Pramāṇa · Search · About · API

Jaimini Bharata (Kannada) 3.46

Jaimini Bhārata (Kannada) 3.46

Language
Kannada

3.46

ನೋಡಿದಂ ಸಾತ್ಯಕಿ ಸುಧನ್ವನಾಟೋಪಮಂ |
ಮಾಡಿದಂ ಬದ್ದಭ್ರುಕುಟಿಯಿಂದೆ ಕೋಪಮಂ |
ತೀಡಿದಂ ತಿರುವನೇರಿಸಿ ಮಿಡಿದು ಚಾಪಮಂ ತಾಗಿದನವನ ರಥವನು ||
ಆಡಿದಂ ನಿಜನಾಮಧೇಯ ಪ್ರತಾಪಮಂ |
ವೂಡಿದಂ ತೆಗೆದಂಬನೆಚ್ಚಂ ಯಮೋಪಮಂ |
ತೋಡಿದಂ ಮೂವತ್ತು ಬಾಣದಿಂ ತಾಪಮಂಕುರಿಸುವಂತವನೊಡಲೊಳು ||46||