Jaimini Bharata (Kannada) 3.22
Jaimini Bhārata (Kannada) 3.22
- Language
- Kannada
3.22
ಭುಗಿಭೂಗಿಸೆ ಕೋಪಾಗ್ನಿ ಮೂಡಿಗೆಯ ಕೋಲ್ಗಳಂ |
ತೆಗೆತೆಗೆದು ಕರ್ಣತನಯಂ ಸುಧನ್ವನ ರಥವ |
ಬಗೆಬಗೆಯೊಳಮರ್ದೆಸೆವ ಛತ್ರ ಚಾಮರ ಸಿಂದ ಸೀಗುರಿ ಪತಾಕೆಗಳು ||
ಮೊಗಮೊಗಿಸಿ ಮುಂಬರಿವ ಕುದುರೆ ಸಾರಥಿಗಳಂ |
ಝಗಝಗಿಪ ಕವಚಮಂ ತನ್ನ ಕಣೆಯಂ ನಡುವೆ |
ತೆಗೆತೆಗೆವ ಕೋಲ್ಗಳಂ ತರಿದವನ ಬಿಲ್ಲನಿಕ್ಕಡಿಗೈದು ಬೊಬ್ಬಿರಿದನು ||22||