Pramāṇa · Search · About · API

Jaimini Bharata (Kannada) 4: ಜೈಮಿನಿ ಭಾರತ ಹನ್ನೊಂದನೆಯ ಸಂಧಿ

Jaimini Bhārata (Kannada) 4

Language
Kannada

ಜೈಮಿನಿ ಭಾರತ ಹನ್ನೊಂದನೆಯ ಸಂಧಿ

4.p1

ಜೈಮಿನಿ ಭಾರತ

4.p2

ಹನ್ನೊಂದನೆಯ ಸಂಧಿ

4.p3

ಪದ್ಯ -ಸೂಚನೆ

4.p4

ಹಿಂದುಳಿದನಾಹವಕ್ಕೆಂದು ಹಂಸಧ್ವಜಂ |
ನಂದನನನೆಣ್ಣೆ ಗಾಯ್ದಿರ್ದ ಕೊಪ್ಪರಿಗೆಯೊಳ್ |
ತಂದು ಕೆಡಹಿಸಲಚ್ಯತಧ್ಯಾನದಿಂತಂಪುವಡೆದನವನಚ್ಚರಿಯೆನೆ ||

4.p5

ಪದ್ಯ -ಸೂಚನೆ

4.1

ಭೂಹಿತಚರಿತ್ರ ಕೇಳುಳಿಯದೆ ಸಮಸ್ತಭಟ |
ರಾಹವಕೆ ಪೊರಮಟ್ಟ ಬಳಿಕ ಹಂಸಧ್ವಜನ |
ಮೋಹದ ಕುಮಾರಂ ಸುಧನ್ವನಾಯತಮಾಗಿ ಬಂದು ನಿಜಮಾತೆಯಡಿಗೆ ||
ಬಾಹುಯುಗಮಂ ನೀಡಿ ಸಾಷ್ಟಾಂಗಮೆರಗೆ ಸಿತ |
ವಾಹನನ ಹರಿಯಂ ಪಿಡಿದು ಕಟ್ಟಿ ಕದನದೊಳ್ |
ಸಾಹಸಂಮಾಳ್ಪಿನೆನ್ನಂ ಪರಿಸಿ ಕಳುಹೆಂದಂ ಕೈಮುಗಿದೊಡಿಂತೆಂದಳು ||1||

4.1_6

ಪದ್ಯ -೨

4.2

ಕಂದ ಕೇಳ್ ಫಲುಗುಣಂ ಪಾಲಿಪಂ ನಾಲ್ಕಡಿಯ |
ದೊಂದು ಹರಿಯಂ ನಿನಗದರ ಚಿಂತೆ ಬೇಡ ಸಾ |
ನಂದದಿಂ ಪಾರ್ಥನಂ ರಕ್ಷಿಸುವ ಹರಿಯನೇ ಹಿಡಿವ ಬುದ್ಧಿಯನೆ ಮಾಡು ||
ಹಿಂದೆ ನಾರದಮುನಿಯ ಮುಖದಿಂದೆ ಕೇಳ್ದಿಂ ಮು |
ಕುಂದನ ವಿಶಾಲಲೀಲಾಮಾಲೆಯಂ ಕೃಷ್ಣ |
ನಿಂದು ಮೈದೋರಿದೊಡೆ ಕಣ್ಣಾರೆ ಕಾಣಬಹುದೆಂದೊಡವನಿಂತೆಂದನು ||2||

4.2_7

(ಪದ್ಯ- ೨)

4.2_8

ಪದ್ಯ -೩

4.3

ತಾಯೆ ಚಿತ್ತೈಸಾದೊಡೀ ಭಾಷೆಯಂ ಕೃಷ್ಣ |
ರಾಯನಂ ತನ್ನೆಡೆಗೆ ಬರಿಸಿಕೊಳ್ವುದಕೊಂದು |
ಪಾಯಮಂ ಬಲ್ಲೆನಾಂಕಯ್ಯಂ ಪಿಡಿದೊಡೆ ಮೈ ತಾನೆ ಬಹುದಿಂದ್ರಜನನು |
ನೋಯಿಸಿದೊಡಗಧರಂ ಬಾರದಿರನಾನತರ |
ಪಾಯಮಂ ಸೈರಿಸಂ ಬಳಿಕ ತೋರುವೆನಂಬು |
ಜಾಯತಾಕ್ಷನ ಮುಂದೆ ತನ್ನ ಪೌರುಷವನೆನಲಾಕೆ ಮುಗುಳಿಂತೆಂದಳು ||3||

4.3_9

ಪದ್ಯ -೪

4.4

ಕರುವನೆಳಗಂದಿ ತಾನರ ಕೊಂಡೈತರ್ಪ |
ತೆರದಿಂದೆ ಬಂದಪಂ ಮುರಹರಂ ಪಾರ್ಥನೆಡೆ |
ಗರಿವೆನಿದು ನಿಶ್ಚಯಂ ಮಗನೆ ನೀನಾ ಹರಿಗೆ ವಿಮುಖನಾದೊಡೆ ತನ್ನನು ||
ಜರಿವರಿಕ್ಕೆಲದ ಬಂಧುಗಳಿನ್ನು ಸಮರದೊಳ್ |
ನೆರೆ ಕೃಷ್ಣನಂ ಗೆಲ್ವರುಂಟೆ ಸ ಕೆನ್ನೊಡಲ |
ಮರುಕಮಂ ಬಿಟ್ಟೆನವನಂ ಕಂಡ ಬಳಿಕ ಹಿಮ್ವೆಟ್ಟದಿರ್ ಪೋಗೆಂದಳು ||4||

