Pramāṇa · Search · About · API

Jaimini Bharata (Kannada) 3.7

Jaimini Bhārata (Kannada) 3.7

Language
Kannada

3.7

ಪಡೆಯೊಳನ್ನೋನ್ಯ ಸಂಘರ್ಷಣದೊಳೊಗುವ ಪೊಂ |
ದೊಡವುಗಳ ರೇಣುಗಳೊ ಮೈಗಳಂ ಸೋಂಕಿ ಪುಡಿ |
ವಡೆದ ಕುಂಕುಮ ಸುಗಂಧಾನುಲೇಪನದ ಚೂರ್ಣಂಗಳೋ ಪದಘಾತಿಗೆ ||
ಪೊಡವಿಯಿಂದಿರದೇಳ್ವ ರುಣರಜಂಗಳೊ ತಿಳಿದು |
ನುಡಿಯಲರಿದೆಂಬಿನಂ ಮೇರುವಿನ ಬಣ್ಣಮಂ |
ಪಿಡಿದ ದಿವಿಭಾಗಮಂ ಜನವನೆಚ್ಚರಿಪಂತೆ ಕೆಂಧೂಳಿ ಮಸಗಿತಾಗ ||7||