Jaimini Bharata (Kannada) 3.43
Jaimini Bhārata (Kannada) 3.43
- Language
- Kannada
3.43
ಸಂದಣಿಸಿ ದಂತಿಗಳಘಟೆಗಳೊತ್ತರಿಸಲ್ಕೆ |
ಸಂದಣಿಸಿದಂ ಸರಳ ಸಾರದಿಂ ಕೆಡಹಿದಂ |
ಕೊಂದನುರವಣಿಸಿ ಕಾಲಾಳ್ಗಳಂ ಮುಳಿದುಬಳಿಕೊಂದನುಳಿಯದೆ ರಣದೊಳು ||
ಬಂದ ವಾಜಿಗಳ ನಾನಳವಿಯೊಳ್ ಕಾಣೆನೆಂ |
ಬಂದವಾಗಲ್ಕೆ ತಡೆಗಡಿದು ಮೆದೆಗೆಡಹಿದಂ |
ಮುಂದಿಟ್ಟಣಿಸಿ ಬಿದ್ದುವಾಗ ರಥಿಕವ್ರಾತ ಮುಂದಿಟ್ಟನಿಸುಗೆಯಿಂದೆ ||43||