Pramāṇa · Search · About · API

Jaimini Bharata (Kannada) 3.45

Jaimini Bhārata (Kannada) 3.45

Language
Kannada

3.45

ಕಾಕ ಬಕ ಗೃಧ್ರ ಗೋಮಾಯ ಸಂತತಿಗಳಿಂ |
ಡಾಕಿನಿ ಪಿಶಾಚ ವೇತಾಳ ಭೂತಂಗಳಿಂ |
ಭೀಕರದೊಳಂಜಿಸಿದುವಾರ್ದು ರಿಂಗಣಗುಣಿವ ಕಲಿಗಳ ಕಪಾಲಂಗಳು ||
ಲೋಕದಖಿಳ ಪ್ರಾಣಿಗಳನುಂಡಜೀರ್ತಿಯಿಂ |
ದೋಕರಿಸಿದನೊ ಕಾಲನೆಂಬಿನಂ ಕಣ್ಗೆಸೆದು |
ದಾಕಳಂ ರೌಕುಳದ ಮಾಂಸ ಕರ್ದಮ ರುಧಿರ ನೆಣವಸೆ ಮಿದುಳ್ಗಳಿಂದೆ ||45||