಿದಂ ಶಂಬರಾರಿ ||30||

3.30_40

ಪದ್ಯ -೩೧

3.31

ಬರಿಯ ಪೂಗೋಲಿಸುಗೆಯಲ್ಲದಾಹವದೊಳಂ |
ಕಿರಿದು ಶರಸಂಧಾನಮುಂಟಲಾ ನಿನಗೆಂದು |
ಜರೆದೆಂಟು ಬಾಣದಿಂದೆಚ್ಚಂ ಸುಧನ್ವನಾತನ ಕೋಲ್ಗಳಂ ಸೈರಿಸಿ ||
ಬಿರುಸರಳ ಸಾರದಿಂದವನ ಸರ್ವಾಂಗಮಂ |
ತುರುಗಿದಂ ಕವಚ ಸೀಸಕ ಬಾಹುರಕ್ಷೆಗಳ್ |
ಬಿರಿವಿನಿಂ ಕೆನ್ನೀರ್ಗಳೊರೆವಿನಂ ನೊಂದು ಮೈಮರೆವಿನಂ ಪ್ರದ್ಯುಮ್ನನು ||31||

3.31_41

ಪದ್ಯ -೩೨

3.32

ಕೃಷ್ಣಸುತನೆಂದಿನ್ನೆಗಂ ಸೈರಿಸಿದೊಡೆ ನೀ |
ನುಷ್ಣ ಮುಳ್ಳವನಾದೆ ತನ್ನ ಬಾಣಾವಳಿಯ |
ತೃಷ್ಣೆಗರುಣಾಂಬುವಂ ನಿನ್ನೊಡರೊಳೂಡಿಸದೆ ಬಿಡುವೆನೇ ಮೇಣಸುವನು ||
ಮುಷ್ಣಮಂ ಮಾಡಿಸದೆ ಮಾಣ್ದಪೆನೆ ಸಾಕಿನ್ನು |
ಜಿಷ್ಣುವಂ ಕರೆಸು ತೊಲಗೆ ನುತೊಂದುಸರಳಿಂದ |
ವೃಷ್ಣಿಕುಲತಿಲಕವ ಕುಮಾರಕನ ಧನುವನೇಳ್ತುಂಡಾಗಿ ಖಂಡಿಸಿದನು ||32||

3.32_42

ಪದ್ಯ -೩೩

3.33

ಬಿಲ್ಮುರಿಯೆ ಕಾರ್ಷ್ಣಿ ಕಡುಗೋಪದಿಂದಾಕ್ಷಣಂ |
ಪಲ್ಮೊರೆಯುತಸಿಪಲಗೆವಿಡಿದವನ ಮೇಲೆ ನಡೆ |
ಯಲ್ಮುಂದಕಡಹಾಯ್ದನರಿಯಲಾ ರಿಪುರೌದ್ರಕರ್ಮ ಕೈತವರ್ಮಕನನು ||
ಬಲ್ಮೆಯುಳ್ಳವನಹೆ ವೃಷಧ್ವಜ ಪ್ರದ್ಯುಮ್ನ |
ರೊಲ್ಮಹಾವೀರರಿಲ್ಲವರೊಳ್ ಪೊಣರ್ದೆ ನೀಂ |
ನಿಲ್ಮದೀಯಾಸ್ತ್ರವಿಸ್ತಾರಮಂ ನೋಡೆನುತ ತೆಗೆದೆಚ್ಚು ಬೊಬ್ಬಿರಿದನು ||33||

3.33_43

ಪದ್ಯ -೩೪

3.34

ಲೇಸಾದುದಖಿಳ ಯಾದವರೊಳಗೆ ಕೃತವರ್ಮ |
ನೇ ಸಮರ್ಥಂ ಕಾಣಬಹುದು ಕಾಳಗದೊಳೆನು |
ತಾ ಸುಧನ್ವಂ ತೆಗೆದಿ(ದೆ)ಸಲ್ಕವನ ಕಣೆಗಳಂ ಕಡಿದಿವಂ ಮಗುಳೆಚ್ಚೊಡೆ ||
ಆ ಸರಳ್ಗಳವನಂ ತಿರಿದು ಹತ್ತಂಬಿನಿಂ |
ಗಾಸಿಮಾಡಿದೊಡಿವಂ ಪದಿದೈದು ಮಾರ್ಗಣದೊ |
ಳೋಸರಿಸದವನ ಸರ್ವಾಂಗಮಂ ಕೀಲಿಸಿದನರುಣಜಲದೊರತೆ ಮಸಗೆ ||34||

