Pramāṇa · Search · About · API

Jaimini Bharata (Kannada) 3.24

Jaimini Bhārata (Kannada) 3.24

Language
Kannada

3.24

ವಿರಥನಾದೊಡೆ ಕರ್ಣಸೂನು ಕೈಗೆಡದೆ ಸಂ |
ಗರದೊಳಸಿ ಮುದ್ಗರ ಮುಸುಂಡಿ ತೋಮರ ಖಡ |
ಪರಶು ಗದೆ ಚಕ್ರ ಡೊಂಕಣಿ ಕುಂತ ಶೂಲ ಪಟ್ಟಸ ಭಿಂಡಿವಾಳ ಶಕ್ತಿ ||
ಸುರಗಿ ಮೊದಲಾಗಿರ್ದ ಕೈದುಗಳ ಪರಿವಿಡಿಯೊ |
ಳುರವಣಿಸಿ ಪೊಯ್ದು ಸುಧನ್ವನಂ ಮತ್ತವನ |
ಪೊರೆಯ ಪರಿವಾರಮಂ ನಾನಾಪ್ರಹಾರದಿಂದೈದೆ ಘಾತಿಸುತಿರ್ದನು ||24||