Pramāṇa · Search · About · API

Jaimini Bharata (Kannada) 4.26

Jaimini Bhārata (Kannada) 4.26

Language
Kannada

4.26

ಮನ್ವಾದಿಋಷಿಗಳಭಿಮತಮಿದೆಂದರಿದಾ ಸು |
ಧ್ವನಂ ಋತುಸ್ನಾತೆಯಂ ಮೀರದೊಡಗೂಡಿ |
ತನ್ವಿಯಂ ಬೀಳ್ಕೊಂಡುಸಮರಕನುವಾಗಲಿರಲಿತ್ತ ಕುರುಕುಲದ ನೃಪರ ||
ಅನ್ವಯಕೆ ತೊಡವಾದ ನರನ ಹಯಮಂ ಕಟ್ಟು |
ವನ್ವೇಷಣದೊಳಾಹವಕೆ ನಡೆಯುತತಿಬಲ ಸ |
ಮನ್ವಿತಕುಮಾರನಂ ಸೇನೆಯೊಳ್ ಕಾಣದೆ ಕೆರಳ್ದಂ ಮರಾಳಕೇತು ||26||