Jaimini Bharata (Kannada) 4.34
Jaimini Bhārata (Kannada) 4.34
- Language
- Kannada
4.34
ಭೋ ಯೆಂದುದಖಿಳ ಪರಿವಾರ ಮಡಿಗಡಿಗೆ ಹಾ |
ಹಾ ಯೆಂದು ಮರುಗಿದುದು ನೀನಿಂತಳಿವರೆ ತಾ |
ತಾ ಯೆಂದು ಪೊರುಳ್ದುದೊಡೆತನಕೆ ಬೇಸತ್ತು ಸತ್ತಾಯೆಂದು ಸೈಗೆಡೆದುದು ||
ವಾಯಕಿಂತಕಟ ಸುಕುಮಾಶನಂ ಕೊಂದನೀ |
ರಾಯನರಿವಂ ನೆರೆ ಸುಡಲಿ ಶಂಖಲಿಖಿತರೆಂ |
ಬೀ ಯಮೋಪಮರೇಕೆ ಜನಿಸಿದರೊ ಭೂಸುರರೊಳೆಂದು ಮೊರೆಯಿಡುತಿರ್ದುದು ||34||