Pramāṇa · Search · About · API

Jaimini Bharata (Kannada) 3.6

Jaimini Bhārata (Kannada) 3.6

Language
Kannada

3.6

ಬೆರಬೆರಸುತೊತ್ತಿಡಿದು ಮುಂದೆ ಭರದಿಂದೆ ನಡೆ |
ವರಸರಸುಗಳ ಕಂಠಮಾಲೆಗಳ ತೋರಮು |
ತ್ತೊರಸೊರಸು ಮಿಗೆ ಪರಿದವರ ಸೂಸುದಂಬುಲದ ಚೆನ್ನೆಲದ ಮೇಲೊಕ್ಕಿರೆ ||
ಪೊರೆದ ಸಂಧ್ಯಾರುಣದ ಗಗನಮಂಡಲದೊಳಂ |
ಕುರಿಸಿದುಡುಗುಣದಂತೆ ರಂಜಿಸಿತು ದೆಸೆದೆಸೆಗೆ |
ಪರಿಮಳದೆಲರ್ ಪರಿದುದಗರುಚಂದನ ಯಕ್ಷ ಕರ್ದಮದ ಮೊಗವಾಸದ ||6||