Jaimini Bharata (Kannada) 3.23
Jaimini Bhārata (Kannada) 3.23
- Language
- Kannada
3.23
ತಂದರಾಗಲೆ ಸುಧನ್ವಂಗೆ ಮಣಿಮಯದ ಮ |
ತ್ತೊಂದು ರಥಮಂ ಬಳಿಕ ಬಿಲ್ವಿಡಿದು ಜೇಗೈದು |
ನಿಂದು ನಿಡಗಣೆಗಳಂ ತಗೆದೆಚ್ಚು ಕರ್ಣಜನ ಕೈಮೆಗಿಂಮಿಗಿಲಾಗಲು ||
ಸ್ಯಂದನ ತುರುಂಗ ಸಾರಥಿಗಳಂ ಕವಚಮಂ |
ಸಿಂಧ ಸೀಗುರಿ ಛತ್ರಚಾಮರ ಪತಾಕೆಗಳ |
ನಂದು ಕತ್ತರಿಸಿ ವೃಷಕೇತುವಿನ ಕರದ ಕೋದಂಡಮಂ ಖಂಡಿಸಿದನು ||23||