Pramāṇa · Search · About · API

Jaimini Bharata (Kannada) 4.1

Jaimini Bhārata (Kannada) 4.1

Language
Kannada

4.1

ಭೂಹಿತಚರಿತ್ರ ಕೇಳುಳಿಯದೆ ಸಮಸ್ತಭಟ |
ರಾಹವಕೆ ಪೊರಮಟ್ಟ ಬಳಿಕ ಹಂಸಧ್ವಜನ |
ಮೋಹದ ಕುಮಾರಂ ಸುಧನ್ವನಾಯತಮಾಗಿ ಬಂದು ನಿಜಮಾತೆಯಡಿಗೆ ||
ಬಾಹುಯುಗಮಂ ನೀಡಿ ಸಾಷ್ಟಾಂಗಮೆರಗೆ ಸಿತ |
ವಾಹನನ ಹರಿಯಂ ಪಿಡಿದು ಕಟ್ಟಿ ಕದನದೊಳ್ |
ಸಾಹಸಂಮಾಳ್ಪಿನೆನ್ನಂ ಪರಿಸಿ ಕಳುಹೆಂದಂ ಕೈಮುಗಿದೊಡಿಂತೆಂದಳು ||1||