Pramāṇa · Search · About · API

Jaimini Bharata (Kannada) 3.41

Jaimini Bhārata (Kannada) 3.41

Language
Kannada

3.41

ಕಂದೆರದು ಕಂಡಂ ಸುಧನ್ವಂ ಬಳಿಕ ಖಾತಿ |
ಯಿಂದೆ ಕೋದಂಡಮಂ ಕೊಂಡೆಲವೊ ಕಲಿಯಾಗಿ |
ನಿಂದಿದಂ ಸೈರಿಸಿದೆಯಾದೊಡಿನ್ನಿಸುವುದಿಲ್ಲಾವು ಹೋಗೆನುತ ಹೆದೆಗೆ ||
ಒಂದು ಸರಳಂ ಪೂಡಿ ಕಿವಿವರೆಗೆ ತೆಗೆದೊಚ್ಚೊ |
ಡಂದು ಸಾಲ್ವಾನುಜನ ಪೇರುರವನುಚ್ಚಳಿಸೆ |
ನೊಂದಿಳೆಗುರುಳ್ದನಾದುದು ಮೂರ್ಛೆ ಪೊಕ್ಕನುರವಣಿಸಿ ಪಾರ್ಥನ ಪಡೆಯನು ||41||