3.34_44

(ಪದ್ಯ- ೩೪)II-IX

3.34_45

ಪದ್ಯ -೩೫

3.35

ಹಾರ್ದಿಕ್ಯನಿಸುಗೆಯಿಂದುರೆ ನೊಂದು ಕೋಪದಿಂ |
ದಾರ್ದಾ ಸುಧನ್ವನಿಪ್ಪತ್ತುನಾಲ್ಕಂಬಿನಿಂ |
ತೇರ್ದೆಗೆವ ಕುದುರೆಗಳ ಕಾಲ್ಗಳಂ ಗಾಳಿಗಳ ಕೀಲ್ಗಳಂ ಮೂಡಿಗೆಯನು ||
ಮೀರ್ದಿಸುವ ಚಾಪಮಂ ಸಾರಥೀಯ ಕರಮಂ ಕ್ಷ |
ಣಾರ್ಧದೊಳ್ ಕಡಿಯೆ ಕೃತವರ್ಮನಳವಳಿದು ಕೆಲ |
ಸಾರ್ದೊಡಾ ಪದದೊಳನುಸಾಲ್ವನಿದಿರಾದನತಿವೇಗದಿಂದವನ ರಥಕೆ ||35||

3.35_46

ಪದ್ಯ -೩೬

3.36

ಸಾಲ್ವಾನುಜಂ ಕಣೌ ತಾನೆನ್ನೊಳಾಹವಕೆ |
ಮೇಲ್ವಾಯ್ದೊಡನುಪಮ ಸುರೇಂದ್ರನ ಪರಾಕ್ರಮಕೆ |
ಸೋಲ್ವೆನೇ ತನ್ನೊಳ್ ಪೆÇಣರ್ದು ಸಾಯದೆ ಧರ್ಮರಾಜನವರಂ ಕಾಣ್ಬುದು ||
ತೇಲ್ವುದು ರಣಾಗ್ರದಿಂದಲ್ಲದೊಡುಳುಹೆನೆನುತ |
ಕೋಲ್ವಳೆಗರೆದನವಂ ಪ್ರಳಯ ಜೀಮೂತಮಂ |
ಪೋಲ್ವಿನಂ ಮುಸುಕಿತು ಸುಧನ್ವನ ವರೊಥಮಂ ಬಹಳ ಶರಯೂಥಮಂದು ||36||

3.36_47

ಪದ್ಯ -೩೮

3.37

ಬಲ್ಲೆನನುಸಾಲ್ವನೆಂದಳವಿಯಂ ಬಿಟ್ಟೊಡಾಂ |
ಬಿಲ್ಲಾಳೇ ವೇಳ್ ಧರ್ಮರಾಜನವರಂ ಕಾಣ್ಬ |
ನಲ್ಲ ಕಾಣಿಸುವೆನೀಗಳೆ ಧರ್ಮರಾಜನವರಂ ತರಹರಿಸು ನಿನ್ನನು ||
ಎಲ್ಲಿ ತೋರಿಸು ವಜ್ರಿಗಸದಳದ ಬಲ್ಮೆಯಂ |
ಕೊಲ್ಲಬೇಕಾದೊಡಿದ್ಧಪೆನೆನುತ ಕೋಲ್ಗಳಂ |
ಚೆಲ್ಲಿದಂ ಹಂಸಧ್ವಜನ ಸುತಂ ಕಾಶೀರಾಜನ ಸುತಂ ಗಾಸಿಯಾಗೆ ||37||

3.37_48

ಪದ್ಯ -೩೮

3.38

ಫಡಫಡೆಲವೆಲವೊ ತೊಲತೊಲಗೆನುತೆರೋಷದಿಂ |
ಘುಡಿಘುಡಿಸಿ ಕೌಂಡುವ ಕಾಯದಿಂದನುಸಾಲ್ವ |
ನೊಡನೊಡನೆ ಪೊಳೆಪೊಳೆವ ಪೂಸಮಸೆಯ ನಿಡುನಿಡು ಸರಳ್ಗಳಂತೆಗೆದಿಸುತಿರೆ ||
ಎಡೆಯೆಡೆಯೊಳಡಿಗಡಿಗೆ ಹಂಸಧ್ವಜಾತ್ಮಜಂ |
ಕಡಿಕಡಿದು ಮೀರಿದ ಪರಾಕ್ರಮದೊಳಸುರನಂ |
ಬಿಡಬಿಡವೆ ಘಾತಿಸಿದನಿಪ್ಪತ್ತು ಬಾಣದಿಂ ಬಿಸಿಬಿಸಿಯ ಎತ್ತರೊಸರೆ ||38||

3.38_49

ಪದ್ಯ -೩೯

3.39

ಮತ್ತೆ ಕಿಡಿಯಿಡೆಕೋಪಮನುಸಾಲ್ವನಬ್ಧಿಯಂ |
ತುತ್ತುಗೊಳ್ವುರಿಗೆ ಸರಿಯಾದೊಂದು ಬಾಣಮಂ |
ಕಿತ್ತು ಹೂಡಿದನಿದಂ ತರಹರಿಸಿಕೊಳ್ಳೆನುತ ತೆಗೆದೆಚ್ಚು ಬೊಬ್ಬಿರೆಯಲು ||
ಕತ್ತರಿಸುವೆಡೆಗಣೆಗಳಂ ಮೀರಿ ನಡುವೆದೆಯ |
ನುತ್ತರಿಸಿ ಕೋಲತ್ತಡಗಿತವನಿಯೊಳಾಗ |
ಪುತ್ತುವುಗುವಹಿಯಂತೆ ಬಳಿಕ ಮೈಮರೆದಂ ಸುಧನ್ವನದನೇ ವೇಳ್ವನು ||39||

3.39_50

ಪದ್ಯ -೪೦

3.40

ಲೆಲೆ ಕವಿಕವಿಯೆನುತವನ ಬಲಂ ಕಂಡು ಸಂ |
ಕಲೆಗಡಿದ ಮುಗಿಲಂತಿವನ ಮೇಲೆ ಕೈದುಗಳ |
ಮಳೆಗೆರಯುತಿಟ್ಟಣಿಸಿ ನೂಕಲನುಸಾಲ್ವಂ ಕನಲ್ದು ಜಗದಳಿವಿನಂದು ||
ಸುಳಿವ ಬಿರುಗಾಳಿಯಂ ಸೋಲಿಸುವ ನಿಡುಸರ |
ಳ್ಗಳ ಗರಿಯ ಭರದನಿಲಘಾತದಿಂ ಬಯಲಾದು |
ದಳವಿಯೆನಲಿಸುಗೆಯಂ ಕೈಕೊಂಡು ಸವರಿದಂ ಬಂದರಿಪುಮೋಹರವನು ||40||

3.40_51

ಪದ್ಯ -೪೧

3.41

ಕಂದೆರದು ಕಂಡಂ ಸುಧನ್ವಂ ಬಳಿಕ ಖಾತಿ |
ಯಿಂದೆ ಕೋದಂಡಮಂ ಕೊಂಡೆಲವೊ ಕಲಿಯಾಗಿ |
ನಿಂದಿದಂ ಸೈರಿಸಿದೆಯಾದೊಡಿನ್ನಿಸುವುದಿಲ್ಲಾವು ಹೋಗೆನುತ ಹೆದೆಗೆ ||
ಒಂದು ಸರಳಂ ಪೂಡಿ ಕಿವಿವರೆಗೆ ತೆಗೆದೊಚ್ಚೊ |
ಡಂದು ಸಾಲ್ವಾನುಜನ ಪೇರುರವನುಚ್ಚಳಿಸೆ |
ನೊಂದಿಳೆಗುರುಳ್ದನಾದುದು ಮೂರ್ಛೆ ಪೊಕ್ಕನುರವಣಿಸಿ ಪಾರ್ಥನ ಪಡೆಯನು ||41||

3.41_52

ಪದ್ಯ -೪೨

3.42

ಪೂಣೆಹೊಕ್ಕವನಿಸುವ ಬಾಣಂಗಳರಿಭಟರ |
ಗೋಣನರಿದುಚ್ಚಳಿಸೆ ಮಾಣದೆ ಗಗನಕೇಳ್ವ |
ಸೋಣೀತದ ಧಾರೆಗಳ್ ಶೋಣಾಭ್ರದಂತಿರಲ್ ಪ್ರಾಣಿಗಳ ದೃಷ್ಟಿಗಳ್ಗೆ ||
ಕಾಣಿಸಿದುವಾಲಿಸೈ ಕ್ಷೋಣಿಪ ಸುಧನ್ವನ |
ಕ್ಷೀಣವಿಕ್ರಮಶಿಖಿಯ ಚೂಣಿಯ ಮಹಾಜ್ವಾಲೆ ಕೇಣಿಗೊಂಡರಿಬಲಶ್ರೇಣಿಯೆಂಬೊಂದಡವಿದಾಣಮಂ ಹೊಕ್ಕಂತಿರೆ ||42||

3.42_53

(ಪದ್ಯ- ೪೨)

3.42_54

ಪದ್ಯ -೪೩

3.43

ಸಂದಣಿಸಿ ದಂತಿಗಳಘಟೆಗಳೊತ್ತರಿಸಲ್ಕೆ |
ಸಂದಣಿಸಿದಂ ಸರಳ ಸಾರದಿಂ ಕೆಡಹಿದಂ |
ಕೊಂದನುರವಣಿಸಿ ಕಾಲಾಳ್ಗಳಂ ಮುಳಿದುಬಳಿಕೊಂದನುಳಿಯದೆ ರಣದೊಳು ||
ಬಂದ ವಾಜಿಗಳ ನಾನಳವಿಯೊಳ್ ಕಾಣೆನೆಂ |
ಬಂದವಾಗಲ್ಕೆ ತಡೆಗಡಿದು ಮೆದೆಗೆಡಹಿದಂ |
ಮುಂದಿಟ್ಟಣಿಸಿ ಬಿದ್ದುವಾಗ ರಥಿಕವ್ರಾತ ಮುಂದಿಟ್ಟನಿಸುಗೆಯಿಂದೆ ||43||

3.43_55

ಪದ್ಯ -೪೪

3.44

ಕೆಡೆದೊಡಲ ಸೀಳಿಂದೆ ಕಡಿವಡೆದ ತೋಳಿಂದೆ |
ತೊಡೆಮಡದ ತುಂಡಿಂದೆ ನೆಣವಸೆಯ ಜೊಂಡಿಂದೆ |
ಬಿಡುಮಿದುಳ ತುಂಡದಿಂ ರುಂಡದಿಂ ಮುಂಡದಿಂ ಖಂಡದಿಂದೆ
ಅಡಗುಗಳ ತಿರುಳಿಂದೆ ನಿಡುನರದ ಕರುಳಿಂದೆ |
ಕಡಲಿಡುವ ನೆತ್ತರಿಂದೆಡವಿಡದೆ ಸತ್ತರಿಂ |
ದಿಡಿದಿರ್ದುದಾ ರಣದಲೋರಣದ ಮಾರಣದ ಕಾರಣದ ಪೂರಣದೊಳು ||44||

3.44_56

ಪದ್ಯ -೪೪

3.45

ಕಾಕ ಬಕ ಗೃಧ್ರ ಗೋಮಾಯ ಸಂತತಿಗಳಿಂ |
ಡಾಕಿನಿ ಪಿಶಾಚ ವೇತಾಳ ಭೂತಂಗಳಿಂ |
ಭೀಕರದೊಳಂಜಿಸಿದುವಾರ್ದು ರಿಂಗಣಗುಣಿವ ಕಲಿಗಳ ಕಪಾಲಂಗಳು ||
ಲೋಕದಖಿಳ ಪ್ರಾಣಿಗಳನುಂಡಜೀರ್ತಿಯಿಂ |
ದೋಕರಿಸಿದನೊ ಕಾಲನೆಂಬಿನಂ ಕಣ್ಗೆಸೆದು |
ದಾಕಳಂ ರೌಕುಳದ ಮಾಂಸ ಕರ್ದಮ ರುಧಿರ ನೆಣವಸೆ ಮಿದುಳ್ಗಳಿಂದೆ ||45||

3.45_57

(ಪದ್ಯ- ೪೫)

3.45_58

ಪದ್ಯ -೪೬

3.46

ನೋಡಿದಂ ಸಾತ್ಯಕಿ ಸುಧನ್ವನಾಟೋಪಮಂ |
ಮಾಡಿದಂ ಬದ್ದಭ್ರುಕುಟಿಯಿಂದೆ ಕೋಪಮಂ |
ತೀಡಿದಂ ತಿರುವನೇರಿಸಿ ಮಿಡಿದು ಚಾಪಮಂ ತಾಗಿದನವನ ರಥವನು ||
ಆಡಿದಂ ನಿಜನಾಮಧೇಯ ಪ್ರತಾಪಮಂ |
ವೂಡಿದಂ ತೆಗೆದಂಬನೆಚ್ಚಂ ಯಮೋಪಮಂ |
ತೋಡಿದಂ ಮೂವತ್ತು ಬಾಣದಿಂ ತಾಪಮಂಕುರಿಸುವಂತವನೊಡಲೊಳು ||46||

3.46_59

ಪದ್ಯ -೪೭

3.47

ಗಾಯವಡೆದೆಕ್ಕಲನ ತೆರದಿಂ ಕೆರಳ್ದು ಶೈ |
ನೇಯನಂ ಮಗುಳೆ ಮೂವತ್ತೈದು ಕೋಲ್ಗಳಿಂ |
ನೋಯಿಸಿದನಾ ಸುಧನ್ವಂ ಬಳಿಕ ಸಾತ್ಯಕಿ ಸಹಸ್ರ ಸಂಖ್ಯಾಕಮಾದ |
ಸಾಯಕದೊಳಾತನ ವರೂಥ ಹಯ ಸಾರಥಿ ಯು |
ಗಾಯತ ಧ್ವಜ ಛತ್ರ ಚಮರಮಂ ತರಿದೊಡವ |
ನೀ ಯಾದವನ ತೇರನುರೆ ಮುರಿಯಲಿರ್ವರುಂ ವಿರಥರಾದರ್ ಧುರದೊಳು||47||

3.47_60

ಪದ್ಯ -೪೮

3.48

ನಿಂದು ಕಾದಿದರೊಮ್ಮೆ ಕೈದುಕೈದುಗಳೊಳೈ |
ತಂದುಕಾದಿದರೊಮ್ಮೆ ಮತ್ತೆ ಪೆÇಸತೇರ್ಗಳಿಂ |
ಬಂದು ಕಾದಿದರೊಮ್ಮೆ ಕೂಡೆ ತಮತಮಗೊದಗಿದೆಡಬಲದ ಪಡಿಬಲವನು ||
ಕೊಂದು ಕಾದಿದರೊಮ್ಮೆ ಸರಶರದ ಹತಿಗಳಿಂ |
ನೊಂದು ಕಾದಿದರೊಮ್ಮೆ ಚಳಿಚಳಿಕೆಯಿಂದ ಸಲೆ |
ಸಂದು ಕಾದಿದರೊಮ್ಮೆ ಸಾತ್ಯಕಿಸುಧನ್ವರೋರೋರ್ವರ್ಗೆ ಸರಿಮಿಗಿಲೆನೆ ||48||

3.48_61

ಪದ್ಯ -೪೯

3.49

ಬವರಮಿರ್ವರ್ಗೆ ಸರಿಯಾಗೆ ಕಡುಗೋಪದಿಂ |
ದವಗಡಿಸಿದಂ ಸುಧನ್ವಂ ಬಳಿಕ ಸಾತ್ಯಕಿಯ |
ಸವಗ ಸೀಸಕ ಬಾಣ ಬತ್ತಳಿಕೆ ಸಿಂಧ ಸೀಗುರಿ ಛತ್ರಚಾಮರವನು ||
ಸವರಿ ಸಾರಥಿ ಹಯವರೂಥ ಯುಗಚಕ್ರಮಂ |
ಕವಲಂಬುಗಳೊಳೆಚ್ಚು ಕತ್ತಿರಿಸಿ ಕರದ ಚಾ |
ಪವನೈದು ಕಡಿಯಾಗಿ ಮಾಡಿ ಪೇರುರಕೆ ಮೊನೆಗಣೆಗಳಂ ಮೋಹಿಸಿದನು ||49||

3.49_62

ಪದ್ಯ -೫೦

3.50

ಸತ್ಯಕಸುತಂಗೆ ಪರಿಭವಮಾಗೆ ಭುಜಬಲದೊ |
ಳತ್ಯಧಿಕಯೌವನಾಶ್ವಾಸಿತಧ್ವಜಗದಾ |
ದಿತ್ಯಭವಸೂನು ಶಠ ನಿಶಠ ಕೃತವರ್ಮ ಸಾಂಬಾನುಸಾಲ್ವಪ್ರಮುಖರು ||
ಪ್ರತ್ಯೇಕವೀರರಿವರೆಲ್ಲರುಂ ಪಡೆಸಹಿತ |
ಸತ್ಯವಿಕ್ರಮ ಸುಧನ್ವನ ಸಮ್ಮುಖಕೆ ನಡೆವ |
ಕೃತ್ಯಮಂ ಕಂಡರ್ಜನಂ ಕೋಪದಿಂದ ಕಾಳಗಕೆ ತಾನನುವಾದನು ||50||

3.50_63

ಪದ್ಯ -೫೧

3.51

ಮುಂಜೆರಗನಳವಡಿಸಿ ವೀರಪಳಿಯಂ ಬಿಗಿದು |
ರಂಜಿಪ ತನುತ್ರ ಸೀಸಕವನಾಂತಮರಗಣ |
ಕಂಜಳಿಯನೆತ್ತಿ ಪಳವಿಗೆಯ ಹನುಮಂಗೆರಗಿ ಬಲವಂದು ಮಣಿರಥವನು ||
ಮಂಜುಳಹಯಂಗಳಂ ಬೋಳೈಸಿ ಮಣಿದು ತೇ |
ರಂ ಜಯನಿನಾದದಿಂದೇರಿದಂ ಸಮರಕೆ ಧ |
ನಂಜಯಂ ಧ್ಯಾನಿಸುತ ಮನದೊಳಗೆ ದೇವಪುರನಿಲಯ ಲಕ್ಷ್ಮೀಪತಿಯನು ||51||

3.51_64

ಹನ್ನೆರಡನೆಯ ಸಂಧಿಗೆ ಪದ್ಯ೬೧೭

3.51_65

ಹೋಗಿ

3.51_66

<ಜೈಮಿನಿ ಭಾರತ ಹನ್ನೊಂದನೆಯ ಸಂಧಿ
ಜೈಮಿನಿ ಭಾರತ ಹದಿಮೂರನೆಯ ಸಂಧಿ>

3.51_67

ನೋಡಿ

3.51_68

ಜೈಮಿನಿ ಭಾರತ-ಸಂಧಿಗಳು*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

3.51_69

ಪರಿವಿಡಿ

3.51_70

ಉಲ್ಲೇಖ

3.51_71

ವರ್ಗಕನ್ನಡ ಸಾಹಿತ್ಯ
ವರ್ಗಹಳಗನ್ನಡ ಸಾಹಿತ್ಯ