Jaimini Bharata (Kannada) 3.31
Jaimini Bhārata (Kannada) 3.31
- Language
- Kannada
3.31
ಬರಿಯ ಪೂಗೋಲಿಸುಗೆಯಲ್ಲದಾಹವದೊಳಂ |
ಕಿರಿದು ಶರಸಂಧಾನಮುಂಟಲಾ ನಿನಗೆಂದು |
ಜರೆದೆಂಟು ಬಾಣದಿಂದೆಚ್ಚಂ ಸುಧನ್ವನಾತನ ಕೋಲ್ಗಳಂ ಸೈರಿಸಿ ||
ಬಿರುಸರಳ ಸಾರದಿಂದವನ ಸರ್ವಾಂಗಮಂ |
ತುರುಗಿದಂ ಕವಚ ಸೀಸಕ ಬಾಹುರಕ್ಷೆಗಳ್ |
ಬಿರಿವಿನಿಂ ಕೆನ್ನೀರ್ಗಳೊರೆವಿನಂ ನೊಂದು ಮೈಮರೆವಿನಂ ಪ್ರದ್ಯುಮ್ನನು ||31||