4.4_10

ಪದ್ಯ -೫

4.5

ಎಂದೊಡೆಲೆ ತಾಯೆ ಕೇಳ್ ಚಕ್ರಿಗೆ ವಿಮುಖನಾಗಿ |
ಬಂದೆನಾದೊಡೆ ನಿನ್ನ ಗರ್ಭದಿಂದುದಯಿಸಿದ |
ನಂದನನೆ ಹಂಸಧ್ವಜನ ಕುಮಾರನೆ ಮೇಣು ಹರಿಕಿಂಕರನೆ ವೀರನೆ ||
ಕೊಂದಪೆಂ ಪಾರ್ಥನ ಪತಾಕಿನಿಯನವನದಟ |
ನಂದಗೆಡೆಸುವೆನೆನ್ನ ವಿಕರಮವನಚ್ಯುತನ |
ಮುಂದೆ ತೋರಿಸುವೆನಿನಿತರಮೇಲೆ ಸೋಲುಗೆಲುವದು ಪುಣ್ಯವಶಮೆಂದನು ||5||

4.5_11

ಪದ್ಯ -೬

4.6

ಅನಿತರೊಳ್ ಕುವಲೆಯೆಂಬುವಳೋರ್ವಳಾ ಸುಧ |
ನ್ವನ ಸಹೋದರಿ ತಂದಳಾರತಿಯನನುಜ ಕೇ |
ಳನುವರದೊಳಿಂದು ಶೌರಿಗೆ ವಿಮುಖನಾಗಿ ನೀಂ ಬಂದೆಯಾದೊಡೆ ಮಾನವ ||
ಮನೆಯೊಳಾಂ ತಲೆಯೆತ್ತಿ ನಡೆವೆನೆಂತದರಿಂದೆ |
ವನಜಾಕ್ಷನಂ ಮೆಚ್ಚಿಸಾಹವದೊಳೆಂದು ಚಂ |
ದನದ ನುಣ್ಪಿಟ್ಟು ಕರ್ಪ್ಪುರವೀಳೆಯಂಗೊಟ್ಟು ಕಳುಹಿದಳ್ ಸೇಸೆದಳೆದು ||6||

4.6_12

ಪದ್ಯ -೭

4.7

ಅರಸ ಕೇಳಾ ಸುಧನ್ವಂ ಬಳಿಕ ಜನನಿಸೋ |
ದಿರಯರಂ ಬೀಳ್ಕೊಂಡು ಪೊರಮಟ್ಟು ತನ್ನ ಮಂ |
ದಿರದ ಪÉÇರೆಗೈತರಲ್ಕಿದಿರಾಗಿ ಪೊಂದಟ್ಟೆಯೊಳ್ ಸಂಪಗೆಯ ಪೂವನು ||
ಸರಸ ಪರಿಮಳಗಂಧ ಕರ್ಪೂರವೀಟಿಕೆಯ |
ನಿರಿಸಿಕೊಂಡೊಲವಿಂದೆ ಬಂದಳಂಗಜನ ಜಯ |
ಸಿರಿ ತಾನೆನಲ್ ಪ್ರಭಾವತಿಯೆನಿಪವನರಾಣಿ ಸಂಶ್ರೇಣಿ ಸರ್ಪವೇಣಿ ||7||

4.7_13

(ಪದ್ಯ- ೭)

4.7_14

ಪದ್ಯ -೮

4.8

ಚಂದ್ರಮಂಡಲ ಸದೃಶ ವದನದೆಳನಗೆಯ ನವ |
ಚಂದ್ರಿಕೆಯೆನಲ್ ಮೇಲುದಿನ ದುಕೂಲಂ ಮೆರೆಯೆ |
ಚಂದ್ರತಿಲಕದ ರಾಗಮುಂ ಚಿತ್ತದನುರಾಗಮಂ ಸೂಚಿಪಂತೆ ಸೊಗಸೆ ||
ಇಂದ್ರನೀಲದ ಮಣಿಯ ಮಿರುಗುವ ಲಲಿತಕಾಂತಿ |
ಸಾಂದ್ರಮಾದ ಪೊಲೆಸೆವಳಕಪಾಶದಿಂದೆ ನಯ |
ನೇಂದ್ರಿಯವನುರೆ ಕಟ್ಟಿ ಕೆಡಪದಿರಳೆಂಬಿನಂ ರಂಜಿಸಿದಳಾ ಮೃಗಾಕ್ಷಿ ||8||

4.8_15

ಪದ್ಯ -೯

4.9

ಸ್ಫುರಿಸುವೊಳ್ದೊಡೆಯ ಬೆಡಗಿನ ನಡೆಯ ನಿರಿಯ ಸಿಂ |
ಗರದುಡಿಯ ತೆಳ್ವಾದಸಿಯ ಪೊಡೆಯ ಚೆಲ್ವುದಳೆ |
ದುರದೆಡೆಯ ನಿಂಬುಗೊಂಡಿಟ್ಟೆಡೆಯ ಬಲ್ಮೊಲೆಯ ಪೊಳೆವ ಕಣ್ಮಲರ ಕಡೆಯ ||
ತ್ವರಿಪ ಭುಜವಲ್ಲರಿಯ ತೊಡವುಗಳ ಮೈಸಿರಿಯ |
ಬಿರಿಮುಗಳ ಕಬರಿಯ ಕಲೆಗಳಿಡಿವ ಸೌಂದರಿಯ |
ದರಸಿ ನಿಜಪತಿಯ ಮುಂದಚ್ಚರಿಯ ಬಗೆಗೊಂಡಳಂದು ಬೇರೊಂದು ಪರಿಯ ||9||

4.9_16

ಪದ್ಯ -೧೦

4.10

ಮುಡಿಯ ಪೊಸಮಲ್ಲಿಗೆಯ ಸೂಸುವೆಳನಗೆಯ ಸವಿ |
ನುಡಿಯ ಬಾಯ್ದೆರೆದು ಹೊಳೆಹೊಳೆವ ದಶನದ ಮಿಸುಪ |
ಕಡಿಗಣ್ಣ ತೊಳಗುವ ನಖಾವಳಿಯ ಥಳಥಳಿಪ ಕಂಠಮಾಲೆಯ ಮುತ್ತಿನ ||
ತೊಡವುಗಳ ಘನಸಾರದನುಲೇಪನದ ಸಣ್ಣ |
ಮಡಿದುಕೂಲದ ಬೆಳ್ವೊಗರ್ ಕೋಮಲಾಂಗದೊಳ್ |
ಬಿಡದೆ ಪಸರಿಸೆ ಚಂದ್ರಕಾಂತದಿಂ ನಿರ್ಮಿಸಿದ ಪುತ್ತಳಿಪೊಲವಳೆಸೆದಳು ||10||

4.10_17

ಪದ್ಯ -೧೧

4.11

ಕರಯುಗದೊಳಾಂತ ಪೊಂದಟ್ಟೆಯನದರ ಮೇಲೆ |
ಪೆರಪಿರ್ದ ಸಂಪಗೆಯ ಪೂಗಳಂ ತನ್ನ ಮೆ |
ಯ್ಯೊರಗೆ ಸರಿಯಾದಪುವೆ ನೋಡೆಂದು ತೋರ್ಪಂತೆ ಕೊಂಡುಬಂದಿದಿರೆ ನಿಂದ ||
ತರಳೆಯಂ ಕಡೆಗಣ್ಣೊಳೊಯ್ಯನೀಕ್ಷಿಸಿ ನಗುತೆ |
ಸರಸ ಪರಿಮಳ ನವ್ಯ ಕುಸುಮಂಗಳಂ ಕೊಂಡು |
ಭರದಿಂದ ಎಕೊಳಗುಳಕೆ ಪೊರಮಡುವ ಗಮನದಿಂ ಕಾಂತೆಗವನಿಂತೆಂದನು ||11||

4.11_18

ಪದ್ಯ -೧೨

4.12

ಕಾಂತೆ ಕೇಳಿಂದು ಸಮರದೊಳರ್ಜುನಂಗೆ ಮಾ |
ರಾಂತವನ ಬಿಂಕಮಂ ಮುರಿವೆನಾ ಹರೆಬಕಸು |
ರಾಂತಕಂ ಬಂದೊಡಾತನ ಮುಂದೆ ತೋರಿಸುವೆನೆನ್ನ ಭುಜವಿಕ್ರಮನು ||
ನಾಂ ತಳೆವನಾರ್ಪಿಂದೆ ವಿಜಯಮಂ ಮೀರ್ದೊಡೆ ಭ |
ವಾಂತರವನೈದಿ ಸನ್ಮುಕ್ತಿಯಂ ಪಡೆದಪೆಂ |
ನೀಂ ತಳಮಳಿಸದಿರೆಂದಿನಿಯಳಂ ಸಂತೈಸಿ ಪೊರಮಡಲ್ ತಡೆದೆಂದಳು ||12||

4.12_19

ಪದ್ಯ -೧೩

4.13

ಯುಕ್ತಮಲ್ಲಿದು ರಮಣ ನಿನಗೆ ಕೇಳ್ ಕಾದುವಾ |
ಸಕ್ತಿಯಿಂ ಚಕ್ರಿಗಭಿಮುಖನಾದ ಬಳಿಕಲ್ಲಿ |
ಮುಕ್ತಿಯಿಲ್ಲದೆ ಬೇರೆ ಜಯಮುಂಟೆ ಜನಿಸದು ವಿವೇಕಸಂತತಿ ನಿನ್ನೊಳು ||
ವ್ಯಕ್ತದಿಂ ತನಗೊಂದಪತ್ಯಮುದಯಿಸದೊಡೆ ವಿ |
ರಕ್ತಿಯಿಂ ಕೈವಲ್ಯಮಾದಪುದು ಸಮರಕು |
ದ್ಯುಕ್ತನಪ್ಪಾತಂಗೆ ಸಂತಾನಮಿಲ್ಲದಿರಲಪ್ಪುದೇ ಹೇಳೆಂದಳು ||13||

4.13_20

ಪದ್ಯ -೧೪

4.14

ಅದರಿಂದಮಾತ್ಮಜವಿವೇಕಮಿಲ್ಲದೊಡೆ ನನ |
ಗಿದುವೆ ಜಲದೋದಯದ ಋತುಸಮಯಮೀ ಪದದೊ |
ಳುದುಭವಿಸುವುದು ನಿನ್ನ ಭೂಮಿಯೊಳ್ ಬೀಜಮಂ ಬಿತ್ತೊದೊಡೆ ಬೆಳೆ ಬಾಳ್ಕೆಗೆ |
ಕದನಕೈದುವವೇಳೆಯಲ್ಲೆನಲವಂ ಮುಂದೆ |
ಬೆದೆಗಾಲಮುಂಟೆಂದೊಡವಳೆಣೆಸಿ ಮಳೆಗಳಂ |
ತುದಿವಿಶಾಖೆಗೆ ಬಂದುದಿನ್ನು ಮೇಲಂಕುರಿಸಲರಿಯದೆನಲಿಂತೆಂದನು||14||

4.14_21

ಪದ್ಯ -೧೫

4.15

ರಮಣಿ ನೀನೆಂಬುದನುನಯಮಪ್ಪುದಾದೊಡಂ |
ಸಮಯಮಲ್ಲಿದು ಮೊಳಗುತಿದೆ ಭೇರಿ ಪೊರಮಟ್ಟು |
ಸಮರಕಯ್ಯಂ ಪೋದನುಳಿದೆನಾದೊಡೆತಾತನಾಜ್ಞೆಗೊಳಗಾಗದಿರೆನು ||
ಕ್ರಮವನರಿಯದಳೆ ನೀನೆನಗೆ ಸೈರಿಸಲಳವೆ |
ಗಮನಕನುಕೂಲೆಯಾಗೆನುತ ಗಲ್ಲಂಬಿಡಿದು |
ಕಮಲಾಕ್ಷಿಯಂ ಮುದ್ದುಗೈದು ಬೀಳ್ಕೊಳ್ವಿನಂ ಕಾತಿರಿಸಿ ಮೇಲ್ವಾಯ್ದಳು ||15||

4.15_22

ಪದ್ಯ -೧೬

4.16

ಅಂಗಮಿಲ್ಲದನ ಸಮರಂಗಮಂ ಪುಗಲಂಜಿ |
ತುಂಗವಿಕ್ರಮವಿಜಯಸಂಗರಕೆಳಸುವೆನೆಂ |
ಬಂಗವಣೆಯೆಂತುಂಟೆಂದಂಗನೆ ಬಲಾತ್ಕಾರದಿಂ ಗುರುಕುಚದ್ವಯವನು ||
ಸಂಗಡಿಸುವಂತಾರ್ಪಿನಿಂ ಗಾಢತರದೊಳಾ |
ಲಿಂಗನಂಗೈದು ಕುಡಿಗಂಗಳಿಂದವನ ಮೊಗ |
ದಿಂಗಿತವನಾರೈವ ಶೃಂಗಾರಚೇಷ್ಟೆಯ ಬೆಡಂಗನದನೇವೇಳ್ವೆನು ||16||

4.16_23

ಪದ್ಯ -೧೭

4.17

ಮಿಡಿದೊಡೊಡೆವಂತಮೃತರಸದಿಂದೆ ಮೆರೆವ ಪೊಂ |
ಗೊಡಮೊಲೆಯಮವನ ವಕ್ಷಸ್ಥಳದೊಳಿಟ್ಟೊತ್ತಿ |
ದೊಡೆ ಹಿಸಿದೊಳಗಣ ತನುಸುಧೆಯೊಸರ್ದುತೊಟ್ಟಿಡುವ ಬಿಂದುಗಳ ಸಾಲಿದೆನಲು ||
ಕಡಿಕಿ ಪರಿದುಗುವ ಹಾರದ ಮುತ್ತುಗಳ ಮಣಿಗ |
ಳೆಡೆವಿಡದೆ ಸೂಸುತಿರೆ ಸೊಕ್ಕುದೆಕ್ಕೆಯಳ್ ಸೊಗಸು |
ವಡೆದಳಾಕಾಂತೆ ಪ್ರಿಯನಂಗದೊಳ್ ಮೋಹನೋತ್ಸಂಗದೊಳ್ ಬಗೆಗೊಳಿಸುತೆ ||17||

4.17_24

ಪದ್ಯ -೧೮

4.18

ಪ್ರಿಯನ ತನುಚಂದನಮಹೀಜಮಂ ಸುತ್ತಿದ ಫ |
ಣಿಯೊ ವಲ್ಲಭಾಂ ಗದಾಲಸ್ತಂಭಮಂ ತೊಡ |
ರ್ದಯುಗಸ್ಮ/ಶ್ಮ/ರಕರಿಯ ಸುಂಡಿಲೊ ಕಾಂತಕಾಯಬಲಮಂ ಬಂಧಿಸಿದ ಮದನನ ||
ಜಯಪಾಶಮೋ ರಮಣ ದೇಹ ಕಲ್ಪದ್ರುಮಾ |
ಶ್ರಯದ ಕೋಮಲಲತೆಯೊ ವೂಸತಾದುಂದೆಂಬಂತಿ |
ನಿಯನನಪ್ಪಿದಹರಿಣಲೋಚನೆಯ ನಳಿತೋಳ್ಗಳೆಸೆದುವತಿಗಾಢದಿಂದೆ ||18||

4.18_25

(ಪದ್ಯ- ೧೮)XXVII

4.18_26

ಪದ್ಯ -೧೯

4.19

ಕಣ್ಮಲರ್ ಕಾತರಿಸೆ ಮುಡಿ ಪೂಗಳಂ ಸೂಸೆ |
ನುಣ್ಮೊಗಂ ಬೇರೊಂದು ಪರಿಯಾಗೆ ನುಡಿ ದಐನ್ಯ |
ಮುಣ್ಮೆಹೀನಸ್ವರದೊಳೆಸೆಯೆ ಕೈ ಕಲೆಗಳೊಳ್ ಸೋಂಕೆ ಮೈ ಪುಳಕದಿಂದೆ ||
ಪೊಣ್ಮೆ ಮದನಾತುರಂ ತಲೆದೋರೆ ಮೇಲುದಂ |
ಬಿಣ್ಮೊಲೆಗಳೋಸರಿಸೆ ನಿರಿಯ ಬಿಗಿ ಪೈಸರಿಸೆ |
ಪೆಣ್ಮಂಚದಂಚೆದುಪ್ಪುಳ್ವಾಸಿಗೆಳೆದೋಯ್ದಳಿಸನಿಯನಂ ಬಲ್ಪಿನಿಂದೆ ||19||

4.19_27

(ಪದ್ಯ- ೧೯)

4.19_28

ಪದ್ಯ -೨೦

4.20

ಸತಿಗೆ ಷೋಡಶದ ಋತುಮಯಮೇಕಾದಶೀ |
ವ್ರತಮಲಂಘ್ಯಶ್ರಾದ್ಧಮಿನಿತೊಂದುದಿನಮೆ ಸಂ |
ಗುಮಾದೊಡೆಂತು ಕರ್ತವ್ಯಮೆನೆ ಪೈತೃಕದ ಶೇಷಾನ್ನಮಾಘ್ರಾಣಿರೆ ||
ಕೃತಭೋಜ್ಯಮಾದಪುದು ನಡುವಿರುಳ್ಗಳೆದಾವ |
ನಿತೆಯನೊಡಗೂಡಬಹುದದರಿಂದ ಧರ್ಮಪ |
ದ್ಧತಿಯನೀಕ್ಷಿಸಲಿವಳನಿಂದು ಮೀರುವುದು ಮತವಲ್ಲೆಂದವಂ ತಿಳಿದನು||20||

4.20_29

ಪದ್ಯ -೨೧

4.21

ತಾತನಾಜ್ಞೆಯನುಳಿದು ಕೃಷ್ಣದರ್ಶನಕೈದ |
ದೀತರಳೆಗಿಂದು ಋತುದಾನಮಂ ಮಾಡಿದೊಡೆ |
ಪಾತಕಂ ತನಗಿಲ್ಲಮೆಂದು ನಿಶ್ಚೈಸಿ ಬಳಿಕಾ ಸುಧನ್ವಂ ಮನದೊಳು ||
ಭೀತಿಯಂ ತೊರೆದು ಕಾಂತೆಯ ಕೊಡೆ ರಮಿಸಿದಂ |
ಪ್ರೀತಿಯಿಂದುಗುರೊತ್ತು ಸರಸ ಚುಂಬನ ಲಲ್ಲೆ |
ವಾತುಗಳರವ ನೇಮಗಲೆ ತಾಡನಪ್ರೌಢಿ ಬಂಧ ಸಮ್ಮೋಹನದೊಳು ||21||

4.21_30

ಪದ್ಯ -೨೨

4.22

ನಾಣ್ಮೀಸಲಳಿದವಯವದ ಭೇದಮಂ ಮರೆದು |
ಜಾಣ್ಮೆಗಳ ಬಂಧಂಗಳೊಳ್ ಬಳಸಿ ಸೊಗಯಿಸುವ |
ಗೋಣ್ಮೊಳಗಿನಿಂಚರಂಗಳನೆಸಗಿ ಮೊನೆವಲ್ಲ ಕರ್ದುಂಕನುಗುರೊತ್ತನು ||
ಮಾಣ್ಮಾಣೆನಲ್ ಕೈಗೊಳಿಸಿ ಲಲ್ಲೆಗೈದೊಲವ |
ನಾಣ್ಮಂಗೆ ಕಾಣಿಸಿದಳವಳೊಡನೆ ಕೂರ್ಮೆಯಿಂ |
ಮೇಣ್ಮಾನಿನಿಗೆ ಮದನಕಲೆಗಳಂ ತೋರಿಸಿದನವನಂದು ಸಮರತಿಯೊಳು ||22||

4.22_31

ಪದ್ಯ -೨೩

4.23

ಒದವಿದ ಸೊಬಗಿನ ಶೃಂಗಾರದಾತುರದ ವೀ |
ರದ ಲಲ್ಲೆವಾತಿನ ಕರುಣದ ನಗೆಮೊಗದ ಹಾ |
ಸ್ಯದ ನಖಕ್ಷತದ ರೌದ್ರದ ಖಾತುರದ ಭಯದ ಬೆಮರೊಗೆದ ಭೀಭತ್ಸದ ||
ರೋಮಾಂಚದದ್ಭುತದ ಸೊಗಸಿನ ಮೋಹ |
ನದ ಶಾಂತದೆಸೆವ ನವರಸದೇಳ್ಗೆಯಾದ ಸುರ |
ತದ ನವರಸವನುರೆ ಸವಿದು ಸೊಕ್ಕಿ ಮರೆದರನ್ನೋನ್ಯಭಾವವನವರ್ಗಳು ||23||

4.23_32

ಪದ್ಯ -೨೪

4.24

ಕೂರುಗುರ್ಗಳ ಗೆರೆಯ ಸೂತ್ರಬಂಧದೊಳೆಸೆವ |
ತೋರಮೊಲೆಗಳ ಕುಂಭಸಂಸ್ಥಾಪನಂಗೈಯ್ದು |
ಚಾರುತರ ಗಳರವದಮಂತ್ರದಿಂ ರೊಮಾಂಚನದ ಕುಶಾಗ್ರಂಗಳಿಂದೆ ||
ವೀರರತಿ ಸಾಮಾಜ್ಯಪಟ್ಟದೊಳ್ ಬೆಮರ್ವನಿಯ |
ವಾರಿಸೇಚನದಿಂದೆ ಕೃತಕೃತ್ಯನಾದಂತೆ |
ರಾರಾಜಿಸಿದನವಂ ಮೆಲ್ಪಾಸಿನೊಳ್‍ಮರೆವ ಮಣಿಮಂಚದಾಸನದೊಳು ||24||

4.24_33

ಪದ್ಯ -೨೫

4.25

ಪ್ರಕಟಸಿದ ಕಟಿ ತಳ್ಳುವಳ್ಳೆ ಬೆಂಡಾದ ಮೈ ಸುಕಲೆಗಳನಾಂತ ಮೊಲೆ ಕದಡುಲೇಪದ ಬೆಮರ್ |
ವಿಕಸಿತಸುಖದೊಳಿದ್ದ ಮನಮೆದ್ದ ರೋಮಾಂಚಮಸವಳಿದ ಕೈ ಮಸುಳ್ದ ||
ಮಕರಪತ್ರದ ಕದಪು ಮಾಣ್ದ ರವದೊಳ್ಗೊರಲ್ |
ಮುಕುಳಿತವಿಲೋಚನಂ ನರಸುಯ್ ನಿಮಿರ್ದನಾ |
ಸಿಕಮಳಿದ ತಿಲಕಂಪರೆಧ ಕುರುಳ್ ಸೊಪ್ಪಾದಧರಮೊಪ್ಪಿತಾ ಕಾಂತೆಗೆ ||25||

4.25_34

ಪದ್ಯ -೨೬

4.26

ಮನ್ವಾದಿಋಷಿಗಳಭಿಮತಮಿದೆಂದರಿದಾ ಸು |
ಧ್ವನಂ ಋತುಸ್ನಾತೆಯಂ ಮೀರದೊಡಗೂಡಿ |
ತನ್ವಿಯಂ ಬೀಳ್ಕೊಂಡುಸಮರಕನುವಾಗಲಿರಲಿತ್ತ ಕುರುಕುಲದ ನೃಪರ ||
ಅನ್ವಯಕೆ ತೊಡವಾದ ನರನ ಹಯಮಂ ಕಟ್ಟು |
ವನ್ವೇಷಣದೊಳಾಹವಕೆ ನಡೆಯುತತಿಬಲ ಸ |
ಮನ್ವಿತಕುಮಾರನಂ ಸೇನೆಯೊಳ್ ಕಾಣದೆ ಕೆರಳ್ದಂ ಮರಾಳಕೇತು ||26||

4.26_35

ಪದ್ಯ -೨೭

4.27

ಪೊರೆಯೊಳಿಹ ಸಚಿವರಂ ನೋಡುತವರೊಳ್ ಸುಮತಿ |
ಗರಸಂ ನಿರೊಪಿಸಲವಂ ಕಡುಗಡಿಕರಾದ |
ಚರರನಟ್ಟಿದೊಡವರ್ ಬರೆಸೆಳೆದುನಗುತಿಹ ಸುಧನ್ವನಂ ತುಡಿಕಿ ಪಿಡಿದು ||
ಕರಯುಗಳಮಂ ನೇಣ್ಗಳಿಂ ಬಿಗಿದು ತುಂದರತಿ |
ಭರದಿಂದ ರಾಯನಿದ್ದಡೆಗಾಗಿ ಪೌರಜನ |
ಪರಿಜನಂ ಬೆರಗಾಗೆ ಕದ್ದಾತನಂ ಕೊಂಡುಬರ್ಪಂತೆ ನಿಷ್ಠುರದೊಳು ||27||

4.27_36

ಪದ್ಯ -೨೮

4.28

ಕಟ್ಟುಸಹಿತಾ ಸುಧನ್ವಂ ತಾತನಡಿಗೆ ಪೊಡ |
ಮಟ್ಟೊಡೆ ಕೆರಳ್ದೆಲವೊ ಮೂಢಾತ್ಮನೀನೆನ್ನ |
ಕಹ್ಟಳೆಯನರಿದು ಕೃಷ್ಣನ ದೀಕ್ಷೆಯಂ ಮರೆದು ರಣದುತ್ಸವವನೆ ತೊರೆದು ||
ಪಟ್ಟಣದೊಳೇಕೆ ತಳುವಿದೆಯೆಂದು ಕುವರನಂ |
ಧಟ್ಟಿಸಿ ಮರಾಳಧ್ವಜಂ ಕೇಳ್ದೊಡಡಿಗಿಟ್ಟ |
ದಿಟ್ಟಿಯಿಂದಂಜುತೊಯ್ಯನೆ ಲಜ್ಜೆವೆರಸಿ ಬಿನ್ನೈಸಿದನವಂ ಪಿತಂಗೆ ||28||

4.28_37

ಪದ್ಯ -೨೯

4.29

ಸತಿ ಸಂತತಿಗೆ ಬಯಸಿ ದಿನಗಳೆದುದು ಇನ್ನಿಲ್ಲ ಋತುಸಮಯಮೆಂದೆನಗೆ ಪೇಳ್ದೊಡಲ್ಲಿರ್ದೆನೆನೆ |
ಕೃತಕಮಿದು ನೂಕೀತನಂ ಕೃಷ್ಣದರ್ಶನದ ಕಾಲಮೊದಗಿರಲಿತ್ತಲು ||
ಇತರಧರ್ಮದ ವೇಳೆ ಗಡ ತನಗೆ ಕರೆ ಪುರೋ |
ಹಿತ ಶಂಖ ಲಿಖಿತರಂ ಬೆಸಗೊಳ್ವೆನಿದಕೆ ನಿ |
ಷ್ಕೃತಿಯನೆನಲರಸಾಜ್ಞೆಯೊಳವರ ಪೊರೆಗೆ ಚರರೈತಂದದಂ ಪೇಳ್ದರು ||29|

4.29_38

ಪದ್ಯ -೩೦

4.30

ಆ ಚರರ ನುಡಿಗೇಳ್ದು ಶಂಖಲಿಖೀತರ್ ಬಂದು |
ವಾಚಿಸಿಡರೆಲೆ ಹಂಸಕೇತು ನೀನೇನನಾ |
ಳೋಚಿಸುವೆ ನಿನ್ನ ತನಯನ ಮೇಳಣಾಶೆಯಿಂ ಭಾಷೆದಪ್ಪಿದೆಯಾದೊಡೆ ||
ಈ ಚಂಪಕಾಪುರದೊಳಿಹುದಿಲ್ಲ ನಾವು ಸ |
ತ್ಯಾಚರಣೆಗಾಗಿ ರುಕ್ಮಾಂಗದ ಹರಿಶ್ಚಂದ್ರ |
ಭೂಚಕ್ರಪಾಲರಾತ್ಮಜರ ಮೊಗನೋಡಿದರೆ ಹೇಳೆಂದು ನುಡಿದರವರು ||30||

4.30_39

ಪದ್ಯ -೩೧

4.31

ಬಳಿಕರಸನಾ ಸುಮತಿಯಂ ಕರೆದು ಪೇಳ್ದನೀ |
ಖಳನಂ ಕಟಾಹ ಪೂರಿತ ತಪ್ತತೈಲದೊಳ್ |
ಮುಳುಗಿಸೆನಲವನೊಡೆಯನಾಜ್ಞೆಯಂ ಮೀರದಾತನ ಕೈಗಳಂ ಕಟ್ಟಿಸಿ ||
ತಳಪಳನೆ ಕುದೆವೆಣ್ಣೆಗೊಪ್ಪರಿಗೆ ಕಾಯ್ವಲ್ಲಿ |
ಗೆಳತರಿಸಿ ಮತ್ತೆ ಪೊತ್ತುವೊಲುರಿವ ಪೆರ್ಗೊರಡು |
ಗಳನಿಡಿಸಿ ಕಳಕಳಿಸುತಿಹ ಸುಧನ್ವಂಗೆ ಮರುಗತೆ ಸಚಿವನಿಂತೆಂದನು ||31||

4.31_40

ಪದ್ಯ -೩೨

4.32

ತಾತ ನಿನಗಿಂತಾಗಬಹುದೆ ಲೋಕೈಕ ವಿ |
ಖ್ಯಾತನಬಿಮಾನಿ ಹರಿಸೇವಕಂ ನುಂದರಂ |
ಮಾತಾಪಿತೃಪ್ರಿಯಂ ಕೋವಿದಂ ಕೋಮಲಂ ಸುಖಿ ಸಕಲಸಜ್ಜನಸಖಂ ||
ನೀತಿವಿದನಾಚಾರಸಂಪನ್ನನುತ್ತಮಂ |
ದಾತನೆಂಬಿನಿಸು ಗುಣಮುಳ್ಳ ಕುವರಂ ನಿನ್ನ |
ನೀತಪ್ತ ತೈಲದೊಳಗೆಂತಕಟ ಬೀಳಿಸುವೆನೆಂದೊಡವನಿಂತೆಂದನು ||32||

4.32_41

ಪದ್ಯ -೩೩

4.33

ಅಂಜಬೇಡೆಲೆ ಸುಮತಿ ನೀನೀಗಳಿದಕೆ ಮನ |
ಮಂ ಜರಿವಿಡುವನಲ್ಲ ತಾನಿನ್ನೆಗಂ ಧರ್ಮ |
ಮಂ ಜಡಿದು ನಡೆದುದಿಲ್ಲಾಹವದೊಳ ಹಿತರೊಳ್ ಪೊಯ್ದಾಡಿ ಮಡಿವೊಡಲಿದು ||
ಜಂಜಡದೊಳಳಿವುದೆಂಬೊಂದು ಭಯಮಿಹುದಾದೊ |
ಡಂ ಜನಾರ್ದನನಂ ಶರಣ್ಬುಗುವೆನಳುಕದೆ |
ನ್ನಂ ಜನಕನಾಜ್ಞೆದಪ್ಪದೆ ಹಾಯ್ಕಿಸನಲವಂ ತೆಗೆದೆತ್ತಿ ಬಿಸುಡಿಸಿದನು ||33||

4.33_42

(ಪದ್ಯ- ೩೩)

4.33_43

ಪದ್ಯ -೩೪

4.34

ಭೋ ಯೆಂದುದಖಿಳ ಪರಿವಾರ ಮಡಿಗಡಿಗೆ ಹಾ |
ಹಾ ಯೆಂದು ಮರುಗಿದುದು ನೀನಿಂತಳಿವರೆ ತಾ |
ತಾ ಯೆಂದು ಪೊರುಳ್ದುದೊಡೆತನಕೆ ಬೇಸತ್ತು ಸತ್ತಾಯೆಂದು ಸೈಗೆಡೆದುದು ||
ವಾಯಕಿಂತಕಟ ಸುಕುಮಾಶನಂ ಕೊಂದನೀ |
ರಾಯನರಿವಂ ನೆರೆ ಸುಡಲಿ ಶಂಖಲಿಖಿತರೆಂ |
ಬೀ ಯಮೋಪಮರೇಕೆ ಜನಿಸಿದರೊ ಭೂಸುರರೊಳೆಂದು ಮೊರೆಯಿಡುತಿರ್ದುದು ||34||

4.34_44

ಪದ್ಯ -೩೫

4.35

ಹಿಂದೆ ಪ್ರಹ್ಲಾದನಂ ಪಾಲಿಸಿದೆ ಗಡ ದ್ರುಪದ |
ನಂದನೆಯ ಮಾನಮಂ ಕಾದೆ ಗಡ ಭಕ್ತರ್ಗೆ |
ಬಂದೆಡರನಾವಗಂ ಪರಿಹರಿಪೆ ಗಡ ದೇವ ನಿನ್ನಂ ಪೆಸರ್ಗೊಂಡೊಡೆ ||
ಇಂದು ಮೊರೆವೊಗುವೊಡಾರಂ ಕಾಣೆನಕಟ ಗೋ |
ವಿಂದ ನೀನಲ್ಲದೆವಿಚಾರಿಸುವರಿಲ್ಲ ಸಲ |
ಹೆಂದವಂ ಚಿತ್ತದೊಳ್ ಕೃಷ್ಣನಂ ಧ್ಯಾನಿಸುತೆ ನಿರ್ಭಯದೊಳಿರುತಿರ್ದನು ||35||

4.35_45

ಪದ್ಯ -೩೬

4.36

ಜಯಜಯ ಜನಾರ್ದನ ಮುಕುಂದ ಮುರಮರ್ದನ ವಿ |
ಜಯಮಿತ್ರ ಗೋವಿಂದ ಪಕ್ಷಿವಾಹನ ಕಮಲ |
ನಯನ ಪೀತಾಂಭರ ಘನಶ್ಯಾಮ ಹರಿ ಕೃಷ್ಣ ವೈಕುಂಠ ನಾರಾಯಣ ||
ಕ್ಷಯರಹಿತ ರಾಮ ಲಕ್ಷ್ಮೀರಮಣ ನತಸುರಾ |
ಲಯಧೇನು ಭಕ್ತವತ್ಸಲ ಕೃಪಾಕರ ಮಹಾ |
ಭಯನಿವಾರಣ ನೃಸಿಂಹ ತ್ರಾಹಿಯೆನುತಿರ್ದನಾ ಸುಧನ್ವಂ ಮರೆಯದೆ ||36||

4.36_46

ಆ ಕುದಿಯುತ್ತಿದ್ದ ಎಣ್ಣಯಲ್ಲಿ ಹಾಕಿದಾಗ, "ಜಯಜಯ ಜನಾರ್ದನ ಮುಕುಂದ ಮುರಮರ್ದನ ವಿಜಯಮಿತ್ರ ಗೋವಿಂದ ಪಕ್ಷಿವಾಹನ ಕಮಲನಯನ ಪೀತಾಂಭರ ಘನಶ್ಯಾಮ ಹರಿ ಕೃಷ್ಣ ವೈಕುಂಠ ನಾರಾಯಣ ಕ್ಷಯರಹಿತ ರಾಮ ಲಕ್ಷ್ಮೀರಮಣ ನತಸುರಾಲಯಧೇನು /ನತರಿಗೆ =ಶರಣಾಗತರಿಗೆ, ಸುರಾಲಯದ=ಸ್ವರ್ಗಲ್ಲಿರುವ, ಧೇನು= ಕೇಳಿದ್ದನ್ನುಕೊಡುವ ಧೆನುವಿದ್ದಂತೆ; ಭಕ್ತವತ್ಸಲ ಕೃಪಾಕರ ಮಹಾ ಭಯನಿವಾರಣ ನೃಸಿಂಹ ತ್ರಾಹಿ =ಕಾಪಾಡು" ಎಂದು ಆ ಸುಧನ್ವನು ಮರೆಯದೆ ಎನ್ನುತ್ತಿದ್ದನು'
(ಪದ್ಯ- ೩೬)

4.36_47

ಪದ್ಯ -೩೭

4.37

ಅರಸ ಕೇಳಾಶ್ಚರ್ಯಮಂ ನೋಡಲೆವೆ ಸೀವೊಲುರಿಗೊಂಡು ಕಡುಗಾಯ್ದು ತಳಪಳದೆ ಕುದಿದುಕ್ಕಿ ಮೊರೆವುರು ಕಟಾಹತೈಲಂ ಮೈಗೆ ಸೊಗೆಯಿಸುವ ಬಾವನ್ನದಣ್ಪಾಗಿರೆ ||
ಕೊರಗದಾತನ ರೋಮ ವಡಗದಂಗದ ಸೊಂಪು ಕೊರಳದುಲಸಿಯ ದಂಡೆ ಬಾಡದು ಮುಡಿದ ಪೂಗಳರೆಗಂದವರಳ್ದುದು ಸುಧನ್ವನ ಮುಖಾಂಭುಜಮಿನೋದಯದ ಕಮಲದಂತೆ ||37||

4.37_48

ಪದ್ಯ -೩೮

4.38

ಕಂಡು ಬೆರಗಾದುದೆಲ್ಲಾ ಜನಂ ಸ್ತುತಿಸಿದರ್| ಪುಂಡರೀಕಾಕ್ಷನಂ ಬಳಿಕ ಲಿಖಿತಂ ಖಾತಿ |
ಗೊಂಡಿವಂ ಬಲ್ಲನಗ್ನಿಸ್ತಂಭಮಂ ನಾರಿಕೇಳಂಗಳಂ ತರಿಸೆನೆ ||
ಕೊಂಡು ಬಂದೆಳನೀರ್ಗಳಂ ಸುರಿಯಲುರಿ ನಭೋ |
ಮಂಡಲವನಪ್ಪಳಿಸೆ ಹೊಡೆದುವು ಪುರೋಹಿತರ |
ಗಂಡಸ್ಥಳಂಗಳಂ ಸಿಡಿವೋಳ್ಗಳಾಗಳುಂ ನಗುತಿರ್ದನಾಕುವರನು ||38||

4.38_49

ಪದ್ಯ -೩೯

4.39

ನಿಶ್ಚಲಹೃದಯನಾಗಿ ವಿಷ್ಣುನಾಮಂಗಳ ಪು |
ನಶ್ಚರಣೆಯಂದವಂ ಸುಖದೊಳಿರುತಿರೆ ಕಂಡು |
ಪಶ್ಚಾದ್ವಿವೇಕದಿಂದುರೆ ನೊಂದು ಹರಿಕಿಂಕರದ್ರೋಹಮಂ ಮಾಡಿದ ||
ದುಶ್ಚರಿತಕಾವುದುಂ ನಿಷ್ಕೃತಿಗಳಿಲ್ಲೆಂಬ |
ನಿಶ್ಚಯದೊಳಾಗ ಮರಣಾಂತವೇ ತನಗೆ ಪ್ರಾ |
ಯಶ್ಚಿತ್ತಮೆಂದಾ ಕಟಾಹದೊಳ್ ಕುದಿವೆಣ್ಣೆಯೊಳ್ ಬಿದ್ದನಾ ಲಿಖಿತನು||39||

4.39_50

ಪದ್ಯ -೪೦

4.40

ಆ ತಪ್ತತೈಲದ ಕಟಾಹದೆಡೆ ಲಿಖಿತಂಗೆ |
ಶೀತಳಸ್ಥಳಮಾದುದಾ ಸುಧನ್ವನ ಸಂಗ |
ಮೇತರತಿಶಯಮೊ ಹರಿಭಕ್ತರಂ ಸಾರ್ದಂಗೆ ತಾಪಮಿರ್ದಪುದೆ ಬಳಿಕ ||
ಆತಗಳ್ ಕುದಿವೆಣ್ಣೆಯೊಳ್ ಸುಖದೊಳಿರೆ ಹಂಸ |
ಕೇತು ವಿಸ್ಮಿತನಾಗಿ ಮಂತ್ರಿಗಳೊಡನೆ ಬಂದು |
ಪ್ರೀತಿಯಿಂದವರೀರ್ವರಂ ತೆಗೆದು ತಕ್ಕೈಸಿದಂ ಸುತಪುರೋಹಿತರನು ||40||

4.40_51

ಪದ್ಯ -೪೧

4.41

ಪನ್ನೀರಮಿಂದು ದಿವ್ಯಾಂಬರವನುಟ್ಟು ಬಾ |
ವನ್ನದಿಗುರಂ ಗೈಯ್ದು ಕಮಲರ್ಗಳಂ ಸೂಡಿ |
ಸನ್ನುತ ಸುಯಕ್ಷಕರ್ದಮವನನುಕರಿಸಿ ಕತ್ತುರಿತಿಲಕವಿಟ್ಟು ಪಣೆಗೆ ||
ರನ್ನದೊಡವುಗಳನಳವಡಿಸಿ ವೀಳೆಯಗೊಂಡು |
ತನ್ನನುಳುಹಿದ ದೇವಪುರದ ಲಕ್ಷ್ಮೀಪತಿಯ |
ನಿನ್ನು ಕಂಡಪೆನೆಂಬ ಹರ್ಷದಿಂ ಕಳೆಯೇರಿ ಮೆರೆದಂ ಸುಧನ್ವನಂದು||41||

4.41_52

ಸಂಧಿ ೧೧ಕ್ಕೆ ಪದ್ಯ೫೬೬.

4.41_53

ಹೋಗಿ

4.41_54

<ಜೈಮಿನಿ ಭಾರತ/ಹತ್ತನೆಯ ಸಂಧಿ
ಜೈಮಿನಿ ಭಾರತ ಹನ್ನೆರಡನೆಯ ಸಂಧಿ>

4.41_55

ನೋಡಿ

4.41_56

ಜೈಮಿನಿ ಭಾರತ-ಸಂಧಿಗಳು*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

4.41_57

ಪರಿವಿಡಿ

4.41_58

ಉಲ್ಲೇಖ

4.41_59

ವರ್ಗಕನ್ನಡ ಸಾಹಿತ್ಯ
ವರ್ಗಹಳಗನ್ನಡ ಸಾಹಿತ್ಯ