Jaimini Bharata (Kannada) 3.5
Jaimini Bhārata (Kannada) 3.5
- Language
- Kannada
3.5
ಕೇಳ್ಗುಣಮಣಿಯೆ ಧರೆಣಿಪಾಗ್ರಣಿಯೆ ತನ್ನ ಮಗ |
ನೇಳ್ಗೆಯಂ ಕಂಡುಬ್ಬಿದಂ ಮರಾಳಧ್ವಜಂ |
ಸೂಳ್ಗೈದುವಾಗ ತಂಬಟೆ ಭೇರಿ ನಿಸ್ಸಾಳ ಕಹಳಾದಿ ವಾದ್ಯಂಗಳು ||
ತೋಳ್ಗುಟ್ಟುತಾರ್ದು ಸುಮ್ಮಾನದಿಂ ಪಟುಭಟರ್|
ಕೋಳ್ಗೊಂಡು ಕುದಿಯುತಿರ್ದರು ಸಾರ್ಯೋಜನದೊ |
ಳಾಳ್ಗಜ ತುರಂಗ ರಥವಿಟ್ಟಣಿಸಿ ನಡೆದುದುತ್ಸಾಹದಿಂ ನರನ ಮೇಲೆ ||5||