Pramāṇa · Search · About · API

Jaimini Bharata (Kannada) 3.29

Jaimini Bhārata (Kannada) 3.29

Language
Kannada

3.29

ಅರಿದನಚ್ಯುತನಸುತನೆಂಬುದಂ ಟೆಕ್ಕೆಯದ |
ಕುರುಪಿಂದೆ ನುಡಿದನವನಿಲ್ಲಿ ನಿನಗಬಲೆಯರ |
ಮರೆಯಿಲ್ಲ ನಿನ್ನಿಸುಗೆಗಳುಕು ವರದಾರೆನುತ ಕಲಿಸುಧನ್ವಂ ಕಣೆಗಳ ||
ಬಿರುವಳೆಗೆರಯಲೆಡೆಯೊಳರಿದೆಲವೊ ಸಂಗರದೊ |
ಳುರುವ ಜಯವಧು ತನ್ನ ಭುಜದೊಳಿಹಳೆನುತೆ ಕೆಂ |
ಗರಿಯ ಬಾಣಂಗಳಂ ಮುಸುಕಿದಂ ಪ್ರದ್ಯುಮ್ನನವನ ರಥದೆಣ್ದೆಸೆಯೊಳು ||